ಬೆಂಗಳೂರು: ನಟಿ ಆಲಿಯಾ ಭಟ್ (Alia Bhatt) ಅವರನ್ನು ಇಟಾಲಿಯನ್ ಫ್ಯಾಷನ್ ಹೌಸ್ ಗುಚಿ ತಮ್ಮ ಮೊದಲ ಭಾರತೀಯ ಜಾಗತಿಕ ರಾಯಭಾರಿ ಎಂದು ಘೋಷಿಸಿದೆ. ವರದಿಯ ಪ್ರಕಾರ, ಮುಂದಿನ ವಾರ ಸಿಯೋಲ್‌ನಲ್ಲಿ ನಡೆಯಲಿರುವ ಗುಚಿ ಕ್ರೂಸ್ 2024 ಪ್ರದರ್ಶನದಲ್ಲಿ ಆಲಿಯಾ ಬ್ರ್ಯಾಂಡ್‌ನ ಜಾಗತಿಕ ರಾಯಭಾರಿಯಾಗಿ ಮೊದಲ ಬಾರಿಗೆ ಕಾಣಿಸಿಕೊಳ್ಳಲಿದ್ದಾರೆ.
ಆಲಿಯಾ ಭಟ್ ಗುಚಿಯ ಮೊದಲ ಭಾರತೀಯ ಜಾಗತಿಕ ರಾಯಭಾರಿಯಾಗಿದ್ದಾರೆ. ಸಿಯೋಲ್‌ನಲ್ಲಿ ನಡೆಯಲಿರುವ ಗುಸ್ಸಿ ಕ್ರೂಸ್ 2024 ರನ್‌ವೇ ಪ್ರದರ್ಶನದಲ್ಲಿ ಸಾರ್ವಜನಿಕವಾಗಿ ಕಾಣಿಸಿಕೊಳ್ಳಲಿದ್ದಾರೆ. ಇದು ನಗರದ ಜಿಯೊಂಗ್‌ಬೊಕ್‌ಗುಂಗ್ ಅರಮನೆಯಲ್ಲಿ (Gyeongbokgung Palace) ನಡೆಯಲಿದೆ.
ಮೊದಲ ಬಾರಿಗೆ ಮೆಟ್ ಗಾಲಾ ಸಮಾರಂಭದಲ್ಲಿ ಭಾಗವಹಿಸಿದ್ದ ಆಲಿಯಾ ಭಟ್ 100,000 ಮುತ್ತುಗಳಿಂದ ಅಲಂಕರಿಸಲ್ಪಟ್ಟ ಗೌನ್ ಧರಿಸಿ ಎಲ್ಲರ ಗಮನ ಸೆಳೆದಿದ್ದರು. ಭಾರತದ ಫ್ಯಾಷನ್ ಡಿಸೈನರ್ ಪ್ರಬಲ್ ಗುರುಂಗ್ ವಿನ್ಯಾಸಗೊಳಿಸಿರುವ ಈ ಉಡುಪಿನಲ್ಲಿ 1 ಲಕ್ಷ ಬಿಳಿ ಮುತ್ತುಗಳ ಕಸೂತಿ ಮಾಡಲಾಗಿದೆ. ಆಲಿಯಾ ಭಟ್ ಅವರು ಈಗ ಬಾಲಿವುಡ್ಗೆ ಮಾತ್ರ ಸೀಮಿತ ಆಗಿಲ್ಲ. ಅವರು ಹಾಲಿವುಡ್ ಚಿತ್ರ ಕೂಡ ಮಾಡಿದ್ದಾರೆ. ‘ಹಾರ್ಟ್ ಆಫ್ ಸ್ಟೋನ್’ ಹೆಸರಿನ ಸಿನಿಮಾ ಶೂಟಿಂಗ್ ಪೂರ್ಣಗೊಳಿಸಿ ಬಂದಿದ್ದಾರೆ. ಈ ಸಿನಿಮಾ ಶೀಘ್ರದಲ್ಲೇ ರಿಲೀಸ್ ಆಗಲಿದೆ.
ಇದನ್ನೂ ಓದಿ: Alia Bhatt: ಸ್ಟಾರ್ ಕಿಡ್ ಅಂದವರಿಗೆ ತಿರುಗೇಟು ಕೊಟ್ಟ ಆಲಿಯಾ ಭಟ್
ಇದನ್ನೂ ಓದಿ: Alia Bhatt: ಆಲಿಯಾ ಚಪ್ಪಲಿಗಳನ್ನು ಕೈಯಲ್ಲಿ ಎತ್ತಿಕೊಂಡ ರಣಬೀರ್; ಸಿಕ್ತು ʻಬೆಸ್ಟ್ ಹಸ್ಬೆಂಡ್ʼ ಪಟ್ಟ!
ಆಲಿಯಾ ಭಟ್ ಅವರು ಕರಣ್ ಜೋಹರ್ ನಿರ್ದೇಶನದ ʻರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿʼಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಚಿತ್ರದಲ್ಲಿ ರಣವೀರ್ ಸಿಂಗ್, ಶಬಾನಾ ಅಜ್ಮಿ, ಧರ್ಮೇಂದ್ರ ಮತ್ತು ಜಯಾ ಬಚ್ಚನ್ ನಟಿಸಿದ್ದಾರೆ. ಕತ್ರಿನಾ ಕೈಫ್ ಮತ್ತು ಪ್ರಿಯಾಂಕಾ ಚೋಪ್ರಾ ಅವರೊಂದಿಗೆ ಫರ್ಹಾನ್ ಅಖ್ತರ್ ಅವರ ʻಜೀ ಲೆ ಜರಾ, ಚಿತ್ರೀಕರಣದಲ್ಲಿ ನಟಿ ಬ್ಯುಸಿಯಾಗಿದ್ದಾರೆ.