Site icon Vistara News

Sharath Babu: ಅಮೃತವರ್ಷಿಣಿ ಖ್ಯಾತಿಯ ಬಹುಭಾಷಾ ನಟ ಶರತ್‌ ಬಾಬು ಇನ್ನಿಲ್ಲ

Amrutha Varshini Movie Fame Actor Sarath Babu Dies

Amrutha Varshini Movie Fame Actor Sarath Babu Dies

ಹೈದರಾಬಾದ್:‌ ಕನ್ನಡದ ಅಮೃತವರ್ಷಿಣಿ ಸಿನಿಮಾ ಖ್ಯಾತಿಯ, ದಕ್ಷಿಣ ಭಾರತದ ಖ್ಯಾತ ನಟ ಶರತ್‌ ಬಾಬು (74) (Sharath Babu) ಅವರು ಸೋಮವಾರ (ಮೇ 22) ನಿಧನರಾಗಿದ್ದಾರೆ. ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಶರತ್‌ ಬಾಬು ಅವರನ್ನು ಹೈದರಾಬಾದ್‌ನಲ್ಲಿರುವ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಿಸದೆ ಅವರು ಮೃತಪಟ್ಟಿದ್ದಾರೆ. ಕನ್ನಡ, ತಮಿಳು, ತೆಲುಗು ಸೇರಿ ಹಲವು ಭಾಷೆಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದ ಶರತ್‌ ಬಾಬು ಅವರ ಅಗಲಿಕೆಯ ಹಿನ್ನೆಲೆಯಲ್ಲಿ ಹಲವು ಗಣ್ಯರು ಕಂಬನಿ ಮಿಡಿದಿದ್ದಾರೆ.

ಬಹು ಅಂಗಾಂಗ ಸಮಸ್ಯೆ

ಶರತ್‌ ಬಾಬು ಅವರು ಸುದೀರ್ಘವಾಗಿ ಅನಾರೋಗ್ಯದಿಂದ ಬಳಲುತ್ತಿದ್ದರು. ಅವರಿಗೆ ಕಿಡ್ನಿ, ಲಿವರ್‌, ಶ್ವಾಸಕೋಶ ಸೇರಿ ಹಲವು ಅಂಗಾಂಗಗಳ ತೊಂದರೆಯಿಂದ ಬಳಲುತ್ತಿದ್ದರು. ಕಳೆದ ಕೆಲ ದಿನಗಳಿಂದ ಅವರಿಗೆ ವೆಂಟಿಲೇಟರ್‌ ಅಳವಡಿಸಲಾಗಿತ್ತು. ಕೊನೆಗೂ ಅವರು ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ.

ಇದನ್ನೂ ಓದಿ: BBC documentary: ಮೋದಿ ಕುರಿತ ಸಾಕ್ಷ್ಯಚಿತ್ರಕ್ಕಾಗಿ ಬಿಬಿಸಿಗೆ ದಿಲ್ಲಿ ಹೈಕೋರ್ಟ್‌ ಮಾನನಷ್ಟ ಮೊಕದ್ದಮೆ ನೋಟಿಸ್‌

200ಕ್ಕೂ ಅಧಿಕ ಸಿನಿಮಾಗಳಲ್ಲಿ ನಟನೆ

ಶರತ್‌ ಬಾಬು ಅವರು ಕನ್ನಡ, ಮಲಯಾಳಂ, ತಮಿಳು, ಹಿಂದಿ ಸೇರಿ ಹಲವು ಭಾಷೆಗಳ 230ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದ್ದಾರೆ. 1973ರಲ್ಲಿ ರಾಮ ರಾಜ್ಯಂ ಎಂಬ ತೆಲುಗು ಸಿನಿಮಾ ಮೂಲಕ ಸಿನಿ ರಂಗ ಪ್ರವೇಶಿಸಿದ್ದ ಅವರು ವಿಭಿನ್ನ ಪಾತ್ರಗಳ ಮೂಲಕ ಜನರ ಮನ ಗೆದ್ದಿದ್ದರು. ಅದರಲ್ಲೂ, 1978ರಲ್ಲಿ ಕೆ. ಬಾಲಚಂದರ್‌ ನಿರ್ದೇಶನದ ನಿಜಲ್‌ ನಿಜಮಾಗಿರಧು ಸಿನಿಮಾ ಶರತ್‌ ಅವರಿಗೆ ಬ್ರೇಕ್‌ ನೀಡಿತು. ಈ ಸಿನಿಮಾದ ನಟನೆಗಾಗಿ ಶರತ್‌ ಅವರಿಗೆ ಆಂಧ್ರಪ್ರದೇಶದ ಪ್ರತಿಷ್ಠಿತ ಎಂಟು ನಂದಿ ಪ್ರಶಸ್ತಿಗಳು ಲಭಿಸಿದ್ದವು.

ಕರ್ನಾಟಕದಲ್ಲೂ ಮನೆ ಮಾತು

1984ರಲ್ಲಿ ಶರತ್‌ ಬಾಬು ಅವರು ಸ್ಯಾಂಡಲ್‌ವುಂಡ್‌ಅನ್ನೂ ಪ್ರವೇಶಿಸಿದರು. ತುಳಸಿದಳ ಮೂಲಕ ಕನ್ನಡ ಸಿನಿಮಾರಂಗಕ್ಕೆ ಪದಾರ್ಪಣೆ ಮಾಡಿದ ಶರತ್‌ ಬಾಬು, ಹಲವು ಕನ್ನಡ ಸಿನಿಮಾಗಳ ಮೂಲಕ ಮನೆಮಾತಾಗಿದ್ದಾರೆ. ಅದರಲ್ಲೂ, 1997ರಲ್ಲಿ ಬಿಡುಗಡೆಯಾದ ಅಮೃತವರ್ಷಿಣಿ ಸಿನಿಮಾದ ಹೇಮಂತ್‌ ಪಾತ್ರವು ಅವರಿಗೆ ಕರ್ನಾಟಕದಲ್ಲಿ ಅಪಾರ ಖ್ಯಾತಿ ತಂದುಕೊಟ್ಟಿತು. ರಣಚಂಡಿ, ಗಾಯ, ಉಷಾ, ಓ ಪ್ರಿಯತಮಾ, ಬೃಂದಾವನ ಸೇರಿ ವಿವಿಧ ಸಿನಿಮಾಗಳಲ್ಲಿ ನಟಿಸಿದ್ದರು.

ಇದನ್ನೂ ಓದಿ: 1000 Notes coming back : 1,000 ರೂ. ನೋಟು ಮತ್ತೆ ಬರಲಿದೆಯೇ? ಆರ್‌ಬಿಐ ಗವರ್ನರ್‌ ಹೇಳಿದ್ದೇನು?

Exit mobile version