ಬೆಂಗಳೂರು : ಗೋಲ್ಡ್‌ನ್ ಸ್ಟಾರ್ ಗಣೇಶ್ ಅಭಿನಯಿಸುತ್ತಿರುವ ಬಾನದಾರಿಯಲ್ಲಿ ಸಿನಿಮಾದ ಫಸ್ಟ್ ಲುಕ್ ಹಿಂದೆ ಬಿಡುಗಡೆ ಮಾಡಿತ್ತು. ಹಾಗೇ ನಟಿ ರುಕ್ಮಿಣಿ ವಸಂತ್ ಅವರ ಲುಕ್ ಕೂಡ ಬಿಡುಗಡೆಯಾಗಿತ್ತು. ಅಭಿಮಾನಿಗಳು ಸೋಷಿಯಲ್ ಮಿಡಿಯಾದಲ್ಲಿ ಕಮೆಂಟ್ ಮಾಡುವುದರ ಮೂಲಕ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದರು. ಇದೀಗ ಇನ್ನೋರ್ವ ನಟಿ ರೀಷ್ಮಾ ನಾಣಯ್ಯ ಅವರ ಫಸ್ಟ್ ಲುಕ್ ಅನ್ನು ಇದೀಗ ಚಿತ್ರತಂಡ ರಿವೀಲ್ ಮಾಡಿದೆ.
‘ಜೋಗಿ’ ಪ್ರೇಮ್ ನಿರ್ದೇಶನದ ‘ಏಕ್ ಲವ್ ಯಾ’ ಸಿನಿಮಾದ ಮೂಲಕ ಎಲ್ಲರ ಗಮನಸೆಳೆದ ನಟಿ ರೀಷ್ಮಾ ನಾಣಯ್ಯ. ‘ಏಕ್ ಲವ್ ಯಾ’ ತೆರೆಗೆ ಬರುವುದಕ್ಕೂ ಮುನ್ನವೇ ‘ರಾಣ’ ಸಿನಿಮಾದ ಶೂಟಿಂಗ್ ಮುಗಿಸಿದ್ದ ಅವರು ಬಾನದಾರಿಗೆ ಬಣ್ಣ ಹಚ್ಚುತ್ತಿದ್ದಾರೆ.
ಇದನ್ನೂ ಓದಿ | Golden Star | ಬಾನದಾರಿಯಲ್ಲಿ ಸಿನಿಮಾ First Look ರಿಲೀಸ್
“ನಾನು ವನ್ಯಜೀವಿ ಛಾಯಾಗ್ರಾಹಕ ಕಾದಂಬರಿಯ ಪಾತ್ರವನ್ನು ನಿರ್ವಹಿಸುತ್ತೇನೆ, ನಗುತ್ತಿರುವ ಮತ್ತು ಕಾಡು ಅನ್ವೇಷಿಸಲು ಇಷ್ಟಪಡುವ ಪಾಸಿಟಿವ್ ಹುಡುಗಿ. ನಾನು ಈಗಾಗಲೇ ಫೊಟೋಗ್ರಾಫಿ ಕೋರ್ಸ್ ಮಾಡಿದ್ದೇನೆ, ಆದ್ದರಿಂದ ಈ ಪಾತ್ರವನ್ನು ಮಾಡುವಾಗ ನನಗೆ ಅಷ್ಟೇನು ಕಷ್ಟಕರ ಎಂದೆನಿಸಿಲ್ಲ. ಭಿನ್ನವಾದ ನಟನೆಯೊಂದಿಗೆ ಬರುತ್ತಿದ್ದೇನೆʼ ಎಂದು ಹೇಳುತ್ತಾರೆ ನಟಿ ರೀಷ್ಮಾ.
ನಿರ್ದೇಶಕ ಪ್ರೀತಂ ಗುಬ್ಬಿ ಮಾತನಾಡಿ, “ಸಮೃದ್ಧ ವನ್ಯಜೀವಿಗಳನ್ನು ಹೊಂದಿರುವ ದಕ್ಷಿಣ ಆಫ್ರಿಕಾದಲ್ಲಿ ರೀಷ್ಮಾ ಅವರ ನಟನೆಯ ದೃಶ್ಯಗಳನ್ನು ಪ್ರಧಾನವಾಗಿ ಚಿತ್ರೀಕರಿಸಲಾಗುವುದು. ಅವರ ಪಾತ್ರವು ಅನೇಕ ಮನರಂಜನಾ ಅಂಶಗಳನ್ನು ಹೊಂದಿದೆ ʼ ಎಂದರು.
ವನ್ಯಜೀವಿ ಛಾಯಾಗ್ರಾಹಕಿ ಕಾದಂಬರಿ ಪಾತ್ರದಲ್ಲಿ ರೀಷ್ಮಾ ನಟಿಸಲಿದ್ದಾರೆ. ಪ್ರೀತಾ ಜಯರಾಮನ್ ಅವರ ಕಥೆ ಮತ್ತು ಪ್ರೀತಂ ಗುಬ್ಬಿ ಅವರ ಚಿತ್ರಕಥೆಯೊಂದಿಗೆ, ಮೇ 25 ರಂದು ಚಿತ್ರೀಕರಣ ಪ್ರಾರಂಭವಾಗಲಿದೆ.ಬೆಂಗಳೂರು, ಚೆನ್ನೈ, ವಾರಣಾಸಿ ಮತ್ತು ಆಫ್ರಿಕಾದಲ್ಲಿ ಚಿತ್ರೀಕರಣ ನಡೆಯಲಿದೆ. ವಿ ಹರಿಕೃಷ್ಣ ಸಂಗೀತ ನೀಡಿದರೆ, ಅಭಿಲಾಶ್ ಕಳತಿ ಛಾಯಾಗ್ರಹಣ ಮಾಡುತ್ತಿದ್ದಾರೆ.
ಇದನ್ನೂ ಓದಿ | Banadariyalli : ರುಕ್ಮಿಣಿ ವಸಂತ್ ಫಸ್ಟ್ ಲುಕ್ ರಿಲೀಸ್