Animal Box Office: ಬಿಡುಗಡೆಯಾದ ಎರಡೇ ದಿನಕ್ಕೆ 100 ಕೋಟಿ ರೂ. ಕ್ಲಬ್‌ ಸೇರಿಯೇ ಬಿಟ್ಟಿತು; ‌ʻಅನಿಮಲ್‌ʼ ಕಮಾಲ್! - Vistara News

ಬಾಲಿವುಡ್

Animal Box Office: ಬಿಡುಗಡೆಯಾದ ಎರಡೇ ದಿನಕ್ಕೆ 100 ಕೋಟಿ ರೂ. ಕ್ಲಬ್‌ ಸೇರಿಯೇ ಬಿಟ್ಟಿತು; ‌ʻಅನಿಮಲ್‌ʼ ಕಮಾಲ್!

Animal Box Office: ‘ಪಠಾಣ್’ ಮತ್ತು ‘ಗದರ್ 2’ ದಾಖಲೆಯನ್ನು ಹಿಂದಿಕ್ಕಿದೆ ಈ ಸಿನಿಮಾ. ‘ಅನಿಮಲ್‌’ ಬಿಡುಗಡೆಯಾದ ಎರಡು ದಿನಗಳಲ್ಲಿ 100 ಕೋಟಿ ಕ್ಲಬ್‌ಗೆ ಪ್ರವೇಶಿಸಿದ ಚಿತ್ರವಾಗಿ ಹೊರಹೊಮ್ಮಿದೆ.

VISTARANEWS.COM


on

Ranbir Kapoor film animal crosses Rs 100 crore
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು; ರಣಬೀರ್ ಕಪೂರ್-ರಶ್ಮಿಕಾ ಅಭಿನಯದ ‘ಅನಿಮಲ್‌’ ಸಿನಿಮಾ (Animal Box Office) ಬಾಕ್ಸ್ ಆಫೀಸ್ ಕಲೆಕ್ಷನ್‌ನಲ್ಲಿ ಬಿರುಗಾಳಿ ಎಬ್ಬಿಸಿದೆ. ಡಿಸೆಂಬರ್ 1ರಂದು ಥಿಯೇಟರ್‌ಗಳಲ್ಲಿ ಬಿಡುಗಡೆಯಾದ ಸಂದೀಪ್ ರೆಡ್ಡಿ ವಂಗಾ ನಿರ್ದೇಶನದ ಈ ಸಿನಿಮಾ ಭಾರತದಲ್ಲಿ 100 ಕೋಟಿ ರೂ. ಕ್ಲಬ್‌ ಪ್ರವೇಶಿಸಿದೆ. ರಣಬೀರ್ ಜತೆಗೆ, ಚಿತ್ರದಲ್ಲಿ ರಶ್ಮಿಕಾ ಮಂದಣ್ಣ, ಅನಿಲ್ ಕಪೂರ್, ಬಾಬಿ ಡಿಯೋಲ್ ಮತ್ತು ಟ್ರಿಪ್ಟಿ ಡಿಮ್ರಿ ಪ್ರಮುಖ ಪಾತ್ರಗಳಲ್ಲಿದ್ದಾರೆ. ‘ಪಠಾಣ್’ ಮತ್ತು ‘ಗದರ್ 2’ ದಾಖಲೆಯನ್ನು ಹಿಂದಿಕ್ಕಿದೆ ಈ ಸಿನಿಮಾ. ‘ಅನಿಮಲ್‌’ ಬಿಡುಗಡೆಯಾದ ಎರಡು ದಿನಗಳಲ್ಲಿ 100 ಕೋಟಿ ಕ್ಲಬ್‌ಗೆ ಪ್ರವೇಶಿಸಿದ ಚಿತ್ರವಾಗಿ ಹೊರಹೊಮ್ಮಿದೆ.

ವಿಕ್ಕಿ ಕೌಶಲ್ ಅವರ ‘ಸ್ಯಾಮ್ ಬಹದ್ದೂರ್’ ಜತೆಗೆ ಅನಿಮಲ್‌ ಬಿಡುಗಡೆಯಾಗಿದ್ರೂ ಕೂಡ ಜಯಭೇರಿ ಬಾರಿಸಿದೆ. ಈಗ, ಆರಂಭಿಕ ಅಂದಾಜಿನ ಪ್ರಕಾರ, ಎರಡನೇ ದಿನದಲ್ಲಿ ಚಿತ್ರ ಭಾರತದಲ್ಲಿ 63.80 ಕೋಟಿ ರೂ. ಗಳಿಸಿದೆ. ಹೀಗಾಗಿ ಒಟ್ಟು 129.80 ಕೋಟಿ ರೂ. ಎಂದು ವರದಿಯಾಗಿದೆ. ಇದಕ್ಕೂ ಮೊದಲು, ಚಲನಚಿತ್ರ ವಿಮರ್ಶಕ ಮತ್ತು ವ್ಯಾಪಾರ ವಿಶ್ಲೇಷಕ ತರಣ್ ಆದರ್ಶ್ ಕೂಡ ʻಅನಿಮಲ್‌ʼ ಸಿನಿಮಾ ರಣಬೀರ್ ಅವರ ವೃತ್ತಿಜೀವನದ ಅತಿದೊಡ್ಡ ಓಪನರ್ ಎಂದು ಭವಿಷ್ಯ ನುಡಿದಿದ್ದರು. ವಾರಾಂತ್ಯದಲ್ಲಿ, ಭಾರತದಲ್ಲಿ 150 ಕೋಟಿ ರೂಪಾಯಿಗಳ ಗಡಿಯನ್ನು ತಲುಪುವ ಮೂಲಕ ಚಿತ್ರದ ಕಲೆಕ್ಷನ್‌ ಹೆಚ್ಚಾಗಬಹುದು ಎಂದು ನಿರೀಕ್ಷಿಸಲಾಗಿದೆ.

ಇದನ್ನೂ ಓದಿ: Animal Box Office: ʻಅನಿಮಲ್‌ʼ ಸೀಕ್ವೆಲ್‌ ಬರೋದು ಕನ್‌ಫರ್ಮ್‌? ಮೊದಲ ದಿನವೇ ಭರ್ಜರಿ ಬ್ಯಾಟಿಂಗ್‌!

