Site icon Vistara News

ವಿಭಿನ್ನ ಶೀರ್ಷಿಕೆಯ ಭಗವಾನ್ ಶ್ರೀ ನಿತ್ಯಾನಂದ ಸಿನಿಮಾದ ಟೈಟಲ್, ಮೋಷನ್ ಪೋಸ್ಟರ್ ರಿಲೀಸ್‌

ಭಗವಾನ್ ಶ್ರೀ ನಿತ್ಯಾನಂದ

ಬೆಂಗಳೂರು: ಕನ್ನಡದಲ್ಲೀಗ ವಿಭಿನ್ನ ಶೀರ್ಷಿಕೆಯ ಹೊಸ ಹೊಸ ಸಿನಿಮಾಗಳು‌ ಬರುತ್ತಿವೆ. ಈಗ The endless one ಭಗವಾನ್ ಶ್ರೀ ನಿತ್ಯಾನಂದ ಎಂಬ ಹೆಸರಿನ ಹೊಸ ಸಿನಿಮಾವೊಂದು ನಿರ್ಮಾಣವಾಗುತ್ತಿದೆ. ಬೆಂಗಳೂರಿನಲ್ಲಿರುವ ಅವಧೂತ ವಿನಯ್ ಗುರೂಜಿ ಆಶ್ರಮದಲ್ಲಿ ವಿನಯ್ ಗುರೂಜಿ ಚಿತ್ರದ ಮೋಷನ್ ಪೋಸ್ಟರ್ ಹಾಗೂ ಟೈಟಲ್ ರಿವೀಲ್ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದರು.

ವಿನಯ್ ಗುರೂಜೀ ಮಾತನಾಡಿ, ʻʻಭಗವಾನ್ ಹೆಸರಿನಲ್ಲಿ ಕಿರುಚಿತ್ರಗಳಷ್ಟೇ ಬಂದಿದೆ. ಈಗ ಅವರ ವಿಚಾರಗಳನ್ನು ಒಳಗೊಂಡ ಭಗವಾನ್ ಶ್ರೀ ನಿತ್ಯಾನಂದ ಸಿನಿಮಾ ಬರುತ್ತಿದೆ. ಭಗವಾನ್‌ನಲ್ಲಿ ಒಂದೇ ತತ್ವವಿದ್ದು, ಅದೇ ಮನುಷ್ಯತ್ವ. ಅಲ್ಲಿ ಮತಕ್ಕೆ ಜಾಗವಿಲ್ಲ, ಮನುಷ್ಯತ್ವಕ್ಕಿಂತ ದೊಡ್ಡ ತತ್ವ ಮತ್ತೊಂದಿಲ್ಲ. ಶಿರಡಿಬಾಬಾ ಸೀರಿಯಲ್ ಬಂದ ಮೇಲೆ ಬಾಬಾ ಬಗ್ಗೆ ಗೊತ್ತಾಗಿದ್ದು, ಶ್ರೀನಿವಾಸ ಕಲ್ಯಾಣ ಸಿನಿಮಾ ಆದ ಮೇಲೆ ತಿರುಪತಿ ಬಗ್ಗೆ ಗೊತ್ತಾಯಿತು. ಅದೇ ರೀತಿ ಭಗವಾನ್ ಶ್ರೀ ನಿತ್ಯಾನಂದ ಸಿನಿಮಾದಲ್ಲಿ ಹಲವು ವಿಷಯಗಳನ್ನು ಜನರಿಗೆ ತಲುಪಿಸುವ ಕೆಲಸವಾಗಿದೆʼʼ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ | Monsoon Raaga | ಡಾಲಿ-ರಚಿತಾ ಅಭಿನಯದ ಮಾನ್ಸೂನ್ ರಾಗ ಸಿನಿಮಾ ಟ್ರೈಲರ್‌ಗೆ ಭಾರಿ ಮೆಚ್ಚುಗೆ

ನಿರ್ಮಾಪಕ ಕೃಷ್ಣ ಕೆ.ಆರ್. ಮಾತನಾಡಿ, ಭಗವಾನ್ ಶ್ರೀ ನಿತ್ಯಾನಂದ ಸಿನಿಮಾದ ಟೈಟಲ್ ಹಾಗೂ ಮೋಷನ್ ಪೋಸ್ಟರ್ ರಿಲೀಸ್ ಮಾಡಿದ್ದು, ನಮ್ಮ ಫ್ಯಾಮಿಲಿ ಭಗವಾನ್ ನಿತ್ಯಾನಂದ ಸೇವೆ ಸಲ್ಲಿಸಿಕೊಂಡು ಬರುತ್ತಿದ್ದೇವೆ. ಈ ಸಿನಿಮಾ ಮಾಡುವ ಮೂಲಕ ಚಿಕ್ಕದೊಂದು ಅಳಿಲು ಸೇವೆ ಮಾಡುತ್ತಿದ್ದೇವೆ ಎಂದರು.

ಸಿನಿಮಾಗೆ The endless one ಭಗವಾನ್ ಶ್ರೀ ನಿತ್ಯಾನಂದ ಎಂಬ ವಿಭಿನ್ನ ಶೀರ್ಷಿಕೆ‌ ಇಡಲಾಗಿದ್ದು, ಶ್ರೀಕೃಷ್ಣ ಕೆ ಆರ್ ಸಿನಿಮಾಗೆ ಬಂಡವಾಳ ಹೂಡಿದ್ದಾರೆ. ಗುಲಾಬ್ ಪ್ರೊಡಕ್ಷನ್ ಅಡಿಯಲ್ಲಿ ತಯಾರಾಗುತ್ತಿರುವ ಚೊಚ್ಚಲ ಸಿನಿಮಾ ಇದಾಗಿದೆ.

ಕನ್ನಡ‌ ಮಾತ್ರವಲ್ಲದೇ ತಮಿಳು, ತೆಲುಗು, ಹಿಂದಿ, ಮಲಯಾಳಂ ಹಾಗೂ ಇಂಗ್ಲಿಷ್ ಭಾಷೆಯಲ್ಲಿ ಸಿನಿಮಾ ಮೂಡಿಬರಲಿದೆ. ಸದ್ಯದಲ್ಲಿಯೇ ಉಳಿದ ಸ್ಟಾರ್ ಕಾಸ್ಟ್, ತಂತ್ರಜ್ಞರ ಬಗ್ಗೆ ಚಿತ್ರತಂಡ ಮಾಹಿತಿ ನೀಡಲಿದೆ.

ಇದನ್ನೂ ಓದಿ | Nani | ಫ್ರೆಂಡ್‌ಶಿಪ್‌ ಡೇಗೆ ನಾನಿ ನಟನೆಯ ದಸರಾ ಸಿನಿಮಾ ಪೋಸ್ಟರ್‌ ರಿವೀಲ್‌: ನಾನಿ ಜತೆ ಮಿಂಚಿದ ಕನ್ನಡದ ನಟ

Exit mobile version