ಸಿನಿಮಾ
Vishnuvardhan: ಸ್ಮಾರಕ ಜಾಗದಲ್ಲಿಆಲ್ ಇಂಡಿಯಾ ಫಿಲ್ಮ್ ಇನ್ಸ್‌ಟಿಟ್ಯೂಟ್ ಶಾಖೆ ತೆರೆಯುವುದರ ಬಗ್ಗೆ ಪ್ರಸ್ತಾಪಿಸಿದ ಅನಿರುದ್ಧ
ದಕ್ಷಿಣ ಭಾರತದಲ್ಲಿ ಆಲ್ ಇಂಡಿಯಾ ಫಿಲ್ಮ್ ಇನ್ಸ್‌ಟಿಟ್ಯೂಟ್ ಶಾಖೆ ಇಲ್ಲ. ಈಗ ಮೂರು ಎಕರೆ ಜಾಗದಲ್ಲಿ ಕಟ್ಟಡ ನಿರ್ಮಿಸಲಾಗಿದೆ. ಇನ್ನುಳಿದ ಎರಡು ಎಕರೆ ಜಾಗದಲ್ಲಿ ಶಾಖೆ ತೆರೆಯುವ ಪ್ರಸ್ತಾವನೆ ಇದೆ. ಈ ನಿಟ್ಟಿನಲ್ಲಿ ಮುಖ್ಯಮಂತ್ರಿಗಳ ಜತೆಗೂ ಚರ್ಚಿಸಲಾಗಿದೆʼʼ ಎಂದು ಅನಿರುದ್ಧ ಮಾಹಿತಿ ನೀಡಿದರು.
ಬೆಂಗಳೂರು: ಸಾಹಸ ಸಿಂಹ ವಿಷ್ಣುವರ್ಧನ್ ( Vishnuvardhan ) ಅವರ ಸ್ಮಾರಕಕ್ಕೆ ಭಾನುವಾರ ಚಾಲನೆ ನೀಡಲಾಯಿತು. ಈ ವೇಳೆ ವಿಸ್ತಾರ್ ನ್ಯೂಸ್‌ನೊಂದಿಗೆ ಮಾತನಾಡಿದ ವಿಷ್ಣುವರ್ಧನ್ ಅವರ ಅಳಿಯ ಅನಿರುದ್ಧ ಅವರು, ʻʻದಕ್ಷಿಣ ಭಾರತದಲ್ಲಿ ಆಲ್ ಇಂಡಿಯಾ ಫಿಲ್ಮ್ ಇನ್ಸ್‌ಟಿಟ್ಯೂಟ್ ಶಾಖೆ ಇಲ್ಲ. ಇನ್ನುಳಿದ ಎರಡು ಎಕರೆ ಜಾಗದಲ್ಲಿ ಶಾಖೆ ತೆರೆಯುವ ಪ್ರಸ್ತಾವನೆ ಇದೆʼʼಎಂದು ಮಾಹಿತಿ ಹಂಚಿಕೊಂಡರು.
ʻʻವಿಷ್ಣುವರ್ಧನ್ ಅವರ ಚಿತಾಭಸ್ಮವನ್ನು ಭಾರತಿ ವಿಷ್ಣುವರ್ಧನ್ ಜೋಪಾನವಾಗಿ ಇಟ್ಟುಕೊಂಡಿದ್ದರು. ಅದನ್ನು ಸ್ಮಾರಕ ಜಾಗದಲ್ಲಿ ಇಟ್ಟು ಅದರ ಮೇಲೆ ಪ್ರತಿಮೆ ನಿರ್ಮಿಸಿದ್ದೇವೆ. ರಂಗಭೂಮಿ, ಚಲನಚಿತ್ರ ತರಬೇತಿಗೆ ಬೇಕಾದ ಕೊಠಡಿಗಳು ನಿರ್ಮಾಣ ಆಗಿವೆ. ಈಗಾಗಲೇ ನ್ಯಾಷನಲ್ ಇನ್ಸ್‌ಟಿಟ್ಯೂಟ್ ಆಫ್ ಡ್ರಾಮಾ, ರಂಗಾಯಣದಂತಹ ಸಂಸ್ಥೆಗಳಿವೆ. ಇಲ್ಲಿ ಯಾವ ರೀತಿಯ ತರಬೇತಿ ನೀಡಬೇಕು ಎಂಬುದನ್ನು ತೀರ್ಮಾನಿಸಿಲ್ಲ. ದಕ್ಷಿಣ ಭಾರತದಲ್ಲಿ ಆಲ್ ಇಂಡಿಯಾ ಫಿಲ್ಮ್ ಇನ್ಸ್‌ಟಿಟ್ಯೂಟ್ ಶಾಖೆ ಇಲ್ಲ. ಈಗ ಮೂರು ಎಕರೆ ಜಾಗದಲ್ಲಿ ಕಟ್ಟಡ ನಿರ್ಮಿಸಲಾಗಿದೆ. ಇನ್ನುಳಿದ ಎರಡು ಎಕರೆ ಜಾಗದಲ್ಲಿ ಶಾಖೆ ತೆರೆಯುವ ಪ್ರಸ್ತಾವನೆ ಇದೆ. ಈ ನಿಟ್ಟಿನಲ್ಲಿ ಮುಖ್ಯಮಂತ್ರಿಗಳ ಜತೆಗೂ ಚರ್ಚಿಸಲಾಗಿದೆʼʼ ಎಂದು ಅನಿರುದ್ಧ ಮಾಹಿತಿ ನೀಡಿದರು.
