Site icon Vistara News

Puneeth Rajkumar : ಅಪ್ಪು ನಟನೆ, ನಗು, ಮುಗ್ಧತೆ ಎಂದೆಂದಿಗೂ ಅಮರ

appus-acting-laughter-and-innocence-are-amazing

#image_title

ಪೌದನ್​ ಜೈನ್​ ಬೆಂಗಳೂರು

ಕನ್ನಡ ಸಿನೆಮಾ ಕ್ಷೇತ್ರವನ್ನು ಆಳಿದ ರಾಜ್​ಕುಮಾರ್ ಅವರನ್ನು ನೆಚ್ಚದವರೇ ಇಲ್ಲ. ಅವರ ಕುಟುಂಬದ ಕುಡಿಯೇ ಪುನೀತ್ ರಾಜ್​ಕುಮಾರ್​. ಕನ್ನಡಿಗರ ಯೂತ್​ ಐಕಾನ್​. ನೋಡೋಕೆ ಮಾತ್ರ ಡೊಡ್ಮನೆ ಹುಡ್ಗ, ಆದ್ರೆ ಅವರ ನಡವಳಿಕೆ, ಮನಸ್ಸು ಎಲ್ಲರಿಗೂ ಸಲ್ಲುವಂಥದ್ದು. ಅದಕ್ಕಾಗಿಯೇ ಕರ್ನಾಟಕದ ಜನತೆ ಇವ್ರನ್ನು ಪ್ರೀತಿಯಿಂದ ಅಪ್ಪು ಎಂದು ಕರೆಯುತ್ತಿದ್ದರು. ಚಿಕ್ಕ ವಯಸ್ಸಲ್ಲೇ ನಟನೆಯ ಮೂಲಕ ಇಡೀ ರಾಜ್ಯದಲ್ಲೇ ಸದ್ದು ಮಾಡಿದ್ದು, ಇದರ ಫಲವಾಗಿ ಅಪ್ಪು ಅವ್ರಿಗೆ ಕರ್ನಾಟಕ ರತ್ನ ಪ್ರಶಸ್ತಿ ಲಭಿಸಿದೆ.

ಸಾಮಾನ್ಯವಾಗಿ ಒಬ್ಬ ವ್ಯಕ್ತಿ ಬಳಿ ಅಥವಾ ಒಬ್ಬ ತಾಯಿ ಬಳಿ ನೀನು ಅಥವಾ ನಿನ್ನ ಮಗ ಏನ್​​ ಆಗ್ಬೇಕು ಅಂತ ಕೇಳಿದ್ರೆ ಹೇಳೋದು ಒಂದೆ ಮಾತು. ಅದು ಅಪ್ಪು ಸರ್​​ ತರ ಅಗ್ಬೇಕು ಅಂಥ. ಯಾಕ್​​​ ಅಂದ್ರೆ ಕಲೆ ಅನ್ನೋದು ಹೇಳಿ ಕೇಳಿ ಬರಲ್ಲ. ಅಂಥದ್ದರಲ್ಲಿ ಕಲೆಯಿಂದಲೇ ಇಡೀ ರಾಜ್ಯದಲ್ಲಿ ಅಪ್ಪುವನ್ನು ನೋಡಿದ್ರೆ ಅಥವಾ ಅವ್ರ ಫೋಟೋಗೆ ಇಂದಿಗೂ ಕೈ ಮುಗಿಯುತ್ತಾರೆಂದರೆ ಆತ ದೊಡ್ಡದಾಗಿ ಸಾಧನೆ ಮಾಡಿರಬೇಕು. ಅವರ ಆಕ್ಟಿಂಗ್​​​, ಡ್ಯಾನ್ಸ್​​​​, ಸಾಂಗ್​, ಹೀಗೆ ಹಲವಾರು ಕ್ಷೇತ್ರದಲ್ಲಿ ತನ್ನ ಚಾಪನ್ನು ಮೂಡಿಸಿದ್ದರು.

ಇಂದಿನ ಕಾಲದಲ್ಲಿ ಯಾವುದೇ ವ್ಯಕ್ತಿ ಒಂದು ಚಿಕ್ಕ ಸಹಾಯ ಮಾಡಲು ಕಡಿಮೆ ಅಂದ್ರುನೂ ಸಾವಿರ ಬಾರಿ ಯೋಚನೆ ಮಾಡುತ್ತಾನೆ. ಆದ್ರೆ ಅಪ್ಪು ಮಾತ್ರ ಒಮ್ಮೆ ಮಾಡ್ಬೇಕು ಅನ್ನಿಸಿದ್ರೆ ಎಷ್ಟೇ ಕಷ್ಟವಾದ್ರು, ಆ ಕೆಲಸವನ್ನು ಮಾಡುತ್ತಿದ್ದರು. ಬೆಳೆಯುವ ಸಿರಿ ಮೊಳಕೆಯಲ್ಲಿ ಅನ್ನೋ ಮಾತಿದೆ. ಅಂತೆಯೇ ಅಪ್ಪು ಕೂಡ ಚಿಕ್ಕ ವಯಸ್ಸಿನಿಂದಲೇ ದಾನ ಧರ್ಮವನ್ನು ರೂಢಿಸಿಕೊಂಡಿದ್ದರು. ಅಂತೆಯೇ ಸಮಾಜದಲ್ಲಿ ಬೆಳೆದ್ರು ಕೂಡ.

