ಸಿನಿಮಾ
Puneeth Rajkumar : ಅಪ್ಪು ನಟನೆ, ನಗು, ಮುಗ್ಧತೆ ಎಂದೆಂದಿಗೂ ಅಮರ
ಮಕ್ಕಳ ಬಳಿಕ ಯಾರ ರೀತಿ ಅಗುತ್ತಿಯಾ ಎಂದು ಕೇಳಿದರೆ ಪುನೀತ್ ರಾಜ್ಕುಮಾರ್ (Puneeth Rajkumar) ರೀತಿ ಆಗುತ್ತೇನೆ ಎಂದು ಹೇಳುತ್ತಾರೆ.
ಪೌದನ್ ಜೈನ್ ಬೆಂಗಳೂರು
ಕನ್ನಡ ಸಿನೆಮಾ ಕ್ಷೇತ್ರವನ್ನು ಆಳಿದ ರಾಜ್ಕುಮಾರ್ ಅವರನ್ನು ನೆಚ್ಚದವರೇ ಇಲ್ಲ. ಅವರ ಕುಟುಂಬದ ಕುಡಿಯೇ ಪುನೀತ್ ರಾಜ್ಕುಮಾರ್. ಕನ್ನಡಿಗರ ಯೂತ್ ಐಕಾನ್. ನೋಡೋಕೆ ಮಾತ್ರ ಡೊಡ್ಮನೆ ಹುಡ್ಗ, ಆದ್ರೆ ಅವರ ನಡವಳಿಕೆ, ಮನಸ್ಸು ಎಲ್ಲರಿಗೂ ಸಲ್ಲುವಂಥದ್ದು. ಅದಕ್ಕಾಗಿಯೇ ಕರ್ನಾಟಕದ ಜನತೆ ಇವ್ರನ್ನು ಪ್ರೀತಿಯಿಂದ ಅಪ್ಪು ಎಂದು ಕರೆಯುತ್ತಿದ್ದರು. ಚಿಕ್ಕ ವಯಸ್ಸಲ್ಲೇ ನಟನೆಯ ಮೂಲಕ ಇಡೀ ರಾಜ್ಯದಲ್ಲೇ ಸದ್ದು ಮಾಡಿದ್ದು, ಇದರ ಫಲವಾಗಿ ಅಪ್ಪು ಅವ್ರಿಗೆ ಕರ್ನಾಟಕ ರತ್ನ ಪ್ರಶಸ್ತಿ ಲಭಿಸಿದೆ.
ಸಾಮಾನ್ಯವಾಗಿ ಒಬ್ಬ ವ್ಯಕ್ತಿ ಬಳಿ ಅಥವಾ ಒಬ್ಬ ತಾಯಿ ಬಳಿ ನೀನು ಅಥವಾ ನಿನ್ನ ಮಗ ಏನ್ ಆಗ್ಬೇಕು ಅಂತ ಕೇಳಿದ್ರೆ ಹೇಳೋದು ಒಂದೆ ಮಾತು. ಅದು ಅಪ್ಪು ಸರ್ ತರ ಅಗ್ಬೇಕು ಅಂಥ. ಯಾಕ್ ಅಂದ್ರೆ ಕಲೆ ಅನ್ನೋದು ಹೇಳಿ ಕೇಳಿ ಬರಲ್ಲ. ಅಂಥದ್ದರಲ್ಲಿ ಕಲೆಯಿಂದಲೇ ಇಡೀ ರಾಜ್ಯದಲ್ಲಿ ಅಪ್ಪುವನ್ನು ನೋಡಿದ್ರೆ ಅಥವಾ ಅವ್ರ ಫೋಟೋಗೆ ಇಂದಿಗೂ ಕೈ ಮುಗಿಯುತ್ತಾರೆಂದರೆ ಆತ ದೊಡ್ಡದಾಗಿ ಸಾಧನೆ ಮಾಡಿರಬೇಕು. ಅವರ ಆಕ್ಟಿಂಗ್, ಡ್ಯಾನ್ಸ್, ಸಾಂಗ್, ಹೀಗೆ ಹಲವಾರು ಕ್ಷೇತ್ರದಲ್ಲಿ ತನ್ನ ಚಾಪನ್ನು ಮೂಡಿಸಿದ್ದರು.
ಇಂದಿನ ಕಾಲದಲ್ಲಿ ಯಾವುದೇ ವ್ಯಕ್ತಿ ಒಂದು ಚಿಕ್ಕ ಸಹಾಯ ಮಾಡಲು ಕಡಿಮೆ ಅಂದ್ರುನೂ ಸಾವಿರ ಬಾರಿ ಯೋಚನೆ ಮಾಡುತ್ತಾನೆ. ಆದ್ರೆ ಅಪ್ಪು ಮಾತ್ರ ಒಮ್ಮೆ ಮಾಡ್ಬೇಕು ಅನ್ನಿಸಿದ್ರೆ ಎಷ್ಟೇ ಕಷ್ಟವಾದ್ರು, ಆ ಕೆಲಸವನ್ನು ಮಾಡುತ್ತಿದ್ದರು. ಬೆಳೆಯುವ ಸಿರಿ ಮೊಳಕೆಯಲ್ಲಿ ಅನ್ನೋ ಮಾತಿದೆ. ಅಂತೆಯೇ ಅಪ್ಪು ಕೂಡ ಚಿಕ್ಕ ವಯಸ್ಸಿನಿಂದಲೇ ದಾನ ಧರ್ಮವನ್ನು ರೂಢಿಸಿಕೊಂಡಿದ್ದರು. ಅಂತೆಯೇ ಸಮಾಜದಲ್ಲಿ ಬೆಳೆದ್ರು ಕೂಡ.
