Site icon Vistara News

ಮಗುವಿನ ಫೇಸ್‌ ರಿವೀಲ್‌ ಮಾಡಿದ ಪ್ರಣೀತಾ

ಪ್ರಣೀತಾ ಹೆರಿಗೆ

ಬೆಂಗಳೂರು : ಖ್ಯಾತ ನಟಿ ಪ್ರಣೀತಾ ಸುಭಾಷ್‌ ಅವರು ಅಭಿಮಾನಿಗಳಿಗೆ ಗುಡ್‌ ನ್ಯೂಸ್‌ ನೀಡಿದ್ದಾರೆ. ಹಲವು ವರ್ಷಗಳಿಂದ ಚಿತ್ರರಂಗದಲ್ಲಿ ತೊಡಗಿಸಿಕೊಂಡಿರುವ ಪ್ರಣೀತಾ, ಇತ್ತೀಚೆಗೆ ಪ್ರೆಗ್ನೆಂಟ್‌ ಆಗಿರುವ ವಿಚಾರ ಹಂಚಿಕೊಂಡಿದ್ದರು. ಈಗ ಅವರ ಮನೆಯಲ್ಲಿ ಹೆಣ್ಣು ಮಗುವಿನ ಆಗಮನ ಆಗಿದೆ.

ಸೋಶಿಯಲ್‌ ಮೀಡಿಯಾದ ಮೂಲಕ ಸಿಹಿ ಸುದ್ದಿಯನ್ನು ಹಂಚಿಕೊಂಡಿದ್ದಾರೆ ಪ್ರಣೀತಾ. ತಾಯಿ ಮಗಳು ಇಬ್ಬರಿಗೂ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿವೆ.

ಇದೀಗ ಪ್ರಣೀತಾ ಹೆರಿಗೆ ನಂತರ ಮಗುವಿನ ವಿಡಿಯೋ ಶೇರ್‌ ಮಾಡಿದ್ದಾರೆ. ತಾಯ್ತನದ ಹಂತದ ಗಳಿಗೆಯ ವಿಡಿಯೋ ಝಲಕ್‌ ತಮ್ಮ ಇನ್ಸ್ಟಾ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಮಗುವಿನ ಚಟುವಟಿಕೆ, ಅಲ್ಟ್ರಾ ಸೌಂಡ್‌ ಟೆಸ್ಟ್‌, ಪತಿ ನಿತಿನ್‌ ರಾಜು ಬೇಬಿ ಬಂಪ್‌ಗೆ ಸಿಹಿ ಮುತ್ತು ಕೊಡುವ ಪ್ರತಿ ಕ್ಷಣದ ಶಾಟ್‌ನ್ನು ಕ್ಯಾಮೆರದಲ್ಲಿ ಸೆರೆ ಹಿಡಿದು ಹಂಚಿಕೊಂಡಿದ್ದಾರೆ.

ಇದನ್ನೂ ಓದಿ | ಪ್ರಣೀತಾ ಸುಭಾಷ್‌ಗೆ ಹೆಣ್ಣು ಮಗು ಜನನ; ಫೋಟೋಗಳನ್ನು ಶೇರ್‌ ಮಾಡಿದ ನಟಿ

ಆಸ್ಪತ್ರೆಯಲ್ಲಿ ಮಗುವಿಗೆ ಜನ್ಮ‌ ನೀಡಿರುವ ಗಳಿಗೆಯ ಸನ್ನಿವೇಶ ಸೆರೆಹಿಡಿದಿರುವ ವಿಡಿಯೋ ನೋಡುಗರ ಮುಖದಲ್ಲಿ ಸಂತಸ ತಂದಿದೆ.

2021ರ ಮೇ ತಿಂಗಳಿನಲ್ಲಿ ಉದ್ಯಮಿ ನಿತಿನ್‌ ರಾಜು ಜತೆ ಪ್ರಣೀತಾ ಹಸೆಮಣೆ ಏರಿದ್ದರು. ಲವ್‌ ಕಮ್‌ ಅರೇಂಜ್‌ ಮ್ಯಾರೇಜ್‌ ಆಗಿರುವ ಪ್ರಣೀತಾ ಸುಭಾಷ್‌ ಅವರು ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ.

ಕನ್ನಡದ ಪೊರ್ಕಿ ಸಿನಿಮಾ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟರು. ಕನ್ನಡ ಮಾತ್ರವಲ್ಲದೇ ಹಿಂದಿ, ತೆಲುಗು, ತಮಿಳಿನಲ್ಲೂ ನಟಿಸಿದ್ದಾರೆ.

ಇದನ್ನೂ ಓದಿ | ತಿಮ್ಮಪ್ಪನ ದರ್ಶನ ಪಡೆದ ಬಾಲಿವುಡ್‌ ನಟಿ ದೀಪಿಕಾ ಪಡುಕೋಣೆ ಮತ್ತು ಕುಟುಂಬ

Exit mobile version