ಜನರಿಗಾಗಿ ಬದುಕಿದ್ದ ಅಪ್ಪು

ಸಾಮಾನ್ಯವಾಗಿ ಅಪ್ಪು ಜನರಿಗೆ ಸಖತ್​​ ಇಷ್ಟ ಅನ್ನೊದಲ್ಲಕ್ಕೆ ಪ್ರೂಫ್​ ​ ಬೇಕಾಗಿಲ್ಲ. ಯಾಕೆ​​ ಅಂದ್ರೆ ತನ್ನ ಸಿಕ್ಕ ಜೀವನದ ಪ್ರತಿಯೊಂದು ಕ್ಷಣವನ್ನು ಜನರಿಗಾಗಿ ಬದುಕುತ್ತಿದ್ದರು ಅವರು. ನಟನೆಯ ಮೂಲಕ ರಾಜ್ಯಕ್ಕೆ ಪರಿಚಯವಾದ ಅಪ್ಪು, ನಂತರದ ದಿನಗಳಲ್ಲಿ ಸೇವೆಯ ಮೂಲಕ ಜನರಿಗೆ ಹತ್ತಿರವಾದ್ರು. ಅಪ್ಪು ಬಾಲ ನಟನಾಗಿ, ನಾಯಕನಾಗಿ ಸಾಕಷ್ಟು ಚಿತ್ರಗಳನ್ನು ಕನ್ನಡ ಚಿತ್ರರಂಗಕ್ಕೆ ನೀಡಿದ್ದಾರೆ. ಆದ್ರೆ ಅದರ ಹೊರತಾಗಿಯೂ ಅಪ್ಪು ಕರ್ನಾಟಕಕ್ಕೆ ಸಾಕಷ್ಟು ಕೊಡುಗೆಯನ್ನು ನೀಡಿದ್ದಾರೆ.

ಚಿಕ್ಕ ಮಕ್ಕಳಿಂದ ಹಿಡಿದು ಹಿರಿಯರವರೆಗೂಅಪ್ಪು ಅಂದ್ರೆ ಜೀವ. ಹಳ್ಳಿಯ ಕಡೆ ಒಂದು ಮಾತಿದೆ, ಬದುಕಿದ್ದಾಗ ಆತ ಏನು ಮಾಡಿದ್ದಾನೆ ಅಂತ ಗೊತ್ತಾಗಲ್ಲ, ಆತ ನಿಧನ ಹೊಂದಿದಾಗ ಮಾತ್ರ ಆತನ VALUE ಗೊತ್ತಾಗೋದು ಅಂತ. ಇದೆ ಕತೆ ಅಪ್ಪು ಜೀವನದಲ್ಲೂ ಆಗಿದೆ.ತಾನು ಬದುಕಿದ್ದಾಗ ಕೇವಲ ಜನರಿಗಾಗಿ ದುಡಿಯುತ್ತಿದ್ದರು. ತಾನು ಮಾಡುವ ಕೆಲಸದ ಬಗ್ಗೆ ಕಿಂಚಿತ್ತು ಮಾಹಿತಿಯನ್ನು ಕೊಟ್ಟಿರದ ಅಪ್ಪು, ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದರು. ತನ್ನ ನಿಧನದ ನಂತರ ತನ್ನ ಕಣ್ಣನ್ನು ದಾನವಾಗಿ ನೀಡಿದ್ದು, ಎಲ್ಲರಿಗೂ ಮಾದರಿಯಾಗಿ ಕಾಣಿಸಿಕೊಂಡಿದ್ದಾರೆ. ಅಪ್ಪುವಿನ ಸಾರ್ಥಕತೆಯ ಫಲವಾಗಿ ಇಂದು ಲಕ್ಷಾಂತರ ಅಭಿಮಾನಿಗಳು ತಮ್ಮ ಕಣ್ಣನ್ನು ದಾನವಾಗಿ ನೀಡಲು ಸಹಿ ಹಾಕಿಕೊಂಡಿದ್ದಾರೆ.

