Site icon Vistara News

BBK SEASON 10: ಬಿಗ್‌ಬಾಸ್‌ ಮನೆಯಲ್ಲೂ ಬಿಡ್ಡಿಂಗ್‌ ಜೋರು; ಯಾರು, ಯಾವ ತಂಡ?

tanisha sangeeta

tanisha sangeeta

ಬೆಂಗಳೂರು: ಬಿಗ್‌ಬಾಸ್‌ ಕನ್ನಡ ಸೀಸನ್‌ 10 (BBK SEASON 10) ದಿನದಿಂದ ದಿನಕ್ಕೆ ವೀಕ್ಷಕರನ್ನು ಸೆಳೆಯುತ್ತಿದೆ. ಅದಕ್ಕೆ ತಕ್ಕಂತೆ ಟಿಆರ್‌ಪಿಯೂ ಹೆಚ್ಚಾಗುತ್ತಿದೆ. ಇದೀಗ ಬಿಗ್‌ಬಾಸ್‌ ಶೋ 11ನೇ ವಾರಕ್ಕೆ ಕಾಲಿಟ್ಟಿದೆ. ಇದೀಗ ಬಿಗ್‌ಬಾಸ್‌ ಸ್ಪರ್ಧಿಗಳಿಗೆ ಹೊಸ ಟಾಸ್ಕ್‌ ನೀಡಿದೆ. ಈ ಕುರಿತಾದ ಪ್ರೋಮೊ ಹೊರ ಬಿದ್ದಿದೆ.

ಮಂಗಳವಾರದ ಟಾಸ್ಕ್​ ಬಗ್ಗೆ ಬಿಗ್​ಬಾಸ್​ ಘೋಷಣೆ ಮಾಡಿದೆ. ಆದರೆ ಟಾಸ್ಕ್​ ಆರಂಭದ ಮೊದಲೇ ಸ್ಪರ್ಧಿಗಳ ನಡುವೆ ಕಿಚ್ಚು ಹೊತ್ತಿಕೊಂಡಿದೆ. ಟಾಸ್ಕ್​ಗಾಗಿ ತನಿಷಾ ಮತ್ತು ಸಂಗೀತಾ ಅವರನ್ನು ನಾಯಕರನ್ನಾಗಿ ಮಾಡಲಾಗಿದೆ. ಐಪಿಎಲ್​ ಹರಾಜು ಪ್ರಕ್ರಿಯೆಯಂತೆ ಇವರಿಬ್ಬರೂ ಕೂಡ ಪ್ರತ್ಯೇಕವಾಗಿ ತಮ್ಮ ತಂಡಕ್ಕೆ ಆಟಗಾರರನ್ನು ಖರೀದಿಸಬೇಕು ಎನ್ನುವುದು ಬಿಗ್‌ಬಾಸ್‌ ಕಡೆಯಿಂದ ಬಂದ ಸೂಚನೆ. ಇದಕ್ಕಾಗಿ ಪ್ರತ್ಯೇಕವಾಗಿ ಸಂಗೀತಾ ಮತ್ತು ತನಿಷಾ ಇಬ್ಬರಿಗೂ ಟಿಕೆಟ್​ಗಳನ್ನೂ ನೀಡಲಾಗಿದೆ. ಹೀಗಾಗಿ ಇವರು ತಮ್ಮ ತಂಡಕ್ಕಾಗಿ ಸದಸ್ಯರನ್ನು ಆಯ್ಕೆ ಮಾಡಲು ಪೈಪೋಟಿ ನಡೆಸಿದ್ದಾರೆ.