ಇದನ್ನೂ ಓದಿ: Vishnuvardhan: ಸ್ಮಾರಕ ಸರ್ಕಾರದ ಯೋಜನೆ, ಲಾಭ, ನಷ್ಟ ಎರಡೂ ಸರ್ಕಾರಕ್ಕೆ ಸೇರಿದ್ದು: ನಟ ಅನಿರುದ್ಧ
ಇದೆ ವೇಳೆ ಹಿರಿಯ ನಟ ರಮೇಶ್ ಭಟ್ ಮಾತನಾಡಿ ʻʻವಿಷ್ಣುವರ್ಧನ್ ಬಾಯಿ ತುಂಬ ಅಣ್ಣ ಎಂದು ಕರಿಯುತ್ತಿದ್ದ.
ಅದೆಷ್ಟೋ ಸಿನಿಮಾಗಳಲ್ಲಿ ಅಣ್ಣ, ತಮ್ಮನಾಗಿ ನಟಿಸಿದ್ದೇನೆ. ರೇಸ್ ಕೋರ್ಸ್‌ನಲ್ಲಿ ಇಬ್ಬರೂ ವಾಕ್ ಮಾಡುತ್ತಿದ್ದೆವು.
ಒಟ್ಟಿಗೆ ಯೋಗ, ವಿಷ್ಣು ಸಹಸ್ರನಾಮ ಪಠಣ, ಶೂಟಿಂಗ್ ಮಾಡಿದ್ದೇವೆ. ಜೀವನದ ಉದ್ದಕ್ಕೂ ಒಂದಿಲ್ಲ ಒಂದು ರೀತಿಯಲ್ಲಿ ಹೋರಾಟ ಮಾಡಿಕೊಂಡೇ ಬಂದಿದ್ದ. ಸ್ಮಾರಕದ ವಿಚಾರದಲ್ಲೂ ಹೋರಾಟ ನಡೆಸಬೇಕಾಯಿತು.
ಈಗ ಸ್ಮಾರಕ ಆಗಿದೆ. ಇಲ್ಲಿಗೆ ಬಂದು ಓಡಾಡಿದರೆ ವಿಷ್ಣು ಆತ್ಮದ ಜತೆ ಇದ್ದಂತೆ ಭಾಸವಾಗುತ್ತದೆʼʼಎಂದರು.
ಸಿನಿಮಾ
Rashmika Mandanna: ದ್ವೇಷಿಸುವವರನ್ನು ಹೇಗೆ ಎದುರಿಸಬೇಕೆಂದು ಪಾಠ ಹೇಳಿಕೊಟ್ಟ ನಟಿ ರಶ್ಮಿಕಾ ಮಂದಣ್ಣ
ನಟಿ ರಶ್ಮಿಕಾ ಮಂದಣ್ಣ (Rashmika Mandanna) ಅಭಿಮಾನಿಗಳೊಂದಿಗೆ ಟ್ವಿಟರ್‌ನಲ್ಲಿ ಮಾತುಕತೆ ನಡೆಸಿದ್ದಾರೆ. ಈ ವೇಳೆ ಅವರು ದ್ವೇಷ ಮಾಡುವವರನ್ನು ಹೇಗೆ ಎದುರಿಸಬೇಕು ಎನ್ನುವುದನ್ನೂ ಹೇಳಿದ್ದಾರೆ.
ಹೈದರಾಬಾದ್: ನಟಿ ರಶ್ಮಿಕಾ ಮಂದಣ್ಣ (Rashmika Mandanna) ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯವಾಗಿರುವ ನಟಿ. ಇನ್‌ಸ್ಟಾಗ್ರಾಂ, ಟ್ವಿಟರ್‌ನಲ್ಲಿ ನಟಿ ಆಗಾಗ ಫೊಟೋಗಳನ್ನು ಮತ್ತು ಕೆಲವು ವಿಚಾರಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಇದೀಗ ನಟಿ ದ್ವೇಷ ಮಾಡುವವರಿಂದ ಬಚಾವಾಗುವುದು ಹೇಗೆ ಎನ್ನುವ ಪಾಠವನ್ನೂ ತಮ್ಮ ಅಭಿಮಾನಿಗಳಿಗೆ ಹೇಳಿ ಕೊಟ್ಟಿದ್ದಾರೆ.
