Site icon Vistara News

ಶಿವಣ್ಣ ಹುಟ್ಟುಹಬ್ಬಕ್ಕೂ ಮುನ್ನ ಬೈರಾಗಿ ರಿಲೀಸ್, 123ನೇ ಸಿನಿಮಾ ನೋಡಲು ಅಭಿಮಾನಿಗಳ ಕಾತರ

biraagi

ಬೆಂಗಳೂರು: ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಅಭಿನಯಿಸುತ್ತಿರುವ 123ನೇ ಸಿನಿಮಾ ಬೈರಾಗಿ, ಅವರ ಹುಟ್ಟುಹಬ್ಬಕ್ಕೂ ಮುನ್ನ ಬಿಡುಗಡೆಯಾಗಲಿದೆ.

ಜುಲೈ 12 ಶಿವಣ್ಣನ ಹುಟ್ಟುಹಬ್ಬ ವಾಗಿದ್ದು, 60ನೇ ವರ್ಷಕ್ಕೆ ಕಾಲಿಡಲಿದ್ದಾರೆ. ಆದ್ರೆ ಶಿವಣ್ಣ ಹುಟ್ಟುಹಬ್ಬ ಆಚರಿಸುವ ಎರಡು ವಾರ ಮುಂಚಿತವಾಗಿಯೇ ಬೈರಾಗಿ ರಿಲೀಸ್ ಮಾಡಲು ಚಿತ್ರತಂಡ ನಿರ್ಧರಿಸಿದೆ.

ರಾಜ್ಯಾದ್ಯಂತ ಜುಲೈ 1ಕ್ಕೆ ಬೈರಾಗಿ ಥಿಯೇಟರ್ ನಲ್ಲಿ ಅಬ್ಬರಿಸಲು ಮುಹೂರ್ತ ಫಿಕ್ಸ್ ಆಗಿದೆ. ಈ ಸಿನಿಮಾವನ್ನ ವಿಜಯ್ ಮಿಲ್ಟನ್ ನಿರ್ದೇಶಿಸಿದ್ದು, ಕೃಷ್ಣ ಸಾರ್ಥಕ್ ನಿರ್ಮಾಣ ಮಾಡಿದ್ದಾರೆ. ಚಿತ್ರದ ವಿಶೇಷ ಅಂದ್ರೆ ಟಗರು ಸಿನಿಮಾದ ಬಳಿಕ ಶಿವರಾಜ್ ಕುಮಾರ್ ಹಾಗೂ ಡಾಲಿ ಧನಂಜಯ್ ಮತ್ತೆ ಒಂದಾಗಿ ಬೈರಾಗಿ ಚಿತ್ರದಲ್ಲಿ ಕಾಣಿಸಿಕೊಳ್ಳಲಿದಾರೆ. ಪಕ್ಕಾ ಕಮರ್ಷಿಯಲ್ ಸಿನಿಮಾಗೆ ಬೇಕಾಗಿರುವ ಎಲ್ಲಾ ಎಲಿಮೆಂಟ್ಸ್‌ ಅನ್ನು ಹೊತ್ತು ‘ಬೈರಾಗಿ’ ಸಿನಿಮಾ ಅಖಾಡಕ್ಕೆ ಇಳಿಯಲಿದೆ.

Exit mobile version