Site icon Vistara News

BBK SEASON 10: ಬಿಗ್‌ಬಾಸ್‌ ಮನೆಯಿಂದ ಹೊರಬಂದ ಸ್ನೇಹಿತ್‌ ತಂದೆ-ತಾಯಿ ಬಳಿ ಕ್ಷಮೆ ಕೋರಿದ್ದೇಕೆ?

snehith

snehith

ಬೆಂಗಳೂರು: ಬಿಗ್‌ಬಾಸ್‌ ಕನ್ನಡ ಸೀಸನ್‌ 10(BBK Season 10) 11ನೇ ವಾರಕ್ಕೆ ಕಾಲಿಟ್ಟಿದೆ. ಕಳೆದ ವಾರ ಸ್ನೇಹಿತ್‌ ಗೌಡ ಬಿಗ್‌ಬಾಸ್‌ ಮನೆಯಿಂದ ಆಚೆ ಬಂದಿದ್ದಾರೆ. ಅಂದರೆ 10ನೇ ವಾರ ಸ್ನೇಹಿತ್‌ ಔಟ್‌ ಆಗಿದ್ದಾರೆ. ಇದೀಗ ಮನೆಗೆ ಬಂದ ಅವರು ತಮ್ಮ ತಾಯಿ-ತಂದೆ ಬಳಿ ಕ್ಷಮೆ ಕೋರಿದ್ದಾರೆ.

ಸ್ನೇಹಿತ್‌ ಹೇಳಿದ್ದೇನು?

ʼʼಎಂದಿಗೂ ನೀವು ತಲೆ ಎತ್ತಿಕೊಂಡು ಓಡಾಡುವ ಕೆಲಸ ಮಾಡುತ್ತೇನೆ. ಒಂದು ವೇಳೆ ನೀವು ತಲೆ ತಗ್ಗಿಸುವಂತಹ ಕೆಲಸ ಮಾಡಿದ್ದರೆ ಅದು ಗೊತ್ತಿಲ್ಲದೆ ಆಗಿರುವಂತಹದ್ದು. ಇನ್ನೆಂದೂ ಹಾಗೆ ಆಗುವುದಿಲ್ಲʼʼ ಎಂದು ಹೇಳಿದ ಸ್ನೇಹಿತ್‌ ತಮ್ಮ ತಂದೆ-ತಾಯಿಯ ಕಾಲಿಗೆರಗಿದ್ದಾರೆ. ಈ ವೇಳೆ ಭಾವುಕರಾದ ತಂದೆ-ತಾಯಿ ಸ್ನೇಹಿತ್‌ನನ್ನು ತಬ್ಬಿ ಸಂತೈಸಿದ್ದಾರೆ. ʼʼಹಾಗೇನು ಆಗಿಲ್ಲʼʼ ಎಂದು ಸಮಾಧಾನಪಡಿಸಿದ್ದಾರೆ. ʼʼನಮ್ಮಲ್ಲಿ ಹೆಮ್ಮೆಯ ಭಾವನೆ ಮೂಡಿಸಿದ್ದಿ, ಚಿಂತೆ ಮಾಡಬೇಡʼʼ ಎಂದು ಈ ವೇಳೆ ಅಮ್ಮ ಹೇಳಿದ್ದಾರೆ. ಇಷ್ಟು ದಿನ ತುಂಬ ಮಿಸ್‌ ಮಾಡಿಕೊಂಡಿದ್ದೆ ಎಂದು ಅಮ್ಮ ತಿಳಿಸಿದ್ದಾರೆ.