ಸಂಗೀತಾ ತಮ್ಮ ಮೊದಲ ಸದಸ್ಯರನ್ನಾಗಿ ನಮೃತಾ ಅವರನ್ನು ಆಯ್ಕೆ ಮಾಡುತ್ತಾರೆ. ಅದೇ ವೇಳೆ ತನಿಷಾ ತಮ್ಮ ತಂಡಕ್ಕಾಗಿ ವಿನಯ್​ ಅವರನ್ನು ಖರೀದಿಸಿದರು. ನಂತರ ತನಿಷಾ ಮತ್ತು ಸಂಗೀತಾ ಇಬ್ಬರೂ ತಮ್ಮ ತಂಡಕ್ಕೆ ಬರುವಂತೆ ಕಾರ್ತಿಕ್​ ಅವರನ್ನು ಮನವೊಲಿಸಿದ್ದಾರೆ. ಕೊನೆಗೂ ಕಾರ್ತಿಕ್​ ಸಂಗೀತಾ ತಂಡಕ್ಕೆ ಹೋಗುತ್ತಾರೆ. ಆದರೆ ಅವರಿಬ್ಬರ ಮಧ್ಯೆ ಏನೋ ಕಿರಿಕ್‌ ನಡೆದಿದೆ. ಬಳಿಕ ಕಾರ್ತಿಕ್​ ತನ್ನ ಕೈಯಲ್ಲಿದ್ದ ಟಿಕೆಟ್​ ಅನ್ನು ಮತ್ತೆ ಸಂಗೀತಾ ಕೈಗೆ ಕೊಟ್ಟು ಹೋಗುತ್ತಾರೆ. ಕಾರ್ತಿಕ್‌ನನ್ನು ವಿನಯ್‌ ತಮ್ಮ ತಂಡಕ್ಕೆ ಖುಷಿಯಿಂದಲೇ ಆಹ್ವಾನಿಸುವುದು ಪ್ರೋಮೊದಲ್ಲಿ ಕಂಡು ಬಂದಿದೆ. ಇನ್ನು ಟಾಸ್ಕ್‌ ನಡೆಯುವ ವೇಳೆ ಮತ್ತೆ ಯಾವ ರೀತಿಯ ಗಲಾಟೆ ನಡೆಯಲಿದೆ ಎನ್ನುವ ಪ್ರಶ್ನೆ ವೀಕ್ಷಕರದ್ದು.

ದೂರ ಆದ ಕಾರ್ತಿಕ್‌-ಸಂಗೀತಾ

ಈ ಬಾರಿಯ ‘ಸೂಪರ್‌ ಸಂಡೆ ವಿತ್ ಸುದೀಪ್‌’ ಎಪಿಸೋಡಿನಲ್ಲಿ ಒಂದು ಅಚ್ಚರಿಯ ಘಟನೆ ನಡೆಯಿತು. ಆತ್ಮೀಯರು ಎನಿಸಿಕೊಂಡಿದ್ದ ಕಾರ್ತಿಕ್‌ ಮತ್ತು ಸಂಗೀತಾ ಮಧ್ಯೆ ಬಿರುಕು ಮೂಡಿರುವ ಬೆಳವಣಿಗೆ ಕಂಡು ಬಂದಿದೆ. ಮನೆಯೊಳಗೆ ಒಂದು ಒಂದು ಬೆರ್ಚಪ್ಪನನ್ನು ನಿಲ್ಲಿಸಲಾಗಿತ್ತು. ಅದರ ಮೇಲೆ ಒಂದು ಮಡಿಕೆ ಇಟ್ಟು ಅದರಲ್ಲಿ ಸದಸ್ಯರೊಬ್ಬರ ಫೋಟೊ ಇಟ್ಟು, ಯಾವ ವಿಚಾರಕ್ಕೆ ಅವರ ಮೇಲೆ ಕೋಪ ಇದೆ ಎಂಬುದನ್ನು ಹೇಳಿ ಆಮೇಲೆ ಆ ಮಡಿಕೆಯನ್ನು ಒಡೆಯಬೇಕಿತ್ತು. ಎಲ್ಲರೂ ಊಹಿಸುವಂತೆ ವಿನಯ್‌, ಸಂಗೀತಾ ಫೋಟೊ ಇಟ್ಟು ಮಡಿಕೆ ಒಡೆದಿದ್ದಾರೆ. ಸಂಗೀತಾ ಕೂಡ ವಿನಯ್ ಫೋಟೊ ಇಟ್ಟು ಮಡಿಕೆ ಒಡೆದಿದ್ದಾರೆ. ಆದರೆ ಈ ನಡುವೆ ಇನ್ನೊಂದು ಶಾಕಿಂಗ್ ಘಟನೆ ನಡೆದಿದೆ. ಅದು ಕಾರ್ತಿಕ್ ಅವರದ್ದು. ಕಾರ್ತಿಕ್ ಮಡಿಕೆಯ ಮೇಲಿಟ್ಟಿದ್ದು ಸಂಗೀತಾ ಫೋಟೊವನ್ನು!