ಅನಿಮಲ್‌ ಸಿನಿಮಾದ ಟೀಸರ್‌ ಬಿಡುಗಡೆಯಾಗಿ ಭಾರಿ ಸದ್ದು ಮಾಡಿತ್ತು. ಜತೆಗೆ ನಟಿ ರಶ್ಮಿಕಾ ಮಂದಣ್ಣ ಕ್ಯಾರೆಕ್ಟರ್‌ ಪೋಸ್ಟರ್‌ ಕೂಡ ರಿಲೀಸ್‌ ಆಗಿತ್ತು. ಇದಕ್ಕೆ ನಟಿಯ ಫ್ಯಾನ್ಸ್‌ ಫಿದಾ ಆಗಿದ್ದರು. ಚಿತ್ರತಂಡ ʼಹುವಾ ಮೈನ್‌ʼ ಹಾಡನ್ನು (Animal song Hua Main) ಕೂಡ ರಿಲೀಸ್‌ ಮಾಡಿದೆ. ಈ ಹಾಡಿನಲ್ಲಿ ರಶ್ಮಿಕಾ-ರಣಬೀರ್ ಕಪೂರ್‌ ಲಿಪ್‌ ಲಾಕ್‌ ದೃಶ್ಯಗಳು ಹೆಚ್ಚಿವೆ. ಸಿನಿಮಾದಲ್ಲಿ ಪ್ರೈವೇಟ್ ಜೆಟ್, ಕುಟುಂಬಸ್ಥರ ಮುಂದೆ ಲಿಪ್‌ ಲಾಕ್‌ ಮಾಡಿರುವ ಸೀನ್‌ಗಳಿವೆ. ತೆಲುಗಿನ ʼಅರ್ಜುನ್‌ ರೆಡ್ಡಿʼ, ಹಿಂದಿಯ ʼಕಬೀರ್‌ ಸಿಂಗ್‌ʼ ಮುಂತಾದ ಚಿತ್ರಗಳನ್ನು ನಿರ್ದೇಶಿಸಿ ಗೆದ್ದ ಸಂದೀಪ್‌ ರೆಡ್ಡಿ ಹ್ಯಾಟ್ರಿಕ್‌ ಗೆಲುವಿನ ನಿರೀಕ್ಷೆಯಲ್ಲಿದ್ದಾರೆ. ’ಕಬೀರ್ ಸಿಂಗ್’ ನಂತರ ‘ಅನಿಮಲ್’ ಸಂದೀಪ್ ರೆಡ್ಡಿ ವಂಗಾ ಅವರ ಎರಡನೇ ಬಾಲಿವುಡ್ ಚಿತ್ರವಾಗಿದೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಬಾಲಿವುಡ್

Kenneth Mitchell: ‘ಸ್ಟಾರ್ ಟ್ರೆಕ್’, ‘ಕ್ಯಾಪ್ಟನ್ ಮಾರ್ವೆಲ್’ ಖ್ಯಾತಿಯ ನಟ ಕೆನ್ನೆತ್ ಮಿಚೆಲ್ ಇನ್ನಿಲ್ಲ

ಕೆನ್ನೆತ್ ಅಲೆಕ್ಸಾಂಡರ್ ಮಿಚೆಲ್‌ ಅನೇಕ ಚಲನಚಿತ್ರಗಳು ಮತ್ತು ದೂರದರ್ಶನ Kenneth Mitchell: ಕಾರ್ಯಕ್ರಮಗಳಲ್ಲಿ ಪರಿಚಿತರಾಗಿದ್ದರು. ಅಮಿಯೋಟ್ರೋಫಿಕ್ ಲ್ಯಾಟರಲ್ ಸ್ಕ್ಲೆರೋಸಿಸ್, ಅಥವಾ ALS, ಮೆದುಳು ಮತ್ತು ಬೆನ್ನುಹುರಿಯ ನರ ಕೋಶಗಳ ಮೇಲೆ ಪರಿಣಾಮ ಬೀರುವ ಕಾಯಿಲೆ ಆಗಿದೆ.

VISTARANEWS.COM


on

Kenneth Mitchell Dies at 49
Koo

ಬೆಂಗಳೂರು: ʻಸ್ಟಾರ್ ಟ್ರೆಕ್ʼ: ಡಿಸ್ಕವರಿ ಸೇರಿದಂತೆ ಹಿಟ್‌ ಸಿನಿಮಾ ನೀಡಿದ ಕೆನಡಾದ ನಟ `ಕೆನ್ನೆತ್ ಅಲೆಕ್ಸಾಂಡರ್ ಮಿಚೆಲ್‌ʼ ನಿಧನರಾಗಿದ್ದಾರೆ. ನಟನಿಗೆ 49 ವರ್ಷ ವಯಸ್ಸಾಗಿತ್ತು. 2020ರಲ್ಲಿ ಮಿಚೆಲ್‌ ಅವರು ಅಮಿಯೋಟ್ರೋಫಿಕ್ ಲ್ಯಾಟರಲ್ ಸ್ಕ್ಲೆರೋಸಿಸ್ (Amyotrophic Lateral Sclerosis) ತುತ್ತಾಗಿದ್ದರು. ಅವರ ಕುಟುಂಬ ಸದಸ್ಯರು ನಿಧನದ ಸುದ್ದಿಯನ್ನು ಸೋಷಿಯಲ್‌ ಮೀಡಿಯಾ ಮೂಲಕ ಹಂಚಿಕೊಂಡಿದ್ದಾರೆ.

ಕೆನ್ನೆತ್ ಅಲೆಕ್ಸಾಂಡರ್ ಮಿಚೆಲ್‌ ಅನೇಕ ಚಲನಚಿತ್ರಗಳು ಮತ್ತು ದೂರದರ್ಶನ ಕಾರ್ಯಕ್ರಮಗಳಲ್ಲಿ ಪರಿಚಿತರಾಗಿದ್ದರು. ಅಮಿಯೋಟ್ರೋಫಿಕ್ ಲ್ಯಾಟರಲ್ ಸ್ಕ್ಲೆರೋಸಿಸ್, ಅಥವಾ ALS, ಮೆದುಳು ಮತ್ತು ಬೆನ್ನುಹುರಿಯ ನರ ಕೋಶಗಳ ಮೇಲೆ ಪರಿಣಾಮ ಬೀರುವ ಕಾಯಿಲೆ ಆಗಿದೆ. ಕ್ರಮೇಣ ಬೆನ್ನುಹುರಿ ಮತ್ತು ಮೆದುಳಿನಾದ್ಯಂತ ನರ ಕೋಶಗಳು ಕ್ರಮೇಣ ಕ್ಷೀಣಿಸುತ್ತವೆ. ಇದನ್ನು ಲೌ ಗೆಹ್ರಿಗ್ ಕಾಯಿಲೆ ಎಂದೂ ಕರೆಯುತ್ತಾರೆ.

