Site icon Vistara News

BBK SEASON 10: ಕನ್ನಡ ಬಿಗ್ ಬಾಸ್‌ಗೆ ವಿಕ್ಕಿ ಕೌಶಲ್‌ ಬಂದಿದ್ದಾರಾ?!

avinash shetty

avinash shetty

ಬೆಂಗಳೂರು: ದಿನದಿಂದ ದಿನಕ್ಕೆ ಕುತೂಹಲ ಮೂಡಿಸುತ್ತಾ ಸಾಗಿರುವ ಬಿಗ್ ಬಾಸ್ ಕನ್ನಡ ಸೀಸನ್ 10 (BBK SEASON 10) ಶೋ ಯಶಸ್ವಿಯಾಗಿ 50 ದಿನ ಪೂರೈಸಿದೆ. ಸ್ಪರ್ಧಿಗಳ ಜಗಳ, ಗೆಳತನ, ಗುಂಪುಗಾರಿಕೆ ಮುಂತಾದ ವಿಚಾರಗಳಿಗೆ ಈ ಸಲದ ಬಿಗ್‌ ಬಾಸ್‌ ಸದ್ದು ಮಾಡುತ್ತಿದೆ. ಈ ಮಧ್ಯೆ ವೈಲ್ಡ್‌ ಕಾರ್ಡ್‌ ಮೂಲಕ ಬಿಗ್‌ ಬಾಸ್‌ ಮನೆಯೊಳಗೆ ಇಬ್ಬರು ಪ್ರವೇಶಿಸಿದ್ದಾರೆ. ಮಾಡೆಲ್ ಪವಿ ಪೂವಪ್ಪ ಮತ್ತು ಕ್ರಿಕೆಟಿಗ, ಮಾಡೆಲ್ ಅವಿನಾಶ್ ಶೆಟ್ಟಿ ಬಿಗ್‌ ಬಾಸ್‌ ಮನೆಗೆ ವೈಲ್ಡ್‌ ಕಾರ್ಡ್‌ ಮೂಲಕ ಪ್ರವೇಶಿಸಿದ ಸ್ಪರ್ಧಿಗಳು.

ಕನ್ನಡದ ವಿಕ್ಕಿ ಕೌಶಲ್‌

ಅವಿನಾಶ್ ಶೆಟ್ಟಿ‌ ಬಾಲಿವುಡ್‌ ನಟ ವಿಕ್ಕಿ ಕೌಶಲ್‌ ಅವರನ್ನು ಹೋಲುತ್ತಿದ್ದಾರೆ. ಸದ್ಯ ವಿಚಾರ ಭರ್ಜರಿಯಾಗಿ ಸದ್ದು ಮಾಡುತ್ತಿದೆ. ಕನ್ನಡದ ವಿಕ್ಕಿ ಕೌಶಲ್‌ ಎಂದು ಅವಿನಾಶ್‌ ಶೆಟ್ಟಿ ಅವರನ್ನು ನೆಟ್ಟಿಗರು ಕರೆಯಲು ಆರಂಭಿಸಿದ್ದಾರೆ. ಅವಿನಾಶ್‌ ಶೆಟ್ಟಿ ಫೋಟೊವನ್ನು ಫೇಸ್‌ ಬುಕ್‌ನಲ್ಲಿ ಶೇರ್‌ ಮಾಡಿದ ನಿಖಿಲ್‌ ಹೆಗ್ಡೆ ಎನ್ನುವವರು ʼಕನ್ನಡದ ವಿಕ್ಕಿ ಕೌಶಲ್‌ ವರ್ಷನ್ ಈ ಅವಿನಾಶ್ ಶೆಟ್ಟಿ ಅನ್ನಿಸಿದ್ದು ನಂಗೆ ಮಾತ್ರಾನಾ…!!ʼ ಎಂದು ಪೋಸ್ಟ್‌ ಹಾಕಿದ್ದಾರೆ. ಇದಕ್ಕೆ ಅನೇಕ ನೆಟ್ಟಿಗರು ಸಹಮತ ವ್ಯಕ್ತಪಡಿಸಿದ್ದಾರೆ. ತಮಗೂ ಅವಿನಾಶ್‌ ಅದೇ ರೀತಿ ಕಂಡು ಬರುತ್ತಿದ್ದಾರೆ ಎಂದು ಕಮೆಂಟ್‌ ಮಾಡಿದ್ದಾರೆ. ಇವರು ಮಾತ್ರವಲ್ಲ ಇನ್ನೂ ಹಲವರು ಇದೇ ರೀತಿಯ ಅಭಿಪ್ರಾಯ ವ್ಯಕ್ತಪಡಿಸಿದ್ದು, ಸದ್ಯ ಈ ವಿಚಾರ ವೈರಲ್‌ ಆಗಿದೆ.