ಜನರಿಗಾಗಿ ಬದುಕಿದ್ದ ಅಪ್ಪು
ಸಾಮಾನ್ಯವಾಗಿ ಅಪ್ಪು ಜನರಿಗೆ ಸಖತ್ ಇಷ್ಟ ಅನ್ನೊದಲ್ಲಕ್ಕೆ ಪ್ರೂಫ್ ಬೇಕಾಗಿಲ್ಲ. ಯಾಕೆ ಅಂದ್ರೆ ತನ್ನ ಸಿಕ್ಕ ಜೀವನದ ಪ್ರತಿಯೊಂದು ಕ್ಷಣವನ್ನು ಜನರಿಗಾಗಿ ಬದುಕುತ್ತಿದ್ದರು ಅವರು. ನಟನೆಯ ಮೂಲಕ ರಾಜ್ಯಕ್ಕೆ ಪರಿಚಯವಾದ ಅಪ್ಪು, ನಂತರದ ದಿನಗಳಲ್ಲಿ ಸೇವೆಯ ಮೂಲಕ ಜನರಿಗೆ ಹತ್ತಿರವಾದ್ರು. ಅಪ್ಪು ಬಾಲ ನಟನಾಗಿ, ನಾಯಕನಾಗಿ ಸಾಕಷ್ಟು ಚಿತ್ರಗಳನ್ನು ಕನ್ನಡ ಚಿತ್ರರಂಗಕ್ಕೆ ನೀಡಿದ್ದಾರೆ. ಆದ್ರೆ ಅದರ ಹೊರತಾಗಿಯೂ ಅಪ್ಪು ಕರ್ನಾಟಕಕ್ಕೆ ಸಾಕಷ್ಟು ಕೊಡುಗೆಯನ್ನು ನೀಡಿದ್ದಾರೆ.
ಚಿಕ್ಕ ಮಕ್ಕಳಿಂದ ಹಿಡಿದು ಹಿರಿಯರವರೆಗೂಅಪ್ಪು ಅಂದ್ರೆ ಜೀವ. ಹಳ್ಳಿಯ ಕಡೆ ಒಂದು ಮಾತಿದೆ, ಬದುಕಿದ್ದಾಗ ಆತ ಏನು ಮಾಡಿದ್ದಾನೆ ಅಂತ ಗೊತ್ತಾಗಲ್ಲ, ಆತ ನಿಧನ ಹೊಂದಿದಾಗ ಮಾತ್ರ ಆತನ VALUE ಗೊತ್ತಾಗೋದು ಅಂತ. ಇದೆ ಕತೆ ಅಪ್ಪು ಜೀವನದಲ್ಲೂ ಆಗಿದೆ.ತಾನು ಬದುಕಿದ್ದಾಗ ಕೇವಲ ಜನರಿಗಾಗಿ ದುಡಿಯುತ್ತಿದ್ದರು. ತಾನು ಮಾಡುವ ಕೆಲಸದ ಬಗ್ಗೆ ಕಿಂಚಿತ್ತು ಮಾಹಿತಿಯನ್ನು ಕೊಟ್ಟಿರದ ಅಪ್ಪು, ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದರು. ತನ್ನ ನಿಧನದ ನಂತರ ತನ್ನ ಕಣ್ಣನ್ನು ದಾನವಾಗಿ ನೀಡಿದ್ದು, ಎಲ್ಲರಿಗೂ ಮಾದರಿಯಾಗಿ ಕಾಣಿಸಿಕೊಂಡಿದ್ದಾರೆ. ಅಪ್ಪುವಿನ ಸಾರ್ಥಕತೆಯ ಫಲವಾಗಿ ಇಂದು ಲಕ್ಷಾಂತರ ಅಭಿಮಾನಿಗಳು ತಮ್ಮ ಕಣ್ಣನ್ನು ದಾನವಾಗಿ ನೀಡಲು ಸಹಿ ಹಾಕಿಕೊಂಡಿದ್ದಾರೆ.
ಇಷ್ಟೇ ಅಲ್ಲರೀ.. ತನ್ನ ಇಡೀ ಜೀವನದಲ್ಲಿ ಒಂದೇ ಒಂದು ಕಾಂಟ್ರವರ್ಸಿ ಮಾಡಿಕೊಳ್ಳದೇ ಇದ್ದಿದ್ದಕ್ಕೆ, ಅವ್ರ ಸ್ವಭಾವಕ್ಕೆ, ನಡತೆಗೆ ಅಪ್ಪುವನ್ನು ‘ದೇವ ಮಾನವ’ ಅಂತನೂ ಕರೆಯುತ್ತಿದ್ದರು. ಅಷ್ಟೇ ಅಲ್ಲದೆ, ಕನ್ನಡ ಚಿತ್ರಗಳಿಗೆ ಹಾಡುವ ಅವಕಾಶ ಸಿಕ್ಕಿದರೆ ಅದರಿಂದ ಬರುವ ಸಂಭಾವನೆಯಲ್ಲಿ ಸರ್ಕಾರಿ ಶಾಲೆ ಹೀಗೆ ದಾನವಾಗಿ ಅಪ್ಪು ನೀಡುತ್ತಿದ್ದರು. ಅಪ್ಪು ಎಷ್ಟರ ಮಟ್ಟಿಗೆ ಮನೆಮಾತಾಗಿದ್ದರು ಅಂದ್ರೆ. ಅವರು ನಿಧನರಾದ ಅವರ ಪೋಟೋವನ್ನು ದೇವರ ಸ್ಥಾನದಲ್ಲಿ ಇಟ್ಟು ಪೂಜಿಸುತ್ತಿದ್ದಾರೆ. ವಾಹನಗಳಲ್ಲಿ ಅಪ್ಪುವಿನ ಫೋಟೋ ಅಂಟಿಸಿರೋದನ್ನು ಕಾಣಬಹುದು.