ಇದನ್ನೂ ಓದಿ: Rashmika Mandanna: Lakme Fashion Weekನಲ್ಲಿ ರ‍್ಯಾಂಪ್ ವಾಕ್ ಮಾಡಿದ ರಶ್ಮಿಕಾ ಮಂದಣ್ಣ
ರಶ್ಮಿಕಾ ಅವರು ಸೋಮವಾರದಂದು ಟ್ವಿಟರ್‌ನಲ್ಲಿ ಅಭಿಮಾನಿಗಳೊಂದಿಗೆ ಒಂದಿಷ್ಟು ಸಮಯ ಮಾತನಾಡಿದ್ದಾರೆ. ಮಾತುಕತೆ ಆರಂಭಿಸುವುದಕ್ಕೂ ಮೊದಲು ಟ್ವೀಟ್ ಮಾಡಿದ್ದ ನಟಿ, “ನನ್ನ ಪ್ರೀತಿ ಪಾತ್ರರಿಗೆ ಹಾಯ್, ನಾನು ನಿಮ್ಮೆಲ್ಲ ಟ್ವೀಟ್ ಮತ್ತು ಕಾಮೆಂಟ್‌ಗಳನ್ನು ಓದುತ್ತೇನೆ. ನನ್ನ ಹೃದಯ ಪ್ರೀತಿಯಿಂದ ತುಂಬಿದೆ. ನಿಮ್ಮನ್ನೆಲ್ಲ ತುಂಬ ಮಿಸ್ ಮಾಡಿಕೊಂಡಿದ್ದೇನೆ. ಹಾಗಾಗಿ ಈಗ ಸ್ವಲ್ಪ ಹೊತ್ತು ಮಾತನಾಡೋಣವೇ? ಸಮಯ ಈಗ ಶುರುವಾಗಿದೆ” ಎಂದು ಬರೆದುಕೊಂಡಿದ್ದಾರೆ.
ನಟಿಯ ಟ್ವೀಟ್‌ಗೆ ಪ್ರತಿಯಾಗಿ ಅಭಿಮಾನಿಯೊಬ್ಬರು, “ನೀವು ದ್ವೇಷಿಸುವವರನ್ನು ಹೇಗೆ ಎದುರಿಸುತ್ತೀರಿ. ಏನಾದರೂ ಟಿಪ್ಸ್ ಇದಿಯೇ?” ಎಂದು ಕೇಳಿದ್ದರು. ಅದಕ್ಕೆ ಉತ್ತರಿಸಿರುವ ನಟಿ, “ನಿಮ್ಮನ್ನು ದ್ವೇಷ ಮಾಡುವವರನ್ನು ಎಷ್ಟರ ಮಟ್ಟಿಗೆ ಪ್ರೀತಿಸಿ ಎಂದರೆ ಅವರೇ ದ್ವೇಷಿಸುವುದನ್ನು ಬಿಟ್ಟು ಪ್ರೀತಿ ಮಾಡಿಬಿಡಬೇಕು” ಎಂದು ಬರೆದುಕೊಂಡಿದ್ದಾರೆ. ನಟಿಯ ಈ ಟ್ವೀಟ್‌ಗಲೂ ಸಾಮಾಜಿಕ ಜಾಲಯತಾಣಗಳಲ್ಲಿ ವೈರಲ್ ಆಗಿವೆ.
ರಶ್ಮಿಕಾ ಮಂದಣ್ಣ ಅವರು ಕನ್ನಡದ ಕಿರಿಕ್ ಪಾರ್ಟಿ ಸಿನಿಮಾ ಮೂಲಕ ಹಿರಿತೆರೆಗೆ ಬಂದವರು. ಚಮಕ್, ಅಂಜನಿ ಪುತ್ರ ಸೇರಿ ಅನೇಕ ಸಿನಿಮಾಗಳಲ್ಲಿ ನಟಿಸಿರುವ ನಟಿ ಕಳೆದ ವರ್ಷ ಅಮಿತಾಭ್ ಬಚ್ಚನ್ ನಟನೆಯ ಗುಡ್ ಬೈ ಸಿನಿಮಾ ಮೂಲಕ ಬಾಲಿವುಡ್‌ಗೂ ಎಂಟ್ರಿ ಕೊಟ್ಟಿದ್ದಾರೆ.
ಕಿರುತೆರೆ
Kannada Serial: 900 ಸಂಚಿಕೆ ಪೂರೈಸಿದ ಜೊತೆ ಜೊತೆಯಲಿ ಧಾರಾವಾಹಿ; ಸಂಭ್ರಮದಲ್ಲಿ ತಂಡ
ಜೀ ಕನ್ನಡದ ಪ್ರಸಿದ್ಧ ಧಾರಾವಾಹಿಯಾದ (Kannada Serial) ʼಜೊತೆ ಜೊತೆಯಲಿʼ 900 ಸಂಚಿಕೆಗಳನ್ನು ಇತ್ತೀಚೆಗೆ ಪೂರೈಸಿದೆ.
