ಬಾಲಿವುಡ್ ನಟ ಸಲ್ಮಾನ್ ಖಾನ್ ಸಹೋದರ ಅರ್ಬಾಜ್ ಖಾನ್ (Arbaaz Khan) ಮತ್ತು ಮೇಕಪ್ ಕಲಾವಿದೆ ಶುರಾ ಖಾನ್ (Shura Khan) ಡಿಸೆಂಬರ್ 24 ರಂದು ವಿವಾಹವಾಗಿದ್ದಾರೆ. ಮುಂಬೈನಲ್ಲಿರುವ ಅರ್ಬಾಜ್ ಖಾನ್ ಸಹೋದರಿ ಅರ್ಪಿತಾ ಖಾನ್ ಶರ್ಮಾ ಅವರ ನಿವಾಸದಲ್ಲಿ ಅವರ ವಿವಾಹ ನಡೆಯಿತು. ಇದೀಗ ಅರ್ಬಾಜ್ ಖಾನ್ ಪತ್ನಿ ಶುರಾ ಖಾನ್ ಜತೆ ಇರುವ ಫೋಟೊವನ್ನು ಹಂಚಿಕೊಂಡಿದ್ದಾರೆ.
ಅರ್ಬಾಜ್ ಖಾನ್ ಫೋಟೊ ಹಂಚಿಕೊಂಡು ʻʻನಮ್ಮ ಪ್ರೀತಿಪಾತ್ರರ ಸಮ್ಮುಖದಲ್ಲಿ, ನಾನು ಮತ್ತು ಶುರಾ ಖಾನ್ ಹೊಸ ಜೀವನ ಪ್ರಾರಂಭಿಸುತ್ತಿದ್ದೇವೆ. ನಿಮ್ಮೆಲ್ಲರ ಆಶೀರ್ವಾದ ಮತ್ತು ಶುಭ ಹಾರೈಕೆಗಳು ನಮಗರಿಲಿʼʼಎಂದು ಇನ್‌ಸ್ಟಾದಲ್ಲಿ ಬರೆದುಕೊಂಡಿದ್ದಾರೆ.
ಅರ್ಬಾಜ್ ಖಾನ್ ಮತ್ತು ಶುರಾ ಅವರ ವಿವಾಹ ಸಮಾರಂಬ ಖಾಸಗಿಯಾಗಿ ನಡೆದಿದೆ. ಸಹೋದರರಾದ ಸಲ್ಮಾನ್ ಖಾನ್ ಮತ್ತು ಸೊಹೈಲ್ ಖಾನ್, ಪೋಷಕರಾದ ಸಲೀಮ್ ಖಾನ್ ಮತ್ತು ಸಲ್ಮಾ ಖಾನ್ ಮತ್ತು ಮಗ ಅರ್ಹಾನ್ ಖಾನ್ ಸೇರಿದಂತೆ ಇಡೀ ಕುಟುಂಬದ ಸದಸ್ಯರು ಹಾಜರಿದ್ದರು. ಫರಾಹ್ ಖಾನ್ ಮತ್ತು ರಿತೇಶ್ ದೇಶ್ ಮುಖ್ ಕೂಡ ಮದವೆಗೆ ಹೋಗಿ ಶುಭಾಶಯ ತಿಳಿಸಿದ್ದಾರೆ.
ಇದನ್ನೂ ಓದಿ: BBK SEASON 10: ಡಬಲ್ ಎಲಿಮಿನೇಷನ್; ಬಿಗ್‌ಬಾಸ್ ಮನೆಯಿಂದ ಹೊರಬಂದ ಅವಿನಾಶ್, ಮೈಕಲ್
ಅನೇಕ ಚಲನಚಿತ್ರಗಳು ಮತ್ತು ದೂರದರ್ಶನ ಕಾರ್ಯಕ್ರಮಗಳಲ್ಲಿ ಅನುಭವ ಹೊಂದಿರುವ ವೃತ್ತಿಪರ ಮೇಕಪ್ ಕಲಾವಿದೆ ಶುರಾ ಖಾನ್, ತಮ್ಮ ಇತ್ತೀಚಿನ ಯೋಜನೆ “ಪಾಟ್ನಾ ಶುಕ್ಲಾ” ಸೆಟ್ನಲ್ಲಿ ತಮ್ಮ ಪ್ರೀತಿಯ ಕತೆಯನ್ನು ಬಿಟ್ಟುಕೊಟ್ಟಿದ್ದಾರೆ. ಅರ್ಬಾಜ್ ಖಾನ್ ತಮ್ಮ ಪ್ರೊಡಕ್ಷನ್ ಬ್ಯಾನರ್ ಅಡಿಯಲ್ಲಿ ಈ ಚಿತ್ರ ನಿರ್ಮಾಣಗೊಳ್ಳುತ್ತಿದೆ. ವಿವೇಕ್ ಬುಡಕೋಟಿ ನಿರ್ದೇಶಿಸಿದ್ದಾರೆ. ರವೀನಾ ಟಂಡನ್, ಮಾನವ್ ವಿಜ್, ಚಂದನ್ ರಾಯ್ ಸನ್ಯಾಲ್, ಜತಿನ್ ಗೋಸ್ವಾಮಿ ಮತ್ತು ಅನುಷ್ಕಾ ಕೌಶಿಕ್ ಸೇರಿದಂತೆ ತಾರಾಗಣವನ್ನು ಹೊಂದಿದ್ದಾರೆ.
ಅರ್ಬಾಜ್ ಅವರ ಹಿಂದಿನ ಸಂಬಂಧಗಳ ಬಗ್ಗೆ ಹೇಳುವುದಾದರೆ ಅವರು 1998ರಲ್ಲಿ ಮಲೈಕಾ ಅರೋರಾ ಅವರನ್ನು ವಿವಾಹವಾಗಿದ್ದರು. ಅವರಿಗೆ 2002ರಲ್ಲಿ ಜನಿಸಿದ ಅರ್ಹಾನ್ ಖಾನ್ ಎಂಬ ಮಗ ಹುಟ್ಟಿದ್ದಾನೆ. ವರ್ಷಗಳ ಕಾಲ ಒಟ್ಟಿಗೆ ಇದ್ದರು. ದಂಪತಿ ಮಾರ್ಚ್ 2016 ರಲ್ಲಿ ತಮ್ಮ ಪ್ರತ್ಯೇಕಗೊಂಡಿದ್ದರು. ಮಲೈಕಾ ಈಗ ಅರ್ಜುನ್ ಕಪೂರ್ ಅವರ ಜತೆಗಿದ್ದಾರೆ.