ಬೆಂಗಳೂರು: ಅಕ್ಷಯ್ ಕುಮಾರ್ (Akshay Kumar) ಮತ್ತು ಇಮ್ರಾನ್ ಹಶ್ಮಿ ಒಟ್ಟಿಗೆ ನಟಿಸಿರುವ ಸೆಲ್ಫಿ ಸಿನಿಮಾ ಬಿಡುಗಡೆಗೆ ಸಜ್ಜಾಗುತ್ತಿದೆ. ಸಿನಿಮಾ ಫೆಬ್ರವರಿ 24ರಂದು ಬಿಡುಗಡೆಯಾಗಲಿದೆ. ಜಾಹಿರಾತುಗಳಿಂದ ವಿರೋಧ ಕಟ್ಟಿಕೊಂಡ ಅಕ್ಷಯ್‌ಕುಮಾರ್ ಅವೆಲ್ಲದರಿಂದ ದೂರ ಸರಿದಿದ್ದಾರೆ. ಕೆಲವು ದಿನಗಳ ಹಿಂದೆ ಅಕ್ಷಯ್ ಕುಮಾರ್ ಅವರ ಎಲ್ಲ ಸಿನಿಮಾಗಳು ಬಿಡುಗಡೆ ಮುಂಚಿತವಾಗಿಯೇ ಬಾಯ್ಕಾಟ್ ಟ್ರೆಂಡ್‌ಗೆ ಗುರಿಯಾಗುತ್ತಿದ್ದವು. ಇದೀಗ ಸೆಲ್ಫಿ ಸಿನಿಮಾದಲ್ಲಿ ಬೈಕಾಟ್ ಗ್ಯಾಂಗ್ನ ಟ್ರೋಲ್ ಮಾಡಲಾಗಿದೆ. ಈ ಕುರಿತು ಅಕ್ಷಯ್ ಕುಮಾರ್ ಹೊಸ ವಿಡಿಯೊ ಹಂಚಿಕೊಂಡಿದ್ದಾರೆ.
20 ಸೆಕೆಂಡುಗಳ ಕ್ಲಿಪ್ ವೈರಲ್ ಆಗಿದೆ. ಅಕ್ಷಯ್ ಕುಮಾರ್ ಸೂಪರ್ಸ್ಟಾರ್ನ ಪಾತ್ರ ಮಾಡುತ್ತಿದ್ದಾರೆ. ಇಮ್ರಾನ್ ಹಷ್ಮಿ ಆರ್ಟಿಒ ಅಧಿಕಾರಿಯ ಪಾತ್ರ ಮಾಡಿದ್ದಾರೆ. ಇಮ್ರಾನ್ ಹಷ್ಮಿ ಜತೆ ಅಕ್ಷಯ್ ಕುಮಾರ್ ನಡೆದುಕೊಳ್ಳುವ ರೀತಿಗೆ ಅನೇಕ ಕಡೆಗಳಿಂದ ವಿರೋಧ ವ್ಯಕ್ತವಾಗುತ್ತದೆ. ‘ಬೈಕಾಟ್ ಬಾಲಿವುಡ್’ ಟ್ರೆಂಡ್ ಶುರುವಾಗುತ್ತದೆ. ಇದಕ್ಕೆ ಸಿನಿಮಾದ ನಿರ್ಮಾಪಕರು ಅಸಮಾಧಾನ ಹೊರಹಾಕುತ್ತಾರೆ. ಇದಿಷ್ಟು ವಿಡಿಯೊದಲ್ಲಿದೆ. ‘ಈ ಕ್ಲಿಪ್ ನೋಡಿದಮೇಲೆ ಬೈಕಾಟ್ ಗ್ಯಾಂಗ್ನವರು ಸುಮ್ಮನಿರಬಹುದೇ’ ಎಂದು ಅಕ್ಷಯ್ ಅಭಿಮಾನಿಗಳು ಪ್ರಶ್ನೆ ಮಾಡಿದ್ದಾರೆ.