ಬೆಂಗಳೂರು: ಅದು 2019ರ ಸೆಪ್ಟೆಂಬರ್ 9. ಕನ್ನಡದ ಕಿರುತೆರೆಗೆ ಹೊಸ ಶೈಲಿಯ ಕಥೆಯೊಂದು (Kannada Serial) ಎಂಟ್ರಿ ಕೊಟ್ಟಿತ್ತು. ಅದುವೇ ʼಜೊತೆ ಜೊತೆಯಲಿʼ. ಈ ಧಾರಾವಾಹಿ ಕಿರುತೆರೆಗೆ ಎಂಟ್ರಿ ಕೊಟ್ಟ ಒಂದೇ ವಾರದಲ್ಲಿ ಕನ್ನಡದ ಎಲ್ಲಾ ಧಾರಾವಾಹಿಗಳ ದಾಖಲೆಗಳನ್ನು ಮುರಿದು ಅತಿ ಹೆಚ್ಚು ವೀಕ್ಷಣೆ ಪಡೆದ ಧಾರಾವಾಹಿ ಎನ್ನುವ ಖ್ಯಾತಿ ಪಡೆದುಕೊಂಡಿತು. ಆ ಧಾರಾವಾಹಿಗೆ ಇದೀಗ 900 ಸಂಚಿಕೆಗಳು ಸಂಪೂರ್ಣಗೊಂಡಿವೆ.
ಇದನ್ನೂ ಓದಿ: Jote Joteyali: ಹಸೆಮಣೆ ಏರಲು ಸಜ್ಜಾದ `ಜೊತೆ ಜೊತೆಯಲಿ’ ಧಾರಾವಾಹಿ ನಟಿ ಶಿಲ್ಪಾ ಅಯ್ಯರ್
ಧಾರಾವಾಹಿ 900 ಸಂಚಿಕೆಗಳನ್ನು ಪೂರ್ಣಗೊಳಿಸಿರುವ ಸಂತಸದಲ್ಲಿ ಧಾರಾವಾಹಿಯ ತಂಡವಿದೆ. ಈ 900 ಸಂಚಿಕೆಗಳಲ್ಲಿ ಧಾರಾವಾಹಿ ಹಲವಾರು ತಿರುವುಗಳನ್ನು ಕಂಡಿದೆ. ಅನಿರುದ್ಧ ಅವರನ್ನು ಧಾರಾವಾಹಿ ತಂಡದಿಂದ ಹೊರಹಾಕಿದ ನಂತರ ಅವರ ಸ್ಥಾನಕ್ಕೆ ಹರೀಶ್ ರಾಜ್ ಅವರನ್ನು ಕರೆತರಲಾಗಿದೆ. ಅದಕ್ಕಾಗಿಯೇ ಕೆಲವು ಹೊಸ ಉಪಕಥೆಯನ್ನೂ ಪರಿಚಯಿಸಲಾಗಿದೆ. ಹಾಗೆಯೇ ಜೋಡಿ ಹಕ್ಕಿ ಧಾರಾವಾಹಿ ಖ್ಯಾತಿಯ ಚೈತ್ರ ರಾವ್ ಅವರನ್ನೂ ಸಹ ಆರಾಧನಾ ಹೆಸರಿನಲ್ಲಿ ಧಾರಾವಾಹಿಯಲ್ಲಿ ಪರಿಚಯಿಸಲಾಗಿದೆ.
ಜೊತೆ ಜೊತೆಯಲ್ಲಿ ಧಾರಾವಾಹಿಯು ಮಧ್ಯಮ ವಯಸ್ಸಿನ ಉದ್ಯಮಿ ಆರ್ಯವರ್ಧನ್ ಕಥೆಯಾಗಿದೆ. ಅದರಲ್ಲಿ ಆ ಉದ್ಯಮಿಗೆ ಅನು ಹೆಸರಿನ ಯುವತಿಯೊಂದಿಗೆ ಪ್ರೀತಿ ಹುಟ್ಟಿ ಅವರಿಬ್ಬರು ಮದುವೆಯಾಗುತ್ತಾರೆ. ಇದೀಗ ಅನು ಗರ್ಭಿಣಿಯಾಗಿದ್ದು, ಅದೇ ಸಂಭ್ರಮದಲ್ಲಿ ಆರ್ಯವರ್ಧನ್ ಇದ್ದಾರೆ. ಆದರೆ ಇವರಿಬ್ಬರ ಅನ್ಯೋನ್ಯತೆ ಬಗ್ಗೆ ಆರಾಧನಾ ಅವರಿಗೆ ಅಸಮಾಧಾನ ಇದೆ.