ಮಿಚೆಲ್‌ 2019ರ ಕ್ಯಾಪ್ಟನ್‌ ಮಾರ್ವೆಲ್‌’ನಲ್ಲಿ ಬ್ರೀ ಲಾರ್ಸನ್‌ ಅವರ ತಂದೆ ಜೋಸೇಫ್‌ ಡ್ಯಾನ್ವರ್ಸ್‌ ಪಾತ್ರವನ್ನು ನಿರ್ವಹಿಸಿದರು. `ದಿ ರಿಕ್ರೂಟ್’, ದಿ ಗ್ರೀನ್’, ಮಿರಾಕಲ್’ ಸೇರದಂತೆ ಅನೇಕ್‌ ಹಿಟ್‌ ಸಿನಿಮಾ ನೀಡಿದ್ದರು.

ಇದನ್ನೂ ಓದಿ: Ameen Sayani: ‘ಬಿನಾಕಾ ಗೀತ್‌ಮಾಲಾʼ ಖ್ಯಾತಿಯ ರೇಡಿಯೋ ನಿರೂಪಕ ಅಮೀನ್‌ ಸಯಾನಿ ನಿಧನ

ಲೋವರ್ ಡೆಕ್ಸ್‌ನ ಸಂಚಿಕೆಯಲ್ಲಿ ಹಲವಾರು ಪಾತ್ರಗಳಿಗೆ ಧ್ವನಿ ನೀಡಿದ್ದಾರೆ. 2020ರಲ್ಲಿ ನಟ ತಮಗಿರುವ ಕಾಯಿಲೆ ಬಗ್ಗೆ ಹೇಳಿಕೊಂಡಿದ್ದರು. ಮಿಚೆಲ್ ಅವರು ತಮ್ಮ ಕುಟುಂಬದೊಂದಿಗೆ ಹೆಚ್ಚು ಸಮಯ ಕಳೆಯುವುದು ಇಷ್ಟ ಎಂದು ಸಂದರ್ಶನದಲ್ಲಿ ತಿಳಿಸಿದ್ದರು. ಕ್ರಮೇಣ ಸಿನಿ ರಂಗದಲ್ಲಿ ತೊಡಗಿಸಿಕೊಳ್ಳಲು ಕಷ್ಟಕರವಾಗಿತ್ತು ಎಂದು ಹೇಳಿಕೊಂಡಿದ್ದರು.

Continue Reading

ಬಾಲಿವುಡ್

Shah Rukh Khan: ಬಟ್ಟೆ ಬಿಚ್ಚಿ ಮಗನ ಬ್ರ್ಯಾಂಡ್ ಪ್ರಚಾರ ಮಾಡಿದ ಶಾರುಖ್‌ ಖಾನ್‌!

Shah Rukh Khan : ಆರ್ಯನ್ ಖಾನ್ ಅವರ ಐಷಾರಾಮಿ ಬಟ್ಟೆ ಬ್ರಾಂಡ್ D’YAVOL X ಆನ್‌ಲೈನ್‌ನಲ್ಲಿ ಬರುತ್ತಿದ್ದಂತೆ ಬಟ್ಟೆಗಳ ದುಬಾರಿ ಬೆಲೆಗಳಿಂದ ಜನರು ಆಘಾತಕ್ಕೊಳಗಾಗಿದ್ದರು. ಇದೀಗ ಶಾರುಖ್‌ ಮತ್ತೆ ತಮ್ಮ ಮಗನ ಬಟ್ಟೆ ಬ್ರ್ಯಾಂಡ್‌ಗೆ ಪ್ರಚಾರ ಮಾಡಿದ್ದಾರೆ. ಅದೂ ಕೂಡ ಶರ್ಟ್‌ಲೆಸ್ ಆಗಿ.

VISTARANEWS.COM


on

SRK flaunts his ripped body as he promotes son Aryan
Koo

ಬೆಂಗಳೂರು: ಆರ್ಯನ್ ಖಾನ್  ತಮ್ಮ D’YAVOL X ಉಡುಪಿನ ಬ್ರ್ಯಾಂಡ್‌ ಅನ್ನು ಶಾರುಖ್‌ ಖಾನ್‌ (Shah Rukh Khan) ಜತೆ ಕ್ರಿಯೇಟಿವ್‌ ಆಗಿ ಪರಿಚಯಿಸಿದ್ದರು. ಈ ಜಾಹೀರಾತಿನೊಂದಿಗೆ ನಿರ್ದೇಶಕರಾಗಿಯೂ ಪದಾರ್ಪಣೆ ಮಾಡಿದರು ಆರ್ಯನ್‌. ಜನರು ಕೂಡ ಈ ಬ್ರ್ಯಾಂಡ್‌ ಬಗ್ಗೆ ಕುತೂಹಲಕ್ಕೆ ಒಳಗಾಗಿದ್ದರು. ಆರ್ಯನ್ ಖಾನ್ ಅವರ ಐಷಾರಾಮಿ ಬಟ್ಟೆ ಬ್ರಾಂಡ್ D’YAVOL X ಆನ್‌ಲೈನ್‌ನಲ್ಲಿ ಬರುತ್ತಿದ್ದಂತೆ ಬಟ್ಟೆಗಳ ದುಬಾರಿ ಬೆಲೆಗಳಿಂದ ಜನರು ಆಘಾತಕ್ಕೊಳಗಾಗಿದ್ದರು. ಇದೀಗ ಶಾರುಖ್‌ ಮತ್ತೆ ತಮ್ಮ ಮಗನ ಬಟ್ಟೆ ಬ್ರ್ಯಾಂಡ್‌ಗೆ ಪ್ರಚಾರ ಮಾಡಿದ್ದಾರೆ. ಅದೂ ಕೂಡ ಶರ್ಟ್‌ಲೆಸ್ ಆಗಿ!