ಅಪ್ಪು ಮಾಡುತ್ತಿದ್ದ ಚಿತ್ರಗಳು ಎಲ್ಲವೂ ಕೂಡ ಪ್ಯಾಮಿಲಿ ಓರಿಯೆಂಟೆಡ್ ಮೂವಿಗಳು. ಈ ಕಾರಣದಿಂದ ಅವ್ರನ್ನು ಜಂಟಲ್ಮ್ಯಾನ್ ಅಂತನೂ ಕರೆಯುತ್ತಿದ್ದರು. ಒಟ್ಟಾರೆಯಾಗಿ ಅಪ್ಪು ಅಭಿಮಾನಿಗಳಿಗೆ ತಂದೆಯಾಗಿ, ಅಣ್ಣನಾಗಿ, ತಮ್ಮನಾಗಿ ನೊಂದವರ ಕಣ್ಣಿರು ಒರೆಸೋ ವ್ಯಕ್ತಿಯಾಗಿ, ಕಷ್ಟದಲ್ಲಿದ್ದವರಿಗೆ ಬೆನ್ನೆಲುಬಾಗಿ, ದುಃಖಕ್ಕೆ ಸ್ಪಂದಿಸುವ ಹೃದಯವಾಗಿ, ಹೀಗೆ ನಾನಾ ರೀತಿಯಲ್ಲಿ ಅಭಿಮಾನಿಗಳಿಗೆ ಹತ್ತಿರವಾಗಿರುವ ಆಲ್ ಇನ್ ಒನ್ ಕ್ಯಾರೆಕ್ಟರ್ ಅಂದ್ರೆ ಅದು ಅಪ್ಪು ಮಾತ್ರ. ಅಪ್ಪು ಕಾಲವಾಗಿ ಅದೆಷ್ಟೋ ದಿನಗಳು ಉರುಳಿರಬಹುದು ಆದ್ರೆ ಅವರ ನಗು, ನಟನೆ, ನೆನಪು ಇನ್ನೂ ಕಣ್ಣಮುಂದೆ ಹಾಗೇ ಇವೆ.
ಅಪ್ಪು ನಮ್ಮನ್ನು ಬಿಟ್ಟು ಎಲ್ಲೂ ಹೋಗಿಲ್ಲ ನಮ್ಮಲ್ಲೇ ಒಬ್ಬನಾಗಿ ನಮ್ಮೋಂದಿಗೆ ಇದ್ದಾರೆ. ಯಾಕೆ ಅಂದ್ರೆ ಆತನ ಪ್ರಾಣ ನಮ್ಮೊಂದಿಗೆ ಇಲ್ಲದೆ ಇರಬಹುದು, ಆದ್ರೆ ಆತ ಬಿಟ್ಟು ಹೋದ ಆದರ್ಶಗಳು ನಮ್ಮೊಂದಿಗೆ ಇವೆ… ಅಪ್ಪು ಅಜರಾಮರ.
ದೇಶ
Raghav-Parineeti: ಮತ್ತೆ ಒಟ್ಟಿಗೆ ಕಾಣಿಸಿದ ರಾಘವ್, ಪರಿಣೀತಿ; ವಾರದಲ್ಲಿ 3ನೇ ಭೇಟಿ, ಸ್ನೇಹಾನಾ? ಪ್ರೀತಿನಾ?
Raghav-Parineeti: ಆಪ್ ನಾಯಕ ರಾಘವ್ ಚಡ್ಡಾ ಹಾಗೂ ಬಾಲಿವುಡ್ ನಟಿ ಪರಿಣೀತಿ ಚೋಪ್ರಾ ಅವರು ಮತ್ತೆ ಒಟ್ಟಿಗೆ ಕಾಣಿಸಿಕೊಳ್ಳುವ ಮೂಲಕ ಸುದ್ದಿಯಲ್ಲಿದ್ದಾರೆ. ಇವರಿಬ್ಬರೂ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ಮಾತುಗಳಿಗೆ ವಾರದಲ್ಲಿಯೇ ನಡೆದ ಮೂರನೇ ಭೇಟಿಯು ಪುಷ್ಟಿ ನೀಡಿದೆ.
ನವದೆಹಲಿ: ಪಂಜಾಬ್ ಆಪ್ ನಾಯಕ, ರಾಜ್ಯಸಭೆ ಸದಸ್ಯ ರಾಘವ್ ಚಡ್ಡಾ ಹಾಗೂ ಬಾಲಿವುಡ್ ನಟಿ ಪರಿಣೀತಿ ಚೋಪ್ರಾ (Raghav-Parineeti) ಅವರು ಕೆಲ ದಿನಗಳ ಹಿಂದೆ ಒಟ್ಟಿಗೆ ಕಾಣಿಸಿಕೊಂಡಿದ್ದು ಭಾರಿ ಸುದ್ದಿಯಾಗಿತ್ತು. ಇಬ್ಬರೂ ಹೋಟೆಲ್‌ನಲ್ಲಿ ಕಾಣಿಸಿಕೊಂಡ ಕಾರಣ ಇಬ್ಬರೂ ವದಂತಿಗಳಿಗೆ ಆಹಾರವಾಗಿದ್ದರು. ಈ ಕುರಿತು ರಾಘವ್ ಚಡ್ಡಾ ಹಾಗೂ ಪರಿಣೀತಿ ಚೋಪ್ರಾ ಅವರಿಗೆ ಪತ್ರಕರ್ತರು ಪ್ರಶ್ನೆ ಕೇಳಿದ್ದರು. ಇಬ್ಬರೂ ಪ್ರೀತಿಸುತ್ತಿದ್ದಾರೆ, ಮದುವೆಯಾಗುತ್ತಿದ್ದಾರೆ ಎಂದೇ ಹೇಳಲಾಗುತ್ತಿತ್ತು. ಆದರೆ, ಈ ಕುರಿತು ರಾಘವ್ ಚಡ್ಡಾ ಹಾರಿಕೆಯ ಉತ್ತರ ನೀಡಿದ್ದರು. ಈಗ ಜೋಡಿಯು ದೆಹಲಿ ವಿಮಾನ ನಿಲ್ದಾಣದಲ್ಲಿ ಮತ್ತೆ ಒಟ್ಟಿಗೆ ಕಾಣಿಸಿಕೊಂಡಿದ್ದು, ಇದು ವಾರದಲ್ಲಿ ಮೂರನೇ ಭೇಟಿಯಾಗಿದೆ. ಹಾಗಾಗಿ, ಇಬ್ಬರೂ ಜೋಡಿ ಹಕ್ಕಿಗಳಾಗಿದ್ದಾರೆ ಎಂಬ ಮಾತಿಗೆ ಹಚ್ಚಿನ ಪುಷ್ಟಿ ಬಂದಂತಾಗಿದೆ.
