Site icon Vistara News

Year Ender 2023: ಈ ವರ್ಷ ಸೂಪರ್‌ ಹಿಟ್‌ ಸಿನಿಮಾಗಳನ್ನು ನೀಡಿದ ಸೌತ್‌ ನಿರ್ದೇಶಕರಿವರು

Mani Ratnam Lokesh Kanagaraj prashanth neel

ಬೆಂಗಳೂರು: 2023ರಲ್ಲಿ (Best South Director of 2023)ಬಿಡುಗಡೆಯಾದ ಅನೇಕ ದಕ್ಷಿಣ ಭಾರತದ ಸಿನಿಮಾಗಳು ಬ್ಲಾಕ್‌ ಬಸ್ಟರ್‌ ಹಿಟ್‌ ಕಂಡಿವೆ. 500 ಕೋಟಿ ರೂ.ಗೂ ಹೆಚ್ಚು ಕಲೆಕ್ಷನ್‌ ಮಾಡಿ, ದಾಖಲೆಗಳನ್ನು ನಿರ್ಮಿಸಿವೆ. ಒಂದು ಸಿನಿಮಾ ಹಿಟ್‌ ಎನಿಸಿಕೊಳ್ಳಬೇಕೆಂದರೆ ಅದಕ್ಕೆ ನಿರ್ದೇಶಕರ ಪಾತ್ರ ದೊಡ್ಡದು. ಈ ವರ್ಷ ಸೌತ್‌ ಸಿನಿಮಾದಲ್ಲಿ ಹಲವು ನಿರ್ದೇಶಕರು ಹಿಟ್‌ ಸಿನಿಮಾಗಳನ್ನು ಕೊಟ್ಟಿದ್ದಾರೆ. 2023ರ ಅತ್ಯುತ್ತಮ ಸೌತ್‌ ನಿರ್ದೇಶಕರ ಪಟ್ಟಿ ಇಲ್ಲಿದೆ.

ಮಣಿರತ್ನಂ

ಪೊನ್ನಿಯನ್ ಸೆಲ್ವನ್‌ 1 ಹಾಗೂ 2ನ್ನು ಮಣಿರತ್ನಂ ನಿರ್ದೇಶಿಸಿದ್ದಾರೆ. ಪೊನ್ನಿಯನ್ ಸೆಲ್ವನ್-2ರಲ್ಲಿ ಐಶ್ವರ್ಯಾ ರೈ, ವಿಕ್ರಮ್, ತ್ರಿಶಾ ಕೃಷ್ಣನ್, ಕಾರ್ತಿಕ್ ಮತ್ತು ಜಯಂ ರವಿ ಕಾಣಿಸಿಕೊಂಡಿದ್ದರು. ಐಶ್ವರ್ಯಾ ರೈ ಮತ್ತು ಮತ್ತು ವಿಕ್ರಮ್ ಅವರ ಅಭಿನಯ ವಿಮರ್ಶಾತ್ಮಕವಾಗಿ ಮೆಚ್ಚುಗೆ ಪಡೆದಿತ್ತು. ಚಿತ್ರದಲ್ಲಿ ಐಶ್ವರ್ಯಾ ರೈ ದ್ವಿಪಾತ್ರಗಳಲ್ಲಿ ನಟಿಸಿದ್ದರು. ತಮಿಳಿನ ಜತೆಗೆ, ಪೊನ್ನಿಯನ್ ಸೆಲ್ವನ್-2 ಹಿಂದಿ ಮತ್ತು ತೆಲುಗಿನಲ್ಲೂ ಡಬ್ ಮಾಡಿ ಬಿಡುಗಡೆ ಮಾಡಲಾಗಿತ್ತು. ಮೊದಲ ಭಾಗವು ಬಾಕ್ಸ್ ಆಫೀಸ್‌ನಲ್ಲಿ 500 ಕೋಟಿ ರೂ. ಗಳಿಸಿತ್ತು. ಐತಿಹಾಸಿಕ ಕಥಾ ಹಂದರವುಳ್ಳ ಈ ಸಿನಿಮಾ ಪ್ರಾಚೀನ ತಮಿಳು ರಾಜಮನೆತನ ಚೋಳರಾಜರ ಕುರಿತಾಗಿನ ಕತೆಯನ್ನು ಹೊಂದಿದೆ. ಪೊನ್ನಿಯನ್ ಸೆಲ್ವನ್ ಸಿನಿಮಾ ಮಾಡಬೇಕೆಂಬುದು ತಮಿಳುನಾಡಿನಲ್ಲಿ ಎಂಜಿಆರ್ ಕಾಲದಿಂದಲೂ ಕನಸಾಗಿತ್ತು.

