Site icon Vistara News

BBK Season 10 : ಅಕ್ಟೋಬರ್‌ 8 ರಿಂದ ಬಿಗ್‌ ಬಾಸ್‌ ಆಟ; ಚಾರ್ಲಿ ಎಂಟ್ರಿ ಕನ್ಫರ್ಮ್, ಉಳಿದವರು ಯಾರು ?

BBK Season 10 KicchaSudeep

ಬೆಂಗಳೂರು: ಬಿಗ್‌ ಬಾಸ್‌ ಹತ್ತನೇ (BBK Season 10) ಸೀಸನ್‌ ಗ್ರ್ಯಾಂಡ್‌ ಪ್ರೀಮಿಯರ್‌ ಅಕ್ಟೋಬರ್ 8ರ ಸಂಜೆ 6ಕ್ಕೆ ನಡೆಯಲಿದೆ. 100 ದಿನದ ಬಿಗ್‌ ಬಾಸ್‌ ಹತ್ತನೇ ಸೀಸನ್‌ ಆಟವು ಅ.9 ರಿಂದ ಪ್ರತಿ ರಾತ್ರಿ 9:30ಕ್ಕೆ ನಡೆಯಲಿದೆ. ಈ ಸಂಬಂಧ ಮಂಗಳವಾರ ಬಿಗ್‌ ಬಾಸ್‌ (Bigg Boss Kannada) ಟೀಂ ಸುದ್ದಿಗೋಷ್ಠಿ ನಡೆಸಿತು.

ಇತ್ತ ಪ್ರಸಾರದ ದಿನಾಂಕ ಫಿಕ್ಸ್‌ ಆದ ಬೆನ್ನಲ್ಲೇ ಸ್ಪರ್ಧಿಗಳು ಯಾರೆಲ್ಲ ಇರಬಹುದೆಂಬ ಚರ್ಚೆಗಳು ಸೋಷಿಯಲ್‌ ಮೀಡಿಯಾದಲ್ಲಿ ಆಗುತ್ತಿವೆ. ಬೆಸ್ಟ್ ರೇಟೆಡ್ ಚಲನಚಿತ್ರ 777 ಚಾರ್ಲಿ, ಬಿಗ್ ಬಾಸ್ ಕನ್ನಡ ಸೀಸನ್ 10ರ ಮೊದಲ ಕಂಟೆಸ್ಟೆಂಟ್ ಆಗಿ ಎಂಟ್ರಿ ಕೊಡುತ್ತಿದೆ.

100 ದಿನದ ಆಟ ಆಡುವವರು ಯಾರ್ಯಾರು?

ನಟ ಕಿಚ್ಚ ಸುದೀಪ್ ನಡೆಸಿಕೊಡುವ ಬಿಗ್‌ ಬಾಗ್‌ ಸೀಸನ್‌ 10ರಲ್ಲಿ ಕೆಜಿಎಫ್ ಖ್ಯಾತಿಯ ರೂಪ ರಾಯಪ್ಪ, ನಾಗಿಣಿ ಸೀರಿಯಲ್ ಮೂಲಕ ಜನಪ್ರಿಯತೆ ಪಡೆದ ನಟಿ ನಮ್ರತಾ ಗೌಡ ಹಾಗೂ ಸೋಶಿಯಲ್ ಮೀಡಿಯಾದಲ್ಲಿ ರೀಲ್ಸ್ ಮಾಡುತ್ತ ಜನಪ್ರಿಯತೆ ಪಡೆದ ಭೂಮಿಕಾ ಬಸವರಾಜ್ ಹೆಸರು ಬಿಗ್ ಬಾಸ್ ಲಿಸ್ಟ್‌ನಲ್ಲಿದೆ. ಜತೆಗೆ ಕಿರುತೆರೆ ನಟಿ ರಂಜನಿ ರಾಘವನ್, ನಟಿ ಅದ್ವಿತಿ ಶೆಟ್ಟಿ, ರಾಬರ್ಟ್ ನಟಿ ಆಶಾ ಭಟ್ ಹೆಸರು ಕೂಡ ಇದೆ.

