ಬೆಂಗಳೂರು: ಸಂದೀಪ್ ರೆಡ್ಡಿ ವಂಗ ನಿರ್ದೇಶನದ ʻಅನಿಮಲ್ʼ ಬಿಡುಗಡೆಯ (Animal Movie) ದಿನಾಂಕ ಮುಂದೂಡಲಾಗಿದೆ. ಈ ಮುಂಚೆ ಆಗಸ್ಟ್ 11ಕ್ಕೆ ಸಿನಿಮಾ ರಿಲೀಸ್ ಮಾಡುವುದಾಗಿ ಚಿತ್ರತಂಡ ಘೋಷಿಸಿತ್ತು. ಆದರೆ ಈ ಸಿನಿಮಾ ಯಾತಕ್ಕಾಗಿ ಪೋಸ್ಟ್ ಪೋನ್ ಮಾಡಲಾಗಿದೆ ಎಂಬ ಕಾರಣವನ್ನು ಸಂದಿಪ್ ಅವರು ಇದೀಗ ರಿವೀಲ್ ಮಾಡಿದ್ದಾರೆ. ಈಗ ಚಿತ್ರ ಇದೇ ವರ್ಷ ಡಿಸೆಂಬರ್‌ನಲ್ಲಿ ಬಿಡುಗಡೆಯಾಗಲಿದೆ.
ಜುಲೈ 3ರಂದು ಸಂದೀಪ್ ಟ್ವೀಟ್‌ನಲ್ಲಿ ವಿಡಿಯೊ ಹಂಚಿಕೊಂಡು “ನಾವು ಆಗಸ್ಟ್ 11 ರಂದು ಚಿತ್ರವನ್ನು ಏಕೆ ಬಿಡುಗಡೆ ಮಾಡಲು ಸಾಧ್ಯವಾಗುತ್ತಿಲ್ಲ ಎಂಬುದಕ್ಕೆ ಒಂದೇ ಕಾರಣವೆಂದರೆ ಗುಣಮಟ್ಟ. ಇದು ಸಾಮಾನ್ಯ ಉತ್ತರ. ಉದಾಹರಣೆಗೆ, ಚಿತ್ರದಲ್ಲಿ ಏಳು ಹಾಡುಗಳಿವೆ, ಏಳು ಹಾಡುಗಳು ಐದು ಭಾಷೆಗಳಲ್ಲಿ ಬರುವಾಗ ಅದು 35 ಹಾಡುಗಳಾಗುತ್ತದೆ.
“ನನಗೆ ಇತ್ತೀಚೆಗಷ್ಟೇ ಅರಿವಾಯಿತು, ಇಲ್ಲದಿದ್ದರೆ ನಾನು ಪ್ರಿ-ಟೀಸರ್ ಬಿಡುಗಡೆ ಮಾಡುತ್ತಿರಲಿಲ್ಲ. ಪ್ರಿ-ಟೀಸರ್ ಪ್ರತಿಕ್ರಿಯೆಗೆ ತುಂಬಾ ಧನ್ಯವಾದಗಳು. ಇನ್ನು ಹಾಡುಗಳ ವಿಚಾರಕ್ಕೆ ಬಂದರೆ, ಎಲ್ಲಾ ವಿಭಿನ್ನ ಭಾಷೆಗಳಲ್ಲಿ ಒಂದೇ ರೀತಿಯ ಸಾಹಿತ್ಯ ಮೂಡಿ ಬರಬೇಕು. ಬೇರೆ ಬೇರೆ ಭಾಷೆಗಳಲ್ಲಿ, ಎಲ್ಲಾ ಭಾಷೆಗಳಲ್ಲಿ ಬಿಡುಗಡೆಯಾದಾಗ, ಇದು ಹಿಂದಿ-ಡಬ್ಬಿಂಗ್ ತಮಿಳು ಚಿತ್ರ, ಹಿಂದಿ-ಡಬ್ಬಿಂಗ್ ತೆಲುಗು ಚಿತ್ರ ಎಂಬ ಭಾವನೆಯನ್ನು ನೀಡಬಾರದು. ಆಗ ಕ್ಲ್ಯಾರಿಟಿ ತುಂಬ ಮುಖ್ಯ. ಸಿನಿಮಾ ರಿಲೀಸ್ ಆದಾಗ ಆಯಾ ಭಾಷೆಗೆ ಸರಿಹೊಂದಬೇಕುʼʼಎಂದರು.