ಅವಿನಾಶ್ ಶೆಟ್ಟಿ ತುಳು, ಕನ್ನಡ ನಟ, ಮಾಡೆಲ್ ಹಾಗೂ ಕ್ರಿಕೆಟಿಗರಾಗಿ ಗುರುತಿಸಿಕೊಂಡಿದ್ದಾರೆ. ಸುರತ್ಕಲ್ ಮೂಲದ ಅವಿನಾಶ್ ಅವರು ಸುಕನ್ಯಾ ಮತ್ತು ಶ್ರೀಧರ್ ಶೆಟ್ಟಿ ದಂಪತಿಯ ಪುತ್ರ. ಅವಿನಾಶ್ ಶೆಟ್ಟಿ ಕೋಕ್‌ ಮತ್ತು ಎಂಆರ್‌ಎಫ್‌ ಟಯರ್‌ ಜಾಹೀರಾತಿನ ಮೂಲಕ ಗ್ಲಾಮರ್ ಲೋಕಕ್ಕೆ ಪ್ರವೇಶಿಸಿದರು. 2007ರಲ್ಲಿ ಮಿಸ್ಟರ್ ಮಂಗಳೂರು ಪ್ರಶಸ್ತಿ ಗೆದ್ದ ಇವರು, 2012ರಲ್ಲಿ ಮಾಡೆಲ್ ಹಂಟ್ ಸ್ಪರ್ಧೆಯಲ್ಲಿ ವಿಜೇತರಾಗಿದ್ದರು.

ಇದನ್ನೂ ಓದಿ: BBK SEASON 10: ಡಬಲ್ ವೈಲ್ಡ್‌ಕಾರ್ಡ್ ಎಂಟ್ರಿ; ಮನೆಯಲ್ಲಿ ಎಂಥ ಬಿರುಗಾಳಿ ಎಬ್ಬಿಸಬಹುದು?

ಚೆನ್ನೈನಲ್ಲಿ ನಡೆದ ಮಿಸ್ಟರ್ ಸೌತ್ ಇಂಡಿಯಾ ಪ್ರಶಸ್ತಿಯನ್ನು ಕೂಡ ಗೆದ್ದಿದ್ದಾರೆ. ದಿ. ಪುನೀತ್‌ ರಾಜ್‌ ಕುಮಾರ್‌ ಅಭಿನಯದ, 2014ರಲ್ಲಿ ತೆರೆಕಂಡ ʼಪವರ್‌ʼ ಚಿತ್ರದಲ್ಲಿ ಅವಿನಾಶ್‌ ನಟಿಸಿ ಗಮನ ಸೆಳೆದಿದ್ದರು. ಅಲ್ಲದೆ ಸುದೇಶ್ ಶೆಟ್ಟಿ ನಿರ್ಮಾಣದ, ಸಾಯಿಕೃಷ್ಣ ನಿರ್ದೇಶನದ ಕನ್ನಡ ಚಲನಚಿತ್ರ ʼಚೆಲ್ಲಾಪಿಲ್ಲಿ’ ಮತ್ತು ʼಬದ್ಮಾಶ್ʼ ಚಿತ್ರದಲ್ಲೂ ಅಭಿನಯಿಸಿದ್ದಾರೆ. 2015ರಲ್ಲಿ ಬಿಡುಗಡೆಗೊಂಡ ʼಜೈ ತುಳುನಾಡುʼ ಚಿತ್ರದ ಮೂಲಕ ತುಳುಚಿತ್ರರಂಗ ಪ್ರವೇಶಿಸಿದ್ದರು. ಸದ್ಯ ವಿಕ್ಕಿ ಕೌಶಲ್‌ ಹೋಲಿಕೆಯಿಂದಲೇ ಸದ್ದು ಮಾಡುತ್ತಿದ್ದಾರೆ. ಬಿಗ್‌ ಬಸ್‌ ಮನೆಯಲ್ಲಿ ಅವರು ಯಾವ ರೀತಿ ಆಟ ಮುಂದುವರಿಸುತ್ತಾರೆ ಎನ್ನುವು ಕುತೂಹಲ ಮೂಡಿದೆ.

ಸೇಫ್ ಮಾಡುವ ಪರಮಾಧಿಕಾರ

ವೈಲ್ಡ್ ಕಾರ್ಡ್ ಮೂಲಕ ಬಿಗ್‌ ಬಾಸ್‌ ಮನೆಗೆ ಪ್ರವೇಶಿಸಿದ್ದ ಪವಿ ಪೂವಪ್ಪ ಮತ್ತು ಅವಿನಾಶ್ ಶೆಟ್ಟಿ ಅವರಿಗೆ ಇಬ್ಬರನ್ನು ಸೇಫ್ ಮಾಡುವ ಪರಮಾಧಿಕಾರವನ್ನ ‘ಬಿಗ್ ಬಾಸ್‌’ ನೀಡಿದ್ದರು. ತಮಗೆ ಸಿಕ್ಕ ಅಧಿಕಾರವನ್ನ ಬಳಸಿಕೊಂಡ ಪವಿ ಪೂವಪ್ಪ ಹಾಗೂ ಅವಿನಾಶ್ ಶೆಟ್ಟಿ ಎಲಿಮಿನೇಷನ್‌ ಬೆಂಕಿಯಿಂದ ಸಿರಿ ಹಾಗೂ ತುಕಾಲಿ ಸಂತು ಅವರನ್ನ ಬಚಾವ್‌ ಮಾಡಿದ್ದರು.

ಬಿಗ್​ಬಾಸ್ ಜಿಯೋ ಸಿನಿಮಾಸ್​ನಲ್ಲಿ ಪ್ರತಿದಿನ ಲೈವ್ ಪ್ರಸಾರವಾಗುತ್ತಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version