BBK SEASON 10: ನಾನು ಭಾವುಕ, ಅಷ್ಟೇ ಅಗ್ರೆಸಿವ್; ಅಸ್ತಿಕ್ ಅವಿನಾಶ್‌ ಶೆಟ್ಟಿ - Vistara News

ಕಿರುತೆರೆ

BBK SEASON 10: ನಾನು ಭಾವುಕ, ಅಷ್ಟೇ ಅಗ್ರೆಸಿವ್; ಅಸ್ತಿಕ್ ಅವಿನಾಶ್‌ ಶೆಟ್ಟಿ

BBK SEASON 10: ವೈಲ್ಡ್‌ ಕಾರ್ಡ್‌ ಮೂಲಕ ಬಿಗ್‌ ಬಾಸ್‌ ಮನೆಯೊಳಗೆ ಮಾಡೆಲ್‌, ನಟ ಅವಿನಾಶ್‌ ಶೆಟ್ಟಿ ಪ್ರವೇಶಿಸಿದ್ದಾರೆ. ಅವರೊಂದಿಗೆ ನಡೆಸಿದ ಸಂದರ್ಶನ ಇಲ್ಲಿದೆ.

VISTARANEWS.COM


on

avinash shetty
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಕರಾವಳಿ ಹುಡುಗ ಅಸ್ತಿಕ್ ಅವಿನಾಶ್ ಶೆಟ್ಟಿ, ನಟನೆ, ಕ್ರೀಡೆ, ಮಾಡೆಲಿಂಗ್ ಹೀಗೆ ಹಲವು ಕ್ಷೇತ್ರಗಳಲ್ಲಿ ತೊಡಗಿಕೊಂಡವರು. ʼಕ್ರಿಕೆಟ್‌ ನನ್ನ ಫಸ್ಟ್ ಲವ್ʼ ಎನ್ನುತ್ತಲೇ ಬಿಗ್‌ ಬಾಸ್ (BBK SEASON 10) ಮನೆಯೊಳಗೆ ವೈಲ್ಡ್‌ಕಾರ್ಡ್‌ ಎಂಟ್ರಿ ಕೊಟ್ಟಿರುವ ಅವಿನಾಶ್‌, JioCinemaಗೆ ನೀಡಿರುವ ಸಂದರ್ಶನದ ಪೂರ್ಣಪಾಠ ಇಲ್ಲಿದೆ.

ಕರಾವಳಿ ಹುಡುಗ ಬೆಂಗಳೂರಿಗೆ ಬಂದು ಫಿಲ್ಮ್‌ ಮಾಡುವುದು ತುಂಬ ಕಷ್ಟ. ಆದ್ರೆ ಅಪ್ಪು ಸರ್ ಬೆಂಬಲ ಮತ್ತು ನಿಮ್ಮೆಲ್ಲರ ಆಶೀರ್ವಾದದಿಂದ ಒಂದಲ್ಲ, ಮೂರು ಕನ್ನಡ ಸಿನಿಮಾ ಮಾಡಿದ್ದೀನಿ ನಾನು. ಈ ಪ್ರೀತಿಯಿಂದ ನಾನು ಕರಾವಳಿ ಕಡೆಗೂ ಒಂದೆರಡು ಸಿನಿಮಾ ಮಾಡಿದ್ದೀನಿ. ಮಾಡೆಲಿಂಗ್ ಮಾಡಿದೀನಿ. ಮೊಥಾಯ್ ಫೈಟರ್ ಕೂಡ ಹೌದು. ಆದ್ರೆ ನನ್ನ ಮುಖ್ಯ ಪ್ಯಾಷನ್‌ ಅಂದ್ರೆ ಅದು ಕ್ರಿಕೆಟ್. ಕ್ರಿಕೆಟ್ ಆಡ್ತಾ ಆಡ್ತಾನೇ ಇಲ್ಲಿವರೆಗೂ ಬಂದಿದೀನಿ. ಅಂದ್ರೆ ಬಿಗ್‌ಬಾಸ್‌ ಕನ್ನಡದಕ್ಕೆ ವೈಲ್ಡ್‌ ಕಾರ್ಡ್‌ ಕಂಟೆಸ್ಟೆಂಟ್‌ ಆಗಿ ಈಗಷ್ಟೇ ಒಳಗೆ ಹೋಗ್ತಿದೀನಿ. ಅಂದ್ರೆ, ಇದು ನನ್ನ ಬದುಕಿನ ಅತ್ಯುತ್ತಮ ಕ್ಷಣ. ಮನಸ್ಸಿನ ಮೂಲೆಯಲ್ಲಿ ಹೇಗಿರಬಹುದು? ಏನಾಗಬಹುದು? ಎಂಬ ಕುತೂಹಲವಂತೂ ಇದ್ದೇ ಇದೆ. ಒಳಗೆ ಹೇಗಿರುತ್ತದೆ ಎಂಬ ಐಡಿಯಾನೇ ಇಲ್ಲ ನಂಗೆ ಎಂದು ಅವಿನಾಶ್‌ ಹೇಳಿದ್ದಾರೆ.

ಮನೆಯವರ ರಿಯಾಕ್ಷನ್

ಆರಂಭದಲ್ಲಿ ನಾನು ತಾಯಿಗೆ ಹೇಳಿರಲೇ ಇಲ್ಲ. ಇಲ್ಲಿಗೆ ಬರುವ ದಿನ ಬೆಳಗ್ಗೆ ಹೋಗಿ ಅವರ ಕಾಲುಮುಟ್ಟಿ ನಮಸ್ಕರಿಸಿ, ‘ಬಿಗ್‌ಬಾಸ್‌ಗೆ ಹೋಗ್ತಿದೀನಿ’ ಅಂತ ಹೇಳಿದೆ. ಅವರು ನಂಬ್ತಾನೇ ಇಲ್ಲ. ‘ನೀನು ಹೇಗೆ ಮ್ಯಾನೇಜ್ ಮಾಡ್ತೀಯಾ?’ ಅಂತ ಅನುಮಾನದಿಂದಲೂ ಕೇಳಿದರು. ಆದ್ರೆ ನಾನು ಬೆಂಗಳೂರಿಗೆ ಹೊರಡುವ ಹೊತ್ತಿನಲ್ಲಿ ಅಮ್ಮ ತುಂಬ ಖುಷಿಯಾಗಿದ್ದರು. ಇದು ನನ್ನ ಕುಟುಂಬಕ್ಕೆ ಹೆಮ್ಮೆಯ ಗಳಿಗೆ ಎನ್ನುತ್ತಾರೆ ಅವಿನಾಶ್‌.

ಕ್ರಿಕೆಟ್ ಫಸ್ಟ್ ಲವ್!

ಕ್ರಿಕೆಟ್ ನನ್ನ ಫಸ್ಟ್ ಲವ್. ನಿಮಗೆ ಫಸ್ಟ್ ಲವ್ ಆಗಿದ್ಯಾ ಅಂತ ಕೇಳಿದ್ರೆ ಹೌದು, ಕ್ರಿಕೆಟ್ ಜತೆಗೆ ಆಗಿದೆ ಎಂದು ಹೇಳುವಷ್ಟು ಪ್ರೀತಿಸ್ತೀನಿ. ಹಾಗಾಗಿ ಬಿಗ್‌ಬಾಸ್ ಮನೆಯೊಳಗೆ ಖಂಡಿತ ನಾನು ಕ್ರಿಕೆಟ್‌ ಅನ್ನು ಮಿಸ್ ಮಾಡ್ಕೋತೀನಿ ಎಂದು ಅವಿನಾಶ್‌ ಭಾವುಕರಾದರು.