ಹೊಡಿಬಡಿ ಇಲ್ಲದಿದ್ದರೆ ಸಾಕಪ್ಪ- ನಟ ಕಿಚ್ಚ ಸುದೀಪ್

ಸುದ್ದಿಗೋಷ್ಠಿಗೆ ತಡವಾಗಿ ಬಂದಿದ್ದಕ್ಕೆ ಕ್ಷಮೆ ಕೇಳಿ ಮಾತು ಶುರು ಮಾಡಿದ ನಟ ಕಿಚ್ಚ ಸುದೀಪ್‌, ಬಿಗ್ ಬಾಸ್ ಹೇಗೆ ಸ್ಕ್ರಿಪ್ಟ್ ಅಲ್ಲವೋ ಹಾಗೇ ನನ್ನ ಎಮೋಷನ್ಸ್‌ ಕೂಡ ಸ್ಕ್ರಿಪ್ಟ್‌ ಅಲ್ಲ. ಪ್ರತಿ ಸೀಸನ್‌ನಲ್ಲೂ 18 ವೈವಿಧ್ಯಮಯ ಕಂಟೆಸ್ಟೆಂಟ್ಸ್ ಇರುತ್ತಾರೆ. ಕೆಲವೊಮ್ಮೆ ನಾನು ಸೀರಿಯಸ್ ಆಗಿ ಇರಲು ಆಗುವುದಿಲ್ಲ.

ಮೊದಲಿಗೆ ಬಿಗ್‌ಬಾಸ್‌ಗೆ ಶುರು ಮಾಡುವಾಗ ರೂಲ್ಸ್ ಬೇರೆಯೇ ಇತ್ತು. ಸ್ಪರ್ಧಿಗಳ ಜಗಳ ಬಿಡಿಸುವಂತಿರಲಿಲ್ಲ. ಜತೆಗೆ ಅವರನ್ನು ಒಂದುಗೂಡಿಸುವ ಪ್ರಮೇಯವು ಇರಲಿಲ್ಲ. ಆದರೆ ಅದೆಲ್ಲವನ್ನು ಬ್ರೇಕ್‌ ಮಾಡಬೇಕಾಯಿತು. ಈ ಬಾರಿ ಯಾರೂ ಕಿತ್ತಾಡಿಕೊಳ್ಳದೆ, ಬಡಿದಾಡಿಕೊಳ್ಳದಿದ್ದರೆ ಸಾಕಪ್ಪಾ ಎಂದರು.

ಜನರ ನಿರೀಕ್ಷೆಗಳನ್ನು ನಾವು ರೀಚ್ ಮಾಡಬೇಕು. ಇದಕ್ಕಾಗಿ ಪ್ರಕಾಶ್ ಹಾಗೂ ತಂಡ ಒಳ್ಳೆಯ ಶ್ರಮ ಹಾಕಿ ಪ್ರೋಮೋ ಮಾಡಿದ್ದಾರೆ. ಬಿಗ್ ಬಾಸ್ ಸೀಸನ್ 10ರ ಪ್ರೋಮೊ ಮಾಡುವಾಗ ನನಗೆ ಡೈಲಾಗ್‌ ಇರಲಿಲ್ಲ. ಶೂಟಿಂಗ್ ವೇಳೆ ಇವರೆಲ್ಲಾ ತುಂಬಾ ಹೆದರಿದ್ದರು. ಪ್ರೋಮೊಗೆ ಡೈಲಾಗ್ ಇರಲೇಬೇಕು ಅಂತಿಲ್ಲ‌. ಡೈಲಾಗ್ ಇಲ್ಲದೇ ಇರುವುದು ಒಳ್ಳೆಯದು ಆಯಿತು. ಯಾಕೆಂದರೆ ಅನಾರೋಗ್ಯದ ನಡುವೆ ಆ ಪ್ರೋಮೊವನ್ನು ಮಾಡಬೇಕಾಯಿತು ಎಂದರು.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version