ಬೆಂಗಳೂರು: ಕರಾವಳಿ ಹುಡುಗ ಅಸ್ತಿಕ್ ಅವಿನಾಶ್ ಶೆಟ್ಟಿ, ನಟನೆ, ಕ್ರೀಡೆ, ಮಾಡೆಲಿಂಗ್ ಹೀಗೆ ಹಲವು ಕ್ಷೇತ್ರಗಳಲ್ಲಿ ತೊಡಗಿಕೊಂಡವರು. ʼಕ್ರಿಕೆಟ್ ನನ್ನ ಫಸ್ಟ್ ಲವ್ʼ ಎನ್ನುತ್ತಲೇ ಬಿಗ್ ಬಾಸ್ (BBK SEASON 10) ಮನೆಯೊಳಗೆ ವೈಲ್ಡ್‌ಕಾರ್ಡ್ ಎಂಟ್ರಿ ಕೊಟ್ಟಿರುವ ಅವಿನಾಶ್, JioCinemaಗೆ ನೀಡಿರುವ ಸಂದರ್ಶನದ ಪೂರ್ಣಪಾಠ ಇಲ್ಲಿದೆ.
ಕರಾವಳಿ ಹುಡುಗ ಬೆಂಗಳೂರಿಗೆ ಬಂದು ಫಿಲ್ಮ್ ಮಾಡುವುದು ತುಂಬ ಕಷ್ಟ. ಆದ್ರೆ ಅಪ್ಪು ಸರ್ ಬೆಂಬಲ ಮತ್ತು ನಿಮ್ಮೆಲ್ಲರ ಆಶೀರ್ವಾದದಿಂದ ಒಂದಲ್ಲ, ಮೂರು ಕನ್ನಡ ಸಿನಿಮಾ ಮಾಡಿದ್ದೀನಿ ನಾನು. ಈ ಪ್ರೀತಿಯಿಂದ ನಾನು ಕರಾವಳಿ ಕಡೆಗೂ ಒಂದೆರಡು ಸಿನಿಮಾ ಮಾಡಿದ್ದೀನಿ. ಮಾಡೆಲಿಂಗ್ ಮಾಡಿದೀನಿ. ಮೊಥಾಯ್ ಫೈಟರ್ ಕೂಡ ಹೌದು. ಆದ್ರೆ ನನ್ನ ಮುಖ್ಯ ಪ್ಯಾಷನ್ ಅಂದ್ರೆ ಅದು ಕ್ರಿಕೆಟ್. ಕ್ರಿಕೆಟ್ ಆಡ್ತಾ ಆಡ್ತಾನೇ ಇಲ್ಲಿವರೆಗೂ ಬಂದಿದೀನಿ. ಅಂದ್ರೆ ಬಿಗ್‌ಬಾಸ್ ಕನ್ನಡದಕ್ಕೆ ವೈಲ್ಡ್ ಕಾರ್ಡ್ ಕಂಟೆಸ್ಟೆಂಟ್ ಆಗಿ ಈಗಷ್ಟೇ ಒಳಗೆ ಹೋಗ್ತಿದೀನಿ. ಅಂದ್ರೆ, ಇದು ನನ್ನ ಬದುಕಿನ ಅತ್ಯುತ್ತಮ ಕ್ಷಣ. ಮನಸ್ಸಿನ ಮೂಲೆಯಲ್ಲಿ ಹೇಗಿರಬಹುದು? ಏನಾಗಬಹುದು? ಎಂಬ ಕುತೂಹಲವಂತೂ ಇದ್ದೇ ಇದೆ. ಒಳಗೆ ಹೇಗಿರುತ್ತದೆ ಎಂಬ ಐಡಿಯಾನೇ ಇಲ್ಲ ನಂಗೆ ಎಂದು ಅವಿನಾಶ್ ಹೇಳಿದ್ದಾರೆ.
ಮನೆಯವರ ರಿಯಾಕ್ಷನ್
ಆರಂಭದಲ್ಲಿ ನಾನು ತಾಯಿಗೆ ಹೇಳಿರಲೇ ಇಲ್ಲ. ಇಲ್ಲಿಗೆ ಬರುವ ದಿನ ಬೆಳಗ್ಗೆ ಹೋಗಿ ಅವರ ಕಾಲುಮುಟ್ಟಿ ನಮಸ್ಕರಿಸಿ, ‘ಬಿಗ್‌ಬಾಸ್‌ಗೆ ಹೋಗ್ತಿದೀನಿ’ ಅಂತ ಹೇಳಿದೆ. ಅವರು ನಂಬ್ತಾನೇ ಇಲ್ಲ. ‘ನೀನು ಹೇಗೆ ಮ್ಯಾನೇಜ್ ಮಾಡ್ತೀಯಾ?’ ಅಂತ ಅನುಮಾನದಿಂದಲೂ ಕೇಳಿದರು. ಆದ್ರೆ ನಾನು ಬೆಂಗಳೂರಿಗೆ ಹೊರಡುವ ಹೊತ್ತಿನಲ್ಲಿ ಅಮ್ಮ ತುಂಬ ಖುಷಿಯಾಗಿದ್ದರು. ಇದು ನನ್ನ ಕುಟುಂಬಕ್ಕೆ ಹೆಮ್ಮೆಯ ಗಳಿಗೆ ಎನ್ನುತ್ತಾರೆ ಅವಿನಾಶ್.