ಸಿದ್ಧತೆ ಹೇಗಿತ್ತು?

ಸಿದ್ಧತೆ ಅಂದ್ರೆ, ರಿಸರ್ಚ ಮಾಡ್ಕೊಂಡೇನೂ ಬಂದಿಲ್ಲ. ರಿಸರ್ಚ್‌ ಮಾಡ್ಕೊಂಡ್ ಬಂದ್ರೆ ಇಲ್ಲಿ ವರ್ಕೌಟ್ ಆಗೋದೂ ಇಲ್ಲ. ಒಳಗೆ ನೀವಾಗಿ ಹೇಗಿರ್ತೀರಾ ಅನ್ನೋದೇ ವರ್ಕೌಟ್ ಆಗೋದು. ಖಂಡಿತ ನಾನು ಎಪಿಸೋಡ್‌ಗಳನ್ನು ನೋಡ್ಕೊಂಡು ಬಂದಿದೀನಿ. ಯಾರು ಹೇಗೆ ಆಡ್ತಿದ್ದಾರೆ ಎಂಬುದನ್ನೂ ತಿಳ್ಕೊಂಡಿದೀನಿ. ಯಾರ ಸ್ಟ್ರೆಂಥ್ ಏನು, ಯಾರ ವೀಕ್‌ನೆಸ್ ಏನು ಎಲ್ಲವನ್ನೂ ನೊಡ್ಕೊಂಡು ಬಂದಿದೀನಿ. ಆದ್ರೆ ಒಬ್ಬ ಸ್ಪೋರ್ಟ್ಸ್‌ಮನ್ ಆಗಿ ನನಗೆ ನನ್ನದೇ ಆದ ಪ್ಲ್ಯಾನ್‌ಗಳಿವೆ. ಹತ್ತೂ ಸೀಸನ್‌ಗಳಲ್ಲಿ ವಿಜಯ ರಾಘವೇಂದ್ರ, ಪ್ರಥಮ್‌ ಅವರನ್ನು ನಾನು ತುಂಬ ಇಷ್ಟಪಟ್ಟಿದ್ದೇನೆ. ಕಳೆದ ಸೀಸನ್‌ನಲ್ಲಿನ ರೂಪೇಶ್‌ ಶೆಟ್ಟಿ ಕೂಡ ನನ್ನ ಸ್ನೇಹಿತ. ಜತೆಗೆ ಶ್ರುತಿ. ಇವರನ್ನು ನಾನು ಇಷ್ಟಪಟ್ಟಿದ್ದೇನೆ ಎಂದು ವಿವರಿಸಿದ್ದಾರೆ.

ಸ್ಟ್ರೆಂಥ್ ಮತ್ತು ವೀಕ್‌ನೆಸ್‌

ನಾನು ಯಾವುದೇ ಸಂದರ್ಭದಲ್ಲಿಯೂ ಗಿವ್‌ ಅಪ್ ಮಾಡುವುದಿಲ್ಲ. ಇದೇ ನನ್ನ ಶಕ್ತಿ. ನಾನು ಎಲ್ಲೂ ಬಿಟ್ಕೊಡಲ್ಲ. ಏನಾದ್ರೂ ಕಮ್‌ಬ್ಯಾಕ್ ಮಾಡ್ತೀನಿ. ವೀಕ್‌ನೆಸ್ ಏನೂ ಇಲ್ಲ. ಆದ್ರೆ ನಾನು ಮನೆಯಡುಗೆ ಇಷ್ಟಪಡ್ತೀನಿ. ಅದನ್ನು ವೀಕ್‌ನೆಸ್ ಅಂತ ಹೇಳ್ಬೋದೇನೋ. ಆದ್ರೆ ಅದನ್ನು ಟ್ಯಾಕಲ್ ಮಾಡ್ಬೋದು ಅನ್ಸತ್ತೆ. ನಾನು ತುಂಬ ಭಾವಜೀವಿ. ಆದ್ರೆ ಅಷ್ಟೇ ಅಗ್ರೆಸಿವ್ ಕೂಡ ಹೌದು. ನಾನು ಮನೆಯೊಳಗೆ ಹೋಗ್ತಿರೋದೇ ಎಲ್ಲ ವಿಭಾಗಗಳಲ್ಲಿಯೂ ಚೆನ್ನಾಗಿ ಪ್ರದರ್ಶನ ಕೊಡ್ಬೇಕು ಅಂತ. ಮನೆಯೊಳಗೆ ಯಾವ್ದೇ ರೋಲ್ ಕೊಟ್ರೂ ನನ್ನ ಬೆಸ್ಟ್ ಅನ್ನು ಕೊಡ್ತೀನಿ. ನಾನು ಸಿಂಗಲ್. ನಾನು ಮನೆಯೊಳಗೆ ಹೋಗುತ್ತಿರುವುದು ಸಂಬಂಧ ಬೆಳೆಸಲಲ್ಲ. ನನ್ನ ಆಟ ಆಡಬೇಕು ಎಂದೇ ಹೋಗುತ್ತಿರುವುದು. ಆದರೆ ಅಲ್ಲಿ ಏನಾಗುತ್ತದೆಯೋ ನನಗೂ ಗೊತ್ತಿಲ್ಲ. ಬದುಕಿನಲ್ಲಿ ಯಾವಾಗ ಏನು ಬೇಕಾದರೂ ಆಗಬಹುದಲ್ವಾ? ಒಳ್ಳೆಯ ವಿಷಯಗಳು ಸಂಭವಿಸುವುದಕ್ಕೆ ನಾನಂತೂ ಓಪನ್ ಆಗಿದ್ದೇನೆ. ನಾನೊಂದು ಖಾಲಿ ಹಾಳೆಯಾಗಿ ಒಳಗೆ ಹೋಗುತ್ತಿದ್ದೇನೆ ಎಂದು ಅವಿನಾಸ್‌ ಹೇಳಿದ್ದಾರೆ.

ಇದನ್ನೂ ಓದಿ: BBK SEASON 10: ಕನ್ನಡ ಬಿಗ್ ಬಾಸ್‌ಗೆ ವಿಕ್ಕಿ ಕೌಶಲ್‌ ಬಂದಿದ್ದಾರಾ?!

ಈ ಸೀಸನ್‌ನಲ್ಲಿ ತನಿಷಾ ನನ್ನ ಫೆವರೇಟ್ ಸ್ಪರ್ಧಿ. ಎಲ್ಲರೂ ಅವರ ಸಾಮರ್ಥ್ಯ ನೀಡಿದ್ದಾರೆ. ಅವರಲ್ಲಿ ವಿನಯ್ ನನಗೆ ಸ್ಪರ್ಧೆ ನೀಡುತ್ತಾರೆ ಅನಿಸುತ್ತದೆ. ಹಾಗೆಯೇ ಕಾರ್ತಿಕ್‌ ಕೂಡ. ಇವರಿಬ್ಬರೂ ನನಗೆ ಹೇಗೆ ಸ್ಪರ್ಧೆ ಒಡ್ಡುತ್ತಾರೆ ಅಂತ ನೋಡ್ಬೇಕು. ಹಾಗೆಯೇ ಹೆಣ್ಣುಮಕ್ಕಳೂ ಯಾವ್ದಕ್ಕೂ ಕಮ್ಮಿ ಇಲ್ಲದಂತೆ ಆಡ್ತಿದ್ದಾರೆ. ಏನೇ ಸಂದರ್ಭ ಬಂದ್ರೂ ನಾನು ಬಿಟ್ಟು ಕೊಡಲ್ಲ. ವೀಕ್‌ ಆಗಲ್ಲ. ಜನರ ಪ್ರೀತಿ ನನ್ನ ಮೇಲಿದೆ. ಅದನ್ನು ನಾನು ಭದ್ರವಾಗಿಟ್ಟುಕೊಳ್ಳುತ್ತೇನೆ ಎಂದು ಅವರು ಆತ್ಮವಿಶ್ವಾಸದಿಂದ ನುಡಿದಿದ್ದಾರೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಸಿನಿಮಾ

Pavithra Jayaram: ಪವಿತ್ರ ಜಯರಾಂಗೆ ಅಂತಿಮ ವಿದಾಯ; ಭಯದಲ್ಲೇ ಪ್ರಾಣ ಬಿಟ್ರಾ ನಟಿ?

