Kamal Haasan: ಇಂದೇ ಒಟಿಟಿಯಲ್ಲಿ ಸ್ಟ್ರೀಮಿಂಗ್‌ ಆಗುತ್ತಿದೆ ಕಮಲ್ ಹಾಸನ್ ನಟನೆಯ ʻಇಂಡಿಯನ್' ಸಿನಿಮಾ? - Vistara News

ಕಾಲಿವುಡ್

Kamal Haasan: ಇಂದೇ ಒಟಿಟಿಯಲ್ಲಿ ಸ್ಟ್ರೀಮಿಂಗ್‌ ಆಗುತ್ತಿದೆ ಕಮಲ್ ಹಾಸನ್ ನಟನೆಯ ʻಇಂಡಿಯನ್’ ಸಿನಿಮಾ?

Kamal Haasan: ಇಂಡಿಯನ್ 2ನ ಡಿಜಿಟಲ್ ಸ್ಟ್ರೀಮಿಂಗ್ ಹಕ್ಕುಗಳನ್ನು ನೆಟ್‌ಫ್ಲಿಕ್ಸ್ ಪಡೆದುಕೊಂಡಿದೆ. ಇದೀಗ ‘ಇಂಡಿಯನ್’-2ಗಿಂತ 28 ವರ್ಷಗಳ ಹಿಂದೆ ಬಂದಿದ್ದ ಪ್ರೀಕ್ವೆಲ್ ಸೂಪರ್ ಎನ್ನುತ್ತಿದ್ದಾರೆ. ‘ಇಂಡಿಯನ್’ ಸಿನಿಮಾ ನೋಡದವರು ನೋಡಲು ಬಯಸುತ್ತಿದ್ದಾರೆ. ಇಂಡಿಯನ್ 2 ಬಿಡುಗಡೆಯಾದ ಮೊದಲ ದಿನದಲ್ಲಿ ಭಾರತದಾದ್ಯಂತ 26 ಕೋಟಿ ರೂ. ಗಳಿಸಿದೆ. ಅದರಲ್ಲಿ 17 ಕೋಟಿ ರೂ. ತಮಿಳು ಆವೃತ್ತಿಯಿಂದ ಬಂದಿದೆ.

VISTARANEWS.COM


on

Kamal Haasan Indian cinema release OTT today
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: “ಇಂಡಿಯನ್ 2,” ಎಸ್. ಶಂಕರ್ ನಿರ್ದೇಶನದ ಸಿನಿಮಾ. ನಟ ಕಮಲ್ ಹಾಸನ್ ಅವರ ಇತ್ತೀಚಿನ ಚಿತ್ರ, ಇಂಡಿಯನ್‌ 2 (Indian 2 box office) ಅಂತಿಮವಾಗಿ ಶುಕ್ರವಾರ (ಜು. 12) ಭಾರತದಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಯಿತು. ‘ಇಂಡಿಯನ್ 2’ ಸಿನಿಮಾ ಮೇಲೆ ಫ್ಯಾನ್ಸ್ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದರು. ಆದರೆ, ಈ ನಿರೀಕ್ಷೆಗಳನ್ನು ಸಿನಿಮಾ ಹುಸಿ ಮಾಡಿದೆ. ವಿಮರ್ಶಕರು ಮತ್ತು ಪ್ರೇಕ್ಷಕರಿಂದ ನೆಗೆಟಿವ್‌ ಪ್ರತಿಕ್ರಿಯೆ ಪಡೆದುಕೊಂಡಿದೆ.  ಇಂಡಿಯನ್ 2ನ ಡಿಜಿಟಲ್ ಸ್ಟ್ರೀಮಿಂಗ್ ಹಕ್ಕುಗಳನ್ನು ನೆಟ್‌ಫ್ಲಿಕ್ಸ್ ಪಡೆದುಕೊಂಡಿದೆ. ಇದೀಗ ‘ಇಂಡಿಯನ್’-2ಗಿಂತ 28 ವರ್ಷಗಳ ಹಿಂದೆ ಬಂದಿದ್ದ ಪ್ರೀಕ್ವೆಲ್ ಸೂಪರ್ ಎನ್ನುತ್ತಿದ್ದಾರೆ. ‘ಇಂಡಿಯನ್’ ಸಿನಿಮಾ ನೋಡದವರು ನೋಡಲು ಬಯಸುತ್ತಿದ್ದಾರೆ. ಹಾಗಾಗಿ ನೆಟ್‌ಫ್ಲಿಕ್ಸ್‌ನಲ್ಲಿ ಸಿನಿಮಾ ಸ್ಟ್ರೀಮಿಂಗ್ ಆಗುತ್ತಿದೆ ಎಂದು ವರದಿಯಾಗಿದೆ.

ಕೆಲವರು ಇನ್ನು 10 ಬಾರಿ ‘ಇಂಡಿಯನ್’ ನೋಡಬಹುದು. ಸೀಕ್ವೆಲ್ ನೋಡಲು ಆಗುವುದಿಲ್ಲ ಎನ್ನುತ್ತಿದ್ದಾರೆ. ಇದೆಲ್ಲದರ ಮಧ್ಯೆ ಕೆಲವರು ‘ಇಂಡಿಯನ್’ ಸಿನಿಮಾ ನೋಡಬೇಕು ಎಂದು ಬಯಸುತ್ತಿದ್ದಾರೆ. ಹಾಗಾಗಿ ನೆಟ್‌ಫ್ಲಿಕ್ಸ್‌ನಲ್ಲಿ ಸಿನಿಮಾ ಸ್ಟ್ರೀಮಿಂಗ್ ಆಗುತ್ತಿದೆ. ಜುಲೈ 14ರಿಂದ ಅಂದರೆ ಇಂದು ರಾತ್ರಿಯಿಂದಲೇ ‘ಇಂಡಿಯನ್’ ಸಿನಿಮಾ ರಿಲೀಸ್ ಆಗಲಿದೆ. ರೀ ಮಾಸ್ಟರ್ಸ್‌ 4K ವರ್ಷನ್‌ ನೋಡಲು ಸಿಗಲಿದೆ ಎಂದು ವರದಿಯಾಗಿದೆ.

ಇನ್ನು ಕೆಲವೇ ದಿನಗಳಲ್ಲಿ ‘ಇಂಡಿಯನ್-2’ ನೆಟ್‌ಫ್ಲಿಕ್ಸ್‌ಗೆ ಬರಲಿದೆ. ಆಗಸ್ಟ್ 15ಕ್ಕೆ ಸ್ಟ್ರೀಮಿಂಗ್ ಆಗುವ ಸಾಧ್ಯತೆಯಿದೆ. “ಇಂಡಿಯನ್ 2” ನ ಸಮಗ್ರ ಪಾತ್ರವರ್ಗವು ಆಕರ್ಷಕವಾಗಿದೆ.