ಇದನ್ನೂ ಓದಿ: BBK SEASON 10: ಸಂಗೀತಾ ಮಾಡಿದ ಎಡವಟ್ಟು; ಹಸಿವು ಕಂಟ್ರೋಲ್‌ ಮಾಡ್ಕೋಳ್ಳೆ ಬೇಕು!

ಸದಾಕಾಲ ನನ್ನ ಫ್ರೆಂಡ್‌ ಎಂದೇ ಹೇಳಿಕೊಂಡು ಬಂದಿದ್ದ ಕಾರ್ತಿಕ್, ಹಲವು ಸಂದರ್ಭಗಳಲ್ಲಿ ಸಂಗೀತಾ ಪರವಾಗಿ ಗಟ್ಟಿಯಾಗಿ ನಿಂತಿದ್ದರು ಕೂಡ. ಆದರೆ ಹಿಂದಿನ ವಾರದದಲ್ಲಿ ಪ್ರತಾಪ್ ಜತೆ ಮಾತನಾಡುತ್ತ, ʼ‘ಕಾರ್ತಿಕ್‌ ಬಕೆಟ್ ಹಿಡಿತಿದಾರೆ ಅನಿಸ್ತಿಲ್ವಾ?ʼ’ ಎಂದು ಸಂಗೀತಾ ಹೇಳಿದ್ದು ಕಾರ್ತಿಕ್‌ಗೆ ನೋವನ್ನುಂಟು ಮಾಡಿದೆ. ಹಾಗೆಯೇ ʼ‘ಕಾರ್ತಿಕ್ ಅವರಿಂದ ಸಂಗೀತಾರನ್ನು ಮೈನಸ್ ಮಾಡಿದ್ರೆ ಜೀರೊ ಬರುತ್ತದೆʼ’ ಎಂದಿರುವುದೂ ಅವರಿಗೆ ಅಸಮಧಾನವನ್ನುಂಟು ಮಾಡಿತ್ತು. ಇದೆಲ್ಲ ಕಾರಣ ಕೊಟ್ಟು ಸಂಗೀತಾ ಫೋಟೊ ಇಟ್ಟು ಮಡಿಕೆ ಒಡೆದಿರುವ ಕಾರ್ತಿಕ್, ʼ‘ನನ್ನಿಂದ ಸಂಗೀತಾರನ್ನು ಮೈನಸ್ ಮಾಡಿದ್ದೇನೆ. ನಾನು ಜಿರೊ ಅನ್ನುವುದನ್ನು ಪ್ರೂವ್ ಮಾಡಲಿʼ’ ಎಂದು ಸವಾಲು ಹಾಕಿದ್ದರು.

ಬಿಗ್​ಬಾಸ್ ಜಿಯೋ ಸಿನಿಮಾಸ್​ನಲ್ಲಿ ಪ್ರತಿದಿನ ಲೈವ್ ಪ್ರಸಾರವಾಗುತ್ತಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಮೆಂಟ್ ಮೂಲಕ ತಿಳಿಸಿ

Exit mobile version