ಇದನ್ನೂ ಓದಿ: Year Ender 2023 : ಕ್ರಿಕೆಟ್​​ ಕ್ಷೇತ್ರ ಕಂಡ ಸೋಲು- ಗೆಲುವಿನ ಅವಿಸ್ಮರಣೀಯ ಕ್ಷಣಗಳು ಇವು…

ಜೂಡ್​ ಆಂಥೊನಿ ಜೋಸೆಫ್

ಜೂಡ್​ ಆಂಥೊನಿ ಜೋಸೆಫ್​ ನಿರ್ದೇಶನದ ನೈಜ ಘಟನೆ ಆಧಾರಿತ ಮಲಯಾಳಂ `2018′ ಸಿನಿಮಾ ಪ್ರೇಕ್ಷಕರಿಂದ ಮೆಚ್ಚುಗೆ ಗಳಿಸಿತ್ತು. ಕೇರಳದಲ್ಲಿ 2018ರಲ್ಲಿ ಪ್ರವಾಹ ಉಂಟಾದಾಗ ಮಾನವೀಯತೆ ಗೆದ್ದಿತ್ತು. ಈ ಧೈರ್ಯಶಾಲಿ ನೈಜ ಕಥೆಯು ಕೇರಳ ಚಲನಚಿತ್ರೋದ್ಯಮದ ಇತಿಹಾಸದಲ್ಲಿ ಅತಿದೊಡ್ಡ ಬ್ಲಾಕ್‌ಬಸ್ಟರ್ ಸಿನಿಮಾ ಆಗಿ ಹೊರಹೊಮ್ಮಿತ್ತು.

ಟೊವಿನೋ ಥಾಮಸ್​ ಜತೆ ಆಸಿಫ್​ ಅಲಿ, ಅಪರ್ಣಾ ಬಾಲಮುರಳಿ, ವಿನೀತ್​ ಶ್ರೀನಿವಾಸನ್​, ಕಲೈಯರಸನ್​, ಸುದೇಶ್​, ಅಜು ವರ್ಗೀಸ್​, ತನ್ವಿ ರಾಮ್​, ಗೌತಮಿ ನಾಯರ್​ ಮುಂತಾದವರು ಈ ಸಿನಿಮಾದಲ್ಲಿ ನಟಿಸಿದ್ದಾರೆ. ಸೆಪ್ಟೆಂಬರ್ 2023ರಲ್ಲಿ (Oscars 2024), ಫಿಲ್ಮ್ ಫೆಡರೇಶನ್ ಆಫ್ ಇಂಡಿಯಾ ʻ2018ʼ ಸಿನಿಮಾವನ್ನು ಆಸ್ಕರ್‌ ರೇಸ್‌ಗೆ ಆಯ್ಕೆ ಮಾಡಿತ್ತು. ಆಸ್ಕರ್‌ 2024ರ (Oscars 2024) ಸ್ಪರ್ಧೆಗೆ ಕಳಿಸಲಾಗಿತ್ತು. ಆದರೆ ಅಂತಿಮ ಸುತ್ತಿನ ಸ್ಪರ್ಧೆಗೆ ಎಂಟ್ರಿ ಪಡೆಯಲು ‘2018’ ಸಿನಿಮಾ (2018 Movie) ಸೋತಿದೆ. 