ಇದನ್ನೂ ಓದಿ: Anirudh Jatkar: ʻಜೊತೆ ಜೊತೆಯಲಿʼ ಖ್ಯಾತಿಯ ಅನಿರುದ್ಧ ಮುಂಬರುವ ಧಾರಾವಾಹಿಗೆ ನಾಯಕಿ ಯಾರು?
ಜೀ ಕನ್ನಡ ವಾಹಿನಿಯಲ್ಲಿ ಸೋಮವಾರದಿಂದ ಶುಕ್ರವಾರದವರೆಗೆ ಈ ಧಾರಾವಾಹಿ ರಾತ್ರಿ 9.30ಕ್ಕೆ ಪ್ರಸಾರವಾಗುತ್ತಿದೆ.
South Cinema
Actor Suriya: ಮುಂಬೈನಲ್ಲಿ 70 ಕೋಟಿ ರೂ. ಮೌಲ್ಯದ ಅಪಾರ್ಟ್‌ಮೆಂಟ್ ಖರೀದಿಸಿದ ನಟ ಸೂರ್ಯ
ಕಾಲಿವುಡ್ ನಟ ಸೂರ್ಯ (Actor Suriya) ಅವರು ಮುಂಬೈನಲ್ಲಿ ಬಹು ಕೋಟಿ ರೂ. ಮೌಲ್ಯದ ಅಪಾರ್ಟ್‌ಮೆಂಟ್ ಒಂದನ್ನು ಖರೀದಿಸಿದ್ದಾರೆ. ಅದರ ಬೆಲೆ 70 ಕೋಟಿ ರೂ. ಎನ್ನಲಾಗಿದೆ.
ಮುಂಬೈ: ಕಾಲಿವುಡ್ ನಟ ಸೂರ್ಯ (Actor Suriya) ಬಹುಬೇಡಿಕೆಯ ನಟರಲ್ಲಿ ಒಬ್ಬರು. ಅವರ ಪತ್ನಿ ಜ್ಯೋತಿಕಾ ಅವರೂ ಕೂಡ ಸಿನಿಮಾಗಳಲ್ಲಿ ಮಿಂಚಿದವರೇ. ಇದೀಗ ಈ ದಂಪತಿ ಮಹಾರಾಷ್ಟ್ರದ ಮುಂಬೈನಲ್ಲಿ ಬಹು ಕೋಟಿ ರೂ. ಮೌಲ್ಯದ ಅಪಾರ್ಟ್‌ಮೆಂಟ್‌ನ್ನು ಖರೀದಿಸಿರುವುದಾಗಿ ವರದಿಯಾಗಿದೆ. ಅವರು ಖರೀದಿಸಿರುವ ಅಪಾರ್ಟ್‌ಮೆಂಟ್ ಬೆಲೆ ಬರೋಬ್ಬರಿ 70 ಕೋಟಿ ರೂ. ಎಂದು ವರದಿಯಿದೆ.
ಇದನ್ನೂ ಓದಿ: Actor Suriya: ಸಚಿನ್ ತೆಂಡೂಲ್ಕರ್ ಭೇಟಿ ಮಾಡಿದ ಕಾಲಿವುಡ್ ನಟ ಸೂರ್ಯ: ಫೋಟೊ ವೈರಲ್
ಇಂಡಿಯಾ ಗ್ಲಿಟ್ಜ್ ಈ ಬಗ್ಗೆ ವರದಿ ಮಾಡಿದೆ. ಸೂರ್ಯ ಅವರು ಕೊಂಡುಕೊಂಡಿರುವ ಐಷಾರಾಮಿ ಅಪಾರ್ಟ್‌ಮೆಂಟ್ ಸುಮಾರು 9000 ಚದರ ಅಡಿ ಜಾಗಕ್ಕೆ ಹಬ್ಬಿದೆ. ಅದರಲ್ಲಿ ಅತ್ಯಂತ ಸುಂದರವಾದ ಉದ್ಯಾನವನ, ಹಲವಾರು ಪಾರ್ಕಿಂಗ್ ಸ್ಥಳಗಳು ಸೇರಿ ಅನೇಕ ಐಷಾರಾಮಿ ಸೌಲಭ್ಯ ಅಪಾರ್ಟ್‌ಮೆಂಟ್‌ನಲ್ಲಿ ಇದೆ ಎಂದು ವರದಿಯಿದೆ. ಅವರ ಅಪಾರ್ಟ್‌ಮೆಂಟ್ ಸನಿಹದಲ್ಲಿಯೇ ಹಲವು ಬಾಲಿವುಡ್ ತಾರೆಗಳ ಮನೆ ಹಾಗೂ ರಾಜಕಾರಣಿಗಳ ಮನೆಗಳು ಇವೆ ಎನ್ನಲಾಗಿದೆ.