ಕ್ರಿಕೆಟ್ ಫಸ್ಟ್ ಲವ್!
ಕ್ರಿಕೆಟ್ ನನ್ನ ಫಸ್ಟ್ ಲವ್. ನಿಮಗೆ ಫಸ್ಟ್ ಲವ್ ಆಗಿದ್ಯಾ ಅಂತ ಕೇಳಿದ್ರೆ ಹೌದು, ಕ್ರಿಕೆಟ್ ಜತೆಗೆ ಆಗಿದೆ ಎಂದು ಹೇಳುವಷ್ಟು ಪ್ರೀತಿಸ್ತೀನಿ. ಹಾಗಾಗಿ ಬಿಗ್‌ಬಾಸ್ ಮನೆಯೊಳಗೆ ಖಂಡಿತ ನಾನು ಕ್ರಿಕೆಟ್ ಅನ್ನು ಮಿಸ್ ಮಾಡ್ಕೋತೀನಿ ಎಂದು ಅವಿನಾಶ್ ಭಾವುಕರಾದರು.
ಸಿದ್ಧತೆ ಹೇಗಿತ್ತು?
ಸಿದ್ಧತೆ ಅಂದ್ರೆ, ರಿಸರ್ಚ ಮಾಡ್ಕೊಂಡೇನೂ ಬಂದಿಲ್ಲ. ರಿಸರ್ಚ್ ಮಾಡ್ಕೊಂಡ್ ಬಂದ್ರೆ ಇಲ್ಲಿ ವರ್ಕೌಟ್ ಆಗೋದೂ ಇಲ್ಲ. ಒಳಗೆ ನೀವಾಗಿ ಹೇಗಿರ್ತೀರಾ ಅನ್ನೋದೇ ವರ್ಕೌಟ್ ಆಗೋದು. ಖಂಡಿತ ನಾನು ಎಪಿಸೋಡ್‌ಗಳನ್ನು ನೋಡ್ಕೊಂಡು ಬಂದಿದೀನಿ. ಯಾರು ಹೇಗೆ ಆಡ್ತಿದ್ದಾರೆ ಎಂಬುದನ್ನೂ ತಿಳ್ಕೊಂಡಿದೀನಿ. ಯಾರ ಸ್ಟ್ರೆಂಥ್ ಏನು, ಯಾರ ವೀಕ್‌ನೆಸ್ ಏನು ಎಲ್ಲವನ್ನೂ ನೊಡ್ಕೊಂಡು ಬಂದಿದೀನಿ. ಆದ್ರೆ ಒಬ್ಬ ಸ್ಪೋರ್ಟ್ಸ್‌ಮನ್ ಆಗಿ ನನಗೆ ನನ್ನದೇ ಆದ ಪ್ಲ್ಯಾನ್‌ಗಳಿವೆ. ಹತ್ತೂ ಸೀಸನ್‌ಗಳಲ್ಲಿ ವಿಜಯ ರಾಘವೇಂದ್ರ, ಪ್ರಥಮ್ ಅವರನ್ನು ನಾನು ತುಂಬ ಇಷ್ಟಪಟ್ಟಿದ್ದೇನೆ. ಕಳೆದ ಸೀಸನ್‌ನಲ್ಲಿನ ರೂಪೇಶ್ ಶೆಟ್ಟಿ ಕೂಡ ನನ್ನ ಸ್ನೇಹಿತ. ಜತೆಗೆ ಶ್ರುತಿ. ಇವರನ್ನು ನಾನು ಇಷ್ಟಪಟ್ಟಿದ್ದೇನೆ ಎಂದು ವಿವರಿಸಿದ್ದಾರೆ.