ಇದನ್ನೂ ಓದಿ: Shiva Rajkumar: ಶಿವರಾಜ್ ಕುಮಾರ್ ಜನುಮದಿನಕ್ಕೆ 131ನೇ ಸಿನಿಮಾದ ಮೊದಲ ಝಲಕ್ ರಿಲೀಸ್!

ಇಂಡಿಯನ್ 2 ಬಿಡುಗಡೆಯಾದ ಮೊದಲ ದಿನದಲ್ಲಿ ಭಾರತದಾದ್ಯಂತ 26 ಕೋಟಿ ರೂ. ಗಳಿಸಿದೆ. ಅದರಲ್ಲಿ 17 ಕೋಟಿ ರೂ. ತಮಿಳು ಆವೃತ್ತಿಯಿಂದ ಬಂದಿದೆ. 1.1 ಕೋಟಿ ರೂ. ಹಿಂದಿ ಆವೃತ್ತಿಯಿಂದ ಮತ್ತು 7.9 ಕೋಟಿ ರೂ. ತೆಲುಗು ಆವೃತ್ತಿಯಿಂದ ಬಂದಿದೆ.ಕೆಲವೊಮ್ಮೆ ಸಿನಿಮಾ ಉತ್ತಮವಾಗಿ ಇರದೇ ಇದ್ದರೂ ಹೀರೋಗಳ ಪಾತ್ರದಿಂದ ಸಿನಿಮಾ ಇಷ್ಟ ಆಗುತ್ತದೆ. ಆದರೆ, ‘ಇಂಡಿಯನ್ 2’ ಚಿತ್ರದಲ್ಲಿ ಕಮಲ್ ಹಾಸನ್ ವಿವಿಧ ಗೆಟಪ್​ನಲ್ಲಿ ಬರೋದಷ್ಟೇ ಹೊರತು ಮತ್ತಿನ್ನೇನೂ ಇಲ್ಲ ಎಂದು ಫ್ಯಾನ್ಸ್ ಮಾತನಾಡಿಕೊಂಡಿದ್ದಾರೆ. ಈ ಸಿನಿಮಾದಲ್ಲಿ ಊರ್ಮಿಳಾ ಮಾತೋಂಡ್ಕರ್ ಮತ್ತು ಮನೀಶಾ ಕೊಯಿರಾಲಾ ಕೂಡ ನಟಿಸಿದ್ದಾರೆ.

ಚಿತ್ರದಲ್ಲಿ ರಕುಲ್ ಪ್ರೀತ್ ಸಿಂಗ್, ಕಾಜಲ್ ಅಗರ್ವಾಲ್, ಎಸ್.ಜೆ.ಸೂರ್ಯ, ಪ್ರಿಯಾ ಭವಾನಿ ಶಂಕರ್, ನೆಡುಮುಡಿ ವೇಣು, ವಿವೇಕ್, ಕಾಳಿದಾಸ್ ಜಯರಾಮ್, ಗುಲ್ಶನ್ ಗ್ರೋವರ್, ಸಮುದ್ರಕನಿ, ಬಾಬಿ ಸಿಂಹ, ಬ್ರಹ್ಮಾನಂದಂ, ವೆನ್ನೆಲ ಕಿಶೋರ್, ಜಾಕಿರ್ ಹುಸೇನ್, ಗುರು ಸೋಮಸುಂದರಾಮ್, ದೆಹಲಿ, ಗುರು ಸೋಮಸುಂದರಾಮ್ ಮಿಶ್ರಾ, , ಜಯಪ್ರಕಾಶ್, ಮನೋಬಾಲಾ, ಮತ್ತು ಅಶ್ವಿನಿ ತಂಗರಾಜ್ ಇದ್ದಾರೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App

ಕಾಲಿವುಡ್

Indian 2 box office: ನೆಲಕಚ್ಚಿದ ‘ಇಂಡಿಯನ್ 2’; ಫ್ಯಾನ್ಸ್‌ಗೆ ಭಾರಿ ನಿರಾಸೆ,  ಮೊದಲ ದಿನದ ಗಳಿಕೆ ಎಷ್ಟು?

Indian 2: ಕೆಲವೊಮ್ಮೆ ಸಿನಿಮಾ ಉತ್ತಮವಾಗಿ ಇರದೇ ಇದ್ದರೂ ಹೀರೋಗಳ ಪಾತ್ರದಿಂದ ಸಿನಿಮಾ ಇಷ್ಟ ಆಗುತ್ತದೆ. ಆದರೆ, ‘ಇಂಡಿಯನ್ 2’ ಚಿತ್ರದಲ್ಲಿ ಕಮಲ್ ಹಾಸನ್ ವಿವಿಧ ಗೆಟಪ್​ನಲ್ಲಿ ಬರೋದಷ್ಟೇ ಹೊರತು ಮತ್ತಿನ್ನೇನೂ ಇಲ್ಲ ಎಂದು ಫ್ಯಾನ್ಸ್ ಮಾತನಾಡಿಕೊಂಡಿದ್ದಾರೆ. ಈ ಸಿನಿಮಾದಲ್ಲಿ ಊರ್ಮಿಳಾ ಮಾತೋಂಡ್ಕರ್ ಮತ್ತು ಮನೀಶಾ ಕೊಯಿರಾಲಾ ಕೂಡ ನಟಿಸಿದ್ದಾರೆ.

VISTARANEWS.COM


on

Indian 2 box office collection Day Kamal Haasan’s critically panned
Koo

ಬೆಂಗಳೂರು: ನಟ ಕಮಲ್ ಹಾಸನ್ ಅವರ ಇತ್ತೀಚಿನ ಚಿತ್ರ, ಇಂಡಿಯನ್‌ 2 (Indian 2 box office) ಅಂತಿಮವಾಗಿ ಶುಕ್ರವಾರ (ಜು. 12) ಭಾರತದಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಯಿತು. ‘ಇಂಡಿಯನ್ 2’ ಸಿನಿಮಾ ಮೇಲೆ ಫ್ಯಾನ್ಸ್ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದರು. ಆದರೆ, ಈ ನಿರೀಕ್ಷೆಗಳನ್ನು ಸಿನಿಮಾ ಹುಸಿ ಮಾಡಿದೆ. ವಿಮರ್ಶಕರು ಮತ್ತು ಪ್ರೇಕ್ಷಕರಿಂದ ನೆಗೆಟಿವ್‌ ಪ್ರತಿಕ್ರಿಯೆ ಪಡೆದುಕೊಂಡಿದೆ. ಇಂಡಿಯನ್ 2 ಬಿಡುಗಡೆಯಾದ ಮೊದಲ ದಿನದಲ್ಲಿ ಭಾರತದಾದ್ಯಂತ 26 ಕೋಟಿ ರೂ. ಗಳಿಸಿದೆ. ಅದರಲ್ಲಿ 17 ಕೋಟಿ ರೂ. ತಮಿಳು ಆವೃತ್ತಿಯಿಂದ ಬಂದಿದೆ. 1.1 ಕೋಟಿ ರೂ. ಹಿಂದಿ ಆವೃತ್ತಿಯಿಂದ ಮತ್ತು 7.9 ಕೋಟಿ ರೂ. ತೆಲುಗು ಆವೃತ್ತಿಯಿಂದ ಬಂದಿದೆ.

