Site icon Vistara News

Bigg Boss 17: ಬಿಗ್‌ ಬಾಸ್‌ ಮನೆಯಲ್ಲಿ ಪ್ರೆಗ್ನೆನ್ಸಿ ಟೆಸ್ಟ್‌ ಮಾಡಿಸಿಕೊಂಡ ಸುಶಾಂತ್ ಸಿಂಗ್ ರಜಪೂತ್ ಮಾಜಿ ಲವರ್!

Ankita Lokhande

ಬೆಂಗಳೂರು: ಸುಶಾಂತ್ ಸಿಂಗ್ ರಜಪೂತ್ ಮಾಜಿ ಲವರ್, ನಟಿ ಅಂಕಿತಾ ಲೋಖಂಡೆ ಹಾಗೂ ಅವರ ಪತಿ ವಿಕ್ಕಿ ಜೈನ್ ‘ಬಿಗ್ ಬಾಸ್ 17’ ಮೂಲಕ ಗಮನ ಸೆಳೆಯುತ್ತಿದ್ದಾರೆ. ಇಬ್ಬರೂ ಮನೆಯಲ್ಲಿ ಕಿತ್ತಾಡಿಕೊಳ್ಳುತ್ತಿದ್ದರು. ಮನೆಯಲ್ಲಿ ಒಂಟಿತನ ಕಾಡುತ್ತಿದೆ ಎಂದು ಅಂಕಿತಾ ಆಗಾಗ ಹೇಳುತ್ತಿದ್ದಳು. ಹಿಂದಿನ ಸಂಚಿಕೆಯಲ್ಲಿ, ನವೆಂಬರ್ 15ರಂದು ಪ್ರೆಗ್ನೆನ್ಸಿ ಟೆಸ್ಟ್‌ ಕೂಡ ಮಾಡಿಸಿಕೊಂಡಿದ್ದಾರೆ. ಈಗ ಅಂಕಿತಾಗೆ ತಾನು ಪ್ರೆಗ್ನೆಂಟ್ ಆಗಿರುವ ಬಗ್ಗೆ ಅನುಮಾನ ಮೂಡಿದೆ. ನನಗೆ ಪಿರಿಯಡ್ಸ್ ಆಗುತ್ತಿಲ್ಲ ಅಂತ ಈ ಬಗ್ಗೆ ಪತಿ ವಿಕ್ಕಿ ಜೈನ್ ಬಳಿ ಹೇಳಿಕೊಂಡಿದ್ದಾರೆ.

ಬಿಗ್ ಬಾಸ್ 17ರ ಹಿಂದಿನ ಸಂಚಿಕೆಯಲ್ಲಿ ಅಂಕಿತಾ ಲೋಖಂಡೆ ಮತ್ತು ವಿಕ್ಕಿ ಜೈನ್ ಗಾರ್ಡನ್ ಏರಿಯಾದಲ್ಲಿ ಈ ಬಗ್ಗೆ ಮಾತನಾಡಿದ್ದಾರೆ. ಆಗ ಇಬ್ಬರ ಮಧ್ಯೆ ಮಾತಿನ ಚಕಮಕಿ ನಡೆದಿದೆ. ʻʻನನಗೆ ಮಾನಸಿಕವಾಗಿ ಹಿಂಸೆ ಆಗುತ್ತಿದೆ. ನನಗೆ ಅನಾರೋಗ್ಯ ಆದಂತೆ ಭಾಸ ಆಗುತ್ತಿದೆ. ನನಗೆ ಪಿರಿಯಡ್ಸ್ ಆಗುತ್ತಿಲ್ಲ. ನನಗೆ ಮನೆಗೆ ಹೋಗಬೇಕು. ನಾನು ಪ್ರೆಗ್ನೆನ್ಸಿ ಟೆಸ್ಟ್ ಮಾಡಿಸಿದ್ದೀನಿ. ನನ್ನ ಭಾವನೆಗಳಲ್ಲಿ ಏರಿಳಿತ ಆಗುತ್ತಿದೆ. ನಾನು ಗೊಂದಲಕ್ಕೆ ಒಳಗಾಗಿದ್ದೇನೆ. ಅದಕ್ಕೆ ನಾನು ನಿನ್ನನ್ನು ದೂಷಿಸುತ್ತಿಲ್ಲʼ’ ಎಂದಿದ್ದಾರೆ ಅಂಕಿತಾ. ವಿಕ್ಕಿ ಆಟದ ಬಗ್ಗೆ ಮಾತನಾಡುತ್ತಲೇ ಇಬ್ಬರಿಗೂ ಜಗಳ ಶುರುವಾಯಿತು.

ಇದನ್ನೂ ಓದಿ: Bigg Boss 17: ಬಿಗ್‌ ಬಾಸ್‌ ಮನೆಯಲ್ಲಿ ಮನ್ನಾರಾ; ವಿಶಸ್‌ ತಿಳಿಸಿದ ಪಿಗ್ಗಿ!

ಈ ವೀಕೆಂಡ್‌ನಲ್ಲಿ ಸಲ್ಮಾನ್‌ ಈ ಬಗ್ಗೆ ಮಾತನಾಡುತ್ತಾರಾ ಎಂಬುದು ನೋಡಬೇಕಿದೆ. ಅಲ್ಲದೇ ಅಂಕಿತಾ ಲೋಖಂಡೆ ಮನೆಯಿಂದ ಹೊರಗೆ ಹೋಗುತ್ತಾರೆ ಎಂದು ಪ್ರೇಕ್ಷಕರು ಕಮೆಂಟ್‌ ಮೂಲಕ ವ್ಯಕ್ತಪಡಿಸುತ್ತಿದ್ದಾರೆ. ಅಕ್ಟೋಬರ್ 15 ರಂದು ಬಿಗ್‌ ಬಾಸ್‌ ಸೀಸನ್‌ 17 ಶುರುವಾಯ್ತು. ಜಿಯೋ ಸಿನಿಮಾದಲ್ಲಿ ಸ್ಟ್ರೀಮ್ ಆಗುತ್ತಿದೆ. ಪರ್ಯಾಯವಾಗಿ, ಕಾರ್ಯಕ್ರಮವು ಕಲರ್ಸ್ ಟಿವಿಯಲ್ಲಿ ರಾತ್ರಿ 9 ಗಂಟೆಗೆ ಪ್ರಸಾರ ಕಾಣುತ್ತಿದೆ. ಈ ಬಾರಿಯ ಬಿಗ್‌ ಬಾಸ್‌ ಹಲವಾರು ಹೊಸ ಮತ್ತು ಅತ್ಯಾಕರ್ಷಕ ವೈಶಿಷ್ಟ್ಯಗಳನ್ನು ಹೊಂದಿದೆ.

Exit mobile version