Pavithra Jayaram: ನಟಿ ಕರ್ನಾಟಕದಲ್ಲಿ ಹುಟ್ಟಿದ್ದರೂ ಕೂಡ ಹೆಚ್ಚು ಫೇಮಸ್‌ ಆದದ್ದು ತೆಲುಗಿನ ‘ತ್ರಿನಯನಿ’ ಧಾರಾವಾಹಿಯಿಂದ . ಈ ಬಗ್ಗೆ ನಟಿ ಈ ಹಿಂದೆ ಮಾಧ್ಯಮವೊಂದರಲ್ಲಿ ಹೇಳಿಕೊಂಡಿದ್ದರು. ʻʻನಾನು ಹುಟ್ಟಿ ಬೆಳೆದದ್ದು ಕರ್ನಾಟಕದಲ್ಲಿ. ಆದರೆ ಕನ್ನಡಕ್ಕಿಂತ ನನಗೆ ಹೆಚ್ಚು ಹೆಸರು ಕೊಟ್ಟಿದ್ದು ತೆಲುಗು. ‘ತ್ರಿನಯನಿ’ ಧಾರಾವಾಹಿ ಮುಂಚೆ ಅನೇಕ ಕನ್ನಡ ಧಾರಾವಾಹಿಯಲ್ಲಿ ನಟಿಸಿದ್ದರು ಅಷ್ಟಾಗಿ ಫಾಲೋವರ್ಸ್‌ ಇರಲಿಲ್ಲ.

VISTARANEWS.COM


on

Pavithra Jayaram died in the accident may alive if the ambulance arrived
Koo

ಬೆಂಗಳೂರು: ತೆಲುಗಿನ ‘ತ್ರಿನಯನಿ’ ಧಾರಾವಾಹಿ (Trinayani serial) ಜನಪ್ರಿಯರಾಗಿರುವ ಕನ್ನಡತಿ ಪವಿತ್ರ ಜಯರಾಂ (Pavithra Jayaram) ಅಪಘಾತಕ್ಕೀಡಾಗಿ ಸ್ಥಳದಲ್ಲೇ ಮೇ.12ರಂದು ಮೃತಪಟ್ಟಿದ್ದರು. ಆಂಧ್ರಪ್ರದೇಶದ ಕರ್ನೂಲು ಸಮೀಪದಲ್ಲಿ (ಮೇ.12) ಮುಂಜಾನೆ ಅಪಘಾತವಾಗಿತ್ತು. ಮೂಲತಃ ಕನ್ನಡಿಗರಾದ ಪವಿತ್ರ ತೆಲುಗಿನ ತ್ರಿನಯನಿ ಧಾರವಾಹಿಯಲ್ಲಿ ಜನಪ್ರಿಯರಾಗಿದ್ದರು. ಕನ್ನಡದ ʻರೋಬೊ ಫ್ಯಾಮಿಲಿʼ ಮೂಲಕ ಕಿರುತೆರೆಗೆ ಎಂಟ್ರಿಕೊಟ್ಟಿದ್ದ ಪವಿತ್ರ ಮೂಲತಃ ಮಂಡ್ಯ ತಾಲೂಕಿನ ಹನಕೆರೆಯವರು. ನಟಿ ಪ್ರಯಾಣಿಸುತ್ತಿದ್ದ ಕಾರು ಎದುರಿಗೆ ಬಂದ ಬಸ್‌ ಡಿಕ್ಕಿ ಹೊಡದಿತ್ತು. ಅಪಘಾತವಾದ ಕೂಡಲೇ ಆಂಬ್ಯುಲೆನ್ಸ್‌ ಸರಿಯಾದ ಸಮಯಕ್ಕೆ ಬಾರದೆ ಇದ್ದಿದ್ದಕ್ಕೆ ಅಪಘಾತ ಸಂಭವಿಸಿದೆ ಎಂದು ಸಹನಟ ಚಂದ್ರಕಾಂತ್ ಆರೋಪ ಮಾಡಿದ್ದಾರೆ.

ನಟಿ ರೋಬೊ ಫ್ಯಾಮಿಲಿ, ಜೋಕಾಲಿ, ನೀಲಿ, ರಾಧಾರಮಣ ಧಾರವಾಹಿಯಲ್ಲಿ ನಟಿಸಿ ಮನೆಮಾತಾಗಿದ್ದರು. ಇನ್ನು ತೆಲುಗಿನ ‘ನಿನ್ನೆ ಪೆಲ್ಲಡತಾ’ ಅನ್ನೋ ಜನಪ್ರಿಯ ಧಾರಾವಾಹಿಯಲ್ಲೂ ನಟಿಸಿದ್ದರು. ಇದೀಗ ನಟಿಯ ಅಂತ್ಯಕ್ರಿಯೆ ಕೂಡ ನೆರವೇರಿದೆ. ಸಹನಟ ಚಂದ್ರಕಾಂತ್ ಮಾಧ್ಯಮದ ಜತೆ ಮಾತನಾಡಿ ʻʻಪವಿತ್ರಗೆ ಏನು ಗಾಯ ಆಗಿರಲಿಲ್ಲ ಭಯದಲ್ಲೇ ಉಸಿರು ಹೋಯ್ತು. ಅವರಿಗೆ ಏನೂ ಪೆಟ್ಟಾಗಿಲ್ಲ. ಆಂಬ್ಯುಲೆನ್ಸ್ 20 ನಿಮಿಷ ಮುಂಚೆ ಬಂದಿದ್ದರೆ, ಬಹುಶ: ಅವರು ಬದುಕುತ್ತಿದ್ದರು. ಅಪಘಾತವಾದಾಗ ಅವರು ಉಸಿರಾಡುತ್ತಿದ್ದರು” ಎಂದು ಭಾವುಕರಾಗಿ ಹೇಳಿಕೊಂಡಿದ್ದಾರೆ.

ಇದನ್ನೂ ಓದಿ: Pavithra Jayaram: ತೆಲುಗಿನ ‘ತ್ರಿನಯನಿ’ ಧಾರಾವಾಹಿ ನಟಿ, ಕನ್ನಡತಿ ಪವಿತ್ರ ಜಯರಾಂ ಅಪಘಾತದಲ್ಲಿ ನಿಧನ

ಅಪಘಾತವಾದ ಕಾರಿನಲ್ಲಿ ನಟಿ ಪವಿತ್ರಾ ಜೊತೆ ಅವರ ಸಂಬಂಧಿ ಅಪೇಕ್ಷಾ, ಚಾಲಕ ಶ್ರೀಕಾಂತ್, ಸಹನಟ ಚಂದ್ರಕಾಂತ್ ಪ್ರಯಾಣ ಮಾಡುತ್ತಿದ್ದರು. ಇವರೆಲ್ಲರಿಗೂ ಗಂಭೀರ ಗಾಯಗಳಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆದರೆ, ಸಹನಟ ಚಂದ್ರಕಾಂತ್ ಚಿಕಿತ್ಸೆ ಪಡೆದು ಪವಿತ್ರ ಜಯರಾಂ ಅಂತ್ಯಕ್ರಿಯೆ ಪಾಲ್ಗೊಂಡಿದ್ದರು.