ಇಂಡಿಯನ್ 2 ಸಿನಿಮಾ ಕಮಲ್ ಹಾಸನ್ ಅವರ ಕೊನೆಯ ಚಿತ್ರ ʻವಿಕ್ರಮ್ʼ ಕ್ಕಿಂತ ಕಡಿಮೆ ಗಳಿಕೆ ಕಂಡಿದೆ. 2022 ರಲ್ಲಿ ವಿಕ್ರಮ್‌ ಸಿನಿಮಾ ತನ್ನ ಆರಂಭಿಕ ದಿನದಂದು 28 ಕೋಟಿ ರೂ. ಗಳಿಕೆ ಕಂಡಿತ್ತು. ವಿಕ್ರಮ್ ಸಕಾರಾತ್ಮಕ ವಿಮರ್ಶೆಗಳನ್ನು ಪಡೆದಿತ್ತು. ವಿಶ್ವಾದ್ಯಂತ 430 ಕೋಟಿ ರೂ. ಗಳಿಕೆ ಕಂಡಿತ್ತು. ಅದಕ್ಕೂ ಮೊದಲು, ಕಮಲ್ ಹಾಸನ್ ಕೊನೆಯದಾಗಿ 2018 ರ ವಿಶ್ವರೂಪಂ ಚಿತ್ರದಲ್ಲಿ ನಟಿಸಿದ್ದರು. ಇಂಡಿಯನ್ 2’ ಸಿನಿಮಾಗೆ ಮೊದಲ ದಿನ ಕೇವಲ 26 ಕೋಟಿ ರೂಪಾಯಿ ಗಳಿಕೆ ಆಗಿದೆ. ಕಮಲ್ ಹಾಸನ್ ಅವರಂಥ ಸಿನಿಮಾಗೆ ಇದು ತುಂಬಾನೇ ಸಣ್ಣ ಮೊತ್ತ. 

ಕೆಲವೊಮ್ಮೆ ಸಿನಿಮಾ ಉತ್ತಮವಾಗಿ ಇರದೇ ಇದ್ದರೂ ಹೀರೋಗಳ ಪಾತ್ರದಿಂದ ಸಿನಿಮಾ ಇಷ್ಟ ಆಗುತ್ತದೆ. ಆದರೆ, ‘ಇಂಡಿಯನ್ 2’ ಚಿತ್ರದಲ್ಲಿ ಕಮಲ್ ಹಾಸನ್ ವಿವಿಧ ಗೆಟಪ್​ನಲ್ಲಿ ಬರೋದಷ್ಟೇ ಹೊರತು ಮತ್ತಿನ್ನೇನೂ ಇಲ್ಲ ಎಂದು ಫ್ಯಾನ್ಸ್ ಮಾತನಾಡಿಕೊಂಡಿದ್ದಾರೆ. ಈ ಸಿನಿಮಾದಲ್ಲಿ ಊರ್ಮಿಳಾ ಮಾತೋಂಡ್ಕರ್ ಮತ್ತು ಮನೀಶಾ ಕೊಯಿರಾಲಾ ಕೂಡ ನಟಿಸಿದ್ದಾರೆ.

ಇದನ್ನೂ ಓದಿ: Indian 2: ಇಂಡಿಯನ್ 2ನಲ್ಲಿ ಸೆನ್ಸಾರ್ ಮಂಡಳಿ ಕೇಳಿದೆ ಆ ಐದು ಬದಲಾವಣೆ!

ಸ್ಯಾಕ್‌ನಿಲ್ಕ್ ಪ್ರಕಾರ, ಇಂಡಿಯನ್ 2 ತಮಿಳು ಆವೃತ್ತಿಗೆ ಒಟ್ಟಾರೆ 55% ಆಕ್ಯುಪೆನ್ಸಿಯನ್ನು ಹೊಂದಿತ್ತು, ಹೆಚ್ಚು ರಾತ್ರಿ ಪ್ರದರ್ಶನಗಳಿಂದ ಬಂದಿದೆ. ಚೆನ್ನೈ ಶೇ 68ರಷ್ಟು , ಹಿಂದಿ ಶೇ 11 ರಷ್ಟು ಆಕ್ಯುಪೆನ್ಸಿ , ಮುಂಬೈ ಮತ್ತು ದೆಹಲಿ-ಎನ್‌ಸಿಆರ್ ಕ್ರಮವಾಗಿ ಶೇ. 12.5ರಷ್ಟು ​​ಮತ್ತು ಶೇ. 8ರಷ್ಟು ಆಕ್ಯುಪೆನ್ಸಿ ಇತ್ತು. ಚಿತ್ರದ ತೆಲುಗು ಆವೃತ್ತಿಯು ಉತ್ತಮ ಪ್ರದರ್ಶನ ನೀಡಿದೆ. ಶೇ. 58ರಷ್ಟು ಆಕ್ಯುಪೆನ್ಸಿ ಇತ್ತು ಎನ್ನಲಾಗಿದೆ. ಕಮಲ್ ಹಾಸನ್ ಇತ್ತೀಚೆಗೆ ಕಲ್ಕಿ 2898 ಎಡಿ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ, ಇದು ಜಾಗತಿಕವಾಗಿ 1000 ಕೋಟಿ ರೂ. ಕಲೆಕ್ಷನ್‌ ಮಾಡಿದೆ.

ಚಿತ್ರದಲ್ಲಿ ರಕುಲ್ ಪ್ರೀತ್ ಸಿಂಗ್, ಕಾಜಲ್ ಅಗರ್ವಾಲ್, ಎಸ್.ಜೆ.ಸೂರ್ಯ, ಪ್ರಿಯಾ ಭವಾನಿ ಶಂಕರ್, ನೆಡುಮುಡಿ ವೇಣು, ವಿವೇಕ್, ಕಾಳಿದಾಸ್ ಜಯರಾಮ್, ಗುಲ್ಶನ್ ಗ್ರೋವರ್, ಸಮುದ್ರಕನಿ, ಬಾಬಿ ಸಿಂಹ, ಬ್ರಹ್ಮಾನಂದಂ, ವೆನ್ನೆಲ ಕಿಶೋರ್, ಜಾಕಿರ್ ಹುಸೇನ್, ಗುರು ಸೋಮಸುಂದರಾಮ್, ದೆಹಲಿ, ಗುರು ಸೋಮಸುಂದರಾಮ್ ಮಿಶ್ರಾ, , ಜಯಪ್ರಕಾಶ್, ಮನೋಬಾಲಾ, ಮತ್ತು ಅಶ್ವಿನಿ ತಂಗರಾಜ್ ಇದ್ದಾರೆ.