ಲೋಕೇಶ್‌ ಕನಕರಾಜ್‌

ಲೋಕೇಶ್ ಕನಕರಾಜ್ ನಿರ್ದೇಶನ ಹಾಗೂ ದಳಪತಿ ವಿಜಯ್‌ ಅಭಿನಯದ ʻಲಿಯೋʼ ವಿಶ್ವಾದ್ಯಂತ 550 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿದೆ ಎನ್ನಲಾಗಿದೆ. ಇಡೀ ಪ್ರಪಂಚದ ಲೆಕ್ಕಾಚಾರ ನೋಡಿದರೆ ಲಿಯೋ ಮೊದಲ ದಿನವೇ 140 ಕೋಟಿ ರೂ. ಗಳಿಕೆ ಮಾಡಿ ದಾಖಲೆ ಬರೆದಿತ್ತು. ಲಿಯೋ’ 2023ರ ಬಹು ನಿರೀಕ್ಷಿತ ಚಿತ್ರಗಳಲ್ಲಿ ಒಂದಾಗಿದೆ. ಚಿತ್ರವು ತಮಿಳು, ತೆಲುಗು, ಮಲಯಾಳಂ, ಕನ್ನಡ ಮತ್ತು ಹಿಂದಿ ಸೇರಿದಂತೆ ಬಹು ಭಾಷೆಗಳಲ್ಲಿ ಬಿಡುಗಡೆಯಾಗಿತ್ತು. 2021ರಲ್ಲಿ ಬಿಡುಗಡೆಯಾದ ʻಮಾಸ್ಟರ್ʼ ಚಿತ್ರದ ಭಾರಿ ಯಶಸ್ಸಿನ ನಂತರ ದಳಪತಿ ವಿಜಯ್ ಮತ್ತು ನಿರ್ದೇಶಕ ಲೋಕೇಶ್ ಕನಕರಾಜ್ ಅವರು ಈ ‘ಲಿಯೋ’ ಸಿನಿಮಾ ಮೂಲಕ ಮತ್ತೆ ಒಂದಾಗಿದ್ದಾರೆ. ಹಲವು ವರ್ಷಗಳ ನಂತರ ವಿಜಯ್ ಜತೆ ತ್ರಿಷಾ ನಾಯಕಿಯಾಗಿ ಈ ಸಿನಿಮಾ ಮೂಲಕ ಮಿಂಚಿದ್ದಾರೆ. ಕೀರ್ತಿ ಸುರೇಶ್, ಅರ್ಜುನ್, ಮಿಶಾ ಘೋಷಾಲ್, ಪ್ರಿಯಾ ಆನಂದ್, ಮನ್ಸೂರ್ ಅಲಿ ಖಾನ್ ಮತ್ತು ಸಂಜಯ್ ತಾರಾ ಬಳಗವಿದೆ.

ಇದನ್ನೂ ಓದಿ: Year Ender 2023 : ಒಂದು ವರ್ಷದ ಅವಧಿಯಲ್ಲಿ ಇಹ ಲೋಕ ತ್ಯಜಿಸಿದ ಕ್ರಿಕೆಟ್ ದಂತಕತೆಗಳು ಇವರು

ಶ್ರೀಕಾಂತ್ ಒಡೆಲಾ

ನಟ ನಾನಿ (Actor Nani) ಅಭಿನಯದ ಮೊದಲ ಪ್ಯಾನ್ ಇಂಡಿಯಾ ಸಿನಿಮಾವಾಗಿರುವ ‘ದಸರಾ’ಗೆ ಯುವ ಪ್ರತಿಭೆ ಶ್ರೀಕಾಂತ್ ಒಡೆಲಾ ಆಕ್ಷನ್ ಕಟ್ ಹೇಳಿದ್ದರು. ರಾಷ್ಟ್ರಪ್ರಶಸ್ತಿ ವಿಜೇತ ನಟಿ ಕೀರ್ತಿ ಸುರೇಶ್ ನಾಯಕಿಯಾಗಿ ನಟಿಸಿದ್ದಾರೆ. ವಿಶ್ವಾದ್ಯಂತ ಅದ್ಭುತ ಪ್ರದರ್ಶನ ಕಾಣುತ್ತಿರುವ ದಸರಾ ಚಿತ್ರವನ್ನು ಎಸ್ ಎಸ್ ರಾಜಮೌಳಿ, ಮಹೇಶ್ ಬಾಬು ಹಾಗೂ ಪ್ರಭಾಸ್ ಕೂಡಾ ಮೆಚ್ಚಿಕೊಂಡಿದ್ದರು. ಚಿತ್ರದಲ್ಲಿ ಕನ್ನಡಿಗ ದೀಕ್ಷಿತ್‌ ಶೆಟ್ಟಿ ಕೂಡಾ ನಟಿಸಿದ್ದರು. ಮಾರ್ಚ್ 30 ರಂದು ತೆಲುಗು ಸೇರಿದಂತೆ ಕನ್ನಡ, ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆಗಳಲ್ಲಿ ದಸರಾ ಸಿನಿಮಾ ಬಿಡುಗಡೆ ಆಗಿ ಸೂಪರ್ ಹಿಟ್ ಎನಿಸಿಕೊಂಡಿತು.