ನಟಿ ಕರ್ನಾಟಕದಲ್ಲಿ ಹುಟ್ಟಿದ್ದರೂ ಕೂಡ ಹೆಚ್ಚು ಫೇಮಸ್‌ ಆದದ್ದು ತೆಲುಗಿನ ‘ತ್ರಿನಯನಿ’ ಧಾರಾವಾಹಿಯಿಂದ . ಈ ಬಗ್ಗೆ ನಟಿ ಈ ಹಿಂದೆ ಮಾಧ್ಯಮವೊಂದರಲ್ಲಿ ಹೇಳಿಕೊಂಡಿದ್ದರು. ʻʻನಾನು ಹುಟ್ಟಿ ಬೆಳೆದದ್ದು ಕರ್ನಾಟಕದಲ್ಲಿ. ಆದರೆ ಕನ್ನಡಕ್ಕಿಂತ ನನಗೆ ಹೆಚ್ಚು ಹೆಸರು ಕೊಟ್ಟಿದ್ದು ತೆಲುಗು. ‘ತ್ರಿನಯನಿ’ ಧಾರಾವಾಹಿ ಮುಂಚೆ ಅನೇಕ ಕನ್ನಡ ಧಾರಾವಾಹಿಯಲ್ಲಿ ನಟಿಸಿದ್ದರು ಅಷ್ಟಾಗಿ ಫಾಲೋವರ್ಸ್‌ ಇರಲಿಲ್ಲ. ಆದರೆ ‘ತ್ರಿನಯನಿ’ ಧಾರಾವಾಹಿ ಕನ್ನಡದಲ್ಲಿಯೂ ಡಬ್‌ ಆಗುತ್ತಿತ್ತು. ಹೀಗಾಗಿ ಕನ್ನಡದಲ್ಲಿಯೂ ತುಂಬಾ ಫ್ಯಾನ್ ಪೇಜ್‌ಗಳು ಶುರುವಾದವುʼʼ ಎಂದಿದ್ದರು.

Continue Reading

ಕಿರುತೆರೆ

Vijay Surya: ತಾಯಂದಿರ ದಿನ ತನ್ನ ಹೆಸರನ್ನೇ ಬದಲಿಸಿಕೊಂಡ ʻಅಗ್ನಿಸಾಕ್ಷಿ’ ನಟ! ಹೊಸ ಹೆಸರೇನು?

Vijay Surya: ವಿಜಯ್ ಸೂರ್ಯ ಅವರ ಕಿರುತೆರೆ ಪಯಣ ಶುರುವಾಗಿದ್ದು ‘ಉತ್ತರಾಯಣ’ ಧಾರಾವಾಹಿಯ ಮೂಲಕ.’ಲಕ್ಷ್ಮಿ ಬಾರಮ್ಮ’ ಧಾರಾವಾಹಿಯಲ್ಲಿ ಸಿದ್ಧಾರ್ಥ್ ಆಗಿ ಅಭಿನಯಿಸಿದರು ವಿಜಯ್ ಸೂರ್ಯ. ಮುಂದೆ ‘ಅಗ್ನಿಸಾಕ್ಷಿ’ ಧಾರಾವಾಹಿಯಲ್ಲಿಯೂ ನಾಯಕ ಸಿದ್ಧಾರ್ಥ್ ಆಗಿ ಕಂಡಿದ್ದರು.ಈ ಬಾರಿ ವಿಶೇಷವಾಗಿ ಅಮ್ಮಂದಿರ ದಿನಾಚರಣೆಯನ್ನು ಆಚರಿಸಿದ್ದಾರೆ ನಟ.

VISTARANEWS.COM


on

Vijay Surya changes his name on mothers day
Koo

ʻಅಗ್ನಿಸಾಕ್ಷಿ’ ,’ನಮ್ಮ ಲಚ್ಚಿ’ ಧಾರಾವಾಹಿ ಖ್ಯಾತಿಯ ನಟ ವಿಜಯ್ ಸೂರ್ಯ (Vijay Suriya) ಅವರು ಈ ಬಾರಿ ವಿಶೇಷವಾಗಿ ಅಮ್ಮಂದಿರ ದಿನಾಚರಣೆಯನ್ನು ಆಚರಿಸಿದ್ದಾರೆ.

ಇಂದಿನಿಂದ ನಾನು ನನ್ನ ಹೆಸರನ್ನು ʻವಿಜಯ್ ಲಲಿತಾ ಸೂರ್ಯʼ ಎಂದು ಬದಲಿಸಿಕೊಳ್ಳುತ್ತಿದ್ದೇನೆ. ಲಲಿತಾ ನನ್ನ ಅಮ್ಮನ ಹೆಸರು. ನನ್ನ ಪಾಲಿನ ಉಸಿರು ಎಂದು ವಿಜಯ್ ಸೂರ್ಯ ಹೇಳಿದ್ದಾರೆ. ಈ ಮೂಲಕ ತಮ್ಮ ಹೆಸರನ್ನು ಬದಲಿಸಿಕೊಂಡಿದ್ದಾರೆ ನಟ.

ಇದನ್ನೂ ಓದಿ: Puneeth Parva | ಅಪ್ಪುವಿನ ಮಾಸ್‌ ಡೈಲಾಗ್‌ ಹೇಳಿದ ಧ್ರುವ ಸರ್ಜಾ: ದುನಿಯಾ ವಿಜಯ್‌ ಭಾವುಕ

ವಿಜಯ್‌ ಸೂರ್ಯ ಪೋಸ್ಟ್‌ ಮಾಡಿ. ʻʻಅಮ್ಮ ಹಚ್ಚಿದೊಂದು ಹಣತೆ
ಇನ್ನೂ ಬೆಳಗಿದೆ..
ಮನಕೆ ಮಬ್ಬು ಕವಿಯದಂತೆ
ಸದಾ ಕಾದಿದೆ..

ಎಂ ಆರ್ ಕಮಲಾ ಅವರು ಬರೆದ ಈ ಸಾಲನ್ನು ಮನದಲ್ಲಿ ನೆನೆಯುತ್ತಾ ಅಮ್ಮನಿಗೊಂದು ಭಾವುಕ ನಮನ ಸಲ್ಲಿಸುತ್ತೇನೆ. ಹ್ಯಾಪಿ ಮದರ್ಸ್‌ ಡೇ ಅಮ್ಮ.

ಇಷ್ಟು ಹೇಳಿದರೆ ಸಾಕಾ ? ಅಮ್ಮ ಪ್ರತಿ ಕ್ಷಣದ ಮಿಡಿತ ಅಲ್ವಾ ? ಈ ಪ್ರಶ್ನೆ ನನ್ನನ್ನು ಸದಾ ಕಾಡಿದೆ ಇದಕ್ಕೆ ಉತ್ತರ ಹುಡುಕಲು ಹೊರಟಾಗ ಅನ್ನಿಸಿದ್ದು ನನ್ನ ಹೆಸರಿನಲ್ಲಿ ಅಮ್ಮನ ಹೆಸರು ಬೆರೆತರೆ ಹೇಗೆ ಎಂಬ ಭಾವ. ಅದನ್ನು ಅಳವಡಿಸಿಕೊಳ್ಳಲು ಅಮ್ಮಂದಿರ ದಿನಕ್ಕಿಂತ ವಿಶೇಷ ಸಂದರ್ಭ ಯಾವುದಿದೆ ಅಲ್ವಾ ?