ಸೂರ್ಯ ಅವರು ಈಗಾಗಲೇ ಮುಂಬೈನಲ್ಲಿ ಮನೆಯೊಂದನ್ನು ಖರೀದಿಸಿ ಅದರಲ್ಲಿ ಕುಟುಂಬ ಸಮೇತವಾಗಿ ವಾಸವಿದ್ದರೆ. ಇದೀಗ ಖರೀದಿಸಿರುವ ಈ ಅಪಾರ್ಟ್‌ಮೆಂಟ್ ಅವರ ಕುಟುಂಬದವರಿಗೆ, ಸಹೋದರರಿಗೆ ಗೆಸ್ಟ್ ಹೌಸ್ ರೀತಿಯಲ್ಲಿ ಇರಲಿದೆ ಎಂದು ಹೇಳಲಾಗಿದೆ. ಹಾಗೆಯೇ ಮಕ್ಕಳ ಜನ್ಮದಿನ ಸೇರಿ ಬೇರೆ ಬೇರೆ ಕಾರ್ಯಕ್ರಮಗಳನ್ನು ಆಚರಿಸುವುದಕ್ಕೆ ಈ ಮನೆಯನ್ನು ಬಳಸಬಹುದು ಎನ್ನಲಾಗಿದೆ.
ಇದನ್ನೂ ಓದಿ: Vijay Antony | ಶೂಟಿಂಗ್ ವೇಳೆ ಅಪಘಾತ: ಕಾಲಿವುಡ್ ನಟ ವಿಜಯ್ ಆ್ಯಂಟೊನಿ ಗಂಭೀರ
ಸೂರ್ಯ ತಮ್ಮ ಮುಂದಿನ ಸಿನಿಮಾ ʼಸೂರ್ಯ 42ʼಗಾಗಿ ಸಿದ್ಧತೆ ನಡೆಸಿಕೊಳ್ಳುತ್ತಿದ್ದಾರೆ. ಈ ಸಿನಿಮಾದಲ್ಲಿ ಅವರು ವೆಂಕಾಟೆರ್, ಅರತಾರ್, ಮಂದಾಂಕರ್, ಮುಕಾತಾರ್, ಪೆರುಮಾನಾಥರ್ ಸೇರಿ ಅನೇಕರ ಜತೆಯಲ್ಲಿ ನಟಿಸಲಿದ್ದಾರೆ. ದಿಶಾ ಪಟಾನಿ ಅವರು ಸೂರ್ಯ ಅವರಿಗೆ ಜತೆಯಾಗಿ ನಟಿಸಲಿದ್ದಾರೆ. ಸಿರುತೈ ಶಿವ ನಿರ್ದೇಶನ ಮತ್ತು ದೇವಿ ಶ್ರೀ ಪ್ರಸಾದ್ ಅವರ ಸಂಗೀತ ಸಂಯೋಜನೆ ಈ ಚಿತ್ರಕ್ಕಿರಲಿದ್ದು, ವಿಶ್ವದಾದ್ಯಂತ ಒಟ್ಟು 10 ಭಾಷೆಗಳಲ್ಲಿ ಬಿಡುಗಡೆಯಾಗಲಿದೆ. ಅದಷ್ಟೇ ಅಲ್ಲದೆ ಸೂರ್ಯ ಅವರು ತಮ್ಮ ಸಿನಿಮಾವಾದ ಸೂರರೈ ಪೊಟ್ರುವಿನ ಹಿಂದಿ ರಿಮೇಕ್‌ಗೆ ಬಂಡವಾಳ ಹಾಕಲಿದ್ದಾರೆ.
ಒಟಿಟಿ
Pathaan Film: ಒಟಿಟಿಯಲ್ಲೂ ತೆರೆಕಾಣಲು ಸಜ್ಜಾಗಿದೆ ಪಠಾಣ್; ಅಮೇಜಾನ್ ಪ್ರೈಮ್ನಲ್ಲಿ ಈ ದಿನಾಂಕದಂದು ಬಿಡುಗಡೆ
ಪಠಾಣ್ ದೇಶಭಕ್ತಿ ಸಾರುವ ಸಿನಿಮಾ ಎಂದು ಶಾರುಖ್ಖಾನ್ ಹೇಳಿದ್ದರು. ಇದರಲ್ಲಿ ಶಾರುಖ್ ಖಾನ್ RAW (Research and Analysis Wing)ನ ಏಜೆಂಟ್ ಆಗಿ ಕಾಣಿಸಿಕೊಂಡಿದ್ದಾರೆ. ಭಯೋತ್ಪಾದಕರನ್ನು ಹತ್ತಿಕ್ಕುವ ಕಥೆ ಇದರಲ್ಲಿದ್ದು, ಜಾನ್ ಅಬ್ರಾಹಂ ಅವರು ಭಯೋತ್ಪಾದಕನ ಮುಖಂಡನ ಪಾತ್ರ ವಹಿಸಿದ್ದಾರೆ.