ಜೋ ಬೇಬಿ

ಮಮ್ಮುಟ್ಟಿ ಮತ್ತು ಜ್ಯೋತಿಕಾ ನಟನೆ, ನಿರ್ದೇಶಕ ಜಿಯೋ ಬಾಬು ಅವರ ʻಕಾತಲ್- ದಿ ಕೋರ್ʼ (Kaathal – The Core) ನವೆಂಬರ್ 23ರಂದು ಥಿಯೇಟರ್‌ಗೆ ಲಗ್ಗೆ ಇಟ್ಟಿತ್ತು. 15 ಕೋಟಿ ರೂ. ಈ ಸಿನಿಮಾ ಗಳಿಸಿತ್ತು ಎನ್ನಲಾಗಿದೆ. ಸಿನಿಮಾದಲ್ಲಿ ಮಮ್ಮುಟ್ಟಿಗೆ ನಾಯಕಿಯಾಗಿ ನಟಿ ಜ್ಯೋತಿಕಾ ಕಾಣಿಸಿಕೊಂಡಿದ್ದು, ಒಂದು ದಶಕದ ಬಳಿಕ ಮಲಯಾಳಂ ಚಿತ್ರರಂಗಕ್ಕೆ ಹಿಂತಿರುಗಿದ್ದರು. ‘ದಿ ಗ್ರೇಟ್ ಇಂಡಿಯನ್ ಕಿಚನ್’ ಖ್ಯಾತಿಯ ಜೋ ಬೇಬಿ ನಿರ್ದೇಶನದ ಈ ಚಿತ್ರವನ್ನು ಮಮ್ಮುಟ್ಟಿ ಕಂಪನಿ ಮತ್ತು ವೇಫೇರರ್ ಫಿಲ್ಮ್ಸ್ ಬ್ಯಾನರ್‌ಗಳ ಅಡಿಯಲ್ಲಿ ನಿರ್ಮಿಸಲಾಗಿತ್ತು. ಚಿತ್ರಕ್ಕೆ ಮ್ಯಾಥ್ಯೂಸ್ ಪುಲಿಕನ್ ಸಂಗೀತ ಸಂಯೋಜಿಸಿದ್ದಾರೆ, ಆದರ್ಶ್ ಸುಕುಮಾರನ್ ಚಿತ್ರಕಥೆ ಸಿನಿಮಾಕ್ಕಿದೆ.

ಅಧಿಕ್ ರವಿಚಂದ್ರನ್

ಅಧಿಕ್ ರವಿಚಂದ್ರನ್ ನಿರ್ದೇಶನದ ‘ಮಾರ್ಕ್ ಆಂಟನಿ’ ಚಿತ್ರದಲ್ಲಿ ವಿಶಾಲ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಎಸ್‌ಜೆ ಸೂರ್ಯ ಮತ್ತು ಸೆಲ್ವರಾಘವನ್ ಮಹತ್ವದ ಪಾತ್ರಗಳನ್ನು ನಿರ್ವಹಿಸಿದ್ದರು. ಸೆಪ್ಟೆಂಬರ್ 15 ರಂದು ತೆರೆಗೆ ಬಂದಿತ್ತು.ಜೀ 5 ಸ್ಟ್ರೀಮಿಂಗ್‌ ಹಕ್ಕು ಪಡೆದುಕೊಂಡಿತ್ತು. ವಿಶಾಲ್‌ ಅವರ ಈ ವರ್ಷ ಅತಿ ಹೆಚ್ಚು ಗಳಿಕೆ ಮಾಡಿದ ಸಿನಿಮಾ ಇದು.