ʻʻಈ ಎಲ್ಲ ಕಾರಣಕ್ಕಾಗಿ ಸಿನಿಮಾ ರಿಲೀಸ್ ಮಾಡಲು ನಾವು ಸಮಯ ತೆಗೆದುಕೊಳ್ಳುತ್ತಿದ್ದೇವೆ. ಬೇರೆ ಯಾವುದೇ ಕಾರಣವಿಲ್ಲ,. ಅನಿಮಲ್ ಸಿನಿಮಾ ಈ ವರ್ಷ ಡಿಸೆಂಬರ್ 1ರಂದು ರಿಲೀಸ್ ಆಗಲಿದೆ. ಎಂದು ಹೇಳಿದ್ದಾರೆ. ಈ ಮೊದಲು ಅಕ್ಷಯ್ ಕುಮಾರ್ ಹಾಗೂ ಆಲಿಯಾ ಭಟ್ ಸಿನಿಮಾಗಳು ಅದೇ ಸಮಯದಲ್ಲಿ ರಿಲೀಸ್ ಆಗುತ್ತಿರುವ ಕಾರಣ ಸಿನಿಮಾ ಮುಂದೂಡಲಾಗಿತ್ತು ಎನ್ನಲಾಗಿತ್ತು.
ಇದನ್ನೂ ಓದಿ: Rashmika Mandanna | ಮಾಲ್ಡೀವ್ಸ್‌ನಲ್ಲಿ ರಶ್ಮಿಕಾ-ವಿಜಯ್ ದೇವರಕೊಂಡ: ಫೋಟೊ ಸೀಕ್ರೆಟ್ ಏನು?
#1stDecemberANIMALrelease@AnilKapoor #RanbirKapoor @thedeol @iamRashmika@tripti_dimri23 @imvangasandeep #BhushanKumar @VangaPranay @MuradKhetani #KrishanKumar @anilandbhanu @VangaPictures @TSeries @rameemusic @cowvala #ShivChanana @neerajkalyan_24 @sureshsrajan pic.twitter.com/EAGLNTaEy9
— Sandeep Reddy Vanga (@imvangasandeep) July 3, 2023
ಚಿತ್ರದಲ್ಲಿ ರಣಬೀರ್ ಕಪೂರ್, ಅನಿಲ್ ಕಪೂರ್, ಬಾಬಿ ಡಿಯೋಲ್, ರಶ್ಮಿಕಾ ಮಂದಣ್ಣ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಅನಿಮಲ್ ಡಿಸೆಂಬರ್ 1 ರಂದು ಹಿಂದಿ, ತೆಲುಗು, ತಮಿಳು, ಕನ್ನಡ ಮತ್ತು ಮಲಯಾಳಂನಲ್ಲಿ ಬಿಡುಗಡೆಯಾಗಲಿದೆ. ಭೂಷಣ್ ಕುಮಾರ್ , ಕ್ರಿಶನ್ ಕುಮಾರ್ ಅವರ ಟಿ-ಸೀರೀಸ್, ಮುರಾದ್ ಖೇತಾನಿಯ ಸಿನಿ1 ಸ್ಟುಡಿಯೋಸ್ ಮತ್ತು ಪ್ರಣಯ್ ರೆಡ್ಡಿ ವಂಗಾ ಅವರ ಭದ್ರಕಾಳಿ ಪಿಕ್ಚರ್ಸ್ ನಿರ್ಮಿಸಿದೆ.