Site icon Vistara News

Anushka Shetty: ಅನುಷ್ಕಾ ಶೆಟ್ಟಿ ಹೆಸರಿನಲ್ಲಿ ನಿರ್ಮಾಪಕರಿಂದ 51 ಲಕ್ಷ ರೂ. ಪೀಕಿದ ಆಸಾಮಿ!

Anushka Shetty

ಬೆಂಗಳೂರು: ನಟಿ ಅನುಷ್ಕಾ ಶೆಟ್ಟಿ (Anushka Shetty) ಹೆಸರಿನಲ್ಲಿ ವಿಶ್ವಕರ್ಮ ಕ್ರಿಯೇಷನ್ಸ್ ಮುಖ್ಯಸ್ಥ ಹಾಗೂ ನಿರ್ಮಾಪಕ ಲಕ್ಷ್ಮಣ್ ಚಾರಿ ಅವರಿಗೆ ಯಲಾ ರೆಡ್ಡಿ ಎಂಬಾತ 51 ಲಕ್ಷ ರೂ. ಮೋಸ ಮಾಡಿರುವ ಪ್ರಕರಣ ವರದಿಯಾಗಿದೆ. ಅನುಷ್ಕಾ ಶೆಟ್ಟಿ ಜತೆಗೆ ಸಂಗೀತ ನಿರ್ದೇಶಕ ಮಣಿ ಶರ್ಮಾ ಅವರನ್ನೂ  ಭೇಟಿ ಮಾಡಿಸುತ್ತೇನೆ ಎಂದು ವ್ಯಕ್ತಿ ಹೇಳಿಕೊಂಡು ಮೋಸ ಮಾಡಿದ್ದಾನೆ.

ಯಲ್ಲಾ ರೆಡ್ಡಿ ತಾನು ಸಿನಿಮಾ ಮ್ಯಾನೇಜರ್‌ ಎಂದು ಲಕ್ಷ್ಮಣ್​ ಅವರಿಗೆ ಪರಿಚಯಿಸಿಕೊಂಡಿದ್ದಾನೆ. ನನಗೆ ತೆಲುಗಿನ ಎಲ್ಲಾ ಸ್ಟಾರ್‌ಗಳೂ ಬಹಳ ಆತ್ಮೀಯರು ಎಂದು ಬಣ್ಣ ಬಣ್ಣದ ಮಾತುಗಳನ್ನಾಡಿ ಲಕ್ಷ್ಮಣ್​ ಅವರನ್ನು ಮರುಳು ಮಾಡಿದ್ದಾನೆ. ನಂತರ ನಿಮಗೆ ಅನುಷ್ಕಾ ಶೆಟ್ಟಿ ಅವರ ಕಾಲ್‌ಶೀಟ್‌ ಕೊಡಿಸುತ್ತೇನೆ ಎಂದು ಸುಳ್ಳು ಹೇಳಿ ನಂಬಿಸಿದ್ದಾನೆ. ಲಕ್ಷ್ಮಣ್‌ ಅವರು ತನ್ನ ಬಲೆಗೆ ಬೀಳುತ್ತಿರುವುದು ತಿಳಿಯುತ್ತಲೇ ಅವರಿಂದ 51 ಲಕ್ಷ ರೂ. ಪೀಕಿದ್ದಾನೆ. ಲಕ್ಷ್ಮಣ್​ ಅವರೂ ರೆಡ್ಡಿ ಕೇಳಿದಷ್ಟು ಹಣ ನೀಡಿದ್ದಾರೆ.

ಇದನ್ನೂ ಓದಿ: Anushka Shetty | ಪುತ್ತೂರಲ್ಲಿ ಭೂತಕೋಲ ವೀಕ್ಷಿಸಿದ ನಟಿ ಅನುಷ್ಕಾ ಶೆಟ್ಟಿ; ವಿಡಿಯೊ ವೈರಲ್

Anushka Shetty

ಆರಂಭದಲ್ಲಿ ಅನುಷ್ಕಾ ಶೆಟ್ಟಿ ಅವರನ್ನು ಭೇಟಿ ಮಾಡಿಸುವುದಾಗಿ 26 ಲಕ್ಷ ರೂ. ಹಣವನ್ನು ಲಕ್ಷ್ಮಣ್ ಚಾರಿ ಅವರಿಂದ ಪಡೆದಿದ್ದಾನೆ. ನಂತರ ನೆಪಗಳನ್ನು ಹೇಳಿ ಬಣ್ಣ ಬಣ್ಣದ ಮಾತುಗಳಿಂದ ಪುನಃ 26 ಲಕ್ಷ ರೂ. ಹಣ ಪಡೆದಿದ್ದಾನೆ.ಎರಡೂ ಬಾರು ಹಣ ಕೊಟ್ಟರು ನಟಿಯನ್ನು ಭೇಟಿ ಮಾಡಿದ ಕಾರಣ ಲಕ್ಷ್ಮಣ್‌ ಅವರಿಗೆ ಸಂಶಯ ಬಂದಿದೆ. ಕೊನೆಗೆ ಯಲ್ಲಾ ರೆಡ್ಡಿ ಕೈಗೆ ಸಿಗದೇ ತಪ್ಪಿಸಿಕೊಳ್ಳಲು ಶುರು ಮಾಡಿದ ನಂತರ ತಾವು ಸಂಪೂರ್ಣ ಮೋಸ ಹೋಗಿರುವುದು ತಿಳಿದು ಲಕ್ಷ್ಮಣ್‌ ಚಾರಿ ಅವರು ತೆಲುಗು ಫಿಲ್ಮ್‌ ಚೇಂಬರ್​ಗೆ ದೂರು ದಾಖಲು ಮಾಡಿದ್ದಾರೆ. ಇದೀಗ ಯಲಾ ರೆಡ್ಡಿ ದೂರು ದಾಖಲಿಸಿದ ನಂತರ ಹಣವನ್ನು ವಾಪಸ್‌ ನೀಡುವುದಾಗಿ ಹೇಳಿದ್ದಾನೆ. ಆದರೂ ಹಣ ವಾಪಸ್​ ಕೇಳಿದರೆ ಮನೆಯಲ್ಲಿರುವ ಹೆಂಗಸರಿಂದ ಕೇಸ್ ಹಾಕಿಸುವುದಾಗಿ ಹೆದರಿಸಿರುವುದಾಗಿ ಲಕ್ಷ್ಮಣ್​ ತಿಳಿಸಿದ್ದಾರೆ. ಲಕ್ಷ್ಮಣ್​ ಅವರು ಬಂಜಾರ ಹಿಲ್ಸ್ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. 

ಇದನ್ನೂ ಓದಿ: Anushka Shetty | ಅನುಷ್ಕಾ ಶೆಟ್ಟಿ ಹೊಸ ಚಿತ್ರದ ಲುಕ್‌ ರಿವೀಲ್‌!

ಸದ್ಯ ಕೃತಿ ಜತೆ ಪ್ರಭಾಸ್ ಹೆಸರು ಥಳಕು ಹಾಕಿಕೊಳ್ಳುವ ಮೊದಲು ಅನುಷ್ಕಾ ಶೆಟ್ಟಿ ಹೆಸರು ಕೇಳಿ ಬರುತ್ತಿದೆ. ಸೋಷಿಯಲ್‌ ಮೀಡಿಯಾದಲ್ಲಿ ಪ್ರಭಾಸ್‌ ಹಾಗೂ ಅನುಷ್ಕಾ ಕುರಿತು ಸುದ್ದಿಗಳು ಹರಿದಾಡುತ್ತಿವೆ.

Exit mobile version