Site icon Vistara News

Actor Dhanush | ಸಂಕ್ರಾಂತಿಗೆ ಅಭಿಮಾನಿಗಳಿಗೆ ಗುಡ್‌ ನ್ಯೂಸ್‌ ಕೊಟ್ಟ ಸೂಪರ್‌ ಸ್ಟಾರ್‌ ಧನುಷ್‌!

Actor Dhanush

ಬೆಂಗಳೂರು : ಧನುಷ್‌ (Actor Dhanush) ಅಭಿನಯದ ತಮಿಳು-ತೆಲುಗು ದ್ವಿಭಾಷಾ ಚಿತ್ರ ʻವಾತಿʼ ಸಿನಿಮಾದ ಎರಡನೇ ಸಿಂಗಲ್ ಟ್ರ್ಯಾಕ್ ‘ನಾಡೋಡಿ ಮನ್ನನ್’ ಜನವರಿ 17 ರಂದು ಬಿಡುಗಡೆಯಾಗಲಿದೆ ಎಂದು ಚಿತ್ರತಂಡ ಘೋಷಿಸಿದೆ. ಚಿತ್ರದ ತೆಲುಗು ಆವೃತ್ತಿಗೆ ʻಸರ್ʼ ಎಂದು ಹೆಸರಿಡಲಾಗಿದೆ. ಸಿನಿಮಾ ಫೆಬ್ರವರಿ 17 ರಂದು ವಿಶ್ವಾದ್ಯಂತ ಬಿಡುಗಡೆಯಾಗಲಿದೆ.

ಪ್ರಮುಖ ನಿರ್ಮಾಣ ಸಂಸ್ಥೆಯಾದ ಸಿತಾರಾ ಎಂಟರ್‌ಟೈನ್‌ಮೆಂಟ್ಸ್ ಮತ್ತು ಫಾರ್ಚೂನ್ ಫೋರ್ ಒಟ್ಟಾಗಿ ಈ ಸಿನಿಮಾ ನಿರ್ಮಾಣ ಮಾಡುತ್ತಿವೆ. ವೆಂಕಿ ಅಟ್ಲೂರಿ ನಿರ್ದೇಶನದ ಈ ಸಿನಿಮಾ ಚಿತ್ರದ ಬಿಡುಗಡೆ ಮತ್ತಷ್ಟು ಮುಂದಕ್ಕೆ ಹೋಗುವ ಸಾಧ್ಯತೆ ಇದೆಯಂತೆ. ಆರಂಭದಲ್ಲಿ ಡಿಸೆಂಬರ್ 2022 ರಲ್ಲಿ ಬಿಡುಗಡೆಯಾಗಬೇಕಿದ್ದ ವಾತಿ ಫೆಬ್ರವರಿಗೆ ಮುಂದೂಡಿದೆ. ವರದಿ ಪ್ರಕಾರ, ಚಿತ್ರವು ಅನೇಕ ಗ್ರಾಫಿಕ್ ಫ್ರೇಮ್‌ಗಳನ್ನು ಹೊಂದಿರುವುದರಿಂದ, ಪೋಸ್ಟ್-ಪ್ರೊಡಕ್ಷನ್ ಕೆಲಸವು ಹೆಚ್ಚು ಸಮಯ ತೆಗೆದುಕೊಳ್ಳುವ ಸಾಧ್ಯತೆಯಿದೆ ಮತ್ತು ಆದ್ದರಿಂದ, ತಯಾರಕರು ಬಿಡುಗಡೆಯನ್ನು ಮುಂದೂಡಿದ್ದಾರೆಂದು ಹೇಳಲಾಗುತ್ತಿದೆ.

ಇದನ್ನೂ ಓದಿ | Actor Dhanush | ಕಾಲಿವುಡ್‌ಗೆ ಎಂಟ್ರಿ ಕೊಟ್ಟ ಶಿವಣ್ಣ: ಧನುಷ್‌ ನಟನೆಯ ಕ್ಯಾಪ್ಟನ್ ಮಿಲ್ಲರ್‌ನಲ್ಲಿ ಸ್ಕ್ರೀನ್ ಶೇರ್!

ಮೂಲಗಳ ಪ್ರಕಾರ ಸಿನಿಮಾ ಎಪ್ರಿಲ್‌ನಲ್ಲಿ ಪೊನ್ನಿಯನ್‌ ಸೆಲ್ವನ್‌ ಸಿನಿಮಾ ಬಿಡುಗಡೆಯ ಸಂದರ್ಭದಲ್ಲಿ ತೆರೆ ಕಾಣಲಿದೆ ಎನ್ನಲಾಗುತ್ತಿದೆ. ಈ ಚಿತ್ರದಲ್ಲಿ ಧನುಷ್ ಪ್ರೊಫೆಸರ್ ಆಗಿ ಕಾಣಿಸಿಕೊಳ್ಳಲಿದ್ದಾರೆ. ಚಿತ್ರದಲ್ಲಿ ನಾಯಕಿಯಾಗಿ ಸಂಯುಕ್ತಾ ಮೆನನ್ ನಟಿಸಿಲಿದ್ದಾರೆ. ಸಿನಿಮಾಗೆ ದಿನೇಶ್ ಕೃಷ್ಣನ್ ಛಾಯಾಗ್ರಹಣ , ರಾಷ್ಟ್ರ ಪ್ರಶಸ್ತಿ ವಿಜೇತ ನವೀನ್ ನೂಲಿ ಸಂಕಲನವಿದೆ. ಸಂಗೀತ ನಿರ್ದೇಶನ ಜಿವಿ ಪ್ರಕಾಶ್ ಕುಮಾರ್ ಮಾಡುತ್ತಿದ್ದಾರೆ. ಸಾಯಿ ಕುಮಾರ್, ತಣಿಕೆಲ್ಲ ಭರಣಿ ಮತ್ತು ನರ್ರಾ ಶ್ರೀನಿವಾಸ್ ಪೋಷಕ ಪಾತ್ರಗಳನ್ನು ನಿರ್ವಹಿಸುತ್ತಿದ್ದಾರೆ.

ಧನುಷ್ ತಮ್ಮ ಮುಂದಿನ ʻಕ್ಯಾಪ್ಟನ್ ಮಿಲ್ಲರ್ʼ ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿದ್ದಾರೆ. ಇದನ್ನು ಅರುಣ್ ಮಾಥೇಶ್ವರನ್ ಅವರು ನಿರ್ದೇಶಿಸಿದ್ದಾರೆ. ಚಿತ್ರದಲ್ಲಿ ಕನ್ನಡದ ಸೂಪರ್‌ಸ್ಟಾರ್ ಶಿವ ರಾಜ್‌ಕುಮಾರ್ ಸೇರಿದಂತೆ, ಪ್ರಿಯಾಂಕಾ ಅರುಲ್ ಮೋಹನ್, ಸಂದೀಪ್ ಕಿಶನ್, ಜಾನ್ ಕೊಕ್ಕೆನ್ ಮುಂತಾದವರು ನಟಿಸಿದ್ದಾರೆ.

ಇದನ್ನೂ ಓದಿ | ನವಶಕ್ತಿ ಸಮಾವೇಶ | ವೇದಿಕೆಗೆ ಮಗ ಧನುಷ್‌ನನ್ನು ಕರೆತಂದು, ಜೆ.ಪಿ ನಡ್ಡಾಗೆ ಪರಿಚಯಿಸಿದ ಶ್ರೀರಾಮುಲು

Exit mobile version