Animal Movie: ʻಅನಿಮಲ್ʼ ಸಿನಿಮಾ ರಿಲೀಸ್ ಲೇಟ್, ನಿರ್ದೇಶಕ ಹೇಳೋದೇನು? - Vistara News

South Cinema

Animal Movie: ʻಅನಿಮಲ್ʼ ಸಿನಿಮಾ ರಿಲೀಸ್ ಲೇಟ್, ನಿರ್ದೇಶಕ ಹೇಳೋದೇನು?

Animal Movie: ಈ ಸಿನಿಮಾ ಯಾತಕ್ಕಾಗಿ ಪೋಸ್ಟ್‌ ಪೋನ್‌ ಮಾಡಲಾಗಿದೆ ಎಂಬ ಕಾರಣವನ್ನು ಸಂದಿಪ್‌ ಅವರು ಇದೀಗ ರಿವೀಲ್‌ ಮಾಡಿದ್ದಾರೆ. ಈಗ ಚಿತ್ರ ಇದೇ ವರ್ಷ ಡಿಸೆಂಬರ್‌ನಲ್ಲಿ ಬಿಡುಗಡೆಯಾಗಲಿದೆ.

VISTARANEWS.COM


on

Animal Movie
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಸಂದೀಪ್ ರೆಡ್ಡಿ ವಂಗ ನಿರ್ದೇಶನದ ʻಅನಿಮಲ್ʼ ಬಿಡುಗಡೆಯ (Animal Movie) ದಿನಾಂಕ ಮುಂದೂಡಲಾಗಿದೆ. ಈ ಮುಂಚೆ ಆಗಸ್ಟ್ 11ಕ್ಕೆ ಸಿನಿಮಾ ರಿಲೀಸ್‌ ಮಾಡುವುದಾಗಿ ಚಿತ್ರತಂಡ ಘೋಷಿಸಿತ್ತು. ಆದರೆ ಈ ಸಿನಿಮಾ ಯಾತಕ್ಕಾಗಿ ಪೋಸ್ಟ್‌ ಪೋನ್‌ ಮಾಡಲಾಗಿದೆ ಎಂಬ ಕಾರಣವನ್ನು ಸಂದಿಪ್‌ ಅವರು ಇದೀಗ ರಿವೀಲ್‌ ಮಾಡಿದ್ದಾರೆ. ಈಗ ಚಿತ್ರ ಇದೇ ವರ್ಷ ಡಿಸೆಂಬರ್‌ನಲ್ಲಿ ಬಿಡುಗಡೆಯಾಗಲಿದೆ.

ಜುಲೈ 3ರಂದು ಸಂದೀಪ್‌ ಟ್ವೀಟ್‌ನಲ್ಲಿ ವಿಡಿಯೊ ಹಂಚಿಕೊಂಡು “ನಾವು ಆಗಸ್ಟ್ 11 ರಂದು ಚಿತ್ರವನ್ನು ಏಕೆ ಬಿಡುಗಡೆ ಮಾಡಲು ಸಾಧ್ಯವಾಗುತ್ತಿಲ್ಲ ಎಂಬುದಕ್ಕೆ ಒಂದೇ ಕಾರಣವೆಂದರೆ ಗುಣಮಟ್ಟ. ಇದು ಸಾಮಾನ್ಯ ಉತ್ತರ. ಉದಾಹರಣೆಗೆ, ಚಿತ್ರದಲ್ಲಿ ಏಳು ಹಾಡುಗಳಿವೆ, ಏಳು ಹಾಡುಗಳು ಐದು ಭಾಷೆಗಳಲ್ಲಿ ಬರುವಾಗ ಅದು 35 ಹಾಡುಗಳಾಗುತ್ತದೆ.

“ನನಗೆ ಇತ್ತೀಚೆಗಷ್ಟೇ ಅರಿವಾಯಿತು, ಇಲ್ಲದಿದ್ದರೆ ನಾನು ಪ್ರಿ-ಟೀಸರ್‌ ಬಿಡುಗಡೆ ಮಾಡುತ್ತಿರಲಿಲ್ಲ. ಪ್ರಿ-ಟೀಸರ್ ಪ್ರತಿಕ್ರಿಯೆಗೆ ತುಂಬಾ ಧನ್ಯವಾದಗಳು. ಇನ್ನು ಹಾಡುಗಳ ವಿಚಾರಕ್ಕೆ ಬಂದರೆ, ಎಲ್ಲಾ ವಿಭಿನ್ನ ಭಾಷೆಗಳಲ್ಲಿ ಒಂದೇ ರೀತಿಯ ಸಾಹಿತ್ಯ ಮೂಡಿ ಬರಬೇಕು. ಬೇರೆ ಬೇರೆ ಭಾಷೆಗಳಲ್ಲಿ, ಎಲ್ಲಾ ಭಾಷೆಗಳಲ್ಲಿ ಬಿಡುಗಡೆಯಾದಾಗ, ಇದು ಹಿಂದಿ-ಡಬ್ಬಿಂಗ್ ತಮಿಳು ಚಿತ್ರ, ಹಿಂದಿ-ಡಬ್ಬಿಂಗ್ ತೆಲುಗು ಚಿತ್ರ ಎಂಬ ಭಾವನೆಯನ್ನು ನೀಡಬಾರದು. ಆಗ ಕ್ಲ್ಯಾರಿಟಿ ತುಂಬ ಮುಖ್ಯ. ಸಿನಿಮಾ ರಿಲೀಸ್‌ ಆದಾಗ ಆಯಾ ಭಾಷೆಗೆ ಸರಿಹೊಂದಬೇಕುʼʼಎಂದರು.