ಶಾರುಖ್‌ ಅವರ ಮ್ಯಾನೇಜರ್ ಪೂಜಾ ದಾದ್ಲಾನಿ ಅವರು ಶಾರುಖ್‌ ಅವರ ಹೊಸ ಜಾಹೀರಾತನ್ನು ಹಂಚಿಕೊಂಡಿದ್ದಾರೆ. ಫೆಬ್ರವರಿ 25ರಂದು, ಪೂಜಾ ದದ್ಲಾನಿ ಶಾರುಖ್ ಖಾನ್ ಅವರ ‘ಹಾಟ್’ ಚಿತ್ರವನ್ನು ಹಂಚಿಕೊಂಡು “ಫಿಟ್‌ನೆಸ್‌ಗೆ ಪ್ರೇರಣೆ ಮತ್ತು ವಯಸ್ಸಿಗೆ ವಿರುದ್ಧವಾಗಿ. ಶಾರುಖ್‌ ಅವರಿಗೆ ವಯಸ್ಸಾಗುತ್ತಿಲ್ಲ, ಅವರು ಕ್ಲಾಸಿಕ್ ಆಗುತ್ತಿದ್ದಾರೆʼʼ ಎಂದು ಬರೆದುಕೊಂಡಿದ್ದಾರೆ. ಅಭಿಮಾನಿಗಳು ಕೂಡ ಶಾರುಖ್‌ ಅವರ ಬಾಡಿ ಕಂಡು ‘ಹಾಟ್’ ಮತ್ತು ‘ಸೆಕ್ಸಿ’ ಎಂದು ಕರೆಯುತ್ತಿದ್ದಾರೆ. ಇನ್ನು ಈ ಪೋಸ್ಟ್‌ಗೆ ಶಾರುಖ್‌ ಕೂಡ ತಮಾಷೆಯಾಗಿಯೇ ಉತ್ತರ ನೀಡಿದ್ದಾರೆ. “ಅದೆಲ್ಲ ಚೆನ್ನಾಗಿದೆ ಆದರೆ ನನಗೆ ಸ್ವಲ್ಪ ಹೊಸ ಬಟ್ಟೆ ಸಿಗಬಹುದೇ!!! D’YAVOL X ಮುಂದಿನ ಡ್ರಾಪ್ ಯಾವಾಗ?” ಎಂದು ಬರೆದಿದ್ದಾರೆ. ಈ ಫೋಟೋ 20 ಲಕ್ಷಕ್ಕೂ ಅಧಿಕ ಲೈಕ್ಸ್ ಸಿಕ್ಕಿದೆ. ತಂದೆಯ ಬೆಂಬಲ ನೋಡಿ ಆರ್ಯನ್ ಖುಷಿಪಟ್ಟಿದ್ದಾರೆ.

ಇದನ್ನೂ ಓದಿ: Shah rukh Khan : ಕನ್ನಡದಲ್ಲಿ ಮಾತನಾಡಿ ಅಭಿಮಾನಿಗಳ ಮನಗೆದ್ದ ಶಾರುಖ್​ ಖಾನ್​

ಈಗ ವೈರಲ್ ಆಗಿರುವ ಫೋಟೊದಲ್ಲಿ, ಶಾರುಖ್‌ ಕೈಯಲ್ಲಿ ಗ್ಲಾಸ್‌ ಲೋಟ, ಹಾಗೇ ಸನ್‌ಗ್ಲಾಸ್‌ ಜತೆ ಬಾಡಿ ಮೇಲೆ X ಮಾರ್ಕ್‌ ಕೂಡ ಹಾಕಿಕೊಂಡಿದ್ದಾರೆ. ಡಿ’ಯಾವೋಲ್ ಎಕ್ಸ್ ಆರ್ಯನ್ ಖಾನ್ ಅವರ ಐಷಾರಾಮಿ ಬಟ್ಟೆ ಬ್ರಾಂಡ್ ಆಗಿದೆ.

ಆರ್ಯನ್ ಖಾನ್ ಅವರ ಐಷಾರಾಮಿ ಬಟ್ಟೆ ಬ್ರಾಂಡ್ D’YAVOL X ವೆಬ್‌ಸೈಟ್‌ 2023ರ ಏಪ್ರಿಲ್‌ 30ರಂದು ಲೈವ್‌ಗೆ ಬಂದಿತು. ವೆಬ್‌ಸೈಟ್ ಲೈವ್ ಆದ ತಕ್ಷಣ, ಅನೇಕ ಜನರಿಗೆ ನೋಡಲು ಸಾಧ್ಯವಾಗಲಿಲ್ಲ. ʻʻಒಮ್ಮೆಲೆ ಜನರು ಪ್ರವೇಶಿಸಿದ ಕಾರಣ ಟ್ರಾಫಿಕ್ ಅನುಭವಿಸುತ್ತಿದ್ದೇವೆʼʼ ಎಂದು ಬ್ರ್ಯಾಂಡ್‌ ತನ್ನ ಟ್ವೀಟರ್‌ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿತ್ತು. ಬಳಿಕ ಸೈಟ್ ಮತ್ತೆ ಲೈವ್ ಆಗಿತ್ತು. ಬಳಕೆದಾರರು ನೋಡುತ್ತಿದ್ದಂತೆ ಬಟ್ಟೆಗಳ ದುಬಾರಿ ಬೆಲೆಗಳಿಂದ ಆಘಾತಕ್ಕೊಳಗಾಗಿದ್ದರು. ಕಮೆಂಟ್‌ಗಳಲ್ಲಿ ಜನರು ಅಸಮಾಧಾನ ಹೊರಹಾಕಿದ್ದರು. ಒಬ್ಬರು ʻʻಖಾನ್ ಸಾಬ್, ಇದನ್ನು ಕೊಂಡುಕೊಳ್ಳಲು ನನ್ನ ಒಂದು ಕಿಡ್ನಿಯನ್ನು ಮಾರಿದರೂ ಸಾಕಾಗುವುದಿಲ್ಲ, ನನ್ನ ಎರಡೂ ಕಿಡ್ನಿಗಳನ್ನು ಮಾರಬೇಕಾಗುತ್ತದೆ” ಎಂದು ಬರೆದರೆ ಇನ್ನೊಬ್ಬರು “ಈಗಷ್ಟೇ ಬೆಲೆಗಳನ್ನು ನೋಡಿದೆ. ಮಧ್ಯಮ ವರ್ಗದ ವ್ಯಕ್ತಿ ಎಂದಿಗೂ ಖರೀದಿಸಲು ಸಾಧ್ಯವಿಲ್ಲʼʼ ಎಂದು ಬರೆದುಕೊಂಡಿದ್ದರು.

Continue Reading

ಬಾಲಿವುಡ್

Priyanka Chopra: ‘ಆಸ್ಕರ್ʼ ನಾಮಿನೇಟ್‌ ಆದ ಭಾರತೀಯ ಡಾಕ್ಯುಮೆಂಟರಿಗೆ ಪ್ರಿಯಾಂಕಾ ಚೋಪ್ರಾ ಸಾಥ್‌!

Priyanka Chopra: ಕಾರ್ಯನಿರ್ವಾಹಕ ನಿರ್ಮಾಪಕಿಯಾಗಿ ಆಸ್ಕರ್-ನಾಮನಿರ್ದೇಶಿತ ಸಾಕ್ಷ್ಯಚಿತ್ರ ‘ಟು ಕಿಲ್ ಎ ಟೈಗರ್’ ತಂಡವನ್ನು ಸೇರಿಕೊಂಡಿದ್ದಾರೆ.ನೆಟ್​ಫ್ಲಿಕ್ಸ್​, ‘ಟು ಕಿಲ್ ಎ ಟೈಗರ್’ ಡಾಕ್ಯುಮೆಂಟರಿಯ ಸ್ಟ್ರೀಮಿಂಗ್ ಹಕ್ಕು ಖರೀದಿ ಮಾಡಿದೆ.

