ಬೆಂಗಳೂರು: ರಣಬೀರ್ ಕಪೂರ್ (Animal Cast Fees) ಅಭಿನಯದ ಬಹುನಿರೀಕ್ಷಿತ ಚಿತ್ರ ಅನಿಮಲ್ ಡಿಸೆಂಬರ್ 1ರಂದು ಥಿಯೇಟರ್‌ಗೆ ಲಗ್ಗೆ ಇಟ್ಟು ಮೂರು ದಿನಗಳಲ್ಲಿ 200 ಕೋಟಿ ರೂ. ಕಲೆಕ್ಷನ್ ಮಾಡಿದೆ. ಪ್ರೇಕ್ಷಕರು ಮತ್ತು ವಿಮರ್ಶಕರಿಂದ ಭಾರಿ ಪ್ರಶಂಸೆಯನ್ನು ಗಿಟ್ಟಿಸಿಕೊಂಡಿದೆ ಸಿನಿಮಾ. ಇದರ ಜತೆಗೆ ರಣಬೀರ್ ಕಪೂರ್, ಬಾಬಿ ಡಿಯೋಲ್, ರಶ್ಮಿಕಾ ಮಂದಣ್ಣ ಮತ್ತು ಅನಿಲ್ ಕಪೂರ್ ಈ ಸಿನಿಮಾಗಾಗಿ ಎಷ್ಟೆಲ್ಲ ಸಂಭಾವನೆ ಪಡೆದಿದ್ದಾರೆ ಎಂಬ ಚರ್ಚೆಗಳು ಶುರುವಾಗಿವೆ.
ಈ ಮುಂಚೆ ರಣಬೀರ್ ಕಪೂರ್ ಈ ಸಿನಿಮಾಗಾಗಿ 30 – 35 ಕೋಟಿ ರೂ. ಸಂಭಾವನೆ ಪಡೆಯುತ್ತಿದ್ದಾರೆ ಎಂದು ಮಾಧ್ಯಮವೊಂದು ಪ್ರತ್ಯೇಕವಾಗಿ ವರದಿ ಮಾಡಿತ್ತು. ಪ್ರತಿ ಚಿತ್ರಕ್ಕೆ 70 ಕೋಟಿ ರೂ. ಸಂಭಾವನೆಯನ್ನು ರಣಬೀರ್ ಕಪೂರ್ ಪಡೆಯುತ್ತಿದ್ದಾರೆ ಎಂತಲೂ ವರದಿಯಿದೆ. ಆದರೆ ಅನಿಮಲ್ ನಿರ್ಮಾಪಕರಾದ ಭೂಷಣ್ ಕುಮಾರ್ ಮತ್ತು ಸಂದೀಪ್ ರೆಡ್ಡಿ ವಂಗಾ ಅವರಿಗೆ ಬೆಂಬಲ ಸೂಚಿಸಿ, ಕಪೂರ್ ತಮ್ಮ ಸಂಭಾವನೆಯನ್ನು ಶೇ. 50ರಷ್ಟು ಕಡಿಮೆ ಪಡೆದುಕೊಂಡಿದ್ದಾರೆ ಎನ್ನಲಾಗಿದೆ. ಬಾಬಿ ಡಿಯೋಲ್ 4-5 ಕೋಟಿ ರೂ., ರಶ್ಮಿಕಾ ಮಂದಣ್ಣ ಅವರಂತಹ ಇತರ ಪಾತ್ರವರ್ಗದವರು 4 ರೂ. ಕೋಟಿ, ಮತ್ತು ಅನಿಲ್ ಕಪೂರ್ 2 ಕೋಟಿ ರೂ. ಸಂಭಾವನೆಯನ್ನು ಪಡೆದಿದ್ದಾರೆ ಎನ್ನಲಾಗಿದೆ.
ರಣಬೀರ್ ಕಪೂರ್ ಅಭಿನಯದ ‘ಅನಿಮಲ್’ ಚಿತ್ರ (Animal Box Office) ಬಾಕ್ಸ್ ಆಫೀಸ್‌ನಲ್ಲಿ ಬಿರುಗಾಳಿ ಎಬ್ಬಿಸುತ್ತಿದೆ. ಚಿತ್ರಮಂದಿರಗಳಲ್ಲಿ ಮೊದಲ ವಾರಾಂತ್ಯದಲ್ಲಿ, ಸಿನಿಮಾ ಭಾರತದಲ್ಲಿ 200 ಕೋಟಿ ರೂ. ಗಡಿ ದಾಟಲು ಯಶಸ್ವಿಯಾಗಿದೆ. ವಿಕ್ಕಿ ಕೌಶಲ್ ಅವರ ‘ಸ್ಯಾಮ್ ಬಹದ್ದೂರ್’ ಸಿನಿಮಾ ಕೂಡ ಅಂದೇ ರಿಲೀಸ್ ಆಗಿದ್ದು, ಅನಿಮಲ್ ಸಿನಿಮಾ ಜಯಭೇರಿ ಬಾರಿಸಿದೆ.