ʻʻಈ ಎಲ್ಲ ಕಾರಣಕ್ಕಾಗಿ ಸಿನಿಮಾ ರಿಲೀಸ್‌ ಮಾಡಲು ನಾವು ಸಮಯ ತೆಗೆದುಕೊಳ್ಳುತ್ತಿದ್ದೇವೆ. ಬೇರೆ ಯಾವುದೇ ಕಾರಣವಿಲ್ಲ,. ಅನಿಮಲ್‌ ಸಿನಿಮಾ ಈ ವರ್ಷ ಡಿಸೆಂಬರ್ 1ರಂದು ರಿಲೀಸ್‌ ಆಗಲಿದೆ. ಎಂದು ಹೇಳಿದ್ದಾರೆ. ಈ ಮೊದಲು ಅಕ್ಷಯ್‌ ಕುಮಾರ್‌ ಹಾಗೂ ಆಲಿಯಾ ಭಟ್‌ ಸಿನಿಮಾಗಳು ಅದೇ ಸಮಯದಲ್ಲಿ ರಿಲೀಸ್‌ ಆಗುತ್ತಿರುವ ಕಾರಣ ಸಿನಿಮಾ ಮುಂದೂಡಲಾಗಿತ್ತು ಎನ್ನಲಾಗಿತ್ತು.

ಇದನ್ನೂ ಓದಿ: Rashmika Mandanna | ಮಾಲ್ಡೀವ್ಸ್‌ನಲ್ಲಿ ರಶ್ಮಿಕಾ-ವಿಜಯ್‌ ದೇವರಕೊಂಡ: ಫೋಟೊ ಸೀಕ್ರೆಟ್‌ ಏನು?

ಚಿತ್ರದಲ್ಲಿ ರಣಬೀರ್ ಕಪೂರ್, ಅನಿಲ್ ಕಪೂರ್, ಬಾಬಿ ಡಿಯೋಲ್, ರಶ್ಮಿಕಾ ಮಂದಣ್ಣ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಅನಿಮಲ್ ಡಿಸೆಂಬರ್ 1 ರಂದು ಹಿಂದಿ, ತೆಲುಗು, ತಮಿಳು, ಕನ್ನಡ ಮತ್ತು ಮಲಯಾಳಂನಲ್ಲಿ ಬಿಡುಗಡೆಯಾಗಲಿದೆ. ಭೂಷಣ್ ಕುಮಾರ್ , ಕ್ರಿಶನ್ ಕುಮಾರ್ ಅವರ ಟಿ-ಸೀರೀಸ್, ಮುರಾದ್ ಖೇತಾನಿಯ ಸಿನಿ1 ಸ್ಟುಡಿಯೋಸ್ ಮತ್ತು ಪ್ರಣಯ್ ರೆಡ್ಡಿ ವಂಗಾ ಅವರ ಭದ್ರಕಾಳಿ ಪಿಕ್ಚರ್ಸ್ ನಿರ್ಮಿಸಿದೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಸ್ಯಾಂಡಲ್ ವುಡ್

Yuva Rajkumar: ನಾಳೆ ಚಾಮರಾಜನಗರದಲ್ಲಿ ‘ಯುವ’ ಚಿತ್ರದ ಮೊದಲ ಹಾಡು ಬಿಡುಗಡೆ!

Yuva Rajkumar: ‘ಯುವ’ ಚಿತ್ರದ ಮೊದಲ ಹಾಡು ಮಾರ್ಚ್ 2 ರಂದು ಬಿಡುಗಡೆಯಾಗಲಿದೆ. ಚಾಮರಾಜನಗರದ ಶ್ರೀಚಾಮರಾಜೇಶ್ವರ ದೇವಸ್ಥಾನದ ಎದುರಿನ ಮೈದಾನದಲ್ಲಿ ಆಯೋಜಿಸಲಾಗಿರುವ ಅದ್ಧೂರಿ‌ ಸಮಾರಂಭದಲ್ಲಿ ಚಿತ್ರದ ಚೊಚ್ಚಲ ಗೀತೆ ‘ಒಬ್ಬನೇ ಶಿವ ಒಬ್ಬನೇ ಯುವ’ ಹಾಡು ಅನಾವರಣವಾಗಲಿದೆ.

VISTARANEWS.COM


on

Yuva Rajkumar First single song
Koo

ಬೆಂಗಳೂರು: ಯುವ ರಾಜ್‌ಕುಮಾರ್ (Yuva Rajkumar) ಅಭಿನಯದ ಯುವ ಸಿನಿಮಾ ಇದೇ ಮಾರ್ಚ್ 29ರಂದು ಬಿಡುಗಡೆಯಾಗುತ್ತಿದೆ. ಸಂತೋಷ್ ಆನಂದರಾಮ್ (Santhosh Anand Ram) ನಿರ್ದೇಶಿಸಿ, ಅಜನೀಶ್ ಲೋಕನಾಥ್ ಸಂಗೀತ ನೀಡಿರುವ ‘ಯುವ’ ಚಿತ್ರದ ಮೊದಲ ಹಾಡು ಮಾರ್ಚ್ 2ರಂದು ಬಿಡುಗಡೆಯಾಗಲಿದೆ. ಚಾಮರಾಜನಗರದ ಶ್ರೀಚಾಮರಾಜೇಶ್ವರ ದೇವಸ್ಥಾನದ ಎದುರಿನ ಮೈದಾನದಲ್ಲಿ ಆಯೋಜಿಸಲಾಗಿರುವ ಅದ್ಧೂರಿ‌ ಸಮಾರಂಭದಲ್ಲಿ ಚಿತ್ರದ ಚೊಚ್ಚಲ ಗೀತೆ ‘ಒಬ್ಬನೇ ಶಿವ ಒಬ್ಬನೇ ಯುವ’ ಹಾಡು ಅನಾವರಣವಾಗಲಿದೆ.