VISTARANEWS.COM


on

Priyanka Chopra Oscar-nominated To Kill a Tiger
Koo

ಬೆಂಗಳೂರು: ನಟಿ ಪ್ರಿಯಾಂಕಾ ಚೋಪ್ರಾ (Priyanka Chopra) , ‘ಟು ಕಿಲ್ ಎ ಟೈಗರ್’ ಡಾಕ್ಯುಮೆಂಟರಿಗೆ ಬೆಂಬಲವಾಗಿ ನಿಂತಿದ್ದಾರೆ. ಡಾಕ್ಯುಮೆಂಟರಿ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿರುವ ಪ್ರಿಯಾಂಕಾ, ‘ಆಸ್ಕರ್ ನಾಮಿನೇಷನ್ ಗಳಿಸಿರುವ ‘ಟು ಕಿಲ್ ಎ ಟೈಗರ್’ ಡಾಕ್ಯುಮೆಂಟರಿ ತಂಡವನ್ನು ನಾನು ಸೇರಿಕೊಳ್ಳುತ್ತಿರುವುದು ಬಹಳ ಹೆಮ್ಮೆ ಎನಿಸಿದೆ ಎಂದು ಹೇಳಿಕೊಂಡಿದ್ದಾರೆ. ಕಾರ್ಯನಿರ್ವಾಹಕ ನಿರ್ಮಾಪಕಿಯಾಗಿ ಆಸ್ಕರ್-ನಾಮನಿರ್ದೇಶಿತ ಸಾಕ್ಷ್ಯಚಿತ್ರ ‘ಟು ಕಿಲ್ ಎ ಟೈಗರ್’ ತಂಡವನ್ನು ಸೇರಿಕೊಂಡಿದ್ದಾರೆ.ನೆಟ್​ಫ್ಲಿಕ್ಸ್​, ‘ಟು ಕಿಲ್ ಎ ಟೈಗರ್’ ಡಾಕ್ಯುಮೆಂಟರಿಯ ಸ್ಟ್ರೀಮಿಂಗ್ ಹಕ್ಕು ಖರೀದಿ ಮಾಡಿದೆ.

ಪ್ರಾಜೆಕ್ಟ್‌ನ ಭಾಗವಾಗಿರುವ ಬಗ್ಗೆ ನಟಿ ಇನ್‌ಸ್ಟಾಗ್ರಾಮ್‌ನಲ್ಲಿ ಖುಷಿಯನ್ನು ಹಂಚಿಕೊಂಡಿದ್ದಾರೆ. ʻʻಅಕಾಡೆಮಿ ಪ್ರಶಸ್ತಿ-ನಾಮನಿರ್ದೇಶಿತ ಡಾಕ್ಯುಮೆಂಟರಿ ʻಟು ಕಿಲ್ ಎ ಟೈಗರ್ʼ ತಂಡವನ್ನು ಸೇರಿದ್ದಕ್ಕೆ ಖುಷಿ ಇದೆ. ಮತ್ತು ವಿತರಣಾ ಹಕ್ಕುಗಳನ್ನು ನೆಟ್​ಫ್ಲಿಕ್ಸ್ ಪಡೆದುಕೊಂಡಿದೆ ಎಂದು ಘೋಷಿಸಲು ನನಗೆ ತುಂಬಾ ಹೆಮ್ಮೆಯಾಗುತ್ತಿದೆ. 2022 ರಲ್ಲಿ ನಾನು ಈ ಚಲನಚಿತ್ರವನ್ನು ಮೊದಲ ಬಾರಿಗೆ ವೀಕ್ಷಿಸಿದಾಗ,ನೇರ ನಿರೂಪಣೆ ನನಗೆ ಬಹಳ ಇಷ್ಟವಾಗಿತ್ತು. ಅತ್ಯಾಚಾರಕ್ಕೆ ಒಳಗಾದ ಮಗಳಿಗೆ ನ್ಯಾಯ ಕೊಡಿಸಲು ಹೋರಾಡುವ ತಂದೆಯ ನಿಜ ಘಟನೆಗೆ ಆಕರ್ಷಿತನಾದೆʼʼಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: Priyanka Chopra: ಕೇಸ್ ದಾಖಲಿಸಿ ʻಲಾಸ್ ಏಂಜಲೀಸ್ʼ ಮನೆ ಖಾಲಿ ಮಾಡಿದ ಪ್ರಿಯಾಂಕಾ-ನಿಕ್‌; ಏನಿದಕ್ಕೆ ಕಾರಣ?

ನಿಶಾ ಪಹುಜಾ ನಿರ್ದೇಶಿಸಿದ ‘ಟು ಕಿಲ್ ಎ ಟೈಗರ್’, ಪಾಮ್ ಸ್ಪ್ರಿಂಗ್ಸ್ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಅತ್ಯುತ್ತಮ ಸಾಕ್ಷ್ಯಚಿತ್ರ ಪ್ರಶಸ್ತಿ, TIFF ನಲ್ಲಿ ʻಆಂಪ್ಲಿಫೈ ವಾಯ್ಸ್ ಪ್ರಶಸ್ತಿʼ ಮತ್ತು ಕೆನಡಿಯನ್ ಸ್ಕ್ರೀನ್ ಅವಾರ್ಡ್ಸ್‌ನಲ್ಲಿ ʻಅತ್ಯುತ್ತಮ ಫೀಚರ್ ಡಾಕ್ಯುಮೆಂಟರಿʼ ಸೇರಿದಂತೆ ಪ್ರಪಂಚದಾದ್ಯಂತ ಹಲವಾರು ಪ್ರಶಸ್ತಿಗಳನ್ನು ಪಡೆದುಕೊಂಡಿದೆ.

ಕಳೆದ ವರ್ಷ ಆಸ್ಕರ್​ಗೆ ನಾಮಿನೇಟ್ ಆಗಿದ್ದ ‘ಚೆಲ್ಲಾ ಶೋ’ ಸಿನಿಮಾಕ್ಕೆ ಪ್ರಿಯಾಂಕಾ ಚೋಪ್ರಾ ಬೆಂಬಲ ನೀಡಿದ್ದರು. ʻಟು ಕಿಲ್ ಎ ಟೈಗರ್’ ಡಾಕ್ಯುಮೆಂಟರಿಯು ಅತ್ಯಾಚಾರಕ್ಕೆ ಒಳಗಾದ ಯುವತಿ ಹಾಗೂ ಆಕೆಗೆ ನ್ಯಾಯ ಕೊಡಿಸಲು ಆಕೆಯ ತಂದೆ ಹೇಗೆ ಹೋರಾಡುತ್ತಾರೆ ಎಂಬುದರ ಬಗ್ಗೆ ಇದೆ.

