Site icon Vistara News

Banadariyalli : ರುಕ್ಮಿಣಿ ವಸಂತ್‌ ಫಸ್ಟ್‌ ಲುಕ್‌ ರಿಲೀಸ್‌

Banadariyalli

ಬೆಂಗಳೂರು : ಈ ಹಿಂದೆ ʼಬಾನದಾರಿಯಲ್ಲಿʼ ಸಿನಿಮಾ ತಂಡ ಗೋಲ್ಡನ್‌ ಸ್ಟಾರ್‌ ಗಣೇಶ ಅವರ ಫಸ್ಟ್‌ ಲುಕ್‌ ರಿಲೀಸ್‌ ಮಾಡಿತ್ತು. ಅಭಿಮಾನಿಗಳು ಭಾರಿ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದರು. ಇದೀಗ ನಾಯಕಿಯ ಫಸ್ಟ್‌ ಲುಕ್‌ ರಿವೀಲ್‌ ಮಾಡುವುದರ ಮೂಲಕ ಅಭಿಮಾನಿಗಳಿಗೆ ಬಂಪರ್‌ ಆಫರ್‌ ನೀಡಿದೆ.

ಇದನ್ನೂ ಓದಿ | ಸಕುಟುಂಬ ಸಮೇತ ಸಿನಿಮಾಗೆ ಬನ್ನಿ! ರಕ್ಷಿತ್‌ ಸಿನಿಮಾ ಮೇ 20ರಂದು ಬಿಡುಗಡೆ

ಇದೀಗ ಚಿತ್ರತಂಡ ನಟಿ ರುಕ್ಮಣಿ ವಸಂತ್‌ ಅವರ ಫಸ್ಟ್‌ ಲುಕ್‌ ಬಿಡುಗಡೆ ಮಾಡಿದೆ. ಇದರಲ್ಲಿ ನಾಯಕಿ ಸರ್ಫಿಂಗ್‌ ಆಟಗಾರ್ತಿಯಾಗಿ ಮಿಂಚುತ್ತಿದ್ದಾರೆ. ಸರ್ಫಿಂಗ್‌ ಗೇಮ್‌ ಇದೇ ಮೊದಲ ಬಾರಿಗೆ ಕನ್ನಡದಲ್ಲಿ ಹೊಸ ಕಾನ್‌ಸೆಪ್ಟ್‌ ಆಗಿ ತೋರುತ್ತಿದೆ. ಈಗಾಗಲೇ ಇದರ ಕುರಿತು ಶೂಟಿಂಗ್‌ ನಡೆದಿದ್ದು, ಸರ್ಫಿಂಗ್‌ ಟ್ರೈನರ್‌ ಬಂದು ಕಲಿಸಿಕೊಡುತ್ತಿರುವುದಾಗಿ ಚಿತ್ರತಂಡ ಹೇಳಿಕೊಂಡಿದೆ.

ಮನಸ್ಸಿಗೆ ಆಹ್ಲಾದಕರವಾಗಿರುವ, ಮುದ ನೀಡುವ ಶೀರ್ಷಿಕೆ. ಸಿನಿಮಾ ಜನರಲ್ಲಿ ಭಾರಿ ಕುತೂಹಲ ಮೂಡಿಸುವಂತಿದೆ ಬಾನದಾರಿಯಲ್ಲಿ ಸಿನಿಮಾ.

ʼ ನೋಡು ಎಂಥ ಚೆಂದʼ ಎಂದು ಟ್ಯಾಗ್‌ಲೈನ್‌ ಕೂಡ ನೀಡಿದ್ದು, ಮೇ ತಿಂಗಳಲ್ಲಿ ಚಿತ್ರ ಸೆಟ್ಟೇರಲಿದೆ. ಇದೀಗ ಬಾನದಾರಿಯ ಫಸ್ಟ್‌ ಲುಕ್‌ ಬಿಡುಗಡೆಗೊಂಡಿದೆ. ಯುಗಾದಿ ಹಬ್ಬದಂದು ಮೊದಲ ಪೋಸ್ಟರನ್ನು ಚಿತ್ರತಂಡ ಹಂಚಿಕೊಂಡಿತ್ತು.

ಇದರಲ್ಲಿ ಇನ್ನೂ ವಿಶೇಷ ಏನೆಂದರೆ ಬೆಂಗಳೂರು ಜತೆಗೆ ಆಫ್ರಿಕಾದಲ್ಲಿ ಕೂಡ ಶೂಟಿಂಗ್‌ ಅಗಲಿದೆ.

ಪ್ರತೀಮ್‌ ಗುಬ್ಬಿ ಅವರ ಫಿಲ್ಮ್‌ ಬ್ಯಾನರ್‌ ಅಡಿಯಲ್ಲಿ ತೆರೆ ಕಾಣಲಿದ್ದು ಶ್ರೀ ವಾರಿ ಟಾಕಿಸ್‌ ಚಿತ್ರವನ್ನು ಪ್ರೊಡ್ಯೂಸ್‌ ಮಾಡಿದೆ. ಸದ್ಯದಲ್ಲೇ ಚಿತ್ರೀಕರಣ ಪ್ರಾರಂಭಗೊಂಡಿದ್ದು, ಹೊಸ ಜರ್ನಿಯನ್ನು ನೀಡಲಿದೆ. ಮಾಸ್ತಿ ಸಂಭಾಷಣೆ ಬರೆದಿದ್ದಾರೆ.

ಇದನ್ನೂ ಓದಿ | Golden Star | ಬಾನದಾರಿಯಲ್ಲಿ ಸಿನಿಮಾ First Look ರಿಲೀಸ್‌

Exit mobile version