ಈ ಸಿನಿಮಾಗೆ ‘ಹೊಂಬಾಳೆ ಫಿಲ್ಮ್ಸ್​’ (Hombale Films) ಸಂಸ್ಥೆ ಬಂಡವಾಳ ಹೂಡಿದೆ. ಖ್ಯಾತ ನಿರ್ದೇಶಕ ಸಂತೋಷ್ ಆನಂದ್​ರಾಮ್ ಅವರು ಈ ಚಿತ್ರಕ್ಕೆ ಆ್ಯಕ್ಷನ್​-ಕಟ್​ ಹೇಳಿದ್ದಾರೆ. ಹಾಡುಗಳ ಮೂಲಕ ಕ್ರೇಜ್​ ಸೃಷ್ಟಿಸಲು ಚಿತ್ರತಂಡ ರೆಡಿಯಾಗಿದೆ.ಚಿತ್ರದಲ್ಲಿ ಸಪ್ತಮಿ ಪಾತ್ರಕ್ಕೆ ಹೆಚ್ಚಿನ ಆದ್ಯತೆಯಿದ್ದು, ನಟಿ ಬಿಗ್ ಸ್ಕ್ರೀನ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಯುವ-ಸಪ್ತಮಿ ಜೋಡಿ ಮೊದಲ ಬಾರಿಗೆ ತೆರೆಯ ಮೇಲೆ ಕಾಣಿಸಿಕೊಳುತ್ತಿದೆ. ಶ್ರೀಶ ಕುದುವಳ್ಳಿ ಛಾಯಾಗ್ರಹಣ ‘ಯುವ’ ಚಿತ್ರಕ್ಕಿದೆ.

ಇದನ್ನೂ ಓದಿ: Yuva Rajkumar: ʻಸಲಾರ್‌ʼ ರಿಲೀಸ್‌ ದಿನ ಆಗ್ತಿಲ್ಲ ʻಯುವʼ ರಾಜ್‌ಕುಮಾರ್ ಚಿತ್ರ; ಹೊಸ ಡೇಟ್‌ ಅನೌನ್ಸ್‌!

ಚಾಮರಾಜನಗರದ ಶ್ರೀಚಾಮರಾಜೇಶ್ವರ ದೇವಸ್ಥಾನದ ಎದುರಿನ ಮೈದಾನದಲ್ಲಿ ಅದ್ಧೂರಿಯಾಗಿ ಸಮಾರಂಭ ಮಾಡಲಾಗುವುದು. ಈ ವೇದಿಕೆಯಲ್ಲಿ ‘ಒಬ್ಬನೇ ಶಿವ ಒಬ್ಬನೇ ಯುವ’ ಸಾಂಗ್​ ಬಿಡುಗಡೆ ಆಗಲಿದೆ. ಈ ಹಾಡಿಗಾಗಿ ಫ್ಯಾನ್ಸ್ ಕಾದಿದ್ದಾರೆ. ಈ ಚಿತ್ರದ ಆಡಿಯೊ ಹಕ್ಕುಗಳು ದೊಡ್ಡ ಮೊತ್ತಕ್ಕೆ ಸೇಲ್​ ಆಗಿವೆ ಎಂಬ ಸುದ್ದಿಯನ್ನು ಚಿತ್ರತಂಡ ಇತ್ತೀಚೆಗೆ ಬಿಟ್ಟುಕೊಟ್ಟಿತ್ತು. ಪ್ರತಿಷ್ಠಿತ ಆಡಿಯೊ ಸಂಸ್ಥೆಯಾದ ‘ಆನಂದ್ ಆಡಿಯೋ’ ದೊಡ್ಡ ಮೊತ್ತ ನೀಡಿ ‘ಯುವ’ ಚಿತ್ರದ ಹಾಡುಗಳ ಹಕ್ಕನ್ನು ಖರೀದಿಸಿದೆ.

Continue Reading

ಸ್ಯಾಂಡಲ್ ವುಡ್

Actor Darshan: ಆಕ್ಷೇಪಾರ್ಹ ಹೇಳಿಕೆ; ನಟ ದರ್ಶನ್‌ಗೆ ಮಹಿಳಾ ಆಯೋಗದಿಂದ ನೋಟಿಸ್‌!

Actor Darshan: ಇದೀಗ ಕರ್ನಾಟಕ ರಾಜ್ಯ ಮಹಿಳಾ ಆಯೋಗದಿಂದ ನಟ ದರ್ಶನ್‌ ಅವರಿಗೆ ನೋಟಿಸ್‌ ನೀಡಿದೆ. ದರ್ಶನ್‌ ಅವರಿಗೆ ಪತ್ರ ತಲುಪಿದ ಒಂದು ವಾರದೊಳಗಾಗಿ ಆಯೋಗಕ್ಕೆ ವಿವರಣೆ ನೀಡಲು ಸೂಚನೆ ನೀಡಿದೆ.

VISTARANEWS.COM


on

Notice to Actor Darshan from Karnataka Women's Commission
Koo

ಬೆಂಗಳೂರು: ನಟ ದರ್ಶನ್‌ ಅವರಿಗೆ (Actor Darshan) ಮತ್ತೊಂದು ಸಂಕಷ್ಟ ಎದುರಾಗಿದೆ. ಶ್ರೀರಂಗಪಟ್ಟಣದಲ್ಲಿ ನಡೆದ ʻಬೆಳ್ಳಿ ಪರ್ವʼದಲ್ಲಿ ದರ್ಶನ್‌ ಅವರು ವೈಯಕ್ತಿಕ ಹಾಗೂ ವೃತ್ತಿಪರ ವಿಚಾರಗಳನ್ನು ಹಂಚಿಕೊಂಡು, `ಇವತ್ತು ಇವಳಿರ್ತಾಳೆ , ನಾಳೆ ಅವಳಿರ್ತಾಳೆ’ ನಾನ್ಯಾಕೆ ಇವರ ಬಗ್ಗೆ ತಲೆ ಕೆಡಿಸಿಕೊಳ್ಳಲಿʼʼ ಎಂದು ಹೇಳಿಕೆ ನೀಡಿದ್ದರು. ಹೆಣ್ಣಿನ ಬಗ್ಗೆ ಕೇವಲವಾಗಿ ಮಾತನಾಡಿದ್ದ ನಟ ದರ್ಶನ್ ಬಗ್ಗೆ ಹಲವು ಕೇಸ್‌ಗಳು ದಾಖಲಾಗಿದ್ದವು. ಇದೀಗ ಕರ್ನಾಟಕ ರಾಜ್ಯ ಮಹಿಳಾ ಆಯೋಗದಿಂದ ನಟ ದರ್ಶನ್‌ ಅವರಿಗೆ ನೋಟಿಸ್‌ ನೀಡಿದೆ. ನೋಟಿಸ್ ತಲುಪಿದ 10 ದಿನದಲ್ಲಿ ನಟ ಬಂದು ವಿವರಣೆ ನೀಡಲು ಸೂಚನೆ ನೀಡಿದೆ.

