Site icon Vistara News

Thalapathy Vijay: ಖಡಕ್‌ ಲುಕ್‌ನಲ್ಲಿ ಅರ್ಜುನ್‌ ಸರ್ಜಾ; ಹೊಸ ಅಪ್‌ಡೇಟ್‌ ಹಂಚಿಕೊಂಡ ʻಲಿಯೋʼ

Arjun Sarjain Leo

ಬೆಂಗಳೂರು: ದಳಪತಿ ವಿಜಯ್‌ (Thalapathy Vijay) ಹಾಗೂ ಲೋಕೇಶ್ ಕನಕರಾಜ್ (Lokesh Kanakaraj) ಅವರ ಮುಂಬರುವ ಚಿತ್ರ ʻಲಿಯೋʼ (Leo poster) ಪೋಸ್ಟರ್‌ಗಳು ಈಗಾಗಲೇ ಬಿಡುಗಡೆಗೊಂಡಿವೆ. ಅ.5ರಂದು ʻಲಿಯೋʼ ಟ್ರೈಲರ್‌ ಬಿಡುಗಡೆಯಾಗುತ್ತಿದೆ. ʻಲಿಯೋʼ ಅಕ್ಟೋಬರ್ 19ರಂದು ಬಿಡುಗಡೆಯಾಗುತ್ತಿದೆ. ಇದೀಗ ಅರ್ಜುನ್‌ ಸರ್ಜಾ ಅವರ ಬಹುನಿರೀಕ್ಷಿತ ಕ್ಯಾರೆಕ್ಟರ್ ಪೋಸ್ಟರ್ ಚಿತ್ರತಂಡ ರಿವೀಲ್‌ ಮಾಡಿದೆ.

ಲಿಯೋ, ಒಂದೆರಡು ವಾರಗಳಲ್ಲಿ ಗ್ರಾಂಡ್ ಥಿಯೇಟ್ರಿಕಲ್ ಬಿಡುಗಡೆಗೆ ಸಜ್ಜಾಗುತ್ತಿದೆ. ಇತ್ತೀಚೆಗೆ, ಚಿತ್ರತಂಡ ಬಾಲಿವುಡ್‌ ಹಿರಿಯ ಸೂಪರ್‌ಸ್ಟಾರ್ ಸಂಜಯ್ ದತ್ ಸೇರಿದಂತೆ ಉಳಿದ ಪಾತ್ರಗಳ ಪೋಸ್ಟರ್‌ಗಳನ್ನು ಬಹಿರಂಗಪಡಿಸಿತ್ತು. ಇದೀಗ ಅರ್ಜುನ್ ಸರ್ಜಾ ಅವರ ಬಹುನಿರೀಕ್ಷಿತ ಕ್ಯಾರೆಕ್ಟರ್ ಪೋಸ್ಟರ್ ಅನಾವರಣಗೊಂಡಿದೆ. ಚಿತ್ರದಲ್ಲಿ ʻಹೆರಾಲ್ಡ್ ದಾಸ್ʼ ಪಾತ್ರವನ್ನು ನಿರ್ವಹಿಸಲಿರುವ ಅರ್ಜುನ್‌ ಸರ್ಜಾ ಅವರು ಖಡಕ್‌ ಆಗಿ ಕಾಣುತ್ತಿದ್ದಾರೆ.

2021ರಲ್ಲಿ ಬಿಡುಗಡೆಯಾದ ʻಮಾಸ್ಟರ್ʼ ಚಿತ್ರದ ಭಾರಿ ಯಶಸ್ಸಿನ ನಂತರ ದಳಪತಿ ವಿಜಯ್ ಮತ್ತು ನಿರ್ದೇಶಕ ಲೋಕೇಶ್ ಕನಕರಾಜ್ ಅವರು ಈ ‘ಲಿಯೋ’ ಸಿನಿಮಾ ಮೂಲಕ ಮತ್ತೆ ಒಂದಾಗಿದ್ದಾರೆ. ಹಲವು ವರ್ಷಗಳ ನಂತರ ವಿಜಯ್ ಜತೆ ತ್ರಿಷಾ ನಾಯಕಿಯಾಗಿ ಈ ಸಿನಿಮಾ ಮೂಲಕ ಮಿಂಚಲಿದ್ದಾರೆ. ಕೀರ್ತಿ ಸುರೇಶ್, ಅರ್ಜುನ್, ಮಿಶಾ ಘೋಷಾಲ್, ಪ್ರಿಯಾ ಆನಂದ್, ಮನ್ಸೂರ್ ಅಲಿ ಖಾನ್ ಮತ್ತು ಸಂಜಯ್ ತಾರಾ ಬಳಗವಿದೆ. ಇತ್ತೀಚೆಗೆ ಕಾಶ್ಮೀರ ಮತ್ತು ಚೆನ್ನೈನ ವಿವಿಧ ಸ್ಥಳಗಳಲ್ಲಿ ಚಿತ್ರೀಕರಣಗೊಂಡಿತ್ತು.

ಇದನ್ನೂ ಓದಿ: Thalapathy Vijay: ದಳಪತಿ ವಿಜಯ್‌ ಅಭಿನಯದ ʻಲಿಯೋʼ ಟ್ರೈಲರ್‌ ರಿಲೀಸ್‌ ಡೇಟ್‌ ಅನೌನ್ಸ್‌!

ಈ ಚಿತ್ರವನ್ನು ಸೆವೆನ್ ಸ್ಕ್ರೀನ್ ಸ್ಟುಡಿಯೊದ ಲಲಿತ್ ಕುಮಾರ್ ನಿರ್ಮಿಸುತ್ತಿದ್ದಾರೆ. ಅನಿರುದ್ಧ್ ರವಿಚಂದರ್ ಸಂಗೀತ ಸಂಯೋಜಿಸಿದ್ದಾರೆ. ʼಲಿಯೋʼ ಚಿತ್ರದಲ್ಲಿ ಸಂಜಯ್ ದತ್ ಅಣ್ಣನ ಪಾತ್ರದಲ್ಲಿ ನಟಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ದಳಪತಿ ವಿಜಯ್‌ (Thalathy Vijay) ಹಾಗೂ ಲೋಕೇಶ್‌ ಕನಕರಾಜ್‌ ʼಲಿಯೋʼ ಸಿನಿಮಾ ಸಖತ್‌ ಹೈಪ್‌ ಕ್ರಿಯೇಟ್‌ ಮಾಡುತ್ತಿದೆ. ಈಗಾಗಲೆ ಸಿನಿಮಾದ ಫಸ್ಟ್‌ ಲುಕ್‌ ಹಾಗೂ ಮೊದಲ ಸಾಂಗ್‌ ʻನಾ ರೆಡಿʼ ಬಿಡುಗಡೆಗೊಂಡಿದೆ. ʻಲಿಯೋʼ ಚಿತ್ರಕ್ಕೆ ಮನೋಜ್ ಪರಮಹಂಸ ಅವರ ಛಾಯಾಗ್ರಹಣ ಮತ್ತು ಫಿಲೋಮಿನ್ ರಾಜ್ ಅವರ ಸಂಕಲನವಿದೆ.

Exit mobile version