Site icon Vistara News

ತಿರುಪತಿಯಲ್ಲಿ ಅಯೋಧ್ಯೆಯ ವೈಭವ ಸೃಷ್ಟಿ! ದಾಖಲೆ ಬರೆದ ಆದಿಪುರುಷ್​​ ಪ್ರಿ ರಿಲೀಸ್ ಈವೆಂಟ್​

Adipurush pre-release event

#image_title

ತಿರುಪತಿ : ನಟ ಪ್ರಭಾಸ್ ಅವರ ಬಹುನಿರೀಕ್ಷಿತ ಚಿತ್ರ ಆದಿಪುರುಷ್ ನ ಪ್ರಿ ರಿಲೀಸ್ ಈವೆಂಟ್ ಆಧ್ಯಾತ್ಮಿಕ ನಗರ ತಿರುಪತಿಯಲ್ಲಿ ನಡೆಯಿತು. ಈ ಕಾರ್ಯಕ್ರಮವು ಅಭಿಮಾನಿಗಳ ಪಾಲಿಗೆ ಅಪಾರ ಉತ್ಸಾಹ ಉಂಟು ಮಾಡಿತು. ತಿರುಪತಿ ನಗರದ ಮಧ್ಯಭಾಗದಲ್ಲಿ ಅಯೋಧ್ಯೆಯ ಮರುಸೃಷ್ಟಿಸಲಾಗಿತ್ತು. ತಿರುಪತಿಯ ಶ್ರೀ ವೆಂಕಟೇಶ್ವರ ವಿಶ್ವವಿದ್ಯಾಲಯದಲ್ಲಿ ಕಾರ್ಯಕ್ರಮ ಆಯೋಜನೆಗೊಂಡಿದ್ದು ಒಂದು ಲಕ್ಷಕ್ಕೂ ಅಧಿಕ ಅಭಿಮಾನಿಗಳು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಾರೆ. ಆದರೆ, ಸಂಜೆಯ ವೇಳೆಗೆ ಜೋರಾಗಿ ಮಳೆ ಸುರಿಯಿತು. ಅದನ್ನೂ ಲೆಕ್ಕಿಸದೇ ಅಭಿಮಾನಿಗಳು ಅದ್ಧೂರಿ ಕಾರ್ಯಕ್ರಮದಲ್ಲಿ ಪಾಲ್ಗೊಂಡದರು.

ಅಯೋಧ್ಯೆಯ ಪ್ರತಿಕೃತಿಯನ್ನು ಪ್ರದರ್ಶಿಸಲು ಸಂಘಟಕರು ಎಲ್ಇಡಿ ಪರದೆಗಳನ್ನು ಬಳಸಿದ್ದರು. ಅಯೋಧ್ಯೆಯ ರಾಮ ಮಂದಿರ ಸೇರಿದಂತೆ ನಾನಾ ದೃಶ್ಯ ವೈಭಗಳ ದೃಶ್ಯಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ. ಎಸ್ ವಿ ವಿಶ್ವವಿದ್ಯಾಲಯದಲ್ಲಿ ನಿರ್ಮಾಣ ಮಾಡಲಾಗಿದ್ದ ಬೃಹತ್ ವೇದಿಕೆಯ ಮುಂಭಾಗದಲ್ಲಿ ಲಕ್ಷಾಂತರ ಅಭಿಮಾನಿಗಳು ಜಮಾಯಿಸಿದ್ದರು.

ಪ್ರಭಾಸ್ ಅವರ ಅಭಿಮಾನಿಗಳು ಲಕ್ಷಕ್ಕೂ ಮಿಗಿಲಾಗಿ ಇಲ್ಲಿ ಸೇರುವ ಮೂಲಕ ಹೊಸ ದಾಖಲೆ ಸೃಷ್ಟಿಸಿದರು. ಇದು ಭಾರತೀಯ ಚಿತ್ರರಂಗದ ಇತಿಹಾಸದಲ್ಲಿಯೇ ಬೃಹತ್​ ಪ್ರೀ ರಿಲೀಸ್ ಈವೆಂಟ್​ ಎಂಬ ಖ್ಯಾತಿಗೆ ಪಾತ್ರವಾಯಿತು. ಸಿನಿಮಾದ ವಿದೇಶಿ ಥಿಯೇಟರ್​​ಗಳ ಬುಕಿಂಗ್ ಆರಂಭಗೊಂಡಿದ್ದು, ದೇಶದಲ್ಲಿ ಇನ್ನೇನು ಕೆಲವೇ ದಿನಗಳಲ್ಲಿ ಆರಂಭವಾಗಲಿದೆ.