ದರ್ಶನ್‌ ಅವರು ಹೆಣ್ಣು ಮಕ್ಕಳ ಬಗ್ಗೆ ವಿವಾದಾತ್ಮಕ ಹೇಳಿಕೆಯನ್ನು ನೀಡಿರುವುದಾಗಿ, ಗೌಡತಿಯರ ಸೇನೆ ಆಯೋಗಕ್ಕೆ ಅರ್ಜಿಯನ್ನು ಸಲ್ಲಿಸಿ ಸೂಕ್ತ ಕ್ರಮವನ್ನು ಕೈಗೊಳ್ಳುವಂತೆ ಕೋರಿತ್ತು. ಇದೀಗ ಕರ್ನಾಟಕ ರಾಜ್ಯ ಮಹಿಳಾ ಆಯೋಗದಿಂದ ನಟ ದರ್ಶನ್‌ ಅವರಿಗೆ ನೋಟಿಸ್‌ ನೀಡಿದೆ. ದರ್ಶನ್‌ ಅವರಿಗೆ ಪತ್ರ ತಲುಪಿದ ಒಂದು ವಾರದೊಳಗಾಗಿ ಆಯೋಗಕ್ಕೆ ವಿವರಣೆ ನೀಡಲು ಸೂಚನೆ ನೀಡಿದೆ.

ನಟ ದರ್ಶನ್‌ ವಿರುದ್ಧ ಇರುವ ಆರೋಪಗಳೇನು?

ಶ್ರೀರಂಗಪಟ್ಟಣದಲ್ಲಿ ಇತ್ತೀಚೆಗೆ ನಡೆದ ʼಬೆಳ್ಳಿ ಪರ್ವ D-25ʼ ಕಾರ್ಯಕ್ರಮದಲ್ಲಿ ವೈಯಕ್ತಿಕ ಹಾಗೂ ವೃತ್ತಿಪರ ವಿಚಾರಗಳನ್ನು ಹಂಚಿಕೊಂಡಿದ್ದ ನಟ ದರ್ಶನ್‌ ಅವರು, ಫ್ಯಾಮಿಲಿ ಸಮಸ್ಯೆಗಳು, ಎಲ್ಲ ಸಮಸ್ಯೆಗಳನ್ನು ಪಕ್ಕಕ್ಕೆ ಇಡುತ್ತೇನೆ. `ಇವತ್ತು ಇವಳಿರ್ತಾಳೆ , ನಾಳೆ ಅವಳಿರ್ತಾಳೆ’. ನಾನ್ಯಾಕೆ ಇವರ ಬಗ್ಗೆ ತಲೆ ಕೆಡಿಸಿಕೊಳ್ಳಲಿ. ನನಗೆ ನನ್ನ ಕೆಲಸ ಅಷ್ಟೆ ಮುಖ್ಯ ಎಂದಿದ್ದರು ಎಂದು ಹೇಳಿದ್ದರು. ದರ್ಶನ್ ಮಾತಿನ ಭರದಲ್ಲಿ ಹೇಳಿದ ಹೇಳಿಕೆಗೆ ಭಾರಿ ಆಕ್ಷೇಪ ವ್ಯಕ್ತವಾಗಿತ್ತು.

ಇದನ್ನೂ ಓದಿ: Actor Darshan: ಎದೆಯ ಮೇಲೆ ದರ್ಶನ್ ಟ್ಯಾಟೂ ಹಾಕಿಸಿಕೊಂಡ ಮಹಿಳಾ ಅಭಿಮಾನಿ!

ಈ ಹಿಂದೆಯೂ ಹೆಂಡತಿಗೆ ಕಿರುಕುಳ ಆರೋಪದಲ್ಲಿ ನಟನ ವಿರುದ್ಧ ಪ್ರಕರಣ ದಾಖಲಾಗಿತ್ತು. ಮತ್ತೊಂದು ಸಂದರ್ಭದಲ್ಲಿ ಅದೃಷ್ಟ ದೇವತೆ ನಿಮ್ಮ ಮನೆಗೆ ಬಂದರೆ ಬಟ್ಟೆಬಿಚ್ಚಿ ರೂಮಿನಲ್ಲಿ, ಕೂಡಿಹಾಕಿ ಎಂಬ ಹೇಳಿಕೆ ನೀಡಿದ್ದರು. ಅದೇ ರೀತಿ ಇತ್ತೀಚೆಗೆ ನಿರ್ಮಾಪಕ ಉಮಾಪತಿ ಗೌಡ ಬಗ್ಗೆ ʼತಗಡುʼ ಎಂಬ ಪದ ಬಳಸಿದ್ದರಿಂದ ನಟನ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು. ದರ್ಶನ್‌ ಅವರ ವಿವಾದಾತ್ಮಕ ಹೇಳಿಕೆಗಳ ಸಂಬಂಧ ವಿವಿಧೆಡೆ ದೂರುಗಳು ದಾಖಲಾಗಿವೆ. ಮಹಿಳೆಯೊಬ್ಬರು ಕೋರ್ಟ್‌ಗೆ ದೂರು ಕೂಡ ಸಲ್ಲಿಸಿದ್ದಾರೆ.