ಹೌದು ಇಂದಿನಿಂದ ನಾನು ನನ್ನ ಹೆಸರನ್ನು ʻವಿಜಯ್ ಲಲಿತಾ ಸೂರ್ಯʼ ಎಂದು ಬದಲಿಸಿಕೊಳ್ಳುತ್ತಿದ್ದೇನೆ. ಲಲಿತಾ ನನ್ನ ಅಮ್ಮನ ಹೆಸರು. ನನ್ನ ಪಾಲಿನ ಉಸಿರು.

ಜಗತ್ತಿನ ಎಲ್ಲ ಅಮ್ಮಂದಿರಿಗೂ ನನ್ನ ಶುಭಾಶಯಗಳು. ʻನಿಮ್ಮವನುʼ , ವಿಜಯ್ ಲಲಿತಾ ಸೂರ್ಯ…ʼʼಎಂದು ಬರೆದುಕೊಂಡಿದ್ದಾರೆ.

ತಾಯಿಗಾಗಿ ಹೆಸರನ್ನೇ ಬದಲಿಸಿಕೊಂಡ ನಟನ ಈ ನಡೆಗೆ ಅಭಿಮಾನಿಗಳು ಸಾಕಷ್ಟು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

ವಿಜಯ್ ಸೂರ್ಯ ಅವರ ಕಿರುತೆರೆ ಪಯಣ ಶುರುವಾಗಿದ್ದು ‘ಉತ್ತರಾಯಣ’ ಧಾರಾವಾಹಿಯ ಮೂಲಕ.’ಲಕ್ಷ್ಮಿ ಬಾರಮ್ಮ’ ಧಾರಾವಾಹಿಯಲ್ಲಿ ಸಿದ್ಧಾರ್ಥ್ ಆಗಿ ಅಭಿನಯಿಸಿದರು ವಿಜಯ್ ಸೂರ್ಯ. ಮುಂದೆ ‘ಅಗ್ನಿಸಾಕ್ಷಿ’ ಧಾರಾವಾಹಿಯಲ್ಲಿಯೂ ನಾಯಕ ಸಿದ್ಧಾರ್ಥ್ ಆಗಿ ಕಂಡಿದ್ದರು.

Continue Reading

ಕಿರುತೆರೆ

Jyoti Rai: ವೈರಲ್ ವಿಡಿಯೊ ಬೆನ್ನಲ್ಲೇ ಜ್ಯೋತಿ ರೈ ಟೆಂಪಲ್‌ ರನ್‌!

Jyoti Rai: ತಿರುಪತಿ ತಿಮ್ಮಪ್ಪನ ಸನ್ನಿಧಿಯಲ್ಲಿ ಜ್ಯೋತಿ ರೈ ಅವರನ್ನ ಅವರ ಅಭಿಮಾನಿಗಳು ಮಾತನಾಡಿಸಿದ್ದಾರೆ. ಜ್ಯೋತಿ ರೈ ಕೂಡ ಅಲ್ಲಿನ ಸಿಬ್ಬಂದಿ ಜೊತೆ ಕಷ್ಟ-ಸುಖ ಹಂಚಿಕೊಂಡಿದ್ದಾರೆ.ಜ್ಯೋತಿ ರೈ ತಿರುಪತಿಯ ತಮ್ಮ ಈ ದಿವ್ಯ ಅನುಭವವನ್ನ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಕೆಲವು ದಿನಗಳ ಹಿಂದೆ ನಟಿ ತೀವ್ರ ಬೇಸರದ ನಡುವೆಯೂ ಜನಪದ ಗಾಯಕರೊಬ್ಬರಿಗೆ ನೆರವಿನ ಹಸ್ತ ಚಾಚುವ ಮೂಲಕ ಮಾದರಿಯಾದರು.

VISTARANEWS.COM


on

Jyoti Rai seeks divine blessings at tirupathi
Koo

ಬೆಂಗಳೂರು: ಕಿರುತೆರೆ ನಟಿ, ಬಹುಭಾಷಾ ಕಲಾವಿದೆ, ಕನ್ನಡ ಮೂಲದ ಜ್ಯೋತಿ ರೈ (Jyoti Rai) ಕುರಿತಾದ ಸುದ್ದಿ ರಾಷ್ಟ್ರ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಜ್ಯೋತಿ ರೈ ಅವರದ್ದು ಎನ್ನಲಾಗುತ್ತಿರುವ ಅಶ್ಲೀಲ ವಿಡಿಯೊ ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿರುವುದೇ ಇದಕ್ಕೆ ಕಾರಣ. ಇದಾದ ಬಳಿಕ ನಟಿ ತೀವ್ರ ಬೇಸರದ ನಡುವೆಯೂ ಜನಪದ ಗಾಯಕರೊಬ್ಬರಿಗೆ ನೆರವಿನ ಹಸ್ತ ಚಾಚುವ ಮೂಲಕ ಮಾದರಿಯಾದರು. ಈ ಎಲ್ಲದರ ನಡುವೆ ನಟಿ ತಮ್ಮ ಸಂಗಾತಿ ಸುಕು ಪೂರ್ವಜ್ ಜತೆ ತಿರುಪತಿಗೆ ತೆರಳಿದ್ದಾರೆ. ತಿರುಪತಿ ವೆಂಕಟೇಶ್ವರನ ದರ್ಶನ ಪಡೆದಿದ್ದಾರೆ.

ತಿರುಪತಿ ತಿಮ್ಮಪ್ಪನ ಸನ್ನಿಧಿಯಲ್ಲಿ ಜ್ಯೋತಿ ರೈ ಅವರನ್ನ ಅವರ ಅಭಿಮಾನಿಗಳು ಮಾತನಾಡಿಸಿದ್ದಾರೆ. ಜ್ಯೋತಿ ರೈ ಕೂಡ ಅಲ್ಲಿನ ಸಿಬ್ಬಂದಿ ಜೊತೆ ಕಷ್ಟ-ಸುಖ ಹಂಚಿಕೊಂಡಿದ್ದಾರೆ.ಜ್ಯೋತಿ ರೈ ತಿರುಪತಿಯ ತಮ್ಮ ಈ ದಿವ್ಯ ಅನುಭವವನ್ನ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ನೋವಿನ ನಡುವೆಯೂ ಸಹಾಯ ಹಸ್ತ ಚಾಚಿದ ನಟಿ ಜ್ಯೋತಿ ರೈ

ತೆಲುಗಿನ ಜನಪ್ರಿಯ ಜನಪದ ಗಾಯಕ ಪದ್ಮಶ್ರೀ ಪ್ರಶಸ್ತಿ ವಿಜೇತ ಮೊಗಿಲಯ್ಯ (Darshanam Mogilaiah) ತೀವ್ರ ಬಡತನದಲ್ಲಿದ್ದು, ಜೀವನ ನಿರ್ವಹಣೆಗಾಗಿ ಗಾರೆ ಕೆಲಸ ಮಾಡುತ್ತಿದ್ದರು. ಅವರು ಗಾರೆ ಕೆಲಸ ಮಾಡುತ್ತಿರುವ ಚಿತ್ರಗಳು, ವಿಡಿಯೊ ವೈರಲ್ ಆಗಿತ್ತು. ಹೀಗಾಗಿ ತನ್ನ ನೋವನ್ನು ನುಂಗಿ ಜ್ಯೋತಿ ರೈ ಅವರು ಈ ಹಿರಿಯ ಕಲಾವಿದರ ನೆರವಿಗೆ ಧಾವಿಸಿದ್ದರು.

