ಆಸ್ಕರ್ ಪ್ರಶಸ್ತಿ ವಿಜೇತ ಸಂಗೀತ ಸಂಯೋಜಕ ಎ ಆರ್ ರೆಹಮಾನ್ (AR Rahman) ಚೆನ್ನೈನ ಮರಕ್ಕುಮಾ ನೆಂಜಮ್ನಲ್ಲಿ (Marakuma Nenjam) ಸಂಗೀತ ಕಾರ್ಯಕ್ರಮವನ್ನು ಆಯೋಜಿಸಿದ್ದರು. ಆದರೆ ಟಿಕೆಟ್ ಇದ್ದ ಹೊರತಾಗಿಯೂ ಅನೇಕರನ್ನು ಒಳಗೆ ಬಿಡಲೇ ಇಲ್ಲ. ಈ ಬಗ್ಗೆ ಅನೇಕರು ಟ್ವಿಟರ್ನಲ್ಲಿ ಬೇಸರ ಹೊರಹಾಕಿದ್ದಾರೆ. ಇದಾದ ಬಳಿಕ ರೆಹಮಾನ್ (The AR Rahman concert held in Chennai) ಭಾರಿ ಟೀಕೆಗೆ ಒಳಗಾಗಿದ್ದಾರೆ. ʻ30 ವರ್ಷಗಳಿಂದ ರೆಹಮಾನ್ ಮೇಲಿರುವ ನನ್ನ ಅಭಿಮಾನ ಇಂದು ಸತ್ತು ಹೋಯಿತುʼ ಎಂದು ಫ್ಯಾನ್ಸ್ ಟ್ವೀಟ್ ಮಾಡಿದ್ದಾರೆ. ಇದಾದ ಬೆನ್ನಲ್ಲೇ ಎಆರ್ ರೆಹಮಾನ್ ಟ್ವೀಟ್‌ನಲ್ಲಿ ಈ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ಕೆಲವರು ಸಿಟ್ಟಿನಿಂದ ಟಿಕೆಟ್ ಹರಿದು ( tore their ticket) ಹಾಕಿರುವುದಾಗಿ ವರದಿಯಾಗಿದೆ.
ಚೆನ್ನೈನಲ್ಲಿ ಸೆಪ್ಟೆಂಬರ್ 11ರಂದು ನಡೆದ ಎಆರ್ ರೆಹಮಾನ್ ಸಂಗೀತ ಕಾರ್ಯಕ್ರಮದಲ್ಲಿ ಕಳಪೆ ನಿರ್ವಹಣೆಯನ್ನು ದೂಷಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ರೆಹಮಾನ್ ಫ್ಯಾನ್ಸ್ ಬೇಸರ ಹೊರಹಾಕಿದ್ದಾರೆ. ವಾಲ್ಯೂಮ್ ತುಂಬಾ ಕಡಿಮೆಯಾಗಿದೆ ಎಂದು ಹಲವರು ಹೇಳಿದರೆ, ಇನ್ನೂ ಕೆಲವರಿಗೆ ಟಿಕೆಟ್ ಇದ್ದರೂ ಎಂಟ್ರಿ ಕೊಡಲಿಲ್ಲ. ಹೆಚ್ಚಿನ ಜನರು ಸೇರಿದ್ದರಿಂದ ಅನೇಕರು ತೊಂದರೆಗೆ ಒಳಗಾದರು. ಅಷ್ಟೇ ಅಲ್ಲದೇ ಇನ್ನು ಮುಂದೆ ಎಂದಿಗೂ ಎಆರ್ ರೆಹಮಾನ್ ಅವರ ಸಂಗೀತ ಕಾರ್ಯಕ್ರಮದಲ್ಲಿ ಭಾಗಿಯಾಗುವುದಿಲ್ಲ ಎಂದು ಟ್ವೀಟ್ ಮೂಲಕ ಅಭಿಪ್ರಾಯ ಹಂಚಿಕೊಂಡಿದ್ದಾರೆ.
ಚಲನಚಿತ್ರ ವಹಿವಾಟು ಕುರಿತ ವಿಶ್ಲೇಷಕರು ಕೂಡ ಈ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ʻʻಕಾರ್ಯಕ್ರಮ ನೋಡಲು ಅವಕಾಶ ಸಿಗದೆ ಅಭಿಮಾನಿಗಳು ಟಿಕೆಟ್‌ಗಳನ್ನು ಹರಿದು ಹಾಕಿರುವುದು ನಿಜಕ್ಕೂ ಬೇಸರದ ಸಂಗತಿಯಾಗಿದೆ. ಇದು ಎ ಆರ್ ರೆಹಮಾನ್ ಅಭಿಮಾನಿಗಳಿಗೆ ಕೊಟ್ಟ ಕೆಟ್ಟ ಕೊಡುಗೆಯಾಗಿದೆ” ಎಂದವರು ಬರೆದಿದ್ದಾರೆ. ಕಾರ್ಯಕ್ರಮದ ಮತ್ತೊಂದು ವಿಡಿಯೊವನ್ನು ಹಂಚಿಕೊಂಡು, ಅಸಮಾಧಾನಗೊಂಡ ಅಭಿಮಾನಿಯೊಬ್ಬರು ಹೀಗೆ ಬರೆದಿದ್ದಾರೆ: “ಇದು ಬಹಳ ಕೆಟ್ಟದಾಗಿ ಆಯೋಜಿಸಲಾದ ಸಂಗೀತ ಕಾರ್ಯಕ್ರಮ. ನಮ್ಮ ಹಣ ವ್ಯರ್ಥʼʼ.
ಇದನ್ನೂ ಓದಿ: AR Rahman: ಹಿಂದು ಆಗಿದ್ದ ಎ.ಆರ್. ರೆಹಮಾನ್ ಇಸ್ಲಾಂಗೆ ಮತಾಂತರವಾಗಿದ್ದು ಏಕೆ? ಹೆಸರು ಬದಲಾವಣೆ ಕತೆ ಏನು?
ಈ ಬಗ್ಗೆ ಎಆರ್ ರೆಹಮಾನ್ ಟ್ವೀಟ್ ಮಾಡಿ “ಪ್ರೀತಿಯ ಚೆನ್ನೈ, ನಿಮ್ಮಲ್ಲಿ ಟಿಕೆಟ್ ಖರೀದಿಸಿದವರು ಕೆಲವು ಕ್ಲಿಷ್ಟ ಪರಿಸ್ಥಿತಿಗಳಿಂದಾಗಿ ಪ್ರವೇಶಿಸಲು ಸಾಧ್ಯವಾಗಲಿಲ್ಲ, ದಯವಿಟ್ಟು ನಿಮ್ಮ ಕುಂದುಕೊರತೆಗಳೊಂದಿಗೆ ನಿಮ್ಮ ಟಿಕೆಟ್ ಖರೀದಿಯ ಪ್ರತಿಯನ್ನು arr4chennai@btos.inಗೆ ಹಂಚಿಕೊಳ್ಳಿ. ನಮ್ಮ ತಂಡವು ಆದಷ್ಟು ಬೇಗ @BToSproductions @actcevents ಪ್ರತಿಕ್ರಿಯಿಸುತ್ತದೆʼʼ ಎಂದು ಬರೆದುಕೊಂಡಿದ್ದಾರೆ.