ಬಿಗ್‌ಬಾಸ್‌ ಮನೆಯಲ್ಲಿರುವಾಗ ಸ್ನೇಹಿತ್‌ ನಮ್ರತಾ ಮೇಲೆ ಸ್ಟ್ರಾಂಗ್​ ಫೀಲಿಂಗ್ಸ್ ಇದೆ ಎಂದಿದ್ದರು. ರಾತ್ರಿ ಎಲ್ಲರೂ ಮಲಗಿರುವಾಗ ಸ್ನೇಹಿತ್‌ ಅವರು ನಮ್ರತಾ ಫೋಟೊ ಪಕ್ಕ ತಮ್ಮ ಫೋಟೊವನ್ನು ಇಟ್ಟಿದ್ದರು. ಇದಾದ ಬಳಿಕ ವಿನಯ್‌ ಅವರ ಬಳಿ ನಮ್ರತಾ ಬಗ್ಗೆ ತಮಗಿರುವ ಭಾವನೆ ಬಗ್ಗೆ ಹೇಳಿಕೊಂಡಿದ್ದರು. ‘ನನಗೆ ಹುಡುಗಿಯರು ಇಷ್ಟ ಆಗಿದ್ದು ಬಹಳ ಕಡಿಮೆ. ಒಬ್ಬಳು ಇಷ್ಟ ಆಗಿದ್ದಳು. ಅದು ವರ್ಕೌಟ್‌​ ಆಗಲಿಲ್ಲ. ಅದಾದ ಬಳಿಕ ಈಗಲೇ ಆಗಿರುವುದು. ಬಿಗ್​ ಬಾಸ್​ ಮನೆಗೆ ಬಂದಾಗ ಒಬ್ಬರು ನನಗೆ ಇಷ್ಟೆಲ್ಲ ಇಷ್ಟ ಆಗುತ್ತಾರೆ ಎಂದು ನನಗೂ ನಂಬಿಕೆ ಇರಲಿಲ್ಲ. ಅದನ್ನು ನಂಬೋಕೆ ಆಗುತ್ತಿಲ್ಲ. ಇವರ ಜತೆ ನಾನು ಫ್ರೆಂಡ್​ಗಿಂತಲೂ ಚೂರು ಜಾಸ್ತಿ ಅಟ್ಯಾಚ್​ ಆಗಿದ್ದೇನೆ ಎಂಬುದು ನಾನು ಜೈಲಿಗೆ ಹೋದಾಗ ಗೊತ್ತಾಯಿತು. ಆಮೇಲೆ ಒಂದು ಹಂತದ ನಂತರ ಅನಿಸಿತು. ನನಗೆ ಇವರ ಮೇಲೆ ಸ್ಟ್ರಾಂಗ್​ ಫೀಲಿಂಗ್ಸ್ ಇದೆ. ಅದಾದ ಬಳಿಕ ಅವರಿಗೆ ನಾನು ಹೇಳಿದೆ. ಅವರ ಜತೆ ನನಗೆ ಮುಂದಿನ ಹತ್ತು ವರ್ಷಗಳು ಕಾಣುತ್ತಿವೆ. ನಮ್ಮ ಅಪ್ಪ-ಅಮ್ಮನ ಜತೆ ಅವರು ಕೂಡ ಕಾಣುತ್ತಾರೆ’ ಎಂದು ಸ್ನೇಹಿತ್​ ಹೇಳಿದ್ದರು.

ಪರೋಕ್ಷವಾಗಿ ನಮ್ರತಾ ಗೌಡಗೆ ಪ್ರೇಮ ನಿವೇದನೆ ಮಾಡಿದ್ದರು ಸ್ನೇಹಿತ್. ನಮ್ರತಾ ಗೌಡ ಸಮಯ ಕೊಡಿ ಅಂದಾಗಿತ್ತು. ಈ ವಿಚಾರವಾಗಿ ನಮ್ರತಾ ತುಂಬಾ ಕಿರಿಕಿರಿ ಅನುಭವಿಸಿದ್ದರು. ಈ ಮುಂಚೆಯೇ ನಮ್ರತಾ ಅವರು ಸ್ನೇಹಿತ್‌ಗೆ ʻʻಸ್ಮೈಲ್ ಮಾಡ್ಕೊಂಡು ಎಲ್ಲದನ್ನೂ ಚಿಲ್ಲಾಗಿ ತೆಗೆದುಕೊಳ್ಳುತ್ತಿದ್ದೀನಿ ಎಂದ ಮಾತ್ರಕ್ಕೆ ಎಲ್ಲವೂ ಸರಿ ಇದೆ ಎಂದಲ್ಲ. ‘ನಿಮಗೆ ಬೇಕಾದಾಗ ನೀವು ಮಾತು ನಿಲ್ಲಿಸಬಹುದು. ನಿಮಗೆ ಬೇಕಾದ ನೀವು ಬ್ಲೇಮ್ ಮಾಡಬಹುದು. ಮೊದಲ ದಿನದಿಂದಲೂ ಇದನ್ನೂ ಮಾಡುತ್ತಿದ್ದೀರಿ’ ಎಂದು ಬೇಸರ ಹೊರಹಾಕಿದ್ದರು. ಸ್ನೇಹಿತ್‌ ಮನೆಯಿಂದ ಹೊರಟಾಗ ನಮ್ರತಾ ಕೂಡ ಭಾವುಕರಾಗಿದ್ದು ಕಂಡು ಬಂದಿತ್ತು. ಸದ್ಯ ಸ್ನೇಹಿತ್‌ ಈ ವಿಚಾರವಾಗಿ ಕ್ಷಮೆ ಕೇಳಿದ್ದಾರೆ ಎಂದು ಹಲವರು ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ: BBK SEASON 10: ಬಿಗ್ ಬಾಸ್ ಮನೆಯಿಂದ ಸ್ನೇಹಿತ್ ಔಟ್; ಕಣ್ಣೀರಿಟ್ಟ ನಮ್ರತಾ

Exit mobile version