Continue Reading

ಕಾಲಿವುಡ್

Rashmika Mandanna: ಧನುಷ್‌ ನಟನೆಯ ʻಕುಬೇರʼ ಸಿನಿಮಾದ ರಶ್ಮಿಕಾ ಫಸ್ಟ್‌ ಲುಕ್‌ ಪೋಸ್ಟರ್‌ ಔಟ್‌!

Rashmika Mandanna: ರಶ್ಮಿಕಾ ಫಸ್ಟ್‌ ಲುಕ್‌ ಜತೆಗೆ ಕ್ಯಾರಕ್ಟರ್‌ ಗ್ಲಿಂಪ್ಸ್‌ ಕೂಡ ಚಿತ್ರತಂಡ ರಿವೀಲ್‌ ಮಾಡಿದೆ. ಒಂದು ನಿಮಿಷದಲ್ಲಿರುವ ಈ ವಿಡಿಯೊದಲ್ಲಿ ರಶ್ಮಿಕಾ ಪಾತ್ರದ ಝಲಕ್‌ ಇದೆ. ದೇವಿ ಶ್ರೀ ಪ್ರಸಾದ್ ಅವರ ಸಂಗೀತ ಇನ್ನಷ್ಟು ಕಿಕ್‌ ಕೊಡುವಂತಿದೆ. ಶೇಖರ್ ಕುಮ್ಮಲ ಅವರ ಕುಬೇರ ಬಹು ನಿರೀಕ್ಷಿತ ಪ್ಯಾನ್-ಇಂಡಿಯನ್ ಚಲನಚಿತ್ರಗಳಲ್ಲಿ ಒಂದಾಗಿದೆ.

VISTARANEWS.COM


on

Rashmika Mandanna Kubera interesting first look
Koo

ಬೆಂಗಳೂರು: ಸೂಪರ್ ಸ್ಟಾರ್ ಧನುಷ್ ನಟನೆಯ ತೆಲುಗು ನಿರ್ದೇಶಕ ಶೇಖರ್ ಕಮ್ಮುಲ ಆಕ್ಷನ್ ಕಟ್ ಹೇಳುತ್ತಿರುವ ʻಕುಬೇರʼ ಸಿನಿಮಾ  ರಶ್ಮಿಕಾ ಮಂದಣ್ಣ ಅವರ ಫಸ್ಟ್‌ ಲುಕ್‌ ಪೋಸ್ಟರ್‌ ಹಂಚಿಕೊಂಡಿದೆ. ಸೂಪರ್‌ಸ್ಟಾರ್ ಧನುಷ್ ಮತ್ತು ನಾಗಾರ್ಜುನ ಅಭಿನಯದ ಬಹು ನಿರೀಕ್ಷಿತ ಪೌರಾಣಿಕ ಪ್ಯಾನ್-ಇಂಡಿಯನ್ ʻಕುಬೇರʼ ಸಿನಿಮಾ ಈ ಫಸ್ಟ್‌ ಲುಕ್‌ ಮೂಲಕ ಮತ್ತೆ ಪ್ರೇಕ್ಷರನ್ನು ಸೆಳೆಯಲು ಸಜ್ಜಾಗಿದೆ. ಸಿನಿಮಾದಲ್ಲಿ ನ್ಯಾಶನಲ್‌ ಕ್ರಶ್‌ ರಶ್ಮಿಕಾ ಮಂದಣ್ಣ ಮಹತ್ವದ ಪಾತ್ರ ನಿರ್ವಹಿಸಿದ್ದಾರೆ.

ಇದೀಗ ಚಿತ್ರತಂಡ ರಶ್ಮಿಕಾ ಅವರ ಫಸ್ಟ್ ಲುಕ್ ಮತ್ತು ಪಾತ್ರದ ಪರಿಚಯವನ್ನು ವಿಡಿಯೊ ಮೂಲಕ ಮೂಲಕ ಶೇರ್‌ ಮಾಡಿಕೊಂಡಿದೆ. ರಶ್ಮಿಕಾ ವಿಭಿನ್ನ ಅವತಾರದಲ್ಲಿ ಕಾಣಿಸಿಕೊಂಡಿದ್ದು, ಅವರ ಪಾತ್ರ ಪ್ರೇಕ್ಷಕರಲ್ಲಿ ಭಾರೀ ನಿರೀಕ್ಷೆ ಹುಟ್ಟುಹಾಕಿದೆ. ನಟರಾದ ಧನುಷ್ ಮತ್ತು ನಾಗಾರ್ಜುನ ಜತೆಗೆ ಈ ಸಿನಿಮಾದಲ್ಲಿ ರಶ್ಮಿಕಾ ಪ್ರಮುಖ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಫಸ್ಟ್ ಲುಕ್ ಥ್ರಿಲ್ಲಿಂಗ್ ಮತ್ತು ಇಂಟ್ರೆಸ್ಟಿಂಗ್ ಆಗಿದೆ.

ರಶ್ಮಿಕಾ ಫಸ್ಟ್‌ ಲುಕ್‌ ಜತೆಗೆ ಕ್ಯಾರಕ್ಟರ್‌ ಗ್ಲಿಂಪ್ಸ್‌ ಕೂಡ ಚಿತ್ರತಂಡ ರಿವೀಲ್‌ ಮಾಡಿದೆ. ಒಂದು ನಿಮಿಷದಲ್ಲಿರುವ ಈ ವಿಡಿಯೊದಲ್ಲಿ ರಶ್ಮಿಕಾ ಪಾತ್ರದ ಝಲಕ್‌ ಇದೆ. ದೇವಿ ಶ್ರೀ ಪ್ರಸಾದ್ ಅವರ ಸಂಗೀತ ಇನ್ನಷ್ಟು ಕಿಕ್‌ ಕೊಡುವಂತಿದೆ. ಶೇಖರ್ ಕುಮ್ಮಲ ಅವರ ಕುಬೇರ ಬಹು ನಿರೀಕ್ಷಿತ ಪ್ಯಾನ್-ಇಂಡಿಯನ್ ಚಲನಚಿತ್ರಗಳಲ್ಲಿ ಒಂದಾಗಿದೆ. ಸದ್ಯ ಈ ಹೈ-ಬಜೆಟ್ ಸಿನಿಮಾದ ಪೋಸ್ಟ್-ಪ್ರೊಡಕ್ಷನ್ ಕೆಲಸಗಳು ಆಗುತ್ತಿವೆ. ಇತ್ತೀಚೆಗಷ್ಟೇ ಧನುಷ್ ಅವರ ಫಸ್ಟ್ ಲುಕ್ ಪೋಸ್ಟರ್‌ ಅನಾವರಣಗೊಂಡಿತ್ತು. ಮಾತ್ರವಲ್ಲ ಪ್ರೇಕ್ಷರಿಂದ ಮೆಚ್ಚುಗೆ ವ್ಯಕ್ತವಾಗಿತ್ತು.