ಮಾರ್ಚ್ 29ರಂದು ದೆಹಲಿ ವಿಮಾನ ನಿಲ್ದಾಣಕ್ಕೆ ಬಂದಿಳಿದ ಪರಿಣೀತಿ ಚೋಪ್ರಾ ಅವರನ್ನು ಪಿಕ್ ಮಾಡಲು ಆಮ್ ಆದ್ಮಿ ಪಕ್ಷದ ನಾಯಕ ರಾಘವ್ ಚಡ್ಡಾ ವಿಮಾನ ನಿಲ್ದಾಣಕ್ಕೆ ತೆರಳಿದ್ದಾರೆ. ರಾಘವ್ ಚಡ್ಡಾ ಕಾರಿನಲ್ಲಿಯೇ ಪರಿಣೀತಿ ಚೋಪ್ರಾ ಅವರು ವಿಮಾನ ನಿಲ್ದಾಣದಿಂದ ತೆರಳಿದ್ದಾರೆ. ವಿಮಾನ ನಿಲ್ದಾಣದಲ್ಲಿ ಇಬ್ಬರೂ ಕಾಣಿಸಿಕೊಂಡ ಫೋಟೊಗಳು ಪಾಪರಾಜಿಗಳಿಗೆ ಸಿಕ್ಕಿದ್ದು, ಫೋಟೊಗಳು ವೈರಲ್ ಆಗಿವೆ. ಅಲ್ಲದೆ, ಇಬ್ಬರೂ ಪ್ರೀತಿಸುತ್ತಿದ್ದಾರೆ ಎಂಬುದಾಗಿ ಜಾಲತಾಣಗಳಲ್ಲಿ ಮತ್ತೆ ಹೇಳಲು ಆರಂಭಿಸಿದ್ದಾರೆ. ವಿಮಾನ ನಿಲ್ದಾಣದಲ್ಲಿಯೇ ಮಾಧ್ಯಮದವರು ಇಬ್ಬರನ್ನೂ ಮಾತನಾಡಿಸಲು ಯತ್ನಿಸಿದರಾದರೂ, ಜೋಡಿಯು ಪ್ರತಿಕ್ರಿಯಿಸದೆ ತೆರಳಿದೆ.
ಏರ್‌ಪೋರ್ಟ್‌ನಲ್ಲಿ ಜೋಡಿ ಹಕ್ಕಿ
ಒಟ್ಟಿಗೆ ಊಟ, ಒಂದೇ ಕಾರಿನಲ್ಲಿ ತಿರುಗಾಟ
ಕಳೆದ ಒಂದು ವಾರದಲ್ಲಿ ರಾಘವ್ ಚಡ್ಡಾ ಹಾಗೂ ಪರಿಣೀತಿ ಚೋಪ್ರಾ ಮೂರು ಬಾರಿ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಮಾರ್ಚ್ 22ರಂದು ರಾಘವ್ ಹಾಗೂ ಪರಿಣೀತಿ ಅವರು ಮುಂಬೈನ ರೆಸ್ಟೋರೆಂಟ್ ಒಂದರಲ್ಲಿ ಒಟ್ಟಿಗೆ ಊಟಕ್ಕೆ ತೆರಳಿದ್ದರು. ಇಬ್ಬರೂ ಒಟ್ಟಿಗೆ ಹೋಟೆಲ್ ಪ್ರವೇಶಿಸುವ ಹಾಗೂ ಹೋಟೆಲ್‌ನಿಂದ ಹೊರಬರುವ ವಿಡಿಯೊ ಹಾಗೂ ಫೋಟೊಗಳು ಲಭ್ಯವಾಗಿವೆ. ಇದಾದ ಮರುದಿನವೇ (ಮಾರ್ಚ್ 23) ಇಬ್ಬರೂ ಮತ್ತೆ ಇನ್ನೊಂದು ರೆಸ್ಟೋರೆಂಟ್‌ನಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದರು. ಹೀಗೆ ಪದೇಪದೆ ಒಟ್ಟಿಗೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಡೇಟಿಂಗ್ ಕುರಿತು ಮಾತುಗಳು ಕೇಳಿಬರುತ್ತಿವೆ.
ಹಾರಿಕೆಯ ಉತ್ತರ ನೀಡಿದ್ದ ಚಡ್ಡಾ
ಪರಿಣೀತಿ ಜತೆಗಿನ ಡೇಟಂಗ್ ಕುರಿತು ಇತ್ತೀಚೆಗೆ ಸುದ್ದಿಗಾರರು ಪ್ರಶ್ನೆ ಕೇಳುತ್ತಲೇ ನಾಚಿ ನೀರಾಗಿದ್ದ ರಾಘವ್ ಚಡ್ಡಾ, “ನನಗೆ ಪರಿಣೀತಿ ಬಗ್ಗೆ ಅಲ್ಲ, ರಾಜನೀತಿ ಬಗ್ಗೆ ಪ್ರಶ್ನೆ ಕೇಳಿ” ಎಂದು ನಕ್ಕಿದ್ದರು. ಹಾಗೆಯೇ, ನೀವು ಮದುವೆ ಆಗುವುದು ಯಾವಾಗ ಎಂದು ಕೇಳಿದ ಪ್ರಶ್ನೆಗೆ, “ನಾನು ಮದುವೆಯಾಗುವಾಗ ನಿಮಗೆ ಖಂಡಿತವಾಗಿಯೂ ತಿಳಿಸುತ್ತೇನೆ” ಎಂದು ಹೇಳುವ ಮೂಲಕ ಜಾರಿಕೊಂಡಿದ್ದರು.