Continue Reading

ಸ್ಯಾಂಡಲ್ ವುಡ್

K Shivaram: ಕೆ ಶಿವರಾಮ್ ಬಯೋಪಿಕ್‌ಗೆ `ಅಪ್ಪು’ ಗ್ರೀನ್​ ಸಿಗ್ನಲ್​ ಕೊಟ್ಟಿದ್ರಂತೆ!

K Shivaram: 40ನೇ ವಯಸ್ಸಿನಲ್ಲಿ ಕೆ ಶಿವರಾಮ್ ನಟನಾಗಿ ತೆರೆ ಮೇಲೆ ಬಂದು ಯಶಸ್ಸು ಕಂಡಿದ್ದರು. ವಿಶೇಷ ಅಂದರೆ ಅವರ ಜೀವನವನ್ನು ಆಧರಿಸಿ ಸಿನಿಮಾ ಮಾಡಲು ಪುನೀತ್​ ರಾಜ್​ಕುಮಾರ್​ ಕೂಡ ಆಸಕ್ತಿ ತೋರಿಸಿದ್ದರಂತೆ.

VISTARANEWS.COM


on

puneeth rajkumar had interest to act in film k shivaram Biopic
Koo

ಬೆಂಗಳೂರು: ʻಬಾನಲ್ಲೆ ಮಧುಚಂದ್ರಕೆʼ (Baa nalle Madhuchandrake) ಸಿನಿಮಾ ಮೂಲಕ ಕನ್ನಡ ಚಿತ್ರಲೋಕದಲ್ಲಿ ಹೊಸ ಸಂಚಲನ ಸೃಷ್ಟಿಸಿದ ಕೆ. ಶಿವರಾಮ್ (K Shivaram) ಬಾರದ ಲೋಕಕ್ಕೆ ಹೋಗಿದ್ದಾರೆ. ರಾಜ್ಯ ಸರ್ಕಾರದಲ್ಲಿ ಹಿರಿಯ ಅಧಿಕಾರಿಯಾಗಿದ್ದು ಬಳಿಕ ಬಣ್ಣದ ಲೋಕಕ್ಕೆ ಆಕರ್ಷಿತರಾಗಿ ಅಲ್ಲೂ ಜನಪ್ರಿಯತೆಯ ಉತ್ತುಂಗಕ್ಕೇರಿದ ಅವರು ಗುರುವಾರ (ಫೆ.29) ಸಂಜೆ ಕೊನೆಯುಸಿರೆಳೆದರು. ಅವರು ಕನ್ನಡದಲ್ಲಿ ಐಎಎಸ್‌ ಪರೀಕ್ಷೆ ಬರೆದು ಉತ್ತೀರ್ಣರಾದ ಮೊದಲ ಅಧಿಕಾರಿ ಎಂಬುದು ವಿಶೇಷ. 40ನೇ ವಯಸ್ಸಿನಲ್ಲಿ ಕೆ ಶಿವರಾಮ್ ನಟನಾಗಿ ತೆರೆ ಮೇಲೆ ಬಂದು ಯಶಸ್ಸು ಕಂಡಿದ್ದಾರೆ. ವಿಶೇಷ ಅಂದರೆ ಅವರ ಜೀವನವನ್ನು ಆಧರಿಸಿ ಸಿನಿಮಾ ಮಾಡಲು ಪುನೀತ್​ ರಾಜ್​ಕುಮಾರ್​ ಕೂಡ ಆಸಕ್ತಿ ತೋರಿಸಿದ್ದರಂತೆ.

ಐಎಎಸ್​ ಅಧಿಕಾರಿ ಆಗಿದ್ದಾಗ ವೇಳೆ ಕೆ ಶಿವರಾಮ್ ಅನೇಕ ಜನರಿಗೆ ಸಹಾಯ ಮಾಡಿದರು. ಕೆ. ಶಿವರಾಮ್ ಅವರ ಜೀವನ ಅನೇಕರಿಗೆ ಸ್ಫೂರ್ತಿ ಆಗಿತ್ತು. ಸಂದರ್ಶನದಲ್ಲಿ ಸ್ವತಃ ಕೆ ಶಿವರಾಮ್ ಅವರೇ ʻನನ್ನ ಬಯೋಪಿಕ್ ಬಂದರೆ ಅದರಲ್ಲಿ ಪುನೀತ್​ ರಾಜ್​ಕುಮಾರ್ ನಟಿಸಬೇಕುʼʼ ಎಂದು ಹೇಳಿದ್ದರು. ಅಷ್ಟೇ ಅಲ್ಲದೇ ಈ ವಿಚಾರವನ್ನು ಪುನೀತ್​ ರಾಜ್​ಕುಮಾರ್​ ಅವರಿಗೂ ಹೇಳಿದ್ದರಂತೆ. ಶಿವರಾಮ್ ಬಯೋಪಿಕ್​ ನಲ್ಲಿ ಅಭಿನಯಿಸಲು ಪುನೀತ್​ ರಾಜ್​ಕುಮಾರ್ ಕೂಡ ಗ್ರೀನ್​ ಸಿಗ್ನಲ್​ ಕೊಟ್ಟಿದ್ದರಂತೆ. ಕೆ ಶಿವರಾಮ್‌ ಕೂಡ ಅಪ್ಪು ಅವರ ಅಭಿಮಾನಿಯಾಗಿದ್ದರು. ಪುನೀತ್‌ ಅವರ ಸಿನಿಮಾಗಳಾದ ಹುಡುಗರು, ವಂಶಿ, ರಾಮ್​ ಹಾಗೂ ಅರಸು ಸಿನಿಮಾಗಳನ್ನು ಕೆ. ಶಿವರಾಮ್​ ಅವರು ವಿತರಣೆ ಮಾಡಿದ್ದರು.