ಬೇಷರಮ್ ರಂಗ್ (ನಾಚಿಕೆ ಇಲ್ಲದ ಬಣ್ಣ) ಎಂಬ ಹಾಡಿನಿಂದಾಗಿ ಹಿಂದು ಸಂಘಟನೆಗಳಿಂದ ತೀವ್ರ ವಿರೋಧಕ್ಕೆ ಒಳಗಾಗಿ, ಆ ವಿವಾದದ ಮಧ್ಯೆಯೇ ವಿಶ್ವದಾದ್ಯಂತ ಬಿಡುಗಡೆಯಾಗಿದ್ದ ಪಠಾಣ್ (Pathaan Film)ಈಗಾಗಲೇ ಬಾಹುಬಲಿ ಸಿನಿಮಾದ ಕಲೆಕ್ಷನ್ನ್ನೂ ಹಿಂದಿಕ್ಕಿ ಮುಂದೆ ಓಡಿದೆ. ಅತ್ಯಂತ ಹೆಚ್ಚಿನ ಗಳಿಕೆ ಕಂಡ ಹಿಂದಿ ಚಿತ್ರವಾಗಿ ಹೊರಹೊಮ್ಮಿದೆ. ಇನ್ನೂ ಕೆಲವು ಥಿಯೇಟರ್ಗಳಲ್ಲಿ ಪ್ರದರ್ಶನ ಕಾಣುತ್ತಿರುವ ಮಧ್ಯೆಯೇ, ಒಟಿಟಿಗೂ ಕಾಲಿಡುತ್ತಿದೆ. ಶಾರುಖ್ ಖಾನ್, ದೀಪಿಕಾ ಪಡುಕೋಣೆ ಮತ್ತು ಜಾನ್ ಅಬ್ರಾಹಂ ಅಭಿನಯದ ಈ ಬ್ಲಾಕ್ಬಸ್ಟರ್ ಸಿನಿಮಾ ಮಾರ್ಚ್ 22ರಿಂದ ಅಮೇಜಾನ್ ಪ್ರೈಮ್ನಲ್ಲಿ ಪ್ರದರ್ಶನ ಕಾಣಲಿದೆ. ಅಮೇಜಾನ್ ಪ್ರೈಮ್ನಲ್ಲಿ ನಾಳೆ (ಮಾ.22)ಯಿಂದ ನೀವು ಪಠಾಣ್ ಹಿಂದಿ, ತಮಿಳು ಮತ್ತು ತೆಲುಗು ಸಿನಿಮಾಗಳನ್ನು ನೋಡಬಹುದು.
ಬೇಷರಮ್ ರಂಗ್ ಹಾಡಿನಲ್ಲಿ ದೀಪಿಕಾ ಪಡುಕೋಣೆ ಅವರು ಕೇಸರಿ ಬಣ್ಣದ ತುಂಡುಡುಗೆ ಧರಿಸಿ ನೃತ್ಯ ಮಾಡಿದ್ದು ವಿವಾದಕ್ಕೆ ಕಾರಣವಾಗಿತ್ತು. ಪಠಾಣ್ ಬಿಡುಗಡೆಗೇ ಅವಕಾಶ ಕೊಡುವುದಿಲ್ಲ ಎಂದು ಹಲವು ಹಿಂದು ಸಂಘಟನೆಗಳು ಕಿಡಿಕಾರಿದ್ದವು. ಅದೆಲ್ಲದರ ಮಧ್ಯೆ ಜ.25ರಂದು ಸಿನಿಮಾ ವಿಶ್ವದಾದ್ಯಂತ ರಿಲೀಸ್ ಆಗಿತ್ತು. ಇದೀಗ 50 ದಿನಗಳನ್ನು ಪೂರೈಸಿದೆ. ಇಲ್ಲಿಯವರೆಗೆ ಪಠಾಣ್ ಕಲೆಕ್ಷನ್ 1 ಸಾವಿರ ಕೋಟಿ ರೂಪಾಯಿ ಮೀರಿದೆ ಎಂದು ಹೇಳಲಾಗಿದೆ. ಯಶ್ ಚೋಪ್ರಾ ಅವರ ಯಶ್ ರಾಜ್ ಫಿಲ್ಮ್ಸ್ ಪ್ರೊಡಕ್ಷನ್ ಹೌಸ್ ಪ್ರಕಾರ ಪಠಾಣ್ ಗಳಿಕೆ 1048.30 ಕೋಟಿ ರೂಪಾಯಿ ಆಗಿದ್ದು, ಅದರಲ್ಲಿ ಭಾರತದಲ್ಲಿ ಕಲೆಕ್ಷನ್ 656.20 ಕೋಟಿ ರೂ.ಆಗಿದೆ. ಹಾಗೇ, ವಿದೇಶಗಳಲ್ಲಿ ಗಳಿಕೆ 392.10 ಕೋಟಿ ರೂ.