ಪಂಜಾಬ್ ಆಪ್ ನಾಯಕ, ರಾಜ್ಯಸಭೆಯ ಯುವ ಸದಸ್ಯರಾಗಿರುವ ಚಡ್ಡಾ ಹಾಗೂ ಪರಿಣೀತಿ ಚೋಪ್ರಾ ಅವರು ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್‌ನಲ್ಲಿ ಒಟ್ಟಿಗೆ ಓದಿದ್ದಾರೆ. ಹಾಗಾಗಿ, ಇಬ್ಬರಿಗೂ ಮೊದಲಿನಿಂದಲೂ ಪರಿಚಯ ಇದೆ ಎಂದು ತಿಳಿದುಬಂದಿದೆ. ಆದರೆ, ಮೂಲಗಳ ಪ್ರಕಾರ, ಅವರಿಬ್ಬರೂ ಪರಸ್ಪರ ಪ್ರೀತಿಸುತ್ತಿದ್ದಾರೆ ಎಂದು ತಿಳಿದುಬಂದಿದೆ. ಇತ್ತೀಚೆಗೆ ಇಬ್ಬರೂ ಆತ್ಮೀಯರಾಗಿದ್ದಾರೆ. ಹಾಗಾಗಿ, ಡೇಟಿಂಗ್ ಮಾಡುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಇದನ್ನೂ ಓದಿ: Raghav Chadha: ಆಪ್ ನಾಯಕ ರಾಘವ್ ಚಡ್ಡಾ, ಪರಿಣೀತಿ ಚೋಪ್ರಾ ಈಗ ಜೋಡಿ ಹಕ್ಕಿ? ಜತೆಗೇ ಸುತ್ತಿ ಚಡ್ಡಾ ಹೇಳಿದ್ದೇನು?
ದೇಶ
Narendra Modi : ಆಸ್ಕರ್ ವಿಜೇತ ʼದಿ ಎಲಿಫೆಂಟ್ ವಿಸ್ಪರರ್ಸ್ʼ ಸಿನಿ ತಂಡವನ್ನು ಭೇಟಿ ಮಾಡಿದ ಮೋದಿ
ಭಾರತಕ್ಕೆ ಆಸ್ಕರ್ ಪ್ರಶಸ್ತಿ ತಂದುಕೊಟ್ಟ ʼದಿ ಎಲಿಫೆಂಟ್ ವಿಸ್ಪರ್ಸ್ʼ ಸಾಕ್ಷ್ಯಚಿತ್ರದ ತಂಡವನ್ನು ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಗುರುವಾರ ಭೇಟಿಯಾಗಿದ್ದಾರೆ.
ನವದೆಹಲಿ: ಈ ಬಾರಿಯ ಆಸ್ಕರ್ ಪ್ರಶಸ್ತಿ ಭಾರತಕ್ಕೆ ಹರ್ಷ ತಂದುಕೊಟ್ಟಿದೆ. ʼದಿ ಎಲಿಫೆಂಟ್ ವಿಸ್ಪರರ್ಸ್ʼ ಡಾಕ್ಯುಮೆಂಟರಿ ಸಾಕ್ಷ್ಯಚಿತ್ರ ಮತ್ತು ಆರ್‌ಆರ್‌ಆರ್ ಸಿನಿಮಾದ ನಾಟು ನಾಡು ಹಾಡಿಗೆ ಆಸ್ಕರ್ ಪ್ರಶಸ್ತಿಗಳು ಬಂದಿವೆ. ಅದೇ ಸಂತಸದಲ್ಲಿರುವ ದಿ ಎಲಿಫೆಂಟ್ ವಿಸ್ಪರರ್ಸ್ ಚಿತ್ರತಂಡವನ್ನು ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಗುರುವಾರ ಭೇಟಿಯಾಗಿದ್ದಾರೆ.
ಇದನ್ನೂ ಓದಿ: Amit Shah: ನರೇಂದ್ರ ಮೋದಿ ನೇತೃತ್ವದಿಂದ ಮಾತ್ರ ಕರ್ನಾಟಕದ ಕಲ್ಯಾಣ: ಬೀದರ್‌ನ ಗೊರಟಾದಲ್ಲಿ ಅಮಿತ್ ಶಾ
ಈ ಬಗ್ಗೆ ಪ್ರಧಾನಿಯವರೇ ಟ್ವಿಟರ್‌ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಸಿನಿಮಾದ ನಿರ್ದೇಶಕಿ ಕಾರ್ತಿಕಿ ಗೊನ್ಸಲ್ವೆಸ್ ಮತ್ತು ನಿರ್ಮಾಪಕಿ ಗುನೀತ್ ಮೊಂಗಾ ಅವರೊಂದಿಗಿರುವ ಫೋಟೋವನ್ನು ಹಂಚಿಕೊಂಡಿರುವ ಮೋದಿ ಅವರು, “ದಿ ಎಲಿಫೆಂಟ್ ವಿಸ್ಪರರ್ಸ್ ಸಿನಿಮಾದ ತೇಜಸ್ಸು ಮತ್ತು ಯಶಸ್ಸು ಜಾಗತಿಕ ಗಮನ ಸೆಳೆಯುವುದರ ಜೊತೆಗೆ ಮೆಚ್ಚುಗೆಯನ್ನೂ ಗಳಿಸಿದೆ. ಇಂದು, ಅದಕ್ಕೆ ಸಂಬಂಧಿಸಿದ ಅದ್ಭುತ ತಂಡವನ್ನು ಭೇಟಿ ಮಾಡುವ ಅವಕಾಶ ನನಗೆ ಸಿಕ್ಕಿತು. ಅವರು ಭಾರತವನ್ನು ಹೆಮ್ಮೆಪಡುವಂತೆ ಮಾಡಿದ್ದಾರೆ”ಎಂದು ಅವರು ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ: Viral Video: ಐಸ್ ಕ್ರೀಂ ತಯಾರಿಸೋಕೆ ಫ್ರಿಜ್ ಬೇಡ್ವೇ ಬೇಡ; ಸೀಲಿಂಗ್ ಫ್ಯಾನ್ ಇದ್ದರೂ ಸಾಕು ಎನ್ನುತ್ತಿದ್ದಾರೆ ಈ ಮಹಿಳೆ
ಈ ಸಾಕ್ಷ್ಯಚಿತ್ರವು ದಂಪತಿಯೊಂದಕ್ಕೆ ಅನಾಥ ಆನೆ ಮರಿಯೊಂದಿಗೆ ಬಾಂಧವ್ಯ ಬೆಳೆಸಿಕೊಳ್ಳುವ ಕಥೆಯನ್ನು ಕಟ್ಟಿಕೊಡುತ್ತದೆ. ಈ ಚಿತ್ರ 2022ರ ನವೆಂಬರ್ 9ರಂದು ನ್ಯೂಯಾರ್ಕ್ ಚಲನಚಿತ್ರೋತ್ಸವದಲ್ಲಿ ತೆರೆ ಕಂಡಿತು. ಅದೇ ವರ್ಷ ಡಿಸೆಂಬರ್ 8ರಂದು ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾಯಿತು.