ಇಷ್ಟೇ ಅಲ್ಲರೀ.. ತನ್ನ ಇಡೀ ಜೀವನದಲ್ಲಿ ಒಂದೇ ಒಂದು ಕಾಂಟ್ರವರ್ಸಿ ಮಾಡಿಕೊಳ್ಳದೇ ಇದ್ದಿದ್ದಕ್ಕೆ, ಅವ್ರ ಸ್ವಭಾವಕ್ಕೆ, ನಡತೆಗೆ ಅಪ್ಪುವನ್ನು ‘ದೇವ ಮಾನವ’ ಅಂತನೂ ಕರೆಯುತ್ತಿದ್ದರು. ಅಷ್ಟೇ ಅಲ್ಲದೆ, ಕನ್ನಡ ಚಿತ್ರಗಳಿಗೆ ಹಾಡುವ ಅವಕಾಶ ಸಿಕ್ಕಿದರೆ ಅದರಿಂದ ಬರುವ ಸಂಭಾವನೆಯಲ್ಲಿ ಸರ್ಕಾರಿ ಶಾಲೆ ಹೀಗೆ ದಾನವಾಗಿ ಅಪ್ಪು ನೀಡುತ್ತಿದ್ದರು. ಅಪ್ಪು ಎಷ್ಟರ ಮಟ್ಟಿಗೆ ಮನೆಮಾತಾಗಿದ್ದರು ಅಂದ್ರೆ. ಅವರು ನಿಧನರಾದ ಅವರ ಪೋಟೋವನ್ನು ದೇವರ ಸ್ಥಾನದಲ್ಲಿ ಇಟ್ಟು ಪೂಜಿಸುತ್ತಿದ್ದಾರೆ. ವಾಹನಗಳಲ್ಲಿ ಅಪ್ಪುವಿನ ಫೋಟೋ ಅಂಟಿಸಿರೋದನ್ನು ಕಾಣಬಹುದು.

ಅಪ್ಪು ಮಾಡುತ್ತಿದ್ದ ಚಿತ್ರಗಳು ಎಲ್ಲವೂ ಕೂಡ ಪ್ಯಾಮಿಲಿ ಓರಿಯೆಂಟೆಡ್​​​ ಮೂವಿಗಳು. ಈ ಕಾರಣದಿಂದ ಅವ್ರನ್ನು ಜಂಟಲ್​​ಮ್ಯಾನ್​​ ಅಂತನೂ ಕರೆಯುತ್ತಿದ್ದರು. ಒಟ್ಟಾರೆಯಾಗಿ ಅಪ್ಪು ಅಭಿಮಾನಿಗಳಿಗೆ ತಂದೆಯಾಗಿ, ಅಣ್ಣನಾಗಿ, ತಮ್ಮನಾಗಿ ನೊಂದವರ ಕಣ್ಣಿರು ಒರೆಸೋ ವ್ಯಕ್ತಿಯಾಗಿ, ಕಷ್ಟದಲ್ಲಿದ್ದವರಿಗೆ ಬೆನ್ನೆಲುಬಾಗಿ, ದುಃಖಕ್ಕೆ ಸ್ಪಂದಿಸುವ ಹೃದಯವಾಗಿ, ಹೀಗೆ ನಾನಾ ರೀತಿಯಲ್ಲಿ ಅಭಿಮಾನಿಗಳಿಗೆ ಹತ್ತಿರವಾಗಿರುವ ಆಲ್​​​ ಇನ್​​ ಒನ್​ ಕ್ಯಾರೆಕ್ಟರ್​​​​ ಅಂದ್ರೆ ಅದು ಅಪ್ಪು ಮಾತ್ರ. ಅಪ್ಪು ಕಾಲವಾಗಿ ಅದೆಷ್ಟೋ ದಿನಗಳು ಉರುಳಿರಬಹುದು ಆದ್ರೆ ಅವರ ನಗು, ನಟನೆ, ನೆನಪು ಇನ್ನೂ ಕಣ್ಣಮುಂದೆ ಹಾಗೇ ಇವೆ.

ಅಪ್ಪು ನಮ್ಮನ್ನು ಬಿಟ್ಟು ಎಲ್ಲೂ ಹೋಗಿಲ್ಲ ನಮ್ಮಲ್ಲೇ ಒಬ್ಬನಾಗಿ ನಮ್ಮೋಂದಿಗೆ ಇದ್ದಾರೆ. ಯಾಕೆ ಅಂದ್ರೆ ಆತನ ಪ್ರಾಣ ನಮ್ಮೊಂದಿಗೆ ಇಲ್ಲದೆ ಇರಬಹುದು, ಆದ್ರೆ ಆತ ಬಿಟ್ಟು ಹೋದ ಆದರ್ಶಗಳು ನಮ್ಮೊಂದಿಗೆ ಇವೆ… ಅಪ್ಪು ಅಜರಾಮರ.

Exit mobile version