ಇದನ್ನೂ ಓದಿ: Rashmika Mandanna: ರಶ್ಮಿಕಾ ಇದೀಗ ಟಾಲಿವುಡ್‌ಗೆ ಬೈ ಬೈ; ಬಾಲಿವುಡ್‌ನಲ್ಲಿಯೇ ಬಿಡಾರ!

ಶ್ರೀ ವೆಂಕಟೇಶ್ವರ ಸಿನಿಮಾಸ್ ಎಲ್‌ಎಲ್‌ಪಿ ಮತ್ತು ಅಮಿಗೋಸ್ ಕ್ರಿಯೇಷನ್ಸ್ ಪ್ರೈವೇಟ್ ಲಿಮಿಟೆಡ್ ಬ್ಯಾನರ್‌ನಡಿಯಲ್ಲಿ ಸುನೀಲ್ ನಾರಂಗ್ ಮತ್ತು ಪುಸ್ಕುರ್ ರಾಮ್ ಮೋಹನ್ ರಾವ್ ಈ ಚಿತ್ರವನ್ನು ಜಂಟಿಯಾಗಿ ನಿರ್ಮಿಸಿದ್ದಾರೆ. ‘ಶೇಖರ್ ಕಮ್ಮುಲ ಅವರ ಕುಬೇರ’ ಒಂದು ಪ್ಯಾನ್-ಇಂಡಿಯಾ ಬಹುಭಾಷಾ ಚಿತ್ರವಾಗಿದ್ದು, ತಮಿಳು, ತೆಲುಗು ಮತ್ತು ಹಿಂದಿಯಲ್ಲಿ ಏಕಕಾಲದಲ್ಲಿ ಚಿತ್ರೀಕರಿಸಲಾಗಿದೆ. ಸದ್ಯ ಚಿತ್ರದ ಚಿತ್ರೀಕರಣ ಹೈದರಾಬಾದ್‌ನಲ್ಲಿ ನಡೆಯುತ್ತಿದೆ.

ಕೆಲವು ದಿನಗಳ ಹಿಂದೆ ಧನುಷ್ (Actor Dhanush) ಅವರ ಎರಡನೇ ನಿರ್ದೇಶನದ ಸಿನಿಮಾ ‘ಡಿ 50’ಪೋಸ್ಟರ್‌ ಲುಕ್‌ ಅನಾವರಣಗೊಂಡಿತ್ತು. ಧನುಷ್ ಕಳೆದ ವರ್ಷ ಜುಲೈನಲ್ಲಿ ಈ ಸಿನಿಮಾದ ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿದ್ದರು. ಈ ಸಿನಿಮಾಗಾಗಿ ನಟ ತಲೆಯನ್ನು ಬೋಳಿಸಿಕೊಂಡಿದ್ದಾರೆ. ಇನ್ನು ಸಿನಿಮಾದ ನಾಯಕಿ ಹಾಗೂ ಇನ್ನುಳಿದ ಪಾತ್ರವರ್ಗದ ಬಗ್ಗೆ ಮುಂದಿನ ದಿನಗಳಲ್ಲಿ ಅಪ್‌ಡೇಟ್‌ ನೀಡುವುದಾಗಿ ಚಿತ್ರತಂಡ ಮಾಹಿತಿ ಹಂಚಿಕೊಂಡಿದೆ. 2017 ರಲ್ಲಿ ತೆರೆಕಂಡ ‘ಪಾ ಪಾಂಡಿ’ ಚಿತ್ರದ ಮೂಲಕ ಧನುಷ್ ನಿರ್ದೇಶಕರಾಗಿ ಪದಾರ್ಪಣೆ ಮಾಡಿದರು. ಈ ಚಿತ್ರಕ್ಕಾಗಿ ಫಿಲ್ಮ್‌ಫೇರ್‌ನಲ್ಲಿ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿಯನ್ನು ಪಡೆದುಕೊಂಡಿದ್ದರು. ಇದೀಗ ʻರಾಯನ್‌ʼ ಅವರ ಎರಡನೇ ನಿರ್ದೇಶನದ ಸಿನಿಮಾ.

Continue Reading

ಸ್ಯಾಂಡಲ್ ವುಡ್

Varalaxmi Sarathkumar: ವರಲಕ್ಷ್ಮಿ ಶರತ್‌ಕುಮಾರ್ ರಿಸಪ್ಷನ್‌ನಲ್ಲಿ ಮಿಂಚಿದ ಕಿಚ್ಚ ಸುದೀಪ್ ಕುಟುಂಬ!

Varalaxmi Sarathkumar: ನಿನ್ನೆ (ಜುಲೈ 3) ಚೆನ್ನೈನಲ್ಲಿ ಆರತಕ್ಷತೆಯನ್ನು ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಆರತಕ್ಷತೆಗೆ ಕಿಚ್ಚು ಸುದೀಪ್ ಕೂಡ ಭಾಗವಹಿಸಿದ್ದರು. ಪತ್ನಿ ಪ್ರಿಯಾ ಹಾಗೂ ಪುತ್ರಿ ಸಾನ್ವಿ ಕೂಡ ಜತಗೆ ಇದ್ದರು. ಮೊದಲಿಂದ ಶರತ್‌ ಕುಮಾರ್‌ (Varalaxmi Sarathkumar) ಅವರು ಸುದೀಪ್ ಹಾಗೂ ಅವರ ಕುಟುಂಬಕ್ಕೆ ಆತ್ಮೀಯರು. ವರಲಕ್ಷ್ಮೀ ಶರತ್ ಕುಮಾರ್ ಅವರು ಸುದೀಪ್‌ ಅವರ ಜನುಮದಿನ ವಿಶ್‌ ಮಾಡದೇ ಇರಲ್ಲ.