ಸ್ಟ್ರೆಂಥ್ ಮತ್ತು ವೀಕ್‌ನೆಸ್
ನಾನು ಯಾವುದೇ ಸಂದರ್ಭದಲ್ಲಿಯೂ ಗಿವ್ ಅಪ್ ಮಾಡುವುದಿಲ್ಲ. ಇದೇ ನನ್ನ ಶಕ್ತಿ. ನಾನು ಎಲ್ಲೂ ಬಿಟ್ಕೊಡಲ್ಲ. ಏನಾದ್ರೂ ಕಮ್‌ಬ್ಯಾಕ್ ಮಾಡ್ತೀನಿ. ವೀಕ್‌ನೆಸ್ ಏನೂ ಇಲ್ಲ. ಆದ್ರೆ ನಾನು ಮನೆಯಡುಗೆ ಇಷ್ಟಪಡ್ತೀನಿ. ಅದನ್ನು ವೀಕ್‌ನೆಸ್ ಅಂತ ಹೇಳ್ಬೋದೇನೋ. ಆದ್ರೆ ಅದನ್ನು ಟ್ಯಾಕಲ್ ಮಾಡ್ಬೋದು ಅನ್ಸತ್ತೆ. ನಾನು ತುಂಬ ಭಾವಜೀವಿ. ಆದ್ರೆ ಅಷ್ಟೇ ಅಗ್ರೆಸಿವ್ ಕೂಡ ಹೌದು. ನಾನು ಮನೆಯೊಳಗೆ ಹೋಗ್ತಿರೋದೇ ಎಲ್ಲ ವಿಭಾಗಗಳಲ್ಲಿಯೂ ಚೆನ್ನಾಗಿ ಪ್ರದರ್ಶನ ಕೊಡ್ಬೇಕು ಅಂತ. ಮನೆಯೊಳಗೆ ಯಾವ್ದೇ ರೋಲ್ ಕೊಟ್ರೂ ನನ್ನ ಬೆಸ್ಟ್ ಅನ್ನು ಕೊಡ್ತೀನಿ. ನಾನು ಸಿಂಗಲ್. ನಾನು ಮನೆಯೊಳಗೆ ಹೋಗುತ್ತಿರುವುದು ಸಂಬಂಧ ಬೆಳೆಸಲಲ್ಲ. ನನ್ನ ಆಟ ಆಡಬೇಕು ಎಂದೇ ಹೋಗುತ್ತಿರುವುದು. ಆದರೆ ಅಲ್ಲಿ ಏನಾಗುತ್ತದೆಯೋ ನನಗೂ ಗೊತ್ತಿಲ್ಲ. ಬದುಕಿನಲ್ಲಿ ಯಾವಾಗ ಏನು ಬೇಕಾದರೂ ಆಗಬಹುದಲ್ವಾ? ಒಳ್ಳೆಯ ವಿಷಯಗಳು ಸಂಭವಿಸುವುದಕ್ಕೆ ನಾನಂತೂ ಓಪನ್ ಆಗಿದ್ದೇನೆ. ನಾನೊಂದು ಖಾಲಿ ಹಾಳೆಯಾಗಿ ಒಳಗೆ ಹೋಗುತ್ತಿದ್ದೇನೆ ಎಂದು ಅವಿನಾಸ್ ಹೇಳಿದ್ದಾರೆ.
ಇದನ್ನೂ ಓದಿ: BBK SEASON 10: ಕನ್ನಡ ಬಿಗ್ ಬಾಸ್‌ಗೆ ವಿಕ್ಕಿ ಕೌಶಲ್ ಬಂದಿದ್ದಾರಾ?!
ಈ ಸೀಸನ್‌ನಲ್ಲಿ ತನಿಷಾ ನನ್ನ ಫೆವರೇಟ್ ಸ್ಪರ್ಧಿ. ಎಲ್ಲರೂ ಅವರ ಸಾಮರ್ಥ್ಯ ನೀಡಿದ್ದಾರೆ. ಅವರಲ್ಲಿ ವಿನಯ್ ನನಗೆ ಸ್ಪರ್ಧೆ ನೀಡುತ್ತಾರೆ ಅನಿಸುತ್ತದೆ. ಹಾಗೆಯೇ ಕಾರ್ತಿಕ್ ಕೂಡ. ಇವರಿಬ್ಬರೂ ನನಗೆ ಹೇಗೆ ಸ್ಪರ್ಧೆ ಒಡ್ಡುತ್ತಾರೆ ಅಂತ ನೋಡ್ಬೇಕು. ಹಾಗೆಯೇ ಹೆಣ್ಣುಮಕ್ಕಳೂ ಯಾವ್ದಕ್ಕೂ ಕಮ್ಮಿ ಇಲ್ಲದಂತೆ ಆಡ್ತಿದ್ದಾರೆ. ಏನೇ ಸಂದರ್ಭ ಬಂದ್ರೂ ನಾನು ಬಿಟ್ಟು ಕೊಡಲ್ಲ. ವೀಕ್ ಆಗಲ್ಲ. ಜನರ ಪ್ರೀತಿ ನನ್ನ ಮೇಲಿದೆ. ಅದನ್ನು ನಾನು ಭದ್ರವಾಗಿಟ್ಟುಕೊಳ್ಳುತ್ತೇನೆ ಎಂದು ಅವರು ಆತ್ಮವಿಶ್ವಾಸದಿಂದ ನುಡಿದಿದ್ದಾರೆ.