Continue Reading

ಬಾಲಿವುಡ್

Aamir Khan: ಅಮಿತಾಭ್‌ ಬಚ್ಚನ್ ರಿಹರ್ಸಲ್‌ ಕಂಡು ನಾನು ಮೂಕಸ್ಮಿತನಾದೆ: ಆಮೀರ್ ಖಾನ್

Aamir Khan: ನಟ ಆಮೀರ್ ಖಾನ್ ಚಿತ್ರೀಕರಣ ಮಾಡುವಾಗ ಬಾಲಿವುಡ್‌ನಲ್ಲಿ ತಮ್ಮ ಆರಂಭಿಕ ದಿನಗಳ ಘಟನೆಯನ್ನು ನೆನಪಿಸಿಕೊಂಡಿದ್ದಾರೆ. ಚಿತ್ರೀಕರಣದ ವೇಳೆ ಅಮಿತಾಭ್‌ ತಮ್ಮ ದೃಶ್ಯಕ್ಕಾಗಿ ಹೇಗೆ ತಲ್ಲೀನರಾಗಿ ಅಭ್ಯಾಸ ನಡೆಸುತ್ತಿದ್ದರು ಎಂಬುದನ್ನು ವಿವರಿಸಿದ್ದಾರೆ.

VISTARANEWS.COM


on

Aamir Khan recalls his reaction to Amitabh Bachchan
Koo

ಬೆಂಗಳೂರು: ನಟ ಆಮೀರ್ ಖಾನ್ (Aamir Khan) ಅವರು ನಟ ಅಮಿತಾಭ್‌ ಕುರಿತು ಹಾಡಿ ಹೊಗಳಿದ್ದಾರೆ. ಅಷ್ಟೇ ಅಲ್ಲದೇ ಅಮಿತಾಭ್‌ ಅವರ ಕೆಲಸಗಳು ತಮ್ಮ ಮೇಲೆ ಹೇಗೆ ಶಾಶ್ವತವಾಗಿ ಪ್ರಭಾವ ಬೀರಿದೆ ಎಂಬುದರ ಕುರಿತು ಮಾತನಾಡಿದ್ದಾರೆ. ಇತ್ತೀಚೆಗೆ ಎಬಿಪಿ ಶೃಂಗಸಭೆಯಲ್ಲಿ ಮಾತನಾಡುತ್ತಿದ್ದಾಗ, ಆಮೀರ್ ಅವರು ತಮ್ಮ ಚೊಚ್ಚಲ ಚಿತ್ರ ʻಖಯಾಮತ್ ಸೆ ಕಯಾಮತ್ ತಕ್‌ʼಸಿನಿಮಾ (Qayamat Se Qayamat Tak) ಅನುಭವ ಹಂಚಿಕೊಂಡರು. ಚಿತ್ರೀಕರಣ ಮಾಡುವಾಗ ಬಾಲಿವುಡ್‌ನಲ್ಲಿ ತಮ್ಮ ಆರಂಭಿಕ ದಿನಗಳ ಘಟನೆಯನ್ನು ನೆನಪಿಸಿಕೊಂಡಿದ್ದಾರೆ. ಚಿತ್ರೀಕರಣದ ವೇಳೆ ಅಮಿತಾಭ್‌ ತಮ್ಮ ದೃಶ್ಯಕ್ಕಾಗಿ ಹೇಗೆ ತಲ್ಲೀನರಾಗಿ ಅಭ್ಯಾಸ ನಡೆಸುತ್ತಿದ್ದರು ಎಂಬುದನ್ನು ವಿವರಿಸಿದ್ದಾರೆ.

ಕಠಿಣ ಪರಿಶ್ರಮದ ಕಲಾವಿದ ಅವರು!

ಆಮೀರ್ ಖಾನ್ ಮಾತನಾಡಿ, “ನಾನು ಫಿಲ್ಮ್ ಸಿಟಿಯಲ್ಲಿ ʻಖಯಾಮತ್ ಸೆ ಕಯಾಮತ್ ತಕ್ʼ (Qayamat Se Qayamat Tak) ಚಿತ್ರದ ಶೂಟಿಂಗ್ ಮಾಡುತ್ತಿದ್ದೆ. ನಾನು ನನ್ನ ಸೋದರಸಂಬಂಧಿ ನುಸಾತ್, ರಾಜ್ ಝುತ್ಶಿ ಮತ್ತು ರೀನಾ (ಆಮೀರ್ ಅವರ ಮಾಜಿ ಪತ್ನಿ) ಜತೆ ಮೇಕಪ್ ರೂಮ್‌ನಲ್ಲಿದ್ದೆ. ಮೇಕಪ್ ರೂಮ್‌ನ ಹೊರಗೆ, ಮತ್ತೊಂದು ಚಿತ್ರದ ಶೂಟಿಂಗ್ ಇತ್ತು. ನಟರೊಬ್ಬರು ತನ್ನ ದೃಶ್ಯದ ಸಾಲುಗಳನ್ನು ಸುಮಾರು 100 ರಿಂದ 200 ಬಾರಿ ರಿಹರ್ಸಲ್ ಮಾಡುವುದನ್ನು ನಾವು ನೋಡಿದೆವು. ಆ ಶ್ರಮಜೀವಿ ಬೇರೆ ಯಾರೂ ಅಲ್ಲ ಅಮಿತ್‌ಜಿ (ಅಮಿತಾಭ್ ಬಚ್ಚನ್)ʼʼಎಂದು ಹೇಳಿಕೊಂಡರು.