ಪಠಾಣ್ ದೇಶಭಕ್ತಿ ಸಾರುವ ಸಿನಿಮಾ ಎಂದು ಶಾರುಖ್ಖಾನ್ ಹೇಳಿದ್ದರು. ಇದರಲ್ಲಿ ಶಾರುಖ್ ಖಾನ್ RAW (Research and Analysis Wing)ನ ಏಜೆಂಟ್ ಆಗಿ ಕಾಣಿಸಿಕೊಂಡಿದ್ದಾರೆ. ಭಯೋತ್ಪಾದಕರನ್ನು ಹತ್ತಿಕ್ಕುವ ಕಥೆ ಇದರಲ್ಲಿದ್ದು, ಜಾನ್ ಅಬ್ರಾಹಂ ಅವರು ಭಯೋತ್ಪಾದಕನ ಮುಖಂಡನ ಪಾತ್ರ ವಹಿಸಿದ್ದಾರೆ. ಪಠಾಣ್ ಬಿಡುಗಡೆಯಾಗುತ್ತಿದ್ದಂತೆ ಅತ್ಯಂತ ಯಶಸ್ವಿಯಾಗಿ ಓಡುತ್ತಿದೆ. ಈ ಬಗ್ಗೆ ಇತ್ತೀಚೆಗಷ್ಟೇ ಶಾರುಖ್ ಖಾನ್ ಅವರು ತಮ್ಮ ಅಭಿಮಾನಿಗಳಿಗೆ ಧನ್ಯವಾದ ಸಲ್ಲಿಸಿದ್ದರು. ಅದರಲ್ಲು ಶಾರುಖ್ ಖಾನ್ಗಂತೂ ಅದೆಷ್ಟೋ ವರ್ಷಗಳ ನಂತರದ ಯಶಸ್ಸು ಇದು. ಟ್ವೀಟ್ ಮಾಡಿದ್ದ ಅವರು, ಕಠಿಣ ಪರಿಶ್ರಮ, ನಿಷ್ಠೆ ಮತ್ತು ನಂಬಿಕೆಗೆ ಸಿಕ್ಕ ಜಯ ಎಂದಿದ್ದರು.
-
ಸುವಚನ15 hours ago
ಸುವಚನ, ಶುಭನುಡಿ, ಪಂಚಾಂಗ, ಓಂಕಾರದ ಸಂಗಮ
-
ಪ್ರಮುಖ ಸುದ್ದಿ21 hours ago
ವಿಸ್ತಾರ ಸಂಪಾದಕೀಯ: ಪಬ್ಲಿಕ್ ಪರೀಕ್ಷೆ ಗೊಂದಲ; ವಿದ್ಯಾರ್ಥಿಗಳು, ಪೋಷಕರ ಮೇಲೆ ಮಾನಸಿಕ ಒತ್ತಡ
-
ಆಟೋಮೊಬೈಲ್22 hours ago
Oscar 2023 : ನಾಟು ನಾಟು ಹಾಡಿಗೆ ಡಾನ್ಸ್ಮಾಡಿದ ಟೆಸ್ಲಾ ಕಾರುಗಳು! ಇಲ್ಲಿದೆ ನೋಡಿ ವಿಡಿಯೊ
-
ಕ್ರಿಕೆಟ್6 hours ago
IND VS AUS: ಭಾರತ-ಆಸ್ಟ್ರೇಲಿಯಾ ಅಂತಿಮ ಏಕದಿನ ಪಂದ್ಯದ ಪಿಚ್ ರಿಪೋರ್ಟ್, ಸಂಭಾವ್ಯ ತಂಡ
-
ಕರ್ನಾಟಕ10 hours ago
Shivamogga politics : ಯುಗಾದಿ, ರಂಜಾನ್ಗೆ ಶುಭ ಕೋರಿ ಫ್ಲೆಕ್ಸ್ ಹಾಕಿಸಿದ ಆಯನೂರು, ಹರಕು ಬಾಯಿ ಮುಚ್ಚಲಿ ಅಂದಿದ್ದು ಯಾರಿಗೆ?
-
ಧಾರ್ಮಿಕ9 hours ago
Ugadi 2023 : ಜಗದ ಆದಿ ಈ ಯುಗಾದಿ!
-
ಅಂಕಣ10 hours ago
ನನ್ನ ದೇಶ ನನ್ನ ದನಿ ಅಂಕಣ: ಪಂಜಾಬ್ ನಾಶವಾಗುವುದು ಒಳ್ಳೆಯ ಲಕ್ಷಣವಲ್ಲ
-
ಕರ್ನಾಟಕ11 hours ago
Drugs Mafia : ಸಾಗರದಲ್ಲಿ ಡ್ರಗ್ಸ್ ಮಾರಾಟ ಯತ್ನ: ಲಾಂಗ್ ಸಹಿತ ಇಬ್ಬರ ಅರೆಸ್ಟ್, ಕೊಲೆ ಸಂಚೂ ಬಯಲು