ಇದನ್ನೂ ಓದಿ: Akshay Kumar: ಅಕ್ಷಯ್ ಕುಮಾರ್ ಪಾದದ ಕೆಳಗೆ ಭಾರತದ ನಕ್ಷೆ: ನೆಟ್ಟಿಗರು ಗರಂ!
ವಿಜಯ್ ಪಾತ್ರದಲ್ಲಿ ಅಕ್ಷಯ್ ಮಿಂಚುತ್ತಿದ್ದಾರೆ. ಅವರ ಕಟ್ಟಾ ಅಭಿಮಾನಿಯಾಗಿರುವ ಓಂ ಪ್ರಕಾಶ್ ಅಗರ್ವಾಲ್ ಎಂಬ ಅಧಿಕಾರಿಯ ಪಾತ್ರದಲ್ಲಿ ಇಮ್ರಾನ್ ನಟಿಸಿದ್ದಾರೆ. ಚಿತ್ರದಲ್ಲಿ ಡಯಾನಾ ಪೆಂಟಿ ಮತ್ತು ನುಸ್ರತ್ ಭರುಚಾ ನಾಯಕಿಯರಾಗಿ ನಟಿಸಿದ್ದಾರೆ. ಸೆಲ್ಫಿ ಘೋಷಣೆಯಾದಾಗಿನಿಂದ, ಅಕ್ಷಯ್ ಕುಮಾರ್ ಮತ್ತು ಇಮ್ರಾನ್ ಹಾಶ್ಮಿ ಅವರ ಜೋಡಿಯನ್ನು ನೋಡಲು ಸಿನಿರಸಿಕರು ಕಾತುರದಿಂದ ಕಾಯುತ್ತಿದ್ದಾರೆ.
ಇದನ್ನೂ ಓದಿ: Akshay Kumar : ಪ್ರಧಾನಿಯನ್ನು ಶ್ಲಾಘಿಸಿದ ಅಕ್ಷಯ್ ಕುಮಾರ್, ಮೋದಿ ದೇಶದ ದೊಡ್ಡ ಇನ್‌ಫ್ಲೂಯೆನ್ಸರ್ ಎಂದ ನಟ
ರಾಜ್ ಮೆಹ್ತಾ ನಿರ್ದೇಶಿಸಿದ ಸೆಲ್ಫಿ ಮಲಯಾಳಂನ ʻಡ್ರೈವಿಂಗ್ ಲೈಸೆನ್ಸ್ʼ ಚಿತ್ರದ ರಿಮೇಕ್ ಆಗಿದೆ. ಪೃಥ್ವಿರಾಜ್ ಸುಕುಮಾರನ್ ಮತ್ತು ಸುರಾಜ್ ವೆಂಜರಮೂಡು ಡ್ರೈವಿಂಗ್ ಲೈಸೆನ್ಸ್‌ನಲ್ಲಿ ನಟಿಸಿದ್ದಾರೆ. ಅವರ ಪಾತ್ರಗಳನ್ನು ಅಕ್ಷಯ್ ಮತ್ತು ಇಮ್ರಾನ್ ಅಭಿನಯಿಸಲಿದ್ದಾರೆ. ಸಿನಿಮಾವನ್ನು ಕರಣ್ ಜೋಹರ್ ಅವರ ಧರ್ಮ ಪ್ರೊಡಕ್ಷನ್ಸ್, ಅಕ್ಷಯ್ ಕುಮಾರ್ ಅವರ ಕೇಪ್ ಆಫ್ ಗುಡ್ ಫಿಲ್ಮ್ಸ್ ಮತ್ತು ಸುಕುಮಾರನ್ ಅವರ ಪೃಥ್ವಿರಾಜ್ ಪ್ರೊಡಕ್ಷನ್ಸ್ ಮತ್ತು ಮ್ಯಾಜಿಕ್ ಫ್ರೇಮ್ಸ್ ಸಹ-ನಿರ್ಮಾಣ ಮಾಡಿದೆ.