ಇದನ್ನೂ ಓದಿ: Year Ender 2023: ಕಳೆದ ವರ್ಷಕ್ಕೆ ಹೋಲಿಸಿದರೆ 2023ರಲ್ಲಿ ಶೇ.58ರಷ್ಟು ಹೆಚ್ಚು ಉದ್ಯೋಗ ಕಡಿತ!

ನೆಲ್ಸನ್ ದಿಲೀಪ್‌ಕುಮಾರ್‌

ರಜನಿಕಾಂತ್ ಅಭಿನಯದ, ನೆಲ್ಸನ್ ದಿಲೀಪ್‌ಕುಮಾರ್‌ ನಿರ್ದೇಶನದ ʼಜೈಲರ್‌ʼ ಚಿತ್ರವು ದೇಶೀಯ ಗಳಿಕೆ 395 ಕೋಟಿ ರೂ ಮತ್ತು ವಿದೇಶದಲ್ಲಿ 195 ಕೋಟಿ ರೂ.ಗಳೊಂದಿಗೆ, ವಿಶ್ವಾದ್ಯಂತ 590 ಕೋಟಿ ರೂ.ಗಳ ಬಾಕ್ಸ್ ಆಫೀಸ್ ಮೊತ್ತವನ್ನು ಸಾಧಿಸಿತ್ತು. ಜೈಲರ್ ಸಿನಿಮಾ “ಸಾರ್ವಕಾಲಿಕ ಅತಿ ಹೆಚ್ಚು ಗಳಿಕೆಯ ತಮಿಳು ಚಿತ್ರ ಎನಿಸಿಕೊಂಡಿತ್ತು. ಜೈಲರ್ ಚಿತ್ರದಲ್ಲಿ ಮೋಹನ್ ಲಾಲ್, ಶಿವರಾಜ್ ಕುಮಾರ್ ಮತ್ತು ಜಾಕಿ ಶ್ರಾಫ್ ಪ್ರಮುಖ ಅತಿಥಿ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರು. ಪ್ರಿಯಾಂಕಾ ಮೋಹನ್, ತಮನ್ನಾ ಭಾಟಿಯಾ, ರಮ್ಯಾ ಕೃಷ್ಣನ್, ಯೋಗಿ ಬಾಬು, ವಸಂತ್ ರವಿ ಮತ್ತು ವಿನಾಯಕನ್ ನಟಿಸಿದ್ದರು.

ಕಾರ್ತಿಕ್ ಸುಬ್ಬರಾಜ್

ʼಜಿಗರ್‌ ಥಂಡಾ ಡಬಲ್ ಎಕ್ಸ್ʼ ಸಿನಿಮಾ ಸಿನಿಮಾದಲ್ಲಿ ರಾಘವ ಲಾರೆನ್ಸ್ ಹಾಗೂ ಎಸ್.ಜೆ.ಸೂರ್ಯ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದರು. ನಿರ್ದೇಶಕ ಕಾರ್ತಿಕ್ ಸುಬ್ಬರಾಜ್ ಅವರ ಈ ಸಿನಿಮಾ ವ್ಯಾಪಕ ಮೆಚ್ಚುಗೆಯನ್ನು ಪಡೆದಿತ್ತು. ಜಿಗರ್‌ ಥಂಡಾ ಡಬಲ್ ಎಕ್ಸ್’ ಕೇವಲ ನಾಲ್ಕು ದಿನದಲ್ಲಿ 35 ಕೋಟಿ ರೂಪಾಯಿಗೂ ಅಧಿಕ ಗಳಿಕೆ ಕಂಡಿದೆ ಎನ್ನಲಾಗಿತ್ತು. ʼಜಿಗರ್‌ ಥಂಡಾ ಡಬಲ್ ಎಕ್ಸ್ʼ ಸಿನಿಮಾ ತಂಡಕ್ಕೆ ಸೂಪರ್‌ ಸ್ಟಾರ್‌ ರಜನಿಕಾಂತ್ (Actor Rajinikanth) ಮೆಚ್ಚುಗೆಯ ಸುರಿಮಳೆಗೈದಿದ್ದರು. ಜತೆಗೆ ತಂಡಕ್ಕೆ ಪತ್ರವನ್ನು ಬರೆದಿದ್ದರು. ಕಲಾ ನಿರ್ದೇಶಕರ ಕೆಲಸ ಅದ್ಭುತವಾಗಿದೆ. ದಿಲೀಪ್ ಸುಬ್ಬರಾಯರ ಆಕ್ಷನ್‌ ದೃಶ್ಯಗಳು ಕೂಡ. ಸಂತೋಷ್ ನಾರಾಯಣನ್ ಈ ಚಿತ್ರಕ್ಕೆ ಸಂಗೀತದ ಮೂಲಕ ಜೀವ ತುಂಬಿ ತಾನೊಬ್ಬ ಮೇರು ಸಂಗೀತ ಸಂಯೋಜಕ ಎಂದು ಸಾಬೀತುಪಡಿಸಿದ್ದರು. ಕಾರ್ತಿಕ್ ಸುಬ್ಬರಾಜ್ ಈ ಚಿತ್ರದಲ್ಲಿ ಜನ ಚಪ್ಪಾಳೆ ತಟ್ಟುವಂತೆ ಮಾಡಿದ್ದಾರೆʼʼಎಂದು ಬರೆದುಕೊಂಡಿದ್ದರು.

