ಬೆಂಗಳೂರು: ಯಶಸ್ವಿಯಾಗಿ 50 ದಿನ ಪೂರೈಸಿ ಬಿಗ್ ಬಾಸ್ ಕನ್ನಡ ಸೀಸನ್ 10 (BBK SEASON 10) ಶೋ ದಿನದಿಂದ ದಿನಕ್ಕೆ ವೀಕ್ಷಕರ ಸಂಖ್ಯೆಯನ್ನು ಹೆಚ್ಚಿಸಿಕೊಂಡು ಸಾಗುತ್ತಿದೆ. ಇದೀಗ ಬಿಗ್ ಬಾಸ್ ಮನೆಯೊಳಗೆ ಇಬ್ಬರು ಪ್ರಬಲ ಸ್ಪರ್ಧಿಗಳಾದ ಮಾಡೆಲ್ ಪವಿ ಪೂವಪ್ಪ ಮತ್ತು ಕ್ರಿಕೆಟಿಗ, ಮಾಡೆಲ್ ಅವಿನಾಶ್ ಶೆಟ್ಟಿ ವೈಲ್ಡ್ ಕಾರ್ಡ್ ಮೂಲಕ ಪ್ರವೇಶಿಸಿದ್ದು ಮತ್ತಷ್ಟು ಕುತೂಹಲ ಮೂಡಿಸಿದೆ. ಈ ಮಧ್ಯೆ ಟಾಸ್ಕ್‌ನಲ್ಲಿ ಕಿರಿಕ್ ನಡೆದಿದ್ದು, ಬಿಗ್ ಬಾಸ್ ಮನೆ ರಣರಂಗವಾಗುವ ಲಕ್ಷಣ ಕಂಡು ಬಂದಿದೆ.
ಅಷ್ಟಕ್ಕೂ ಆಗಿದ್ದೇನು?
ಕಲರ್ಸ್ ಕನ್ನಡ ವಾಹಿನಿ ಹೊರ ಬಿಟ್ಟ ಹೊಸ ಪ್ರೋಮೊದಲ್ಲಿ ವಾಗ್ವಾದ ನಡೆದಿರುವುದು ಕಂಡು ಬಂದಿದೆ. ಈ ಬಾರಿ ತುಕಾಲಿ ಸಂತೋಷ್, ವಿನಯ್ ಮತ್ತು ಸ್ನೇಹಿತ್ ನಡುವೆ ಬೆಂಕಿ ಹೊತ್ತಿ ಉರಿದಿದೆ. ಬಿಗ್ ಬಾಸ್ ಸ್ಪರ್ಧಿಗಳಿಗೆ ಟಾಸ್ಕ್ ನೀಡಿದ್ದರು. ಅದರಂತೆ ಒಂದು ಗುಂಪು ಸ್ವಿಮ್ಮಿಂಗ್ ಪೂಲ್‌ನಿಂದ ಬಕೆಟ್‌ನಲ್ಲಿ ನೀರು ತಂದು ಅದನ್ನು ಕೊಳವೆಗೆ ತುಂಬಿಸಬೇಕು. ಹೀಗೆ ನೀರು ತುಂಬಿಕೊಂಡು ಬರುವ ಸ್ಪರ್ಧಿಗಳಿಗೆ ಇನ್ನೊಂದು ಗುಂಪು ಅಡ್ಡಿ ಪಡಿಸಬಹುದು. ಹೀಗೆ ಟಾಸ್ಕ್ ನಡುವೆ ವಿರುದ್ಧ ಗುಂಪುಗಳಲ್ಲಿರುವ ಸ್ನೇಹಿತ್ ಮತ್ತು ತುಕಾಲಿ ಸಂತೋಷ್ ನಡುವೆ ಜಗಳ ಕಾಣಿಸಿಕೊಂಡಿದೆ. ಅವರಿಬ್ಬರು ಪರಸ್ಪರ ಗುದ್ದಾಡುವುದನ್ನು ನೋಡಿ ಉಳಿದ ಸ್ಪರ್ಧಿಗಳು ಶಾಕ್‌ಗೊಳಗಾಗಿರುವುದು ಪ್ರೋಮೊದಲ್ಲಿ ಕಂಡು ಬಂದಿದೆ. ಒಮ್ಮೆ ತುಕಾಲಿ ಸಂತೋಷ್ ನೆಲಕ್ಕೆ ಬಿದ್ದರೆ ಇನ್ನೊಮ್ಮೆ ಸ್ನೇಹಿತ್ ಬಿದ್ದಿದ್ದಾರೆ. ಕೊನೆಗೆ ತುಕಾಲಿ ಅವರು, ‘ಬೇಕಂತ್ಲೇ ಮಾಡ್ತಿದ್ದಾರೆ. ನಾನು ಆಟ ಆಡಲ್ಲ ಎಂದು ಹೊರಟುಹೋಗಿದ್ದಾರೆ. ವಿನಯ್, ‘ಸತ್ಯವಾಗ್ಲೂ ಬೇಕಂತ ಮಾಡಿಲ್ಲ’ ಎಂದರೂ ಅವರು ಕೇಳಿಲ್ಲ. ವಿನಯ್ ಮತ್ತು ತುಕಾಲಿ ನಡುವೆ ಹೊತ್ತಿಕೊಂಡ ಕಿಡಿ ಏರುತ್ತಲೇ ಹೋಗಿದೆ.