ಧನ ಸಹಾಯ

ಅಕ್ಷಯ ತೃತೀಯ ದಿನ (ಶುಕ್ರವಾರ)ದಂದು ಜ್ಯೋತಿ ರೈ ಅವರು ಮೊಗಿಲಯ್ಯ ಅವರಿಗೆ 50 ಸಾವಿರ ರೂ. ಧನ ಸಹಾಯ ನೀಡಿದ್ದರು. ಈ ಬಗ್ಗೆ ತಮ್ಮ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಬರೆದುಕೊಂಡಿದ್ದರು. ʼʼಅಕ್ಷಯ ತೃತೀಯದ ಪುಣ್ಯ ದಿನದಂದು ಪದ್ಮಶ್ರೀ ಮೊಗಿಲಯ್ಯ ಅವರಿಗೆ ನಾನು 50 ಸಾವಿರ ರೂ.ಗಳ ಆರ್ಥಿಕ ನೆರವನ್ನು ನೀಡಿದೆ. ಮೊಗಿಲಯ್ಯ ಅಷ್ಟು ಜನಪ್ರಿಯರಾಗಿದ್ದರೂ ತಮ್ಮ ಖಾಸಗಿ ಜೀವನ ಹಾಗೂ ವೃತ್ತಿಯಲ್ಲಿ ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿದ್ದರು. ಅವರು ನಡೆಸಿದ ಸುದ್ದಿಗೋಷ್ಠಿಯಿಂದಾಗಿ ಅವರ ಕಷ್ಟಗಳು ನನಗೆ ತಿಳಿದು ಬಂತುʼʼ ಎಂದು ಜ್ಯೋತಿ ರೈ ಹೇಳಿದ್ದರು.

ಇದನ್ನೂ ಓದಿ: Jyoti Rai: ನೋವಿನ ನಡುವೆಯೂ ಸಹಾಯ ಹಸ್ತ ಚಾಚಿದ ನಟಿ ಜ್ಯೋತಿ ರೈ; ವಿಡಿಯೊ ವೈರಲ್‌ ಮಾಡುವಂತೆ ಸವಾಲು ಹಾಕಿದ್ದೇಕೆ?

ಮುಂದುವರಿದು, ʼʼಸದ್ಯಕ್ಕೆ ನಾನು ಸಹ ಕಷ್ಟದ ದಿನಗಳನ್ನು ಕಳೆಯುತ್ತಿದ್ದೇನೆ. ಆದರೆ ಅವರ ಕಷ್ಟ ಕೇಳಿದಾಗ ನನ್ನೊಳಗೆ ಮೂಡಿದ ಬೆಳಕು, ಮೊಗಿಲಯ್ಯ ಅವರನ್ನು ಭೇಟಿಯಾಗಿ ಸಹಾಯ ಮಾಡಲು ಪ್ರೇರೇಪಿಸಿತು. ಹೀಗಾಗಿ ಅವರಿಗೆ ಸಹಾಯ ಮಾಡಿದೆ. ಅವರಿಗೆ ಇನ್ನಷ್ಟು ಸಹಾಯ ಮಾಡುವ ಆಸೆಯಿದೆ. ನನ್ನಿಂದ ಸಾಧ್ಯವಾಗಿದ್ದನ್ನು ನಾನು ಮಾಡಿದ್ದೇನೆ. ಇನ್ಯಾರಿಗಾದರೂ ಮೊಗಿಲಯ್ಯ ಅವರಿಗೆ ಸಹಾಯ ಮಾಡುವ ಇಚ್ಛೆಯಿದ್ದರೆ ಬನ್ನಿ ಎಲ್ಲರೂ ಒಟ್ಟು ಸೇರಿ ನೆರವಾಗೋಣʼʼ ಎಂದು ಕರೆ ನೀಡಿದ್ದರು.

ಸವಾಲು

ಇದರ ಜತೆಗೆ ತಮ್ಮದು ಎನ್ನಲಾದ ನಕಲಿ ವಿಡಿಯೊಗಳನ್ನು ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡ ವ್ಯಕ್ತಿಗಳಿಗೆ ಸವಾಲು ಹಾಕಿದ್ದರು. ʼʼಈ ವಿಡಿಯೊ (ಮೊಗಿಲಯ್ಯ ಅವರಿಗೆ ಆರ್ಥಿಕ ನೆರವು ನೀಡುತ್ತಿರುವ ವಿಡಿಯೊ)ವನ್ನು ವೈರಲ್‌ ಮಾಡುವ ತಾಕತ್ತು ನಿಮ್ಮಲ್ಲಿ ಇದೆಯಾ? ಇದು ನಿಜವಾದುದು. ಈ ಕೆಳಗಿನ ಸಾಲುಗಳು ಕೆಲಸ ಇಲ್ಲದವರಿಗೆ, ಬುದ್ಧಿ ಇಲ್ಲದವರಿಗಾಗಿ. ಜಗತ್ತು ನನ್ನೆಡೆಗೆ ಅಂಧಕಾರವನ್ನು ದೂಡಿದಾಗ ನನ್ನೊಳಗಿನ ನಾನು ಇನ್ನಷ್ಟು ಪ್ರಕಾಶಮಾನವಾಗಿ ಹೊಳೆಯುತ್ತೇನೆ. ನನ್ನೊಳಗಿನ ಬೆಳಕು ಉರಿಯಲು ಇಂತಹ ಕತ್ತಲೇ ಇಂಧನ. ನಿರಾಶಾವಾದದ ಬೂದಿಯಿಂದ ಸಾಧ್ಯತೆಯ ಫೀನಿಕ್ಸ್ ಏಳುತ್ತದೆ. ನಕಾರಾತ್ಮಕ ಶಕ್ತಿಯು ಮೆಟ್ಟಿಲು; ನಾನು ಅದರ ಮೇಲೆ ಹತ್ತಿ ಸಕಾರಾತ್ಮಕತೆಯ ದಿಗಂತದ ಕಡೆಗೆ ಸಾಗುತ್ತೇನೆʼʼ ಎಂದು ಜ್ಯೋತಿ ರೈ ಬರೆದುಕೊಂಡಿದ್ದರು. ಸದ್ಯ ಅವರ ಈ ಪೋಸ್ಟ್‌ ವೈರಲ್‌ ಆಗಿದೆ. ಅಭಿಮಾನಿಗಳು ಅವರ ಈ ದಿಟ್ಟತನವನ್ನು, ಮಾನವೀಯತೆಯ ಗುಣವನ್ನು ಮೆಚ್ಚಿದ್ದರು.

ಇನ್ನೂ ವಿಡಿಯೊ ವಿಚಾರಕ್ಕೆ ಬಂದರೆ ಜ್ಯೋತಿ ರೈ ವಿಚಾರದ ಕಿಡಿಗೇಡಿಗಳು ಡೀಪ್‌ಫೇಕ್ ವಿಡಿಯೊ ಬಳಸಿ ನಟಿ ಜ್ಯೋತಿ ರೈ ಅವರ ನಕಲಿ ವಿಡಿಯೋ ಹಾಗೂ ಫೋಟೊಗಳನ್ನು ಸೃಷ್ಟಿಸಿರಬಹುದೆಂದು ಚರ್ಚೆಯಾಗುತ್ತಿದೆ. ಈ ಬಗ್ಗೆ ನಟಿ ಈಗಾಗಲೇ ಜತೆಗೆ ಸೈಬರ್ ಕ್ರೈಂ ಪೊಲೀಸರಿಗೆ ದೂರು ಸಹ ನೀಡಿದ್ದರು.

