ಬೆಂಗಳೂರು: ಸಾಹಸ ಸಿಂಹ ವಿಷ್ಣುವರ್ಧನ್ ( Vishnuvardhan ) ಅವರ ಸ್ಮಾರಕಕ್ಕೆ ಭಾನುವಾರ ಚಾಲನೆ ನೀಡಲಾಯಿತು. ಈ ವೇಳೆ ವಿಸ್ತಾರ್ ನ್ಯೂಸ್‌ನೊಂದಿಗೆ ಮಾತನಾಡಿದ ವಿಷ್ಣುವರ್ಧನ್ ಅವರ ಅಳಿಯ ಅನಿರುದ್ಧ ಅವರು, ʻʻದಕ್ಷಿಣ ಭಾರತದಲ್ಲಿ ಆಲ್ ಇಂಡಿಯಾ ಫಿಲ್ಮ್ ಇನ್ಸ್‌ಟಿಟ್ಯೂಟ್ ಶಾಖೆ ಇಲ್ಲ. ಇನ್ನುಳಿದ ಎರಡು ಎಕರೆ ಜಾಗದಲ್ಲಿ ಶಾಖೆ ತೆರೆಯುವ ಪ್ರಸ್ತಾವನೆ ಇದೆʼʼಎಂದು ಮಾಹಿತಿ ಹಂಚಿಕೊಂಡರು.
ʻʻವಿಷ್ಣುವರ್ಧನ್ ಅವರ ಚಿತಾಭಸ್ಮವನ್ನು ಭಾರತಿ ವಿಷ್ಣುವರ್ಧನ್ ಜೋಪಾನವಾಗಿ ಇಟ್ಟುಕೊಂಡಿದ್ದರು. ಅದನ್ನು ಸ್ಮಾರಕ ಜಾಗದಲ್ಲಿ ಇಟ್ಟು ಅದರ ಮೇಲೆ ಪ್ರತಿಮೆ ನಿರ್ಮಿಸಿದ್ದೇವೆ. ರಂಗಭೂಮಿ, ಚಲನಚಿತ್ರ ತರಬೇತಿಗೆ ಬೇಕಾದ ಕೊಠಡಿಗಳು ನಿರ್ಮಾಣ ಆಗಿವೆ. ಈಗಾಗಲೇ ನ್ಯಾಷನಲ್ ಇನ್ಸ್‌ಟಿಟ್ಯೂಟ್ ಆಫ್ ಡ್ರಾಮಾ, ರಂಗಾಯಣದಂತಹ ಸಂಸ್ಥೆಗಳಿವೆ. ಇಲ್ಲಿ ಯಾವ ರೀತಿಯ ತರಬೇತಿ ನೀಡಬೇಕು ಎಂಬುದನ್ನು ತೀರ್ಮಾನಿಸಿಲ್ಲ. ದಕ್ಷಿಣ ಭಾರತದಲ್ಲಿ ಆಲ್ ಇಂಡಿಯಾ ಫಿಲ್ಮ್ ಇನ್ಸ್‌ಟಿಟ್ಯೂಟ್ ಶಾಖೆ ಇಲ್ಲ. ಈಗ ಮೂರು ಎಕರೆ ಜಾಗದಲ್ಲಿ ಕಟ್ಟಡ ನಿರ್ಮಿಸಲಾಗಿದೆ. ಇನ್ನುಳಿದ ಎರಡು ಎಕರೆ ಜಾಗದಲ್ಲಿ ಶಾಖೆ ತೆರೆಯುವ ಪ್ರಸ್ತಾವನೆ ಇದೆ. ಈ ನಿಟ್ಟಿನಲ್ಲಿ ಮುಖ್ಯಮಂತ್ರಿಗಳ ಜತೆಗೂ ಚರ್ಚಿಸಲಾಗಿದೆʼʼ ಎಂದು ಅನಿರುದ್ಧ ಮಾಹಿತಿ ನೀಡಿದರು.
ಇದನ್ನೂ ಓದಿ: Vishnuvardhan: ಸ್ಮಾರಕ ಸರ್ಕಾರದ ಯೋಜನೆ, ಲಾಭ, ನಷ್ಟ ಎರಡೂ ಸರ್ಕಾರಕ್ಕೆ ಸೇರಿದ್ದು: ನಟ ಅನಿರುದ್ಧ
ಇದೆ ವೇಳೆ ಹಿರಿಯ ನಟ ರಮೇಶ್ ಭಟ್ ಮಾತನಾಡಿ ʻʻವಿಷ್ಣುವರ್ಧನ್ ಬಾಯಿ ತುಂಬ ಅಣ್ಣ ಎಂದು ಕರಿಯುತ್ತಿದ್ದ.
ಅದೆಷ್ಟೋ ಸಿನಿಮಾಗಳಲ್ಲಿ ಅಣ್ಣ, ತಮ್ಮನಾಗಿ ನಟಿಸಿದ್ದೇನೆ. ರೇಸ್ ಕೋರ್ಸ್‌ನಲ್ಲಿ ಇಬ್ಬರೂ ವಾಕ್ ಮಾಡುತ್ತಿದ್ದೆವು.
ಒಟ್ಟಿಗೆ ಯೋಗ, ವಿಷ್ಣು ಸಹಸ್ರನಾಮ ಪಠಣ, ಶೂಟಿಂಗ್ ಮಾಡಿದ್ದೇವೆ. ಜೀವನದ ಉದ್ದಕ್ಕೂ ಒಂದಿಲ್ಲ ಒಂದು ರೀತಿಯಲ್ಲಿ ಹೋರಾಟ ಮಾಡಿಕೊಂಡೇ ಬಂದಿದ್ದ. ಸ್ಮಾರಕದ ವಿಚಾರದಲ್ಲೂ ಹೋರಾಟ ನಡೆಸಬೇಕಾಯಿತು.
ಈಗ ಸ್ಮಾರಕ ಆಗಿದೆ. ಇಲ್ಲಿಗೆ ಬಂದು ಓಡಾಡಿದರೆ ವಿಷ್ಣು ಆತ್ಮದ ಜತೆ ಇದ್ದಂತೆ ಭಾಸವಾಗುತ್ತದೆʼʼಎಂದರು.