ಭಾವನ ರಾಮಣ್ಣ ಅವರ ಹೂವು ಫೌಂಡೇಶನ್ ಫಾರ್ ಆರ್ಟ್ಸ್ ಸಂಸ್ಥೆಯು ಹಲವಾರು ವರ್ಷಗಳಿಂದ ಕಲೆ ಮತ್ತು ಕಲಾವಿಧರುಗಳ ಏಳಿಗೆ ಮತ್ತು ಪ್ರಗತಿಗಾಗಿ ಹತ್ತಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಬರುತ್ತಿದೆ. ಈಗ 2024ರ ಆಗಸ್ಟ್ ತಿಂಗಳ 7 ಮತ್ತು 8 ತಾರೀಖಿನಂದು ರಾಜ್ಯಮಟ್ಟದ ಭರತನಾಟ್ಯ ಸ್ಪರ್ಧೆಯನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ “ವರ್ಣ ಸ್ಪರ್ಧೆ” ಎಂಬ ಶೀರ್ಷಿಕೆ ಅಡಿಯಲ್ಲಿ ಏರ್ಪಡಿಸಲಾಗಿದೆ.
ಭರತನಾಟ್ಯದ ಪಠ್ಯದಲ್ಲಿರುವಂತಹ ವರ್ಣ ನೃತ್ಯವನ್ನು ಮಾತ್ರ ಈ ಸ್ಪರ್ಧೆ ಯಲ್ಲಿ ಅಂಗೀಕರಿಸಲಾಗಿದ್ದು ಮೊದಲನೇ ಬಹುಮಾನ ಒಂದು ಲಕ್ಷ ರೂಪಾಯಿಗಳು, ಎರಡನೇ ಬಹುಮಾನ 50,000 ರೂ, ಮೂರನೇ ಬಹುಮಾನ 30,000 ರೂ. ಬಹುಮಾನ ವಾಗಿ ವಿಜೇತರು ಪಡೆಯಲಿದ್ದಾರೆ. ಅರ್ಜಿದಾರರು ನೇರವಾಗಿ hoovufoundation.com ವೆಬ್ಸೈಟ್ ಮೂಲಕ ಅರ್ಜಿಯನ್ನು ಸಲ್ಲಿಸಬೇಕು. ಹೆಚ್ಚಿನ ವಿವರಗಳಿಗಾಗಿ ಶ್ರೀಮತಿ ಚಾರುಮತಿ 9901305155 ಮತ್ತು ಪ್ರೇಮ್ ಕುಮಾರ್ 7483490143 ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆ ಮೂಲಕ ತಿಳಿಸಿದ್ದಾರೆ.
ಇದನ್ನೂ ಓದಿ: Kamal Haasan: ಇಂದೇ ಒಟಿಟಿಯಲ್ಲಿ ಸ್ಟ್ರೀಮಿಂಗ್ ಆಗುತ್ತಿದೆ ಕಮಲ್ ಹಾಸನ್ ನಟನೆಯ ʻಇಂಡಿಯನ್’ ಸಿನಿಮಾ?
ದರ್ಶನ್ ವಿಚಾರವಾಗಿ ಸುದ್ದಿಯಾಗಿದ್ದ ಭಾವನ
ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಆರೋಪದಡಿ ನಟ ದರ್ಶನ್ ಜೈಲು ಸೇರಿದ್ದಾರೆ. ‘ಚಂದ್ರಮುಖಿ ಪ್ರಾಣಸಖಿ’ ಸಿನಿಮಾ ಖ್ಯಾತಿಯ ಭಾವನಾ ರಾಮಣ್ಣ ಅವರು ದರ್ಶನ್ ವ್ಯಕ್ತಿತ್ವದ ಬಗ್ಗೆ ಮಾತನಾಡಿದ್ದರು.
”ನನಗೆ ದರ್ಶನ್ ಏನು ಅನ್ನೋದು ಗೊತ್ತು. ಆದರೆ ದರ್ಶನ್ ಮಾಡಿರೋ ತಪ್ಪಿನ ಬಗ್ಗೆ ನೋಡಲು ಕಾನೂನು ಇದೆ. ದರ್ಶನ್ ತಪ್ಪು ಮಾಡಿದ್ದಾರೋ? ಇಲ್ಲವೋ? ಎಂದು ತೀರ್ಮಾನಿಸಲು ನ್ಯಾಯಾಂಗ ವ್ಯವಸ್ಥೆ ಇದೆ. ದರ್ಶನ್ ಹೀರೋ ಆಗುವುದಕ್ಕಿಂತ ಮಂಚೆಯೇ ನನಗೆ ಗೊತ್ತು. ನಾನು ನೋಡಿರುವ ಹಾಗೇ ಅವರು ನಾಚಿಕೆ ಸ್ವಭಾವದ ವ್ಯಕ್ತಿ. ಸಂತೋಷದಲ್ಲಿ ಜೊತೆಗಿದ್ದು, ಕಷ್ಟದಲ್ಲಿದ್ದಾಗ ಅವರ ಜೊತೆಗಿಲ್ಲ ಅಂದ್ರೆ ಹೇಗೆ?. ಒಂದು ಕುಟುಂಬ ಎಂದು ಬಂದಾಗ ಎಲ್ಲರ ಮನೆ ದೋಸೆ ತೂತು” ಎಂದು ತಿಳಿಸಿದದ್ದರು.
ʻʻಹೆಣ್ಮು ಮಕ್ಕಳಿಗೆ ಕೆಟ್ಟ ಸಂದೇಶ ರವಾನೆ ಆಗಿ, ಬಹಳ ಸಮಸ್ಯೆ ಆಗುತ್ತದೆ. ಆದರೆ ರೇಣುಕಾಸ್ವಾಮಿ ಘಟನೆ ತುಂಬಾ ನೋವಾಗಿದೆ. ಕೃತ್ಯ ನಡೆದಿದೆ ನಿಜ, ಅದು ಕಾನೂನಿನ ಅಡಿಯಲ್ಲಿ ತನಿಖೆ ಆಗುತ್ತಿದೆ. ಪವಿತ್ರಾ ಗೌಡ ಅವರಿಗೆ ಯಾವ ರೀತಿ ಅಶ್ಲೀಲ ಮೆಸೇಜ್ ಬಂದಿದೆಯೆಂಬುದು ನನಗೆ ಗೊತ್ತು. ಕೆಟ್ಟ ಮೆಸೇಜ್ ಮಾಡಲು ಅವರ್ಯಾರು?ಕೆಲ ಸೋಷಿಯಲ್ ಮೀಡಿಯಾ ಮೆಸೇಜ್ ನೋಡಿದ್ರೆ, ಕೆಲ ಹೆಣ್ಣುಮಕ್ಕಳು ಆತ್ಮಹತ್ಯೆ ಮಾಡಿಕೊಳ್ತಾರೆ. ಕೆಟ್ಟ ಮೆಸೇಜ್ ಬಂದಿದ್ದನ್ನು ಇಗ್ನೋರ್ ಮಾಡಲು ಆಗಲ್ಲ. ರೇಣುಕಾಸ್ವಾಮಿ ಯಾರು ಎಂಬುದು ನಮಗೂ ನಿಮಗೂ ಯಾರಿಗೂ ಗೊತ್ತಿಲ್ಲ. ಈ ಪ್ರಕರಣದಿಂದ ಚಿತ್ರರಂಗ ಮಂಕಾಗಿದೆ ಎಂದು ಭಾವನಾ ತಿಳಿಸಿದ್ದರು.