ಮರೆಯಲಾಗದ ಸಿನಿಮಾ ನೀಡಿದ ಶಿವರಾಮ್‌

ನಾಗತಿಹಳ್ಳಿ ಚಂದ್ರಶೇಖರ್‌ ಅವರ ಕಾದಂಬರಿ ಆಧರಿತ, ಅವರೇ ನಿರ್ದೇಶಿಸಿದ “ಬಾ ನಲ್ಲೆ ಮಧುಚಂದ್ರಕೆ” ಎಂಬ ಕನ್ನಡ ಸಿನಿಮಾ ಲೋಕ ಎಂದೂ ಮರೆಯದ ಚಿತ್ರವನ್ನು ಶಿವರಾಮ್‌ ನೀಡಿದ್ದಾರೆ.

ವಸಂತಕಾವ್ಯ, ಪ್ರತಿಭಟನೆ, ಸಾಂಗ್ಲಿಯಾನ 3, ಖಳ ನಾಯಕ, ಯಾರಿಗೆ ಬೇಡ ದುಡ್ಡು, ಪ್ರೀತಿಗಾಗಿ ಆಟ, ನಾಗ, ಮೂಡಲ ಸೀಮೆಯಲಿ, ಸುಭಾಷ್, ಟೈಗರ್ ಸೇರಿದಂತೆ 10 ಚಿತ್ರಗಳಲ್ಲಿ ಅವರು ನಾಯಕನಾಗಿ ನಟಿಸಿದ್ದಾರೆ.

ಕನ್ನಡದಲ್ಲಿ ಐಎಎಸ್‌ ಪಾಸ್‌ ಮಾಡಿದ ಮೊದಲ ಕನ್ನಡಿಗ

ಕೆ ಶಿವರಾಮ್ 1953ರ ಏಪ್ರಿಲ್ 6ರಂದು ರಾಮನಗರ ಜಿಲ್ಲೆಯ ಉರಗಳ್ಳಿಯಲ್ಲಿ ಜನಿಸಿದರು. ಪ್ರಾಥಮಿಕ ಶಿಕ್ಷಣವನ್ನು ತಮ್ಮ ಹಳ್ಳಿಯಲ್ಲಿ ಮುಗಿಸಿದ ಇವರು, ಬೆಂಗಳೂರಿನ ಮಲ್ಲೇಶ್ವರಂ ಸರ್ಕಾರಿ ಶಾಲೆಯಲ್ಲಿ ಪ್ರೌಢಶಿಕ್ಷಣ ಪೂರ್ಣಗೊಳಿಸಿದರು.

ಬೆಂಗಳೂರಿನ ವಿವಿ ಪುರಂನ ಕಲಾ ಮತ್ತು ವಾಣಿಜ್ಯ ಕಾಲೇಜಿನಲ್ಲಿ ಡಿಗ್ರಿ ಮುಗಿದ ಶಿವರಾಮ್, ನಂತರ 1982ರಲ್ಲಿ ಮೈಸೂರು ಯುನಿವರ್ಸಿಟಿಯಿಂದ ಇತಿಹಾಸ ವಿಷಯದಲ್ಲಿ ಮಾಸ್ಟರ್ ಆಫ್ ಆರ್ಟ್ಸ್ ಪದವಿ ಪಡೆದರು.

1985ರಲ್ಲಿ ಕೆಎಎಸ್ ಪರೀಕ್ಷೆ ಬರೆದು ಉತ್ತೀರ್ಣರಾದರು. ನಂತರ ಕನ್ನಡ ಭಾಷೆಯಲ್ಲಿಯೇ ಐಎಎಸ್ ಪರೀಕ್ಷೆ ಬರೆದು ಉತ್ತೀರ್ಣರಾದ ಭಾರತದ ಮೊದಲ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

ಇದನ್ನೂ ಓದಿ: K Shivaram: ಮಧ್ಯಾಹ್ನ 3ರವರೆಗೆ ರವೀಂದ್ರ ಕಲಾಕ್ಷೇತ್ರದಲ್ಲಿ ಕೆ ಶಿವರಾಂ ಅಂತಿಮ ದರ್ಶನ

ಶುಕ್ರವಾರ ಮಧ್ಯಾಹ್ನ 3 ಗಂಟೆಯವರೆಗೆ ರವೀಂದ್ರ ಕಲಾಕ್ಷೇತ್ರದಲ್ಲಿ ಅಂತಿಮ ದರ್ಶನಕ್ಕೆ ಅವಕಾಶ ನೀಡಲಾಗಿದೆ. ರಾಜಾಜಿನಗರದಿಂದ ರಸ್ತೆ ಮಾರ್ಗವಾಗಿ ಅಂತಿಮ ಯಾತ್ರೆ ಸಾಗಲಿದೆ.

Continue Reading

ಸ್ಯಾಂಡಲ್ ವುಡ್

Meera Chopra Wedding: ಮದುವೆ ಸಂಭ್ರದಲ್ಲಿದ್ದಾರೆ ದರ್ಶನ್‌ ನಟನೆಯ ʻಅರ್ಜುನ್‌ʼ ಚಿತ್ರದ ನಾಯಕಿ!

Meera Chopra Wedding: ಮಾರ್ಚ್ 11 ಮತ್ತು 12 ರಂದು ನಟಿಯ ಮದುವೆ ಅದ್ಧೂರಿಯಾಗಿ ನೆರವೇರಲಿದೆ ಎನ್ನಲಾಗಿದೆ. ಕಳೆದ ಮೂರು ವರ್ಷಗಳಿಂದ ಮೀರಾ ಚೋಪ್ರಾ ತಮ್ಮ ಗೆಳೆಯು ಜತೆ ಡೇಟಿಂಗ್‌ನಲ್ಲಿದ್ದರು.

