ಬೆಂಗಳೂರು: ಪುಷ್ಪ ಸಿನಿಮಾ ಮೂಲಕ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಹೊರಹೊಮ್ಮಿರುವ ಸ್ಟೈಲೀಶ್ ಸ್ಟಾರ್ ಅಲ್ಲು ಅರ್ಜುನ್ (Allu Arjun) ಹೊಸ ಉದ್ಯಮ ಪ್ರಾರಂಭಿಸಿದ್ದಾರೆ. ಸಿನಿಮಾ ನಿರ್ಮಾಣ, ತಂದೆ ಒಡೆತನದ Aha (ಆಹಾ) ಒಟಿಟಿಯಲ್ಲಿಯೂ ಪಾಲುದಾರಾಗಿರುವ ಅಲ್ಲು ಅರ್ಜುನ್, ಹೊಸ ಸ್ಟುಡಿಯೊ ಕೂಡ ಶುರು ಮಾಡಿದ್ದಾರೆ.
ಈ ಉದ್ಯಮಗಳ ಜತೆಯಲ್ಲಿ ‘ಬನ್ನಿ’ ಐಶಾರಾಮಿ ಮಲ್ಟಿಪ್ಲೆಕ್ಸ್ ಪ್ರಾರಂಭಿಸಿದ್ದಾರೆ. ಈ ಚಿತ್ರಮಂದಿರಕ್ಕೆ ಎಎಎ ಸಿನಿಮಾಸ್ ಎಂದು ಹೆಸರಿಡಲಾಗಿದೆ. ಏಷ್ಯನ್ ಸಿನಿಮಾಸ್ ಸಹಭಾಗಿತ್ವದಲ್ಲಿ ಹೈದರಾಬಾದ್ನ ಅಮೀರ್ ಪೇಟೆಯಲ್ಲಿ ಎಎZ ಸಿನಿಮಾಸ್ ಜೂನ್ 14ರಂದು ಅದ್ಧೂರಿಯಾಗಿ ಶುಭರಾಂಭಗೊಂಡಿದೆ. ಅಲ್ಲು ಅರವಿಂದ್, ಸುನೀಲ್ ನಾರಂಗ್ ಹಾಗೂ ಅಲ್ಲು ಅರ್ಜುನ್ ಈ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
ಎಎಎ ಸಿನಿಮಾಸ್ ಒಟ್ಟಾರೆಯಾಗಿ ಮೂರು ಲಕ್ಷ ಚದರ ಅಡಿ ಇದ್ದು, ಮೂರನೇ ಮಹಡಿಯಲ್ಲಿ 35 ಸಾವಿರ ಚದರ ಅಡಿಯಲ್ಲಿ ಫುಡ್ ಕೋರ್ಟ್ ನಿರ್ಮಾಣ ಮಾಡಲಾಗಿದೆ. ನಾಲ್ಕನೇ ಫ್ಲೋರ್ನಲ್ಲಿ ಐದು ಸ್ಕ್ರೀನ್ಗಳ ಎಎಎ ಚಿತ್ರಮಂದಿರವಿದೆ. ಸ್ಕ್ರೀನ್ 2ರಲ್ಲಿ ಎಲ್ ಇಡಿ ಪರದೆಯನ್ನು ಒಳಗೊಂಡಿದೆ. ದಕ್ಷಿಣ ಭಾರತದಲ್ಲಿ ಎಲ್ ಇಡಿ ಪರದೆಯನ್ನು ಒಳಗೊಂಡಿರುವ ಏಕೈಕ ಮಲ್ಟಿಪ್ಲೆಕ್ಸ್ ಇದಾಗಿದೆ.
ಇದನ್ನೂ ಓದಿ: Sreeleela Birthday: ಅಲ್ಲು ಅರ್ಜುನ್ ತೋಳಿನಲ್ಲಿ ಶ್ರೀಲೀಲಾ; ರಶ್ಮಿಕಾ ಮಂದಣ್ಣರನ್ನು ಹಿಂದಿಕ್ಕಿದ್ರು ಅಂದ್ರು ಫ್ಯಾನ್ಸ್!
ಅತ್ಯುತ್ತಮ ಸೌಂಡ್ ಸಿಸ್ಟಂ, ಸ್ಕ್ರೀನ್ ಹಾಗೂ ಆಸನ ವ್ಯವಸ್ಥೆಯನ್ನೂ ಎಎಎ ಸಿನಿಮಾಸ್ ಕಲ್ಪಿಸಿದೆ. ವಿಶ್ವ ದರ್ಜೆಯ ವೈಶಿಷ್ಟ್ಯಗಳೊಂದಿಗೆ ನಿರ್ಮಿಸಲಾಗಿರುವ ಎಎಎಸ್ ಮಲ್ಟಿಪ್ಲೆಕ್ಸ್ ನಲ್ಲಿ ಪ್ರಭಾಸ್ ಆದಿಪುರುಷ ಸಿನಿಮಾ ಮೊದಲು ಪ್ರದರ್ಶನಗೊಳ್ಳುತ್ತಿದೆ.