Site icon Vistara News

Atlee Kumar: ಲೋಕೇಶ್‌, ಕಾರ್ತಿಕ್ ಸುಬ್ಬರಾಜ್‌ಕ್ಕಿಂತ ನಾನು ಭಿನ್ನ ಎಂದ ಅಟ್ಲೀ!

Atlee Kumar

ಬೆಂಗಳೂರು: ಭಾರತೀಯ ಚಿತ್ರರಂಗದ ಅತ್ಯಂತ ಯಶಸ್ವಿ ನಿರ್ದೇಶಕರಲ್ಲಿ ಈಗ ಅಟ್ಲೀ (Atlee Kumar) ಕೂಡ ಒಬ್ಬರು. ಅಟ್ಲೀ ʻಜವಾನ್‌ʼ ಸಿನಿಮಾ ಮೂಲಕ ಹಿಂದಿ ಚಿತ್ರರಂಗಕ್ಕೂ ಎಂಟ್ರಿ ಕೊಟ್ಟಿದ್ದಾರೆ. ಇತರ ಯಶಸ್ವಿ ನಿರ್ದೇಶಕರ ನಡುವೆ ಹೋಲಿಕೆ ಮಾಡಲು ಈಗಾಗಲೇ ಶುರುವಾಗಿದೆ. ಅಟ್ಲಿ ತಮ್ಮ ಮತ್ತು ಇತರ ಜನಪ್ರಿಯ ನಿರ್ದೇಶಕರ ನಡುವಿನ ವ್ಯತ್ಯಾಸಗಳ ಬಗ್ಗೆ ಸಂದರ್ಶನವೊಂದರಲ್ಲಿ ಮಾತನಾಡಿದ್ದಾರೆ.

ಅಟ್ಲೀ ತಮ್ಮ ಮತ್ತು ಇತರ ಜನಪ್ರಿಯ ನಿರ್ದೇಶಕರ ನಡುವಿನ ವ್ಯತ್ಯಾಸಗಳ ಬಗ್ಗೆ ಸಂವಾದದಲ್ಲಿ ಮಾತನಾಡಿ ʻʻಕಾರ್ತಿಕ್ ಸುಬ್ಬರಾಜ್, ಲೋಕೇಶ್ ಕನಕರಾಜ್, ಮತ್ತು ಪಾ ರಂಜಿತ್ ಅವರಂತಹ ಇತರ ಫೇಮಸ್‌ ತಮಿಳು ನಿರ್ದೇಶಕರಿಗಿಂತ ನಾನು ಭಿನ್ನ. ನೋಡಿದ ದೈಶ್ಯಗಳನ್ನೇ ಮತ್ತೆ ಮತ್ತೆ ತರುತ್ತಾರೆ ಎಂದು ಜನರು ಹಲವು ಬಾರಿ ನನ್ನನ್ನು ಟೀಕೆ ಮಾಡಿದ್ದುಂಟು. ಕಾರ್ತಿಕ್ ಸುಬ್ಬರಾಜ್, ಲೋಕೇಶ್ ಮತ್ತು ಪಾ ರಂಜಿತ್ ಅವರಂತಹ ನನ್ನ ಸ್ನೇಹಿತರನ್ನು ನೋಡಿದರೆ ಅವರ ಸಿನಿಮಾ, ಚಿತ್ರನಿರ್ಮಾಣ, ಸಾಮಾಜಿಕ ಸಮಸ್ಯೆಗಳು, ಇತ್ಯಾದಿ ಕಟೆಂಟ್‌ಗಳು ಒಳಗೊಂಡಿರುತ್ತದೆ. ನಾನು ಮಾಡುವ ಸಿನಿಮಾಗಿಂತ ಭಿನ್ನವಾಗಿರುತ್ತದೆ. ನಾನು ಮಾತ್ರ ಕಮರ್ಷಿಲ್‌ ಸಿನಿಮಾ ಮಾಡುವಲ್ಲಿ ನಂಬುವವನು. ಮಾಸ್‌ ಸಿನಿಮಾವಾಗಿಯೇ ಮಾಡಬೇಕು ಎಂದು ಹೇಳುವವನು. ನನ್ನ ಉದ್ದೇಶ ಪ್ರೇಕ್ಷಕರನ್ನು ರಂಜಿಸಲು ಮತ್ತು ನನ್ನ ಪಾತ್ರಗಳಿಗೆ ಅವರಿಗೆ ಭಾವನೆ ಮೂಡಿಸಲು. ನಾನು ಇಲ್ಲಿಯವರೆಗೆ ಯಶಸ್ವಿಯಾಗಿದ್ದೇನೆ ಎಂದು ನಾನು ಭಾವಿಸುತ್ತೇನೆʼʼಎಂದು ಹೇಳಿಕೊಂಡರು. ತಮಿಳಿನ ಇತರ ಪ್ರಮುಖ ನಿರ್ದೇಶಕರೊಂದಿಗೂ ತಾನು ಸ್ನೇಹಿತನಾಗಿದ್ದೇನೆ ಎಂದು ಅಟ್ಲೀ ಸ್ಪಷ್ಟಪಡಿಸಿದ್ದಾರೆ.