VISTARANEWS.COM


on

Varalaxmi Sarathkumar Reception attend By sudeep Family
Koo

ಬಹುಭಾಷಾ ನಟ ಶರತ್‌ಕುಮಾರ್ (Varalaxmi Sarathkumar) ಅವರ ಪುತ್ರಿ ಮತ್ತು ಕನ್ನಡದ ʻಮಾಣಿಕ್ಯʼ ಸಿನಿಮಾದಲ್ಲಿ ಸುದೀಪ್‌ಗೆ ಜೋಡಿಯಾಗಿದ್ದ ನಟಿ ವರಲಕ್ಷ್ಮಿ ಶರತ್‌ಕುಮಾರ್ ಮುಂಬೈ ಮೂಲದ ಉದ್ಯಮಿ ಜತೆಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಉದ್ಯಮಿ ನಿಕೊಲಾಯ್ ಸಚ್‌ದೇವ್ ಅವರೊಂದಿಗೆ ಸಪ್ತಪದಿ ತುಳಿದಿದ್ದರು. ಥಾಯ್ಲೆಂಡ್‌ನಲ್ಲಿ ಕೇವಲ ಕುಟುಂಬಸ್ಥರು ಹಾಗೂ ಆತ್ಮೀಯರು ಮಾತ್ರ ಭಾಗವಹಿಸಿದ್ದರು. ಈ ಬೆನ್ನಲ್ಲೇ ನಿನ್ನೆ (ಜುಲೈ 3) ಚೆನ್ನೈನಲ್ಲಿ ಆರತಕ್ಷತೆಯನ್ನು ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಆರತಕ್ಷತೆಗೆ ಕಿಚ್ಚು ಸುದೀಪ್ ಕೂಡ ಭಾಗವಹಿಸಿದ್ದರು. ಪತ್ನಿ ಪ್ರಿಯಾ ಹಾಗೂ ಪುತ್ರಿ ಸಾನ್ವಿ ಕೂಡ ಜತಗೆ ಇದ್ದರು.

ಚೆನ್ನೈನಲ್ಲಿ ನಡೆದ ಅದ್ಧೂರಿ ಆರತಕ್ಷತೆಯಲ್ಲಿ ತಮಿಳು, ತೆಲುಗು, ಕನ್ನಡ ಚಿತ್ರರಂಗದ ಗಣ್ಯರೇ ಹೆಚ್ಚಾಗಿ ಭಾಗಿವಹಿಸಿದ್ದರು. ನಿರ್ದೇಶಕ ಬಾಲಾ, ನಟ ಜೀವಾ, ನಟಿ ರೋಜಾ, ನಿರ್ದೇಶಕ ಆರ್.ಕೆ.ಸೆಲ್ವಮಣಿ, ನಿರ್ದೇಶಕ ಹರಿ, ನಟ ವಿಜಯಕುಮಾರ್, ನಟ ಬಾಲಕೃಷ್ಣ, ನಟಿ ಆಂಡ್ರಿಯಾ, ನಿರ್ದೇಶಕ ಕೆ.ಎಸ್.ರವಿಕುಮಾರ್, ನಟ ಶಿವಕುಮಾರ್, ಶೋಭಾ, ಸುಂದರ್ ಸಿ. ಖುಷ್ಬೂ, ನಿರ್ದೇಶಕ ಎ.ಎಲ್.ವಿಜಯ್, ಮಣಿರತ್ನಂ, ಸುಹಾಸಿನಿ, ಜಾಕಿ ಶ್ರಾಫ್ ಸೇರಿದಂತೆ ಚಿತ್ರರಂಗದ ಹಲವು ಗಣ್ಯರು ಬಂದು ಶುಭ ಕೋರಿದ್ದಾರೆ. ಆರತಕ್ಷತೆಯಲ್ಲಿ ವರಲಕ್ಷ್ಮಿ ಶರತ್‌ಕುಮಾರ್ ಮೆರೂನ್ ಬಣ್ಣದ ಗೌನ್ ಧರಿಸಿದ್ದರೆ, ನಿಕೊಲಾಯ್ ಸಚ್‌ದೇವ್ ಅದೇ ಬಣ್ಣದ ಶೇರ್ವಾನಿಯಲ್ಲಿ ಮಿಂಚಿದ್ದರು.

ಇದನ್ನೂ ಓದಿ: Varalaxmi Sarathkumar: ಪ್ರಧಾನಿ ಮೋದಿಗೆ ಮದುವೆ ಆಮಂತ್ರಣ ನೀಡಿದ ನಟಿ ವರಲಕ್ಷ್ಮಿ

ನಟ ಶರತ್‌ಕುಮಾರ್ ಅವರ ಮೊದಲ ಪತ್ನಿ ಸಯಾ ಅವರಿಗೆ ಜನಿಸಿದವರೇ ವರಲಕ್ಷ್ಮಿ. ಮೊದಲ ಪತ್ನಿಗೆ ವಿಚ್ಛೇದನ ನೀಡಿದ ಬಳಿಕ ನಟಿ ರಾಧಿಕಾರನ್ನು ವಿವಾಹವಾಗಿದ್ದರು.

ಮೊದಲಿಂದ ಶರತ್‌ ಕುಮಾರ್‌ (Varalaxmi Sarathkumar) ಅವರು ಸುದೀಪ್ ಹಾಗೂ ಅವರ ಕುಟುಂಬಕ್ಕೆ ಆತ್ಮೀಯರು. ವರಲಕ್ಷ್ಮೀ ಶರತ್ ಕುಮಾರ್ ಅವರು ಸುದೀಪ್‌ ಅವರ ಜನುಮದಿನ ವಿಶ್‌ ಮಾಡದೇ ಇರಲ್ಲ. ಇಬ್ಬರೂ ತುಂಬ ಆತ್ಮಿಯರು.

ವರಲಕ್ಷ್ಮಿ ಮತ್ತು ನಿಕೋಲಾಯ್ ಅವರ ಪ್ರೇಮಕಥೆ!

ರಮೇಶ್ ಅವರು ಜೋಡಿಯ ಪ್ರೇಮಕಥೆಯನ್ನು ಬಹಿರಂಗಪಡಿಸಿದ್ದರು. “ನಟಿ ವರಲಕ್ಷ್ಮಿ ಶರತ್‌ಕುಮಾರ್ ಮತ್ತು ಗ್ಯಾಲರಿಸ್ಟ್ ನಿಕೋಲಾಯ್ ಸಚ್‌ದೇವ್ ಅವರು ಮಾರ್ಚ್ 1ರಂದು ಮುಂಬೈನಲ್ಲಿ ಕುಟುಂಬ ಮತ್ತು ಆಪ್ತ ಸ್ನೇಹಿತರ ಸಮ್ಮುಖದಲ್ಲಿ ನಿಶ್ಚಿತಾರ್ಥ ಮಾಡಿಕೊಂಡರು. ಕಳೆದ 14 ವರ್ಷಗಳಿಂದ ಪರಸ್ಪರ ಪರಿಚಿತರಾದ ವರಲಕ್ಷ್ಮಿ ಮತ್ತು ನಿಕೋಲಾಯ್ ತಮ್ಮ ಪೋಷಕರ ಆಶೀರ್ವಾದದೊಂದಿಗೆ ಉಂಗುರಗಳನ್ನು ಬದಲಾಯಿಸಿಕೊಂಡರು.

Continue Reading

Latest

Actor Kamal Haasan: ರಜನಿಕಾಂತ್ ಮತ್ತು ಕಮಲ್ ಹಾಸನ್ ಒಟ್ಟಾಗಿ ನಟಿಸದಿರಲು ಇದೇ ಕಾರಣ!

