Site icon Vistara News

Oppenheimer Movie: ಸೆಕ್ಸ್ ಮಾಡುತ್ತಲೇ ಭಗವದ್ಗೀತೆ ಪಠಣ! ‘ಓಪನ್‌ಹೈಮರ್’ ಸಿನಿಮಾ ವಿರುದ್ಧ ರೊಚ್ಚಿಗೆದ್ದ ಭಾರತೀಯರು

Bhagavad Gita in Oppenheimer movie

ನವದೆಹಲಿ: ಹಾಲಿವುಡ್‌ನ ಓಪನ್‌ಹೈಮರ್ ಸಿನಿಮಾ (Oppenheimer Movie) ಕಳೆದ ಶುಕ್ರವಾರ ಬಿಡುಗಡೆಗೊಂಡಿದ್ದು, ವಿಶ್ವಾದ್ಯಂತ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಆದರೆ ಇದೀಗ ಸಿನಿಮಾ ಬಗ್ಗೆ ವಿವಾದವೊಂದರ ಎಳೆ ಕೇಳಿ ಬರುತ್ತಿದೆ. ಸಿನಿಮಾದಲ್ಲಿ ಹಿಂದೂ ಧರ್ಮದ ಪವಿತ್ರ ಗ್ರಂಥ ಭಗವದ್ಗೀತೆಗೆ ಅವಮಾನ ಮಾಡಲಾಗಿದೆ ಎನ್ನುವ ವಿಚಾರ ಕೇಳಿಬರುತ್ತಿದೆ.

ಅಣು ಬಾಂಬ್‌ನ ಪಿತಾಮಹ ಎನಿಸಿಕೊಂಡಿರುವ ಓಪನ್‌ಹೈಮರ್ ಅವರ ಜೀವನ ಕಥೆ ಕುರಿತಾಗಿ ಈ ಸಿನಿಮಾ ಮಾಡಲಾಗಿದೆ. ಸಿನಿಮಾದಲ್ಲಿ ನಟ ಸಿಲಿಯನ್ ಮರ್ಫಿ ಅವರು ಓಪನ್ಹೈಮರ್‌ ಪಾತ್ರದಲ್ಲಿ ನಟಿಸಿದ್ದಾರೆ. ಸಿನಿಮಾದಲ್ಲಿ ಅವರು ಪತ್ರಕರ್ತೆಯೊಬ್ಬರ ಜತೆ ಲೈಂಗಿಕವಾಗಿ ತೊಡಗಿಸಿಕೊಳ್ಳುತ್ತಾರೆ. ಆ ಸಮಯದಲ್ಲಿ ಆ ಪತ್ರಕರ್ತೆ ಸಂಸ್ಕೃತ ಪುಸ್ತಕವೊಂದನ್ನು ತೋರಿಸಿ ಅದನ್ನು ಓದುವುದಕ್ಕೆ ಕೇಳುತ್ತಾಳೆ. ಆಗ ಓಪನ್ಹೈಮರ್‌ ಸಂಸ್ಕೃತದ ಸಾಲನ್ನು ಓದುತ್ತಾರೆ.
ಈ ರೀತಿ ಓದಲಾಗಿರುವ ಸಾಲು ಭಗವದ್ಗೀತೆಯ ಸಾಲು ಎಂದು ಇದೀಗ ವಾದ ಶುರುವಾಗಿದೆ. ಈ ಬಗ್ಗೆ ಟ್ವಿಟರ್‌ನಲ್ಲಿ ಅನೇಕರು ಟ್ವೀಟ್‌ಗಳನ್ನು ಮಾಡಿದ್ದು, #BoycottOppenheimer #RespectHinduCulture ಎನ್ನುವಂತಹ ಹ್ಯಾಶ್‌ಟ್ಯಾಗ್‌ಗಳು ಟ್ರೆಂಡ್‌ ಆಗಿವೆ.

ಇದನ್ನೂ ಓದಿ: Viral Video : ಲಿಫ್ಟ್‌ ಹತ್ತಿ ಯಾವ ಫ್ಲೋರ್‌ಗೆ ಹೊಗಬೇಕು ಎನ್ನುವುದನ್ನೂ ಹೇಳುತ್ತದೆ ಈ ಬೆಕ್ಕು!
ಈ ಬಗ್ಗೆ ಕೇಂದ್ರ ಸಚಿವ ಅನುರಾಗ್‌ ಠಾಕೂರ್‌ ಅವರೂ ಖಂಡನೆ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ಸಚಿವರು ಸೆನ್ಸಾರ್‌ ಮಂಡಳಿಯ ಎದುರು ಈ ಬಗ್ಗೆ ಪ್ರಶ್ನೆಯನ್ನಿಟ್ಟಿದ್ದಾರೆ. ಇಂತಹ ದೃಶ್ಯವನ್ನು ಹೇಗೆ ಒಪ್ಪಿಗೆ ನೀಡಲಾಯಿತು ಎಂದು ಕೇಳಿದ್ದಾರೆ ಎಂದು ಮೂಲಗಳು ತಿಳಿಸಿವೆ. ಬಗ್ಗೆ ಸೆನ್ಸಾರ್‌ ಮಂಡಳಿಯು ತನಿಖೆ ನಡೆಸಲಿದ್ದು, ಕಾರಣೀಕರ್ತ ಅಧಿಕಾರಿಗಳ ವಿರುದ್ಧ ಕ್ರಮ ತೆಗೆದುಕೊಳ್ಳಲಿದೆ ಎಂದೂ ಹೇಳಲಾಗಿದೆ.


ಸದ್ಯ ಟ್ವಿಟರ್‌ನಲ್ಲಂತೂ ಈ ಸಿನಿಮಾದ ದೃಶ್ಯದ ಬಗ್ಗೆ ಭಾರೀ ವಿರೋಧ ವ್ಯಕ್ತವಾಗುತ್ತಿದೆ. “ಹಾಲಿವುಡ್‌ ಅಥವಾ ಪಾಶ್ಚಿಮಾತ್ಯರು ಹಿಂದೂ ಧರ್ಮವನ್ನಾಗಲೀ ಅಥವಾ ನಮ್ಮ ಗ್ರಂಥಗಳನ್ನಾಗಲಿ ಎಂದಿಗೂ ಧನಾತ್ಮಕವಾಗಿ ಕಾಣುತ್ತಾರೆ ಎಂದು ಯಾರೂ ನಂಬಲು ಹೋಗಬೇಡಿ” ಎಂದು ಜನರು ಅಭಿಪ್ರಾಯಗಳನ್ನು ವ್ಯಕ್ತಪಡಿಸಲಾರಂಭಿಸಿದ್ದಾರೆ.

Exit mobile version