“ಆ ಸಮಯದಲ್ಲಿ ನಾನು ಸಿನಿಮಾಗೆ ಹೊಸಬ. ಅಮಿತ್‌ಜಿಯಂತಹ ಸೂಪರ್‌ಸ್ಟಾರ್ ರಿಹರ್ಸಲ್ ಮಾಡುವುದನ್ನು ನೋಡಿ, ,ತುಂಬಾ ಶ್ರದ್ಧೆಯಿಂದ ಅವರು ಮಾಡಿದ ಕೆಲಸ ನನ್ನ ಮೇಲೆ ಶಾಶ್ವತವಾದ ಪ್ರಭಾವ ಬೀರಿತು. ಆಗ ಆ ಶಾಟ್‌ ತುಂಬ ದೀರ್ಘ ದೃಶ್ಯವಾಗಿತ್ತು. 8 ರಿಂದ 10 ಶಾಟ್‌ ಕೊಟ್ಟಿದ್ದರು. ಶಾಟ್ ಮುಗಿದ ನಂತರ, ಅಮಿತ್ ಜಿ ಅವರು ನಿರ್ದೇಶಕ ಪ್ರಕಾಶ್ ಮೆಹ್ರಾ ಜತೆ ಮಾತನಾಡಿ ʻ’ಪ್ರಕಾಶ್, ನಾನು ತುಂಬಾ ಫಾಸ್ಟ್‌ ಆಗಿ ಮಾತನಾಡಲಿಲ್ಲ, ಅಲ್ಲವೇ?’ ಎಂದು ಕೇಳಿದ್ದರು. ಅಮಿತಾಬ್‌ ಅವರ ಈ ನಡೆ, ಹಾಗೇ ರಿಹರ್ಸಲ್‌ ಮಾಡಿದ ಬಗೆ ಕಂಡು ರಿಹರ್ಸಲ್‌ಗೆ ಕೊನೆಯಿಲ್ಲ ಎಂಬುದು ನನಗೆ ಗೊತ್ತಾಯ್ತು. ಇತಿಹಾಸದ ಶ್ರೇಷ್ಠ ನಟರಲ್ಲಿ ಒಬ್ಬರಾದ ಚಾರ್ಲಿ ಚಾಪ್ಲಿನ್ ಅವರಂತಹ ಅಪ್ರತಿಮ ವ್ಯಕ್ತಿಗಳು ಸಹ 200 ರಿಂದ 300 ಬಾರಿ ಅಭ್ಯಾಸ ಮಾಡುತ್ತಿದ್ದರುʼʼಎಂದು ಹೇಳಿಕೊಂಡಿದ್ದಾರೆ.

ಇದನ್ನೂ ಓದಿ: Aamir Khan: ಮಗಳ ಮದುವೆಯಲ್ಲಿ ಮಾಜಿ ಪತ್ನಿಗೆ ಮುತ್ತಿಟ್ಟ ಆಮೀರ್ ಖಾನ್!

ಇತ್ತೀಚಿನ ಸಂದರ್ಶನದಲ್ಲಿ ಆಮೀರ್ ಖಾನ್ ತಮ್ಮ ಕೊನೆಯ ಚಿತ್ರ ʻಲಾಲ್ ಸಿಂಗ್ ಚಡ್ಡಾʼದ ಸೋಲಿನ ಬಗ್ಗೆ ಭಾವನಾತ್ಮಕವಾಗಿ ಮಾತನಾಡಿದ್ದರು.

ಲಾಲ್ ಸಿಂಗ್ ಚಡ್ಡಾ ಸಿನಿಮಾ ಸೋತ ಬಳಿಕ ಆಮೀರ್‌ ಮುಂದಿನ ಪ್ರಾಜೆಕ್ಟ್‌ ಘೋಷಿಸಿದ್ದರು. ಈ ಬಗ್ಗೆ ಆಮೀರ್‌ ಮಾಧ್ಯಮವೊಂದರಲ್ಲಿ ಮಾತನಾಡಿ “ನಾನು ಸಿನಿಮಾ ಬಗ್ಗೆ ಸಾರ್ವಜನಿಕವಾಗಿ ಮಾತನಾಡಿಲ್ಲ, ಈಗ ನಾನು ಹೆಚ್ಚು ಹೇಳಲು ಸಾಧ್ಯವಿಲ್ಲ. ಆದರೆ ನಾನು ಶೀರ್ಷಿಕೆಯನ್ನು ಹೇಳಬಲ್ಲೆ. ಚಿತ್ರದ ಶೀರ್ಷಿಕೆ ‘ಸಿತಾರೆ ಜಮೀನ್ ಪರ್’. ನಿಮಗೆ ನನ್ನ ‘ತಾರೆ ಜಮೀನ್ ಪರ್’ ಚಿತ್ರ ನೆನಪಿರಬೇಕು. ಈ ಚಿತ್ರದ ಹೆಸರು ‘ಸಿತಾರೆ ಜಮೀನ್ ಪರ್’ ಏಕೆಂದರೆ ನಾವು ಅದೇ ಥೀಮ್‌ನೊಂದಿಗೆ ಮುಂದೆ ಹೋಗುತ್ತಿದ್ದೇವೆ. ‘ತಾರೆ ಜಮೀನ್ ಪರ್’ ಭಾವನಾತ್ಮಕ ಚಿತ್ರವಾಗಿತ್ತು. ಈ ಚಿತ್ರ ನಿಮ್ಮನ್ನು ನಗಿಸುತ್ತದೆ. ಆ ಚಿತ್ರವು ನಿಮ್ಮನ್ನು ಅಳುವಂತೆ ಮಾಡಿತು, ಇದು ನಿಮಗೆ ಮನರಂಜನೆ ನೀಡುತ್ತದೆʼಎಂದು ಮಾಹಿತಿ ಹಂಚಿಕೊಂಡಿದ್ದರು.

Continue Reading
Advertisement
aadhar update
ಪ್ರಮುಖ ಸುದ್ದಿ5 seconds ago

Aadhaar Card: ಗಮನಿಸಿ; ಆಧಾರ್‌ ಕಾರ್ಡ್‌ ಉಚಿತ ತಿದ್ದುಪಡಿಗೆ ಇನ್ನು ಕೆಲವು ದಿನ ಮಾತ್ರ ಅವಕಾಶ

Nitasha Kaul
ದೇಶ9 mins ago

Nitasha Kaul: ಕರ್ನಾಟಕ ಸರ್ಕಾರ ಕರೆಸಿದ ಲಂಡನ್‌ ಲೇಖಕಿಗೆ ಬೆಂಗಳೂರು ವಿಮಾನ ನಿಲ್ದಾಣದಿಂದಲೇ ಗೇಟ್‌ಪಾಸ್; ʼನಗರ- ನಕ್ಸಲ್‌ʼ ಎಂದ ಬಿಜೆಪಿ

Namma Metro Farmer dismiss
ಬೆಂಗಳೂರು18 mins ago

Namma Metro : ಬಟ್ಟೆ ಕ್ಲೀನ್‌ ಇಲ್ಲ ಎಂದು ರೈತನಿಗೆ ಅಪಮಾನ ಮಾಡಿದ ಮೆಟ್ರೋ ಸಿಬ್ಬಂದಿ ವಜಾ

Rajya Sabha Elections Yogendra appointed as KRPP agent Reddy supports to Congress
ರಾಜಕೀಯ22 mins ago

Rajya Sabha Election: ಕೆಆರ್‌ಪಿಪಿ ಏಜೆಂಟ್‌ ಆಗಿ ಡಿಕೆಶಿ ಆಪ್ತ ಯೋಗೇಂದ್ರ ನೇಮಕ; ರಾಜ್ಯಸಭೆಯಲ್ಲಿ ಕಾಂಗ್ರೆಸ್‌ಗೆ ರೆಡ್ಡಿ ಬೆಂಬಲ

Actor Darshan rally police deny permission
ಸ್ಯಾಂಡಲ್ ವುಡ್35 mins ago

Actor Darshan: ನಟ ದರ್ಶನ್​ ಅಭಿಮಾನಿಗಳ ಬೈಕ್ ರ್‍ಯಾಲಿ ರದ್ದು!