South Cinema
Ponniyin Selvan: ‘ಪೊನ್ನಿಯನ್ ಸೆಲ್ವನ್-2’ ಟ್ರೈಲರ್ ಔಟ್
ಚೆನ್ನೈನಲ್ಲಿ (Ponniyin Selvan) ಮಾರ್ಚ್ 29ರಂದು ಸಂಜೆ ಅದ್ಧೂರಿಯಾಗಿ ಟ್ರೈಲರ್ ಹಾಗೂ ಆಡಿಯೋ ಲಾಂಚ್ ಕಾರ್ಯಕ್ರಮ ಜರುಗಿತು. ವಿಶೇಷ ಅತಿಥಿಯಾಗಿ ಆಗಮಿಸಿದ್ದ ಕಮಲ್ ಹಾಸನ್ ಕಾರ್ಯಕ್ರಮಕ್ಕೆ ಮತ್ತಷ್ಟು ಮೆರಗು ನೀಡಿದರು.
ಬೆಂಗಳೂರು: ಖ್ಯಾತ ನಿರ್ದೇಶಕ ಮಣಿರತ್ನಂ ಕನಸಿನ ಕೂಸು ಐತಿಹಾಸಿಕ ದೃಶ್ಯಕಾವ್ಯ ಪೊನ್ನಿಯನ್ ಸೆಲ್ವನ್-2 (Ponniyin Selvan) ಸಿನಿಮಾದ ಟ್ರೈಲರ್ ರಿಲೀಸ್ ಆಗಿದೆ. ಚೆನ್ನೈನಲ್ಲಿ ಮಾರ್ಚ್ 29ರಂದು ಸಂಜೆ ಅದ್ಧೂರಿಯಾಗಿ ಟ್ರೈಲರ್ ಹಾಗೂ ಆಡಿಯೋ ಲಾಂಚ್ ಕಾರ್ಯಕ್ರಮ ಜರುಗಿತು. ವಿಶೇಷ ಅತಿಥಿಯಾಗಿ ಆಗಮಿಸಿದ್ದ ಕಮಲ್ ಹಾಸನ್ ಕಾರ್ಯಕ್ರಮಕ್ಕೆ ಮತ್ತಷ್ಟು ಮೆರಗು ನೀಡಿದರು. ಟ್ರೈಲರ್ ಲಾಂಚ್ ಮಾಡಿ ಇಡೀ ತಂಡಕ್ಕೆ ಶುಭ ಹಾರೈಸಿದರು. ಮಣಿರತ್ನಂ, ಕಾರ್ತಿ, ಐಶ್ವರ್ಯ ರೈ, ವಿಕ್ರಮ್, ತ್ರಿಯ, ಜಯಂರವಿ, ಪ್ರಕಾಶ್ ರೈ, ಶರತ್ ಕುಮಾರ್ ಸೇರಿದಂತೆ ಹಲವು ಸೂಪರ್ ಸ್ಟಾರ್ಸ್‌ಗಳು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
ಕಲ್ಕಿ ಕೃಷ್ಣಮೂರ್ತಿ ಬರೆದ ಪೊನ್ನಿಯನ್ ಸೆಲ್ವನ್ ಕಾದಂಬರಿ ಆಧಾರಿಸಿ ನಿರ್ದೇಶಕ ಮಣಿರತ್ನಂ ಎರಡು ಭಾಗದಲ್ಲಿ ಚಿತ್ರ ತಯಾರಿಸಿದ್ದರು. ಕಳೆದ ವರ್ಷ ರಿಲೀಸ್ ಆಗಿದ್ದ ಮೊದಲ ಭಾಗಕ್ಕೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿತ್ತು. ಪೊನ್ನಿಯನ್ ಸೆಲ್ವನ್ 500 ಕೋಟಿ ರೂ. ಬಾಚಿ ಬಾಕ್ಸಾಫೀಸ್ ಶೇಕ್ ಮಾಡಿತ್ತು. ಲೈಕಾ ಪ್ರೊಡಕ್ಷನ್ ಜತೆಗೂಡಿ ಮಣಿರತ್ನಂ ನಿರ್ಮಿಸಿ ನಿರ್ದೇಶಿಸಿರುವ ಪೊನ್ನಿಯಯನ್ ಸೆಲ್ವನ್-2 ಸೀಕ್ವೆಲ್ ಟ್ರೈಲರ್ ರಿಲೀಸ್ ಆಗಿದ್ದು, ನಿರೀಕ್ಷೆ ನೂರ್ಮಡಿಗೊಳಿಸಿದೆ.
ಚೋಳ ಸಾಮ್ರಾಜ್ಯದ ಗದ್ದುಗೆಗಾಗಿ ನಡೆಯುವ ಹೋರಾಟ, ಪಾಂಡ್ಯ ರಾಜರ ಕುತಂತ್ರ, ಚೋಳ ಸಾಮ್ರಾಜ್ಯ ನಾಶಪಡಿಸಲು ನಂದಿನಿ ಮಾಡುವ ಶಪಥ, ಕರಿಕಾಲನ್ ವೀರಾವೇಶದ ಹೋರಾಟ, ನಂದಿನಿ ಕರಿಕಾಲನ್ ಮುಖಾಮುಖಿಯಾಗುವ ಸನ್ನಿವೇಶ..ಅದ್ಧೂರಿ ಮೇಕಿಂಗ್, ಬೃಹತ್ ಸೆಟ್‌ಗಳು ಟ್ರೈಲರ್‌ನಲ್ಲಿ ಝಗಮಗಿಸಿವೆ. ಕನ್ನಡ ಸೇರಿದಂತೆ ಐದು ಭಾಷೆಯಲ್ಲಿಯೂ ಪೊನ್ನಿಯನ್ ಸೆಲ್ವನ್-2 ಮೊದಲ ನೋಟ ರಿಲೀಸ್ ಆಗಿದ್ದು, ಭಾರೀ ಮೆಚ್ಚುಗೆಗೆ ಪಡೆದುಕೊಂಡಿದೆ. ಆಸ್ಕರ್ ವಿಜೇತ ಎ ಆರ್ ರೆಹಮಾನ್ ಸಂಗೀತ ಸಿನಿಮಾಕ್ಕಿದೆ.