VISTARANEWS.COM


on

darshan arjun movie Heroine Meera Chopra Wedding
Koo

ಬಹುಭಾಷಾ ನಟಿ ಮೀರಾ ಚೋಪ್ರಾ (Meera Chopra Wedding) ತಮ್ಮ ಬಹು ಕಾಲದ ಗೆಳೆಯನನ್ನು ಜೈಪುರದಲ್ಲಿ ವಿವಾಹವಾಗಲಿದ್ದಾರೆ. ದರ್ಶನ್‌ ಅಭಿನಯದ ʻಅರ್ಜುನ್‌ʼ ಚಿತ್ರದ ಮೂಲಕ ನಟಿ ಮೀರಾ ಚೋಪ್ರಾ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಟ್ಟಿದ್ದರು.

ಮೀರಾ ಚೋಪ್ರಾ ಅವರು ʻ1920 ಲಂಡನ್ʼ, ʻಗ್ಯಾಂಗ್ ಆಫ್ ಘೋಸ್ಟ್ಸ್ʼ ಮತ್ತು ʻಸೆಕ್ಷನ್ 37ʼ5 ರಂತಹ ಸಿನಿಮಾಗಳಿಂದ ಹೆಸರುವಾಸಿಯಾಗಿದ್ದಾರೆ.

ಇದನ್ನೂ ಓದಿ: Rashmika Mandanna: ಧನುಷ್‌ -ರಶ್ಮಿಕಾ ಅಭಿನಯದ ಸಿನಿಮಾವೊಂದರ ದೃಶ್ಯ ಲೀಕ್‌!

ಮಾರ್ಚ್ 11 ಮತ್ತು 12 ರಂದು ನಟಿಯ ಮದುವೆ ಅದ್ಧೂರಿಯಾಗಿ ನೆರವೇರಲಿದೆ ಎನ್ನಲಾಗಿದೆ. ಕಳೆದ ಮೂರು ವರ್ಷಗಳಿಂದ ಮೀರಾ ಚೋಪ್ರಾ ತಮ್ಮ ಗೆಳೆಯನ ಜತೆ ಡೇಟಿಂಗ್‌ನಲ್ಲಿದ್ದರು.

ಇದನ್ನೂ ಓದಿ: Deepika Padukone: ಮೊದಲ ಬಾರಿಗೆ ಸಾರ್ವಜನಿಕವಾಗಿ ಕಾಣಿಸಿಕೊಂಡ ದೀಪಿಕಾ-ರಣವೀರ್: ಫ್ಯಾನ್ಸ್‌ಗೆ ಖುಷಿಯೋ ಖುಷಿ!

ಸಫೇದ್ (2023)ನಲ್ಲಿ ಕೊನೆಯದಾಗಿ ಕಾಣಿಸಿಕೊಂಡಿದ್ದರು ನಟಿ. ಇದು ಒಟಿಟಿಯಲ್ಲಿ ಬಿಡುಗಡೆಯಾಗಿತ್ತು.

ಜೈಪುರ ಮಾತ್ರವಲ್ಲದೆ ದೆಹಲಿಯಲ್ಲೂ ಮದುವೆಯ ಕಾರ್ಯಕ್ರಮ ನಡೆಯಲಿದೆ. ಐಷಾರಾಮಿ ರೆಸಾರ್ಟ್‌ನಲ್ಲಿ ಇದರ ಕಾರ್ಯಕ್ರಮ ನಡೆಯಲಿದೆ ಎನ್ನಲಾಗಿದೆ.

Continue Reading
Advertisement
Road collapse
ಬೆಂಗಳೂರು8 mins ago

Road Collapse: ರಸ್ತೆ ಕುಸಿದು ಸಿಲುಕಿದ ಲಾರಿ; ಜಲಮಂಡಳಿ ಬೇಕಾಬಿಟ್ಟಿ ಕಾಮಗಾರಿಗೆ ಸಾರ್ವಜನಿಕರ ಆಕ್ರೋಶ

team India
ಪ್ರಮುಖ ಸುದ್ದಿ8 mins ago

T20 World Cup : ಟಿ20 ವಿಶ್ವ ಕಪ್​ಗೆ ಭಾರತ ತಂಡ ಪ್ರಕಟವಾಗುವ ದಿನಾಂಕ ಬಹಿರಂಗ

Pre-wedding of Anand Ambani
ಕ್ರೀಡೆ21 mins ago

ಅನಂತ್‌ ಅಂಬಾನಿ ವಿವಾಹಪೂರ್ವ ಕಾರ್ಯಕ್ರಮದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಸ್ಟಾರ್​ ಕ್ರಿಕೆಟಿಗರು

rameshwaram cafe bengaluru incident
ಬೆಂಗಳೂರು23 mins ago

Blast in Bengaluru : ರಾಮೇಶ್ವರಂ ಕೆಫೆ ಸ್ಫೋಟದ ಸ್ಥಳದಲ್ಲಿ ಬ್ಯಾಟರಿ ಪತ್ತೆ!

Janhvi Kapoor Takes A Leap Forward In Spreading HPV Awareness
ಬಾಲಿವುಡ್30 mins ago

Janhvi Kapoor: ‘ಲೀಪ್, ಲಾಫ್‌ & ಲರ್ನ್‌’ ಸ್ಟಾಂಡ್ ಅಪ್ ಸ್ಪೆಷಲ್‌ನಲ್ಲಿ ಜಾನ್ವಿ ಕಪೂರ್‌ರಿಂದ ಎಚ್‌ಪಿವಿ ಜಾಗೃತಿ!

Sudden drop in arecanut price illegal transportation is reason for prices fall
ವಾಣಿಜ್ಯ31 mins ago

Arecanut Price: ಅಡಿಕೆ ಧಾರಣೆಯಲ್ಲಿ ದಿಢೀರ್‌ ಕುಸಿತ; ಬೆಲೆ ಇಳಿಕೆಗೆ ಅಕ್ರಮ ಸಾಗಣೆ ಕಾರಣವೇ?