ಸದ್ಯ ಬಿಗ್ ಬಾಸ್ ಮನೆಯಲ್ಲಿ ಸ್ಪರ್ಧಿಗಳ ನಡುವೆ ತೀವ್ರ ಪೈಪೋಟಿ ಕಂಡು ಬರುತ್ತಿದೆ. ಕಳೆದ ವಾರ ಕ್ಯಾಪ್ಟನ್ ಆಗಿದ್ದರೂ ನೀತು ವನಜಾಕ್ಷಿ ಎಲಿಮಿನೇಟ್ ಆಗಿ ಅಚ್ಚರಿ ಮೂಡಿಸಿದ್ದರು. ಈ ವಾರ ಮೈಕಲ್ ಕ್ಯಾಪ್ಟನ್ ಆಗಿದ್ದಾರೆ. ಈ ವಾರ ಮೈಕಲ್, ಸ್ನೇಹಿತ್, ವಿನಯ್, ತನಿಷಾ, ನಮ್ರತಾ, ಸಂಗೀತಾ ಮತ್ತು ವರ್ತೂರು ಸಂತೋಷ್ ಮನೆಯಿಂದ ಹೊರ ಹೋಗಲು ನಾಮಿನೇಟ್ ಆಗಿದ್ದಾರೆ. ವೈಲ್ಡ್ ಕಾರ್ಡ್ ಮೂಲಕ ಬಿಗ್ ಬಾಸ್ ಮನೆಗೆ ಪ್ರವೇಶಿಸಿದ್ದ ಪವಿ ಪೂವಪ್ಪ ಮತ್ತು ಅವಿನಾಶ್ ಶೆಟ್ಟಿ ಅವರಿಗೆ ಇಬ್ಬರನ್ನು ಸೇಫ್ ಮಾಡುವ ಪರಮಾಧಿಕಾರವನ್ನ ‘ಬಿಗ್ ಬಾಸ್’ ನೀಡಿದ್ದರು. ತಮಗೆ ಸಿಕ್ಕ ಅಧಿಕಾರವನ್ನ ಬಳಸಿಕೊಂಡ ಪವಿ ಪೂವಪ್ಪ ಹಾಗೂ ಅವಿನಾಶ್ ಶೆಟ್ಟಿ ಎಲಿಮಿನೇಷನ್ ಬೆಂಕಿಯಿಂದ ಸಿರಿ ಹಾಗೂ ತುಕಾಲಿ ಸಂತು ಅವರನ್ನ ಬಚಾವ್ ಮಾಡಿದ್ದರು.
ಇದನ್ನೂ ಓದಿ: BBK SEASON 10: ಬಿಗ್ ಬಾಸ್ ಮನೆಗೆ ಮಾಡೆಲ್ ಪವಿ ಪೂವಪ್ಪ, ಕ್ರಿಕೆಟಿಗ ಅವಿನಾಶ್ ಶೆಟ್ಟಿ ವೈಲ್ಡ್ ಕಾರ್ಡ್ ಎಂಟ್ರಿ!
ಈ ಮಧ್ಯೆ ನಾಮಿನೇಷನ್ ಪ್ರಕ್ರಿಯೆ ವೇಳೆ ವಿನಯ್ ಗೌಡ್ ಮತ್ತೆ ಡ್ರೋನ್ ಪ್ರತಾಪ್ ಅವರ ವಿರುದ್ಧ ಆರೋಪ ಮಾಡಿದ್ದಾರೆ. ಎಲಿಮಿನೇಷನ್ಗೆ ಸ್ಪರ್ಧಿಗಳ ಹೆಸರನ್ನು ನಾಮಿನೇಟ್ ಮಾಡುವಾಗ ಪ್ರತಾಪ್ ಅವರ ಹೆಸರನ್ನು ವಿನಯ್ ಪ್ರಸ್ತಾಪಿಸಿದ್ದಾರೆ. ‘ಪ್ರತಾಪ್ ಅವರು ಬೇರೆಯವರನ್ನು ಕೀಳಾಗಿ ತೋರಿಸಿ ಇಲ್ಲಿಯವರೆಗೂ ಬಂದಿದ್ದಾರೆ’ ಎಂದು ವಿನಯ್ ಆರೋಪಿಸಿದ್ದು ಕೂಡ ಚರ್ಚೆಗೆ ಗ್ರಾಸವಾಗಿತ್ತು. ವೀಕೆಂಡ್ ಪಂಚಾಯಿತಿಯಲ್ಲಿ ಪ್ರತಾಪ್‌ಗೆ ಹೆಚ್ಚು ವೋಟ್ ಬಂದ ಕಾರಣ ವಿನಯ್ ಟಾರ್ಗೆಟ್ ಮಾಡಲು ಆರಂಭಿಸಿರುವಂತಿದೆ ಎಂದು ಹಲವರು ಅಭಿಪ್ರಾಯ ಪಟ್ಟಿದ್ದಾರೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಮೆಂಟ್ ಮೂಲಕ ತಿಳಿಸಿ