Actor Kamal Haasan: ರಜನಿಕಾಂತ್ ಹಾಗೂ ಕಮಲ್ ಹಾಸನ್ ಇಬ್ಬರೂ ತಮಿಳು ಚಿತ್ರರಂಗದಲ್ಲಿ ಸಾಕಷ್ಟು ಅಭಿಮಾನಿಗಳನ್ನು ಹೊಂದಿದ ನಟರು. ಇವರು ಚಿತ್ರರಂಗಕ್ಕೆ ಕಾಲಿಟ್ಟಾಗಲಿನಿಂದ ಒಟ್ಟಾಗಿ ತೆರೆ ಹಂಚಿಕೊಳ್ಳುತ್ತಿದ್ದರು.ಸಾಕಷ್ಟು ಸಿನಿಮಾಗಳಲ್ಲಿ ಇಬ್ಬರೂ ಜತೆಯಾಗಿ ನಟಿಸಿದ್ದಾರೆ. ಆದರೆ ಅವರು ಸೂಪರ್‌ಸ್ಟಾರ್‌ಗಳಾದ ನಂತರ ಒಟ್ಟಿಗೆ ಚಿತ್ರ ಮಾಡಿಲ್ಲ. ಇದಕ್ಕೆ ಕಾರಣವೇನು ಎಂಬ ಪ್ರಶ್ನೆ ಅವರ ಅಭಿಮಾನಿಗಳಲ್ಲಿ ಮೂಡಿತ್ತು. ಆದರೆ ಈಗ ಅದಕ್ಕೆ ನಟ ಕಮಲ್ ಹಾಸನ್ ಪ್ರತಿಕ್ರಿಯೆ ನೀಡಿದ್ದಾರೆ.

VISTARANEWS.COM


on

Actor Kamal Haasan
Koo

ಚೆನ್ನೈ : ರಜನಿಕಾಂತ್ ಹಾಗೂ ನಟ ಕಮಲ್ ಹಾಸನ್ (Actor Kamal Haasan) ಅವರು ತಮಿಳು ಚಿತ್ರರಂಗದ ಖ್ಯಾತ ನಟರು. ಇವರು ಚಿತ್ರರಂಗಕ್ಕೆ ಕಾಲಿಟ್ಟ ಆರಂಭದಲ್ಲಿ ಒಟ್ಟಾಗಿ ತೆರೆ ಹಂಚಿಕೊಳ್ಳುತ್ತಿದ್ದರು. ಇಳಮೈ ಊಂಜಲ್ ಆಡುಕಿರಾತು, ತಿಲ್ಲು ಮುಲ್ಲು, ಅಪೂರ್ವ ರಾಗಂಗಲ್, ಅವಲ್ ಅಪ್ಪಾದಿಥನ್, 16 ವಯತಿನಿಲೆ, ಐ ಮತ್ತು ನೈನೈತಾಲೆ ಇನಿಕ್ಕುಮ್ ಸೇರಿದಂತೆ ಸುಮಾರು 16 ಚಿತ್ರಗಳಲ್ಲಿ ಒಟ್ಟಿಗೆ ನಟಿಸಿದ್ದರು.

Actor Kamala Hasan

ಈ ಇಬ್ಬರು ಚಿತ್ರರಂಗಕ್ಕೆ ಸೂಪರ್ ಹಿಟ್ ಚಿತ್ರಗಳನ್ನು ನೀಡಿ ಸೂಪರ್ ಸ್ಟಾರ್ ನಟರೆನಿಸಿಕೊಂಡಿದ್ದಾರೆ. ಹಿಂದಿ ಚಿತ್ರ ಗಿರಫ್ತಾರ್ (1985)ನಲ್ಲಿ ಇಬ್ಬರೂ ಜೊತೆಯಾಗಿ ನಟಿಸಿದ ಕೊನೆಯ ಚಿತ್ರವಾಗಿತ್ತು. ಇದರಲ್ಲಿ ಇಬ್ಬರೂ ಅಮಿತಾಭ್ ಬಚ್ಚನ್ ಜೊತೆ ಕಾಣಿಸಿಕೊಂಡರು. ಆದರೆ ಅವರು ಸೂಪರ್‌ಸ್ಟಾರ್‌ಗಳಾದ ನಂತರ ಒಟ್ಟಿಗೆ ಚಿತ್ರ ಮಾಡಿಲ್ಲ. ಇದಕ್ಕೆ ಕಾರಣವೇನು ಎಂಬ ಪ್ರಶ್ನೆ ಅವರ ಅಭಿಮಾನಿಗಳಲ್ಲಿ ಮೂಡಿತ್ತು. ಆದರೆ ಈಗ ಅದಕ್ಕೆ ನಟ ಕಮಲ್ ಹಾಸನ್ ಪ್ರತಿಕ್ರಿಯೆ ನೀಡಿದ್ದಾರೆ.

Actor Kamala Hasan

ನಟ ಕಮಲ್ ಹಾಸನ್ ಅವರ ನಟನೆಯ ‘ಇಂಡಿಯನ್ 2’ ಸಿನಿಮಾದ ಪ್ರಚಾರ ಕೆಲಸ ಪ್ರಾರಂಭವಾಗಿದೆ. ಇತ್ತೀಚೆಗೆ ಮುಂಬೈನಲ್ಲಿ ಚಿತ್ರದ ಟ್ರೈಲರ್ ರಿಲೀಸ್ ಆಗಿ ಬಹಳ ಸದ್ದು ಮಾಡಿತ್ತು. ಈ ಸಿನಿಮಾ ಬಗ್ಗೆ ಇತ್ತೀಚೆಗೆ, ಕಮಲ್ ಹಾಸನ್ ಸಂದರ್ಶನವೊಂದರಲ್ಲಿ ಮಾತನಾಡಿದ್ದರು. ಈ ವೇಳೆ ಅವರು ತಮ್ಮ ಹಾಗೂ ರಜನಿಕಾಂತ್ ಅವರ ನಡುವಿನ ಒಡನಾಟದ ಬಗ್ಗೆ ತಿಳಿಸಿದ್ದಾರೆ. ಹಾಗೂ ತಾವು ಒಟ್ಟಿಗೆ ಚಿತ್ರ ಮಾಡದಿರಲು ಕಾರಣವೇನು ಎಂಬುದಕ್ಕೆ ವಿವರಣೆ ನೀಡಿದ್ದಾರೆ. ಚಿತ್ರರಂಗದಲ್ಲಿ ಯಶಸ್ಸು ಕಂಡ ನಂತರ ಅವರು ಮತ್ತು ರಜನಿಕಾಂತ್ ಇಬ್ಬರೂ ಚಲನಚಿತ್ರಗಳಲ್ಲಿ ಒಟ್ಟಿಗೆ ಕೆಲಸ ಮಾಡದಿರಲು ನಿರ್ಧರಿಸಿದ್ದರು. ಆದರೆ ಅವರಿಬ್ಬರ ಮಾರ್ಗದರ್ಶಕರು ಪ್ರಸಿದ್ಧ ತಮಿಳು ಚಲನಚಿತ್ರ ನಿರ್ಮಾಪಕ ಕೆ. ಬಾಲಚಂದರ್ ಎಂಬುದು ಎಲ್ಲರಿಗೂ ತಿಳಿದಿದೆ ಎಂಬುದಾಗಿ ತಿಳಿಸಿದ್ದಾರೆ.