Continue Reading

ಕಿರುತೆರೆ

Pavithra Jayaram: ತೆಲುಗಿನ ‘ತ್ರಿನಯನಿ’ ಧಾರಾವಾಹಿ ನಟಿ, ಕನ್ನಡತಿ ಪವಿತ್ರ ಜಯರಾಂ ಅಪಘಾತದಲ್ಲಿ ನಿಧನ

Pavithra Jayaram: ನಟಿ ಕರ್ನಾಟಕದಲ್ಲಿ ಹುಟ್ಟಿದ್ದರೂ ಕೂಡ ಹೆಚ್ಚು ಫೇಮಸ್‌ ಆದದ್ದು ತೆಲುಗಿನ ‘ತ್ರಿನಯನಿ’ ಧಾರಾವಾಹಿಯಿಂದ. . ಕನ್ನಡದ ʻರೋಬೊ ಫ್ಯಾಮಿಲಿʼ ಮೂಲಕ ಕಿರುತೆರೆಗೆ ಎಂಟ್ರಿಕೊಟ್ಟಿದ್ದ ಪವಿತ್ರ ಮೂಲತಃ ಮಂಡ್ಯ ತಾಲೂಕಿನ ಹನಕೆರೆಯವರು. ನಟಿ ರೋಬೊ ಫ್ಯಾಮಿಲಿ, ಜೋಕಾಲಿ, ನೀಲಿ, ರಾಧಾರಮಣ ಧಾರವಾಹಿಯಲ್ಲಿ ನಟಿಸಿ ಮನೆಮಾತಾಗಿದ್ದರು.

VISTARANEWS.COM


on

Pavithra Jayaram Trinayani serial Fame No More
Koo

ಬೆಂಗಳೂರು: ತೆಲುಗಿನ ‘ತ್ರಿನಯನಿ’ ಧಾರಾವಾಹಿಯಲ್ಲಿ (Trinayani serial) ಜನಪ್ರಿಯರಾಗಿರುವ ಕನ್ನಡತಿ ಪವಿತ್ರ ಜಯರಾಂ (Pavithra Jayaram) ಅಪಘಾತಕ್ಕೀಡಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಆಂಧ್ರಪ್ರದೇಶದ ಕರ್ನೂಲು ಸಮೀಪದಲ್ಲಿ ಇಂದು (ಮೇ.12) ಮುಂಜಾನೆ ಅಪಘಾತವಾಗಿದೆ ಎಂದು ವರದಿಯಾಗಿದೆ. ಮೂಲತಃ ಕನ್ನಡಿಗರಾದ ಪವಿತ್ರ ತೆಲುಗಿನ ತ್ರಿನಯನಿ ಧಾರವಾಹಿಯಲ್ಲಿ ಜನಪ್ರಿಯರಾಗಿದ್ದರು. ಕನ್ನಡದ ʻರೋಬೊ ಫ್ಯಾಮಿಲಿʼ ಮೂಲಕ ಕಿರುತೆರೆಗೆ ಎಂಟ್ರಿಕೊಟ್ಟಿದ್ದ ಪವಿತ್ರ ಮೂಲತಃ ಮಂಡ್ಯ ತಾಲೂಕಿನ ಹನಕೆರೆಯವರು. ನಟಿ ರೋಬೊ ಫ್ಯಾಮಿಲಿ, ಜೋಕಾಲಿ, ನೀಲಿ, ರಾಧಾರಮಣ ಧಾರವಾಹಿಯಲ್ಲಿ ನಟಿಸಿ ಮನೆಮಾತಾಗಿದ್ದರು.

ನಟಿ ಕರ್ನಾಟಕದಲ್ಲಿ ಹುಟ್ಟಿದ್ದರೂ ಕೂಡ ಹೆಚ್ಚು ಫೇಮಸ್‌ ಆದದ್ದು ತೆಲುಗಿನ ‘ತ್ರಿನಯನಿ’ ಧಾರಾವಾಹಿಯಿಂದ . ಈ ಬಗ್ಗೆ ನಟಿ ಈ ಹಿಂದೆ ಮಾಧ್ಯಮವೊಂದರಲ್ಲಿ ಹೇಳಿಕೊಂಡಿದ್ದರು. ʻʻನಾನು ಹುಟ್ಟಿ ಬೆಳೆದದ್ದು ಕರ್ನಾಟಕದಲ್ಲಿ. ಆದರೆ ಕನ್ನಡಕ್ಕಿಂತ ನನಗೆ ಹೆಚ್ಚು ಹೆಸರು ಕೊಟ್ಟಿದ್ದು ತೆಲುಗು. ‘ತ್ರಿನಯನಿ’ ಧಾರಾವಾಹಿ ಮುಂಚೆ ಅನೇಕ ಕನ್ನಡ ಧಾರಾವಾಹಿಯಲ್ಲಿ ನಟಿಸಿದ್ದರು ಅಷ್ಟಾಗಿ ಫಾಲೋವರ್ಸ್‌ ಇರಲಿಲ್ಲ. ಆದರೆ ‘ತ್ರಿನಯನಿ’ ಧಾರಾವಾಹಿ ಕನ್ನಡದಲ್ಲಿಯೂ ಡಬ್‌ ಆಗುತ್ತಿತ್ತು. ಹೀಗಾಗಿ ಕನ್ನಡದಲ್ಲಿಯೂ ತುಂಬಾ ಫ್ಯಾನ್ ಪೇಜ್‌ಗಳು ಶುರುವಾದವುʼʼಎಂದಿದ್ದರು.

ಇದನ್ನೂ ಓದಿ: IPL 2024: ಬೆಂಗಳೂರಲ್ಲಿಂದು ಆರ್‌ಸಿಬಿ, ಡೆಲ್ಲಿ ನಿರ್ಣಾಯಕ ಪಂದ್ಯ; ಮಳೆ ಅಡ್ಡಿ ಆಗತ್ತಾ ? ಇಲ್ಲಿದೆ ರಿಪೋರ್ಟ್

“ಅಷ್ಟೇ ಅಲ್ಲ 16ನೇ ವಯಸ್ಸಿಗೆ ಮದುವೆ ಮಾಡಿದ್ದರು. ಮ್ಯಾರೇಜ್ ಲೈಫ್ ಕೂಡ ನನ್ನದು ಅಷ್ಟಾಗಿ ಸರಿಯಿರಲಿಲ್ಲ. ಓದು ಕೂಡ ಅರ್ಧಕ್ಕೆ ಮುಗಿದಿತ್ತು. ಚಿಕ್ಕ ಚಿಕ್ಕ ಮಕ್ಕಳು ಇರುವಾಗಲೇ ನನ್ನ ಮಗಳು ಮತ್ತು ಮಗನನ್ನು ಕರೆದುಕೊಂಡು ಬೆಂಗಳೂರಿಗೆ ಅವಕಾಶ ಅರಸಿಕೊಂಡು ಬಂದೆ. ಮಕ್ಕಳನ್ನು ಬೆಳೆಸಲು ಹೌಸ್ ಕೀಪಿಂಗ್ ಕೆಲಸ ಕೂಡ ಮಾಡಿದ್ದೆ. ನರ್ಸಿಂಗ್ ಕಾಲೇಜಿನ ಲೈಬ್ರರಿಯಲ್ಲಿ ಕೂಡ ಕೆಲಸ ಮಾಡಿದ್ದೆʼʼಎಂದು ಹೇಳಿಕೊಂಡಿದ್ದರು.