ಇದನ್ನೂ ಓದಿ: Kamal Haasan: ನಿರ್ದೇಶಕ ಮಣಿರತ್ನಂ ಬಗ್ಗೆ ಅನೇಕರಿಗೆ ಅಸೂಯೆ! ನಟ ಕಮಲ್ ಹಾಸನ್ ಹೀಗೆ ಹೇಳಿದ್ದೇಕೆ?
`ಪೊನ್ನಿಯನ್ ಸೆಲ್ವನ್-2’ ಟ್ರೈಲರ್ ಔಟ್
ಟ್ರೈಲರ್ ಮೂಲಕ ಪ್ರಚಾರ ಕಾರ್ಯಕ್ಕೆ ಕಿಕ್ ಸ್ಟಾರ್ಟ್ ಕೊಟ್ಟಿರುವ ಮಣಿರತ್ನಂ ತಂಡ ಕಟ್ಟಿಕೊಂಡು ಹೊರರಾಜ್ಯಗಳಲ್ಲಿಯೂ ಪ್ರಮೋಷನ್ ಶುರು ಮಾಡಲು ಸಜ್ಜಾಗಿದ್ದಾರೆ. ಪ್ಯಾನ್ ಇಂಡಿಯಾ ಸಿನಿಮಾವಾಗಿರುವ ಪೊನ್ನಿಯನ್ ಸೆಲ್ವನ್-2 ಏಪ್ರಿಲ್ 28ಕ್ಕೆ ವರ್ಲ್ಡ್ ವೈಡ್ ತೆರೆಗೆ ಬರುತ್ತಿದೆ. ಐಶ್ವರ್ಯಾ ರೈ, ತ್ರಿಷಾ, ಕಾರ್ತಿ, ವಿಕ್ರಂ, ಪ್ರಕಾಶ್ ರೈ, ಶರತ್ ಕುಮಾರ್, ಜಯಂರವಿ, ಐಶ್ವರ್ಯ ಲಕ್ಷ್ಮೀ, ಶೋಭಿತಾ ಧುಲಿಪಾಲ, ಪ್ರಭು ಸೇರಿದಂತೆ ಬಹುದೊಡ್ಡ ತಾರಾಗಣ ಚಿತ್ರದಲ್ಲಿದೆ.
ಸಿನಿಮಾ
Actor Rishi: ‘ರಾಮನ ಅವತಾರ’ದಲ್ಲಿ ಕವಲುದಾರಿ ರಿಷಿ: ರಾಮರಾಜ್ಯ ಮತ್ತೆ ಶುರು ಎಂದ ನಟ
ಥೇಟ್ ರಾಮನ ಗೆಟಪ್‌ನಲ್ಲಿಯೇ ರಿಷಿ ಕಾಣಿಸಿಕೊಂಡಿದ್ದು, ಅರುಣ್ ಸಾಗರ್ ಕೂಡ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಶುಭ್ರ ಅಯ್ಯಪ್ಪ ಹಾಗೂ ಪ್ರಣೀತಾ ಸುಭಾಷ್ ನಾಯಕಿಯರಾಗಿ ಬಣ್ಣ ಹಚ್ಚಿದ್ದಾರೆ.
ಬೆಂಗಳೂರು: ಕನ್ನಡ ಚಿತ್ರರಂಗದ ನಟ ರಿಷಿ (Actor Rishi) ವಿಭಿನ್ನ ಪಾತ್ರಗಳ ಮೂಲಕ ಸಿನಿರಸಿಕರನ್ನು ರಂಜಿಸಿಕೊಂಡು ಬರುತ್ತಿದ್ದಾರೆ. ಇದೀಗ ನಟ ರಾಮನ ಅವತಾರ ಎಂಬ ಮತ್ತೊಂದು ಹೊಸ ಚಿತ್ರದಲ್ಲಿ ನಟಿಸಿದ್ದು, ಈ ಸಿನಿಮಾದ ಫಸ್ಟ್ ಲುಕ್ ಪೋಸ್ಟರ್ ರಿಲೀಸ್ ಆಗಿದೆ. ಥೇಟ್ ರಾಮನ ಗೆಟಪ್‌ನಲ್ಲಿಯೇ ರಿಷಿ ಕಾಣಿಸಿಕೊಂಡಿದ್ದು, ಅರುಣ್ ಸಾಗರ್ ಕೂಡ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಶುಭ್ರ ಅಯ್ಯಪ್ಪ ಹಾಗೂ ಪ್ರಣೀತಾ ಸುಭಾಷ್ ನಾಯಕಿಯರಾಗಿ ಬಣ್ಣ ಹಚ್ಚಿದ್ದಾರೆ.
ನಿರ್ದೇಶಕ ಸಿಂಪಲ್ ಸುನಿ ಕ್ಯಾಂಪನ್‌ನಲ್ಲಿ ಸಹಾಯಕ ನಿರ್ದೇಶಕರಾಗಿ ಹಾಗೂ ಬರಹಗಾರನಾಗಿ ಕೆಲಸ ಮಾಡಿರುವ ಅನುಭವವಿರುವ, ತಮ್ಮದೇ ನಾಟಿ ಫ್ಯಾಕ್ಟರಿ ಯೂಟ್ಯೂಬ್ ಚಾನೆಲ್ ಮೂಲಕ ಹೆಸರು ಪಡೆದಿರುವ ವಿಕಾಸ್ ಪಂಪಾಪತಿ ರಾಮನ ಅವತಾರ ಸಿನಿಮಾಗೆ ನಿರ್ದೇಶನ ಮಾಡುತ್ತಿದ್ದಾರೆ. ಇದು ಇವರ ಚೊಚ್ಚಲ ಸಿನಿಮಾವಾಗಿದೆ. ಈ ಚಿತ್ರದ ಮೂಲಕ ವಿಕಾಸ್ ನಿರ್ದೇಶಕರಾಗಿ ಬಡ್ತಿ ಪಡೆಯುತ್ತಿದ್ದಾರೆ.