ಪ್ರಶಾಂತ್‌ ನೀಲ್‌

ಪ್ರಭಾಸ್ ಅಭಿನಯದ ʼಸಲಾರ್ʼ ಸಿನಿಮಾ (Salaar Box Office) ಈ ವರ್ಷದ ಅತಿದೊಡ್ಡ ಬ್ಲಾಕ್‌ಬಸ್ಟರ್ ಸಿನಿಮಾವಾಗಿ ಹೊರಹೊಮ್ಮಿದೆ. ಆರಂಭಿಕ ಅಂದಾಜಿನ ಪ್ರಕಾರ ಈ ಚಿತ್ರ ಭಾರತದಲ್ಲಿ ಮೊದಲ ದಿನ 95 ಕೋಟಿ ರೂ. ಗಳಿಸಿತು. ಇದೀಗ ಬಿಡುಗಡೆಯಾದ ಮೂರೇ ದಿನಕ್ಕೆ ಭಾರತದ ಬಾಕ್ಸ್ ಆಫೀಸ್​ನಲ್ಲಿ 200 ಕೋಟಿ ರೂಪಾಯಿ ಗಳಿಕೆ ಮಾಡಿದೆ. ವಿಶ್ವ ಬಾಕ್ಸ್ ಆಫೀಸ್​ನಲ್ಲಿ 400 ಕೋಟಿ ರೂಪಾಯಿ ಬಾಚಿಕೊಂಡಿದೆ.ಸಲಾರ್’ ಸಿನಿಮಾ ಡಿಸೆಂಬರ್ 22ರಂದು ರಿಲೀಸ್ ಆಯಿತು. ಮೊದಲ ದಿನ ಈ ಚಿತ್ರ ಗಳಿಕೆ ಮಾಡಿದ್ದು 90 ಕೋಟಿ ರೂಪಾಯಿ. ಎರಡನೇ ದಿನ (ಡಿಸೆಂಬರ್ 23) ಈ ಸಿನಿಮಾ ಬಾಚಿಕೊಂಡಿದ್ದು 56 ಕೋಟಿ ರೂಪಾಯಿ. ಮೂರನೇ ದಿನ ಸಿನಿಮಾ ಬಾಚಿಕೊಂಡಿದ್ದು 62 ಕೋಟಿ ರೂಪಾಯಿ. ಈ ಮೂಲಕ ಸಿನಿಮಾದ ಒಟ್ಟಾರೆ ಗಳಿಕೆ 209 ಕೋಟಿ ರೂಪಾಯಿ ಆಗಿದೆ. ಕೆಜಿಎಫ್‌ʼ ಸರಣಿ ಚಿತ್ರಗಳ ಮೂಲಕ ದೇಶಾದ್ಯಂತ ಸಂಚಲನ ಮೂಡಿಸಿರುವ ಪ್ರಶಾಂತ್‌ ನೀಲ್‌ ʼಸಲಾರ್‌ʼ ಚಿತ್ರವನ್ನು ನಿರ್ದೇಶಿಸಿದ್ದು, ಪ್ರೇಕ್ಷಕರಲ್ಲಿ ಕುತೂಹಲ ಮೂಡಿಸಿತ್ತು.

Exit mobile version