Navanandi School Decade Celebration Programme at yadgiri
ಯಾದಗಿರಿ33 mins ago

Yadgiri News: ಮಕ್ಕಳು ಶ್ರದ್ಧೆಯಿಂದ ಓದಿದರೆ ಗುರಿ ಸಾಧನೆ: ಶಾಂತಮಲ್ಲಿಕಾರ್ಜುನ ಸ್ವಾಮೀಜಿ

Yuva Rajkumar First single song
ಸ್ಯಾಂಡಲ್ ವುಡ್39 mins ago

Yuva Rajkumar: ನಾಳೆ ಚಾಮರಾಜನಗರದಲ್ಲಿ ‘ಯುವ’ ಚಿತ್ರದ ಮೊದಲ ಹಾಡು ಬಿಡುಗಡೆ!

WPL 2024
ಕ್ರೀಡೆ1 hour ago

WPL 2024: ಮೈದಾನಕ್ಕೆ ನುಗ್ಗಿ ಪಂದ್ಯಕ್ಕೆ ಅಡ್ಡಿಪಡಿಸಿದ ವ್ಯಕ್ತಿಯ ಬಂಧನ

Asaram Bapu
ದೇಶ1 hour ago

Asaram Bapu: ಬಾಲಕಿ ಮೇಲೆ ಅತ್ಯಾಚಾರ; ಅಸಾರಾಂ ಬಾಪುಗೆ ಜೈಲೇ ಗತಿ

Sharmitha Gowda in bikini
ಕಿರುತೆರೆ5 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ5 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ4 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ3 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ5 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ5 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ4 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ3 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ3 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

rameshwaram cafe bengaluru incident
ಬೆಂಗಳೂರು23 mins ago

Blast in Bengaluru : ರಾಮೇಶ್ವರಂ ಕೆಫೆ ಸ್ಫೋಟದ ಸ್ಥಳದಲ್ಲಿ ಬ್ಯಾಟರಿ ಪತ್ತೆ!

Elephants spotted in many places
ಹಾಸನ1 hour ago

Elephant Attack: ಹಾಸನ, ರಾಮನಗರ, ಮೈಸೂರಲ್ಲಿ ಆನೆ ಬೇನೆ; ಬೆಳಗಾವಿಯಲ್ಲಿ ಬಿಂದಾಸ್‌ ಓಡಾಟ

read your daily horoscope predictions for march 1st 2024
ಭವಿಷ್ಯ12 hours ago

Dina Bhavishya : ಈ ರಾಶಿಯವರು ಪ್ರಮುಖ ಜನರೊಡನೆ ವ್ಯವಹರಿಸುವಾಗ ಎಚ್ಚರಿಕೆಯಿಂದ ಮಾತನಾಡಿ

dina bhavishya read your daily horoscope predictions for February 28 2024
ಭವಿಷ್ಯ1 day ago

Dina Bhavishya: ಇಂದು 12 ರಾಶಿಯವರ ಲಕ್ಕಿ ನಂಬರ್‌ ಏನು? ಯಾರಿಗೆ ಧನ ಲಾಭ?

Dina Bhavishya
ಭವಿಷ್ಯ2 days ago

Dina Bhavishya : ಈ ರಾಶಿಯವರು ಇಂದು ದೊಡ್ಡದೊಂದು ಸಮಸ್ಯೆಯಿಂದ ಮುಕ್ತಿ ಪಡೆಯುವಿರಿ

Rajya Sabha election Pakistan Zindabad slogans raised inside Vidhana Soudha by Nasir Hussain supporters
ರಾಜಕೀಯ3 days ago

ವಿಧಾನಸೌಧದೊಳಗೇ ಪಾಕಿಸ್ತಾನ ಜಿಂದಾಬಾದ್‌ ಘೋಷಣೆ; ನಾಸಿರ್‌ ಹುಸೇನ್‌ ಬೆಂಬಲಿಗ ದೇಶದ್ರೋಹಿಗಳ ಉದ್ಧಟತನ

Ghar Wapsi ST Somashekhar and Shivaram Hebbar to quit BJP
ರಾಜಕೀಯ3 days ago

Ghar Wapsi: ಎಸ್‌.ಟಿ. ಸೋಮಶೇಖರ್‌, ಶಿವರಾಂ ಹೆಬ್ಬಾರ್‌ ಬಿಜೆಪಿಗೆ ಗುಡ್‌ ಬೈ? ಇಂದೇ ರಾಜೀನಾಮೆ?

Rajyasabha Elections 42 Congress MLAs contacted by JDS candidate says DK Shivakumar
ರಾಜಕೀಯ3 days ago

Rajya sabha Election: ಕಾಂಗ್ರೆಸ್‌ನ 42 ಶಾಸಕರನ್ನು ಸಂಪರ್ಕ ಮಾಡಿದ್ದಾರೆ: ಡಿ.ಕೆ. ಶಿವಕುಮಾರ್

read your daily horoscope predictions for february 27 2024
ಭವಿಷ್ಯ3 days ago

Dina Bhavishya : ಇಂದು ಆಪ್ತರಿಂದಲೇ ಈ ರಾಶಿಯವರಿಗೆ ಕಂಟಕ!

Crowd mistakes Arabic words as Quran Verses on the kurta and Pak Women mobbed
ವಿದೇಶ4 days ago

Pak Woman: ಕುರ್ತಾ ಮೇಲಿನ ಅರೇಬಿಕ್ ಪದಗಳನ್ನು ತಪ್ಪಾಗಿ ತಿಳಿದು ಮಹಿಳೆ ಮೇಲೆ ಹಲ್ಲೆಗೆ ಯತ್ನ

ಟ್ರೆಂಡಿಂಗ್‌