ಇದನ್ನೂ ಓದಿ: Animal Box Office: ಬಿಡುಗಡೆಯಾದ ಎರಡೇ ದಿನಕ್ಕೆ 100 ಕೋಟಿ ರೂ. ಕ್ಲಬ್ ಸೇರಿಯೇ ಬಿಟ್ಟಿತು; ʻಅನಿಮಲ್ʼ ಕಮಾಲ್!
#Animal 🔥🔥#RanbirKapoor𓃵 pic.twitter.com/lCfPMfPGs8
— Skyups Media (@skyupsMedia) December 4, 2023
ಆರಂಭಿಕ ಅಂದಾಜಿನ ಪ್ರಕಾರ, ಚಿತ್ರವು ಮೂರನೇ ದಿನಕ್ಕೆ ಭಾರತದಲ್ಲಿ 72.50 ಕೋಟಿ ರೂ. ಗಳಿಸಿದೆ. ಡಿಸೆಂಬರ್ 3 ರಂದು ‘ಅನಿಮಲ್’ ಶೇ. 79.0 ರಷ್ಟು ಹಿಂದಿ ಆಕ್ಯುಪೆನ್ಸಿಯನ್ನು ಹೊಂದಿತ್ತು ಎಂದು ವರದಿಯಾಗಿದೆ. ರಣಬೀರ್ ಜತೆಗೆ, ಚಿತ್ರದಲ್ಲಿ ರಶ್ಮಿಕಾ ಮಂದಣ್ಣ, ಅನಿಲ್ ಕಪೂರ್, ಬಾಬಿ ಡಿಯೋಲ್ ಮತ್ತು ಟ್ರಿಪ್ಟಿ ಡಿಮ್ರಿ ಪ್ರಮುಖ ಪಾತ್ರಗಳಲ್ಲಿದ್ದಾರೆ. ‘ಪಠಾಣ್’ ಮತ್ತು ‘ಗದರ್ 2’ ದಾಖಲೆಯನ್ನು ಹಿಂದಿಕ್ಕಿದೆ ಈ ಸಿನಿಮಾ. ‘ಅನಿಮಲ್’ ಬಿಡುಗಡೆಯಾದ ಎರಡು ದಿನಗಳಲ್ಲಿ 100 ಕೋಟಿ ಕ್ಲಬ್‌ಗೆ ಪ್ರವೇಶಿಸಿದ ಚಿತ್ರವಾಗಿ ಹೊರಹೊಮ್ಮಿತ್ತು.
ಈಗ, ಆರಂಭಿಕ ಅಂದಾಜಿನ ಪ್ರಕಾರ, ಎರಡನೇ ದಿನದಲ್ಲಿ ಚಿತ್ರ ಭಾರತದಲ್ಲಿ 63.80 ಕೋಟಿ ರೂ. ಗಳಿಸಿತ್ತು. ಹೀಗಾಗಿ ಒಟ್ಟು 129.80 ಕೋಟಿ ರೂ. ಎಂದು ವರದಿಯಾಗಿತ್ತು. ಇದಕ್ಕೂ ಮೊದಲು, ಚಲನಚಿತ್ರ ವಿಮರ್ಶಕ ಮತ್ತು ವ್ಯಾಪಾರ ವಿಶ್ಲೇಷಕ ತರಣ್ ಆದರ್ಶ್ ಕೂಡ ʻಅನಿಮಲ್ʼ ಸಿನಿಮಾ ರಣಬೀರ್ ಅವರ ವೃತ್ತಿಜೀವನದ ಅತಿದೊಡ್ಡ ಓಪನರ್ ಎಂದು ಭವಿಷ್ಯ ನುಡಿದಿದ್ದರು. ವಾರಾಂತ್ಯದಲ್ಲಿ, ಭಾರತದಲ್ಲಿ 150 ಕೋಟಿ ರೂಪಾಯಿಗಳ ಗಡಿಯನ್ನು ತಲುಪುವ ಮೂಲಕ ಚಿತ್ರದ ಕಲೆಕ್ಷನ್ ಹೆಚ್ಚಾಗಬಹುದು ಎಂದು ನಿರೀಕ್ಷಿಸಲಾಗಿತ್ತು. ’ಕಬೀರ್ ಸಿಂಗ್’ ನಂತರ ‘ಅನಿಮಲ್’ ಸಂದೀಪ್ ರೆಡ್ಡಿ ವಂಗಾ ಅವರ ಎರಡನೇ ಬಾಲಿವುಡ್ ಚಿತ್ರವಾಗಿತ್ತು.