Continue Reading
Advertisement
Job Alert
ಉದ್ಯೋಗ44 seconds ago

Job Alert: ಎಎಎಲ್‌ನಿಂದ 200 ಅಪ್ರೆಂಟಿಸ್‌ಗಳ ನೇಮಕ; ಐಟಿಐ ಪಾಸಾದವರು ನೇರ ಸಂದರ್ಶನದಲ್ಲಿ ಪಾಲ್ಗೊಳ್ಳಿ

Narendra Modi
ದೇಶ8 mins ago

Narendra Modi: “ಗಂಗಾಮಾತೆ ನನ್ನನ್ನು ದತ್ತು ಪಡೆದಿದ್ದಾಳೆ”-ನಾಮಪತ್ರ ಸಲ್ಲಿಕೆಗೂ ಮುನ್ನ ಗಂಗಾರತಿ ಮಾಡಿದ ಮೋದಿ

HD Deve gowda prajwal revanna case
ಪ್ರಮುಖ ಸುದ್ದಿ17 mins ago

‌Prajwal Revanna Case: ಜೀವನದಲ್ಲಿ ಮೊದಲ ಬಾರಿಗೆ ಗಡ್ಡ ಬಿಟ್ಟ ದೇವೇಗೌಡರು; ವೈರಿನಾಶಕ್ಕೆ ಶಪಥ!

Thailand Open
ಕ್ರೀಡೆ43 mins ago

Thailand Open 2024: ಇಂದಿನಿಂದ ಥಾಯ್ಲೆಂಡ್‌ ಓಪನ್‌ ಟೂರ್ನಿ; ಚಿರಾಗ್‌-ಸಾತ್ವಿಕ್‌ ಜೋಡಿ ಮೇಲೆ ಪದಕ ಭರವಸೆ

US Sanction
ವಿದೇಶ48 mins ago

US sanction: ಇರಾನ್‌ ಜೊತೆ ವ್ಯಾಪಾರ ಒಪ್ಪಂದ ಬೇಡ; ಭಾರತಕ್ಕೆ ನಿರ್ಬಂಧದ ಎಚ್ಚರಿಕೆ ಕೊಟ್ಟ ಅಮೆರಿಕ

Prajwal Revanna Case Devaraje Gowda
ಕ್ರೈಂ1 hour ago

Prajwal Revanna Case: ವಕೀಲ ದೇವರಾಜೇಗೌಡ ಇಂದು ಪೊಲೀಸ್‌ ಕಸ್ಟಡಿಗೆ

Federation Cup
ಕ್ರೀಡೆ1 hour ago

Federation Cup: ಫೆಡರೇಷನ್ ಕಪ್‌ ಫೈನಲ್​ನಲ್ಲಿ ಕಣಕ್ಕಿಳಿಯಲು ಸಜ್ಜಾದ ನೀರಜ್ ಚೋಪ್ರಾ

Israel-Hamas Conflict
ವಿದೇಶ1 hour ago

Israel-Hamas Conflict: ಗಾಜಾದಲ್ಲಿ ಭಾರತೀಯ ಮೂಲದ ವಿಶ್ವಸಂಸ್ಥೆ ಸಿಬ್ಬಂದಿ ಸಾವು

IPL 2024 Points Table
ಕ್ರೀಡೆ2 hours ago

IPL 2024 Points Table: ಟೂರ್ನಿಯಿಂದ ಹೊರಬಿದ್ದ ಗುಜರಾತ್​ ಟೈಟಾನ್ಸ್​

jayanagar murder case
ಕ್ರೈಂ2 hours ago

Murder Case: ರಸ್ತೆ ಬದಿ ಮಲಗಿದ್ದ ವ್ಯಕ್ತಿಯ ತಲೆ ಮೇಲೆ‌ ಕಲ್ಲು ಎತ್ತಿ ಹಾಕಿ ಕೊಲೆ

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Dina Bhavishya
ಭವಿಷ್ಯ6 hours ago

Dina Bhavishya : ಉದ್ಯೋಗದ ಸ್ಥಳದಲ್ಲಿ ನಿಮ್ಮ ವಿರುದ್ಧ ಪಿತೂರಿ ಮಾಡ್ಬಹುದು ಎಚ್ಚರ!

HD Revanna Bail Revanna will not leave the country condition imposed by the court
ಕ್ರೈಂ16 hours ago

HD Revanna Bail: ರೇವಣ್ಣ ದೇಶ ಬಿಡಂಗಿಲ್ಲ, ಕೆ.ಆರ್‌. ನಗರಕ್ಕೆ ಎಂಟ್ರಿ ಕೊಡಂಗಿಲ್ಲ! ಕೋರ್ಟ್‌ ವಿಧಿಸಿದ ಷರತ್ತು ಏನು?

HD Revanna Bail
ಕ್ರೈಂ16 hours ago

HD Revanna Bail: ಎಚ್‌.ಡಿ ರೇವಣ್ಣಗೆ ಕೊನೆಗೂ ಜಾಮೀನು; ಎಸ್‌ಐಟಿಗೆ ಮುಖಭಂಗ!

Prajwal Revanna Case Revanna bail plea to be heard Judge reprimands SIT cops for their behaviour
ಕ್ರೈಂ16 hours ago

Prajwal Revanna Case: ರೇವಣ್ಣ ಜಾಮೀನು ಅರ್ಜಿ ವಿಚಾರಣೆ; ಎಸ್‌ಐಟಿ ಪೊಲೀಸರ ವರ್ತನೆಗೆ ಜಡ್ಜ್‌ ಗರಂ!

Karnataka Weather Forecast
ಮಳೆ17 hours ago

Karnataka Weather : ನಾಳೆ ಮುಕ್ಕಾಲು ಕರ್ನಾಟಕದಲ್ಲಿ ಬಿರುಗಾಳಿ ಜತೆಗೆ ವಿಪರೀತ ಮಳೆ

Modi Roadshow Live
ದೇಶ17 hours ago

Modi Roadshow Live: ವಾರಾಣಸಿಯಲ್ಲಿ ಮೋದಿ ಭರ್ಜರಿ ರೋಡ್‌ ಶೋ; ಲೈವ್‌ ಇಲ್ಲಿ ವೀಕ್ಷಿಸಿ

Karnataka Rain
ಮಳೆ23 hours ago

Karnataka Rain : ಕುರಿಗಾಹಿಗಳ ಪ್ರಾಣ ಕಸಿದ ಸಿಡಿಲು; 20ಕ್ಕೂ ಹೆಚ್ಚು ಕುರಿಗಳು ಸಾವು

karnataka weather forecast karnataka rains
ಮಳೆ1 day ago

Karnataka Weather : ವಾಯುಭಾರ ಕುಸಿತ; ಕರಾವಳಿ, ಮಲೆನಾಡು ಸೇರಿ ಹಲವೆಡೆ ಭಾರಿ ಮಳೆ ಎಚ್ಚರಿಕೆ

Dina Bhavishya
ಭವಿಷ್ಯ1 day ago

Dina Bhavishya : ಇಂದು ಹೂಡಿಕೆ ಮಾಡಿದರೆ ಗಳಿಸುವಿರಿ ಭಾರಿ ಲಾಭ; ಅನಿರೀಕ್ಷಿತ ಸುದ್ದಿಯಿಂದ ಸಂತಸ

Prajwal Revanna Case I was never kidnapped and son has made a false complaint Video of victim goes viral
ಕ್ರೈಂ2 days ago

Prajwal Revanna Case: ರೇವಣ್ಣ ಕೇಸ್‌ಗೆ ಟ್ವಿಸ್ಟ್‌! ನನ್ನ ಕಿಡ್ನ್ಯಾಪ್‌ ಮಾಡಿಯೇ ಇಲ್ಲ; ಮಗ ತಪ್ಪು ದೂರು ಕೊಟ್ಟಿದ್ದಾನೆ; ಸಂತ್ರಸ್ತೆಯ ವಿಡಿಯೊ ವೈರಲ್

ಟ್ರೆಂಡಿಂಗ್‌