ಬ್ರಿಟಿಷ್ ಪ್ರಧಾನಿ ರಿಷಿ ಸುನಕ್ ಅವರು ಪ್ರಿ ದೀಪಾವಳಿಯನ್ನು (Akshay Kumar) ಹಬ್ಬವನ್ನು ಆಚರಿಸಿದ್ದಾರೆ. 10 ಡೌನಿಂಗ್ ಸ್ಟ್ರೀಟ್‌ನಲ್ಲಿ ಹಿಂದು ಸಮುದಾಯದ ಸದಸ್ಯರಿಗೆ ಆತಿಥ್ಯ ನೀಡಿದರು. ಬ್ರಿಟನ್ ಪ್ರಧಾನ ಮಂತ್ರಿಯ ಕಚೇರಿಯು ತನ್ನ ಅಧಿಕೃತ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ಆಚರಣೆಯ ಗ್ಲಿಂಪ್‌ಗಳನ್ನು ಹಂಚಿಕೊಂಡಿದೆ. ರಿಷಿ ಸುನಕ್ ಮತ್ತು ಅವರ ಪತ್ನಿ ಅಕ್ಷತಾ ಮೂರ್ತಿ ಅವರು ಸಾಂಪ್ರದಾಯಿಕವಾಗಿ ದೀಪಗಳನ್ನು ಬೆಳಗಿಸುತ್ತಿರುವುದನ್ನು ನೋಡಬಹುದು.
“ಇಂದು ರಾತ್ರಿ ಪ್ರಧಾನ ಮಂತ್ರಿ ರಿಷಿ ಸುನಕ್ ಅವರು ದೀಪಾವಳಿಗೆ ಮುಂಚಿತವಾಗಿ ಡೌನಿಂಗ್ ಸ್ಟ್ರೀಟ್‌ಗೆ ಹಿಂದು ಸಮುದಾಯದ ಅತಿಥಿಗಳನ್ನು ಸ್ವಾಗತಿಸಿದರ. ಬೆಳಕಿನ ವಿಜಯದ ಆಚರಣೆಯಾಗಿದೆ. ಎಲ್ಲರಿಗೂ ಶುಭ ದೀಪಾವಳಿ!”ಎಂದು ಟ್ವೀಟ್ ಹಂಚಿಕೊಂಡಿದ್ದಾರೆ.
ಅಕ್ಷಯ್ ಕುಮಾರ್, ಟ್ವಿಂಕಲ್ ಖನ್ನಾ ಮತ್ತು ಪ್ರೀತಿ ಜಿಂಟಾ ಕೂಡ ಭಾಗಿಯಾಗಿದ್ದರು. ಅಕ್ಷಯ್, ಟ್ವಿಂಕಲ್ ಮತ್ತು ಪ್ರೀತಿ ರಿಷಿ ಸುನಕ್ ಅವರೊಂದಿಗೆ ಸಂಭಾಷಣೆಯಲ್ಲಿ ತೊಡಗಿರುವುದು ಕಾಣಬಹುದು. ಅಕ್ಷಯ್ ಬಿಳಿ ಕುರ್ತಾದಲ್ಲಿ ಕಾಣಿಸಿಕೊಂಡಿದ್ದಾರೆ. ರಿಷಿ ಸುನಕ್ ಕಪ್ಪು ಸೂಟ್‌ನಲ್ಲಿ ಕಂಡಿದ್ದಾರೆ.
ಇದನ್ನೂ ಓದಿ: Akshay Kumar: ಗರ್ಬಾ ಸಾಂಗ್ ‘ಮಾಡಿ’ ಸಖತ್ ಹಿಟ್; ನಾವು ಎಲ್ಲಿಗೆ ಹೋಗೋಣ ಮೋದಿಜಿ ಎಂದ ಅಕ್ಷಯ್ ಕುಮಾರ್
Tonight Prime Minister @RishiSunak welcomed guests from the Hindu community to Downing Street ahead of #Diwali – a celebration of the triumph of light over darkness.
— UK Prime Minister (@10DowningStreet) November 8, 2023
Shubh Diwali to everyone across the UK and around the world celebrating from this weekend! pic.twitter.com/JqSjX8f85F
ಈ ವರ್ಷ, ದೀಪಾವಳಿಯನ್ನು ನವೆಂಬರ್ 12 ರಂದು ಆಚರಿಸಲಾಗುತ್ತದೆ. ಪಂಜಾಬ್ ಮೂಲದ ಸುನಕ್ ಹಿಂದೂ ಆಗಿದ್ದು, ಅವರು ಆಗಾಗ ಸೌತಾಂಪ್ಟನ್ ದೇವಸ್ಥಾನಕ್ಕೆ ಭೇಟಿ ನೀಡುತ್ತಾರೆ. G20 ಶೃಂಗಸಭೆಗಾಗಿ ತಮ್ಮ ಇತ್ತೀಚಿನ ಭಾರತ ಪ್ರವಾಸದ ಸಮಯದಲ್ಲಿ, ದಂಪತಿ ನವದೆಹಲಿಯ ಅಕ್ಷರಧಾಮ ದೇವಾಲಯದಲ್ಲಿ ಪ್ರಾರ್ಥನೆ ಸಲ್ಲಿಸಿದರು.