ಸ್ಟಾರ್ ಫ್ಯಾಬ್ ಪ್ರೊಡಕ್ಷನ್ ನಡಿ ಆಪರೇಷನ್ ಅಲಮೇಲಮ್ಮ ಸಿನಿಮಾ ನಿರ್ಮಾಣ ಮಾಡಿದ್ದ ಅಮರೇಜ್ ಸೂರ್ಯವಂಶಿ ಚಿತ್ರ ನಿರ್ಮಾಣ ಮಾಡಿದ್ದಾರೆ. ರೊಮ್ಯಾಂಟಿಕ್ ಕಾಮಿಡಿ ಜಾನರ್ ಈ ಸಿನಿಮಾಗೆ ವಿಷ್ಣುಪ್ರಸಾದ್ ಹಾಗೂ ಸಮೀರ್ ದೇಶ್ ಪಾಂಡೇ ಕ್ಯಾಮೆರಾ ಕೈಚಳಕವಿದ್ದು, ಜೂಡಾ ಸ್ಯಾಂಡಿ ಟ್ಯೂನ್ ಹಾಕಿದ್ದು, ಅಮರನಾಥ್ ಸಂಲಕನವಿದೆ.
ಇದನ್ನೂ ಓದಿ: Rishi Sunak: ಟಿ20 ಚಾಂಪಿಯನ್ ತಂಡದೊಂದಿಗೆ ಕ್ರಿಕೆಟ್ ಆಡಿದ ಪ್ರಧಾನಿ ರಿಷಿ ಸುನಕ್; ವಿಡಿಯೊ ವೈರಲ್
ಉಡುಪಿ, ಬೆಂಗಳೂರು ಸುತ್ತುಮುತ್ತ ಶೂಟಿಂಗ್ ನಡೆಸಲಾಗಿದೆ. ಈಗಾಗಲೇ ಚಿತ್ರೀಕರಣ ಮುಕ್ತಾಯಗೊಂಡಿದ್ದು, ಗ್ರಾಫಿಕ್ಸ್ ಹಾಗೂ ಮ್ಯೂಸಿಕ್ ಕೆಲಸಗಳು ಭರದಿಂದ ಸಾಗ್ತಿಗುತ್ತಿವೆ ಎಂದು ಚಿತ್ರತಂಡ ಹೇಳಿಕೊಂಡಿದೆ. ಜೂನ್ ಮೊದಲನೇ ವಾರದಲ್ಲಿ ರಾಮನ ಅವತಾರ ಸಿನಿಮಾವನ್ನು ತೆರೆಗೆ ತರುವುದಕ್ಕೆ ಚಿತ್ರತಂಡ ಯೋಜನೆ ಹಾಕಿಕೊಂಡಿದೆ.
-
ಕರ್ನಾಟಕ15 hours ago
High Court order: ತುಮಕೂರು ಗ್ರಾಮಾಂತರ ಜೆಡಿಸ್ ಶಾಸಕ ಗೌರಿಶಂಕರ್ ಶಾಸಕತ್ವದಿಂದ ಅನರ್ಹ: ಕೋರ್ಟ್ ಆದೇಶ
-
ಕ್ರಿಕೆಟ್16 hours ago
IND VS PAK: ಏಕದಿನ ವಿಶ್ವಕಪ್; ತಟಸ್ಥ ತಾಣದಲ್ಲಿ ನಡೆಯಲಿದೆ ಪಾಕಿಸ್ತಾನದ ಪಂದ್ಯಗಳು!
-
ಕರ್ನಾಟಕ12 hours ago
Karnataka BJP: ಸಿದ್ದರಾಮಯ್ಯ ವಿರುದ್ಧ ವಿಜಯೇಂದ್ರ ಸ್ಪರ್ಧೆಗೆ ಬಿಜೆಪಿ ಚಿಂತನೆ: ಖಚಿತಪಡಿಸಿದ ಬಿ.ಎಸ್. ಯಡಿಯೂರಪ್ಪ
-
ಕ್ರಿಕೆಟ್13 hours ago
ICC World Cup 2023: ಭಾರತದಲ್ಲೇ ನಡೆಯಲಿದೆ ವಿಶ್ವ ಕಪ್ ಪಂದ್ಯ; ಐಸಿಸಿ ಸ್ಪಷ್ಟನೆ
-
ಕರ್ನಾಟಕ13 hours ago
Anjanadri Hill: 101 ಕೆಜಿ ಜೋಳದ ಚೀಲ ಹೊತ್ತು ಅಂಜನಾದ್ರಿ ಬೆಟ್ಟ ಹತ್ತಿದ ಹನುಮನ ಭಕ್ತ
-
ಕ್ರಿಕೆಟ್10 hours ago
IPL 2023: ಗುಜರಾತ್ vs ಚೆನ್ನೈ ಪಂದ್ಯದ ಪಿಚ್ ರಿಪೋರ್ಟ್, ಸಂಭಾವ್ಯ ತಂಡ
-
ಕರ್ನಾಟಕ14 hours ago
Karnataka BJP: ಮುಸ್ಲಿಂ ಬಾಂಧವರಿಗೆ ಬಿಜೆಪಿ ಅನ್ಯಾಯ ಮಾಡಿಲ್ಲ: ಮನವೊಲಿಸುತ್ತೇವೆ ಎಂದ ಬಿ.ಎಸ್. ಯಡಿಯೂರಪ್ಪ
-
ದೇಶ14 hours ago
ಸ್ಮೃತಿ ಇರಾನಿಯನ್ನು ಡಾರ್ಲಿಂಗ್ ಎಂದು ಬಿಜೆಪಿ ನಾಯಕ ಟ್ವೀಟ್, ಮಾನಹಾನಿ ನೋಟಿಸ್ ಕಳುಹಿಸಿದ ಕೈ ನಾಯಕ!