ಅಟ್ಲೀ ಅವರು ಅಲ್ಲು ಅರ್ಜುನ್ ಜತೆ ಸಿನಿಮಾ ಮಾಡಲಿದ್ದಾರೆ ಎಂಬ ವದಂತಿಗಳು ಇತ್ತು. ಈ ಬಗ್ಗೆ ಅಟ್ಲೀ ಮಾತನಾಡಿ ʻʻಅಲ್ಲು ಸರ್ ತುಂಬಾ ಒಳ್ಳೆಯ ಸ್ನೇಹಿತ. ನಾವಿಬ್ಬರೂ ಕಲೆಯನ್ನು ಪ್ರೀತಿಸುತ್ತೇವೆ. ಸಹಜವಾಗಿ, ನಾವು ಏನು ಸಿನಿಮಾ ಮಾಡಬೇಕು ಮತ್ತು ಹೇಗೆ ಸಿನಿಮಾ ಮಾಡಬೇಕು ಎಂಬ ಕಲ್ಪನೆಯನ್ನು ಹೊಂದಿದ್ದೇವೆ. ಚಿತ್ರವು ದೇವರ ಆಶೀರ್ವಾದದೊಂದಿಗೆ ಸರಿಯಾದ ಸ್ಕ್ರಿಪ್ಟ್ ರೂಪದಲ್ಲಿ ಸಿಗಬೇಕು. ಆದ್ದರಿಂದ ಒಳ್ಳೆಯ ಸ್ಕ್ರಿಪ್ಟ್‌ ಸಿಕ್ಕರೇ ಖಂಡಿತ ಮಾಡುತ್ತೇವೆʼʼಎಂದು ಹೇಳಿದರು.

ಇದನ್ನೂ ಓದಿ: Coming Movies 2023: Top 5 Most expected Upcoming movies on 2023

ವಿಜಯ್‌ ಜತೆ ಸಿನಿಮಾ ಮಾಡುವುದು ಪಕ್ಕಾ!

ಥೇರಿ, ಮೆರ್ಸಲ್ ಮತ್ತು ಬಿಗಿಲ್ ಈ ಜೋಡಿಯ ಈ ಎಲ್ಲ ಸಿನಿಮಾಗಳೂ ಹಿಟ್‌ ಆಗಿವೆ. ಈ ಜೋಡಿ ಲಕ್ಷಾಂತರ ಅಭಿಮಾನಿಗಳ ಹೃದಯವನ್ನು ಗೆದ್ದಿದೆ. ಇದೀಗ ಮತ್ತೆ ಹೊಸ ಸಿನಿಮಾ ಮೂಲಕ ದಳಪತಿ ವಿಜಯ್ ಮತ್ತು ಅಟ್ಲೀ ಒಂದಾಗುತ್ತಿದ್ದಾರೆ. ಸಂದರ್ಶನವೊಂದರಲ್ಲಿ ಜವಾನ್ ನಿರ್ದೇಶಕ ಅಟ್ಲೀ ನಾಲ್ಕನೇ ಬಾರಿಗೆ ವಿಜಯ್ ಜತೆ ಮತ್ತೆ ಸಿನಿಮಾ ಮಾಡುವುದಾಗಿ ಸುಳಿವು ಕೊಟ್ಟಿದ್ದಾರೆ.

ಈ ಬಗ್ಗೆ ಅಟ್ಲೀ ಮಾಧ್ಯಮವೊಂದರಲ್ಲಿ ಮಾತನಾಡಿ ʻನಾನು ಕೇವಲ 5 ಸಿನಿಮಾಗಳನ್ನು ಮಾಡಿದ್ದು, ಅದರಲ್ಲಿ 3 ವಿಜಯ್ ಅವರೊಂದಿಗೆ ಮಾಡಿರುವುದಾಗಿದೆ. ಹಾಗಾಗಿ, ಸಮಯ ಬಂದಾಗ ಮತ್ತೆ ಅವರ ಜತೆ ಸಿನಿಮಾ ಮಾಡುತ್ತೇನೆʼʼ ಎಂದು ಖಚಿತಪಡಿಸಿದ್ದಾರೆ.

Exit mobile version