Drinking water supply to be disrupted in Bengaluru tomorrow
ಬೆಂಗಳೂರು41 mins ago

Water supply : ಬೆಂಗಳೂರಲ್ಲಿ ನಾಳೆ ಕುಡಿಯುವ ನೀರು ಪೂರೈಕೆಯಲ್ಲಿ ವ್ಯತ್ಯಯ

Pune Police 60 Hours Operation; Drugs worth more than Rs 1300 crore seized
ಪ್ರಮುಖ ಸುದ್ದಿ53 mins ago

ಪುಣೆ ಪೊಲೀಸರ 60 ಗಂಟೆಗಳ ಕಾರ್ಯಾಚರಣೆ; 1300 ಕೋಟಿ ರೂ.ಗೂ ಅಧಿಕ ಮೌಲ್ಯದ ಡ್ರಗ್ಸ್ ವಶ

gold wear bride
ಚಿನ್ನದ ದರ55 mins ago

Gold Rate Today: 22 ಕ್ಯಾರಟ್‌, 24 ಕ್ಯಾರಟ್‌ ಬಂಗಾರದ ಧಾರಣೆ ಗಮನಿಸಿ, ಖರೀದಿಸಿ

Elderly woman murdered in Bengaluru accused did not give any reason
ಕ್ರೈಂ1 hour ago

Murder Case : ವೃದ್ಧೆ ದೇಹ ತುಂಡು ತುಂಡಾಗಿ ಕತ್ತರಿಸಿದ್ದು ನಾನೇ! ಹಿಂದಿನ ಕಾರಣ ಬಾಯಿಬಿಡದ ಹಂತಕ

Pralhad Joshi Jaishankar Nirmala Seetaraman
ಹುಬ್ಬಳ್ಳಿ1 hour ago

Pralhad Joshi : ಜೈಶಂಕರ್, ನಿರ್ಮಲಾ ಸ್ಪರ್ಧೆ ಖಚಿತ ಎಂದ ಪ್ರಹ್ಲಾದ್‌ ಜೋಶಿ; ಯಾವ ಕ್ಷೇತ್ರ?

Sharmitha Gowda in bikini
ಕಿರುತೆರೆ5 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ5 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ4 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ3 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ5 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ5 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ4 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ2 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ3 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ5 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

read your daily horoscope predictions for february 26 2024
ಭವಿಷ್ಯ8 hours ago

Dina Bhavishya : ಈ ಮೂರು ರಾಶಿಯವರು ಇಂದು ಹೂಡಿಕೆ ವ್ಯವಹಾರದಲ್ಲಿ ತೊಡುಗುವುದು ಬೇಡ

Dina Bhavishya
ಭವಿಷ್ಯ1 day ago

Dina Bhavishya : ಈ ರಾಶಿಯವರು ಆಪ್ತರೊಂದಿಗೆ ಗೌಪ್ಯ ವಿಷಯವನ್ನು ಹೇಳುವಾಗ ಎಚ್ಚರ!

Video Viral Student falls under school bus He escaped with minor injuries
ವೈರಲ್ ನ್ಯೂಸ್2 days ago

Video Viral: ಸ್ಕೂಲ್ ಬಸ್‌ನಡಿ ಬಿದ್ದ ವಿದ್ಯಾರ್ಥಿ; ಪಾರಾಗಿದ್ದೇ ಪವಾಡ!

Varthur Santhosh
ಮಂಡ್ಯ2 days ago

Varthur Santhosh: ಮತ್ತೆ ಹಳ್ಳಿಕಾರ್‌ ಒಡೆಯ ವಿವಾದ; ವರ್ತೂರ್‌ ಸಂತೋಷ್ ವಿರುದ್ಧ ಕಾನೂನು ಸಮರ

read your daily horoscope predictions for february 24 2024
ಭವಿಷ್ಯ2 days ago

Dina Bhavishya : ಹೂಡಿಕೆ ವ್ಯವಹಾರದಲ್ಲಿ ಈ ರಾಶಿಯವರಿಗೆ ಸಿಗಲಿದೆ ಸಂಗಾತಿ ಸಾಥ್‌

Staff nurses attempt to convert at health centre in Ratagal village
ಕಲಬುರಗಿ3 days ago

Forced Conversion : ಆಪರೇಶನ್‌ ಮತಾಂತರ; ನರ್ಸ್‌ಗಳಿಂದ ಹಿಂದೂಗಳ ಬ್ರೈನ್‌ ವಾಶ್‌

Fire breaks out in auto shed Burnt autos
ಬೆಂಗಳೂರು3 days ago

Fire Accident : ಬೆಂಗಳೂರಿನಲ್ಲಿ ತಡರಾತ್ರಿ ಭಾರೀ ಅಗ್ನಿ ಅವಘಡ! 40-50 ಆಟೋಗಳು ಬೆಂಕಿಗಾಹುತಿ

He sent a private photo video of his girlfriend
ಬೆಳಗಾವಿ3 days ago

Belgavi News : ನವ ವಿವಾಹಿತೆಯ ಖಾಸಗಿ ವಿಡಿಯೊ ಹರಿಬಿಟ್ಟು ಹಳೇ ಪ್ರೇಮಿ ಕಿತಾಪತಿ!

read your daily horoscope predictions for february 23 2024
ಭವಿಷ್ಯ3 days ago

Dina Bhavishya : ಈ ರಾಶಿಯವರಿಗೆ ಆಫೀಸ್‌ನಲ್ಲಿ ಬಾಸ್‌ನ ಕಿರಿಕಿರಿಯಿಂದ ದಿನಪೂರ್ತಿ ಟೆನ್ಷನ್‌!

Catton Candy contain cancer Will there be a ban in Karnataka
ಬೆಂಗಳೂರು4 days ago

cotton candy Ban : ಕರ್ನಾಟಕದಲ್ಲಿ ಬ್ಯಾನ್‌ ಆಗುತ್ತಾ ಬಾಂಬೆ ಮಿಠಾಯಿ; ಕ್ಯಾನ್ಸರ್​​ ಕಾರಕ ವಿಷ ಪತ್ತೆ!

ಟ್ರೆಂಡಿಂಗ್‌