ಆದಿಪುರುಷ್​ ಸಿನಿಮಾ ಶಾರುಖ್​ ಖಾನ್​ ನಟನೆಯ ಪಠಾಣ್ ಸಿನಿಮಾ ಮಾಡಿದ್ದ ಬಾಕ್ಸ್ ಆಫೀಸ್ ದಾಖಲೆಯನ್ನು ಮುರಿಯಲಿದೆ ಎಂದು ಅಭಿಮಾನಿಗಳು ಹೇಳಿಕೊಂಡಿದ್ದಾರೆ. ಅದೇ ರೀತಿ ಪ್ರಭಾಸ್​ ಅವರ ನಟನೆಯ ಬಾಹುಬಲಿ ಸಿನಿಮಾದ ದಾಖಲೆಯೂ ಮುರಿಯಬಹುದೆನ್ನುವುದು ಅವರೆಲ್ಲರ ಅಭಿಪ್ರಾಯ.

ಆದಿಪುರುಷ್​ ಸಿನಿಮಾವನ್ನು ರಾಮಾಯಣದ ಕತೆಯನ್ನು ಆಧರಿಸಿ ನಿರ್ಮಾಣ ಮಾಡಲಾಗಿದೆ. ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ದೇಶಕ ಓಂ ರಾವತ್​ ಅವರು ಈ ಸಿನಿಮಾವನ್ನು ರಚಿಸಿ, ನಿರ್ದೇಶಿಸಿದ್ದಾರೆ. ಪ್ರಭಾಸ್​ ಈ ಸಿನಿಮಾದಲ್ಲಿ ರಾಮನ ಪಾತ್ರ ವಹಿಸಿದ್ದರೆ, ಕೃತಿ ಸನೂನ್​ ಜಾನಕಿಯ ಪಾತ್ರವನ್ನು ವಹಿಸಿದ್ದಾರೆ. ಸನ್ನಿ ಸಿಂಗ್ ಲಕ್ಷ್ಮಣನ ಪಾತ್ರ ಮಾಡಿದ್ದು, ದೇವದತ್ ನಗೆ ಹನುಮಾನ್ ಪಾತ್ರ ಮಾಡಿದ್ದಾರೆ.

ಇದನ್ನೂ ಓದಿ : Adipurush Movie: ಆದಿಪುರುಷ್‌ ಪ್ರೀ ರಿಲೀಸ್ ಈವೆಂಟ್; ತಿರುಪತಿ ತಿಮ್ಮಪ್ಪನ ದರ್ಶನ ಪಡೆದ ಪ್ರಭಾಸ್

ಸಿನಿಮಾದ ಬ್ಯಾಕ್​​ಗ್ರೌಂಡ್​ ಸ್ಕೋರ್ ಅನ್ನು ಸಂಚಿತ್ ಬಲ್ಹಾರಾ ಹಾಗೂ ಅಂಕಿಂತ್​ ಬಲ್ಹಾರ ರೂಪಿಸಿದ್ದಾರೆ. ಅಜಯ್​ ಅತುಲ್​ ಹಾಗೂ ಸಂಕೇತ್​ ಪರಂಪರ ಸಂಗೀತ ಸಂಯೋಜನೆ ಮಾಡಿದ್ದಾರೆ. ಸಂಗೀತ ನಿರ್ದೇಶಕರಾದ ಅಜಯ್​ ಅತುಲ್ ಅವರು ಮುಂಬೈನಿಂದ ಬೈಕ್​ ಸವಾರಿ ಮಾಡಿಕೊಂಡು ತಿರುಪತಿಗೆ ಬಂದು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಾರೆ.

Exit mobile version