“ನಾವು ಆರಂಭದಲ್ಲಿ ಒಟ್ಟಿಗೆ ಅನೇಕ ಚಲನಚಿತ್ರಗಳನ್ನು ಮಾಡಿದ್ದೇವೆ. ನಂತರ ನಾವು ಒಟ್ಟಿಗೆ ಕೆಲಸ ಮಾಡದಿರಲು ನಿರ್ಧರಿಸಿದ್ದೇವೆ. ನಾವು ಇಬ್ಬರು ಕಾಂಪಿಟೇಟರ್‌ಗಳಲ್ಲ. ನಮಗೆ ಒಂದೇ ಮಾರ್ಗದರ್ಶಕರಿದ್ದರು. ನಮ್ಮ ನಡುವೆ ಯಾವುದೇ ಅಸೂಯೆ ಇಲ್ಲ ಮತ್ತು ನಮ್ಮ ದಾರಿ ಬೇರೆ ಬೇರೆ. ನಾವು ಎಂದಿಗೂ ಪರಸ್ಪರರ ಬಗ್ಗೆ ಕೀಳುಮಟ್ಟದ ಟೀಕೆಗಳನ್ನು ಮಾಡುವುದಿಲ್ಲ. ನಾವು ನಮ್ಮ 20ರ ಹರೆಯದಲ್ಲಿದ್ದಾಗಲೇ ಈ ಬಗ್ಗೆ ಪ್ರಾಮಿಸ್ ಮಾಡಿದ್ದೇವೆ. ಇಂಥದ್ದೇ ಎಂಬ ಕಾರಣವನ್ನು ಹೇಳಲು ಆಗುವುದಿಲ್ಲ. ಆದರೆ ನಾವು ಒಂದು ಹಂತಕ್ಕೆ ಬಂದ ಮೇಲೆ ನಮ್ಮ ನಮ್ಮ ಅಭಿರುಚಿಗಳು ಬೇರೆ ಬೇರೆಯಾದವು. ಹಾಗಾಗಿ ಒಟ್ಟಿಗೆ ಚಿತ್ರ ಮಾಡದಿರಲು ನಿರ್ಧರಿಸಿದೆವು” ಎಂಬುದಾಗಿ ಕಮಲ್‌ ಹಾಸನ್‌ ಅವರು ಹೇಳಿದ್ದಾರೆ.

ಅಲ್ಲದೇ ಕಮಲ್ ಹಾಸನ್ 1981ರಲ್ಲಿ ‘ಏಕ್ ದುಜೆ ಕೆ ಲಿಯೆ’ ಚಿತ್ರದ ಮೂಲಕ ಹಿಂದಿ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದರು. ಇದು ಕೆ ಬಾಲಚಂದರ್ ನಿರ್ದೇಶನದ ಅವರ ತೆಲುಗು ಚಿತ್ರ ‘ಮರೋ ಚರಿತ್ರ’ದ ರಿಮೇಕ್ ಆಗಿದೆ. ಈ ವೇಳೆ ಕಮಲ್ ಹಾಸನ್ ತಮಗೆ ಹಿಂದಿ ಚಿತ್ರರಂಗದಲ್ಲಿ ಬೆಂಬಲ ನೀಡಿದ ಅಭಿಮಾನಿಗಳಿಗೆ ಕೃತಜ್ಞತೆಯನ್ನು ಸಲ್ಲಿಸಿದ್ದಾರೆ.

ಇದನ್ನೂ ಓದಿ:ಸಾಲದ ಇಎಂಐ ಕಟ್ಟಲಾಗದೆ ಕಾರನ್ನು ಕಳೆದುಕೊಂಡಿದ್ದ ಶಾರುಖ್ ಖಾನ್!

ಪ್ರಸ್ತುತ, ಕಮಲ್ ಹಾಸನ್ ಅವರು ಕಲ್ಕಿ 2898ಎಡಿ ಚಿತ್ರದಲ್ಲಿ ವಿಶೇಷ ಪಾತ್ರದಲ್ಲಿ ನಟಿಸಿದ್ದಾರೆ. ಇದರಲ್ಲಿ ಅವರು ಕೇವಲ ಕೆಲವು ನಿಮಿಷಗಳ ಕಾಲ ಮಾತ್ರ ಪರದೆಯ ಮೇಲೆ ಕಾಣಿಸಿಕೊಳ್ಳುವಂತಹ ಚಿಕ್ಕ ಪಾತ್ರವನ್ನು ಮಾಡಿದ್ದಾರೆ. ಈ ಚಿತ್ರದ ಮುಂದಿನ ಭಾಗದಲ್ಲಿ ಈ ಪಾತ್ರ ಮಹತ್ವದ್ದಾಗಿದೆ ಎನ್ನಲಾಗಿದೆ.

Continue Reading
Advertisement
Rape Case
Latest2 mins ago

Sexual Abuse: ಮಧ್ಯವಯಸ್ಕ ಮಹಿಳೆಯ ಮೇಲೆ ಮಗನ ಸ್ನೇಹಿತನಿಂದಲೇ ಅತ್ಯಾಚಾರ!

ಕ್ರೀಡೆ4 mins ago

India at the Olympics: ಒಲಿಂಪಿಕ್ಸ್​ನಲ್ಲಿ ಭಾರತದ ಪದಕ ಸಾಧನೆಯ ಇಣುಕು ನೋಟ

Ambani Video
ಪ್ರಮುಖ ಸುದ್ದಿ16 mins ago

Ambani Video: 3 ವರ್ಷದ ಅಂಬಾನಿ ಮೊಮ್ಮಗ ವೇದಿಕೆ ಮೇಲೆ ಜಾರಿ ಬಿದ್ದ, ಆದರೆ ಜನರ ಹೃದಯ ಗೆದ್ದ!

Money Guide
ಮನಿ-ಗೈಡ್16 mins ago

Money Guide: ಹಿರಿಯರಿಗೆ ಆರೋಗ್ಯ ವಿಮೆ: ಯಾಕಾಗಿ? ಏನಿದರ ಉಪಯೋಗ?

Muharram 2024 Man dies in fire during
ರಾಯಚೂರು26 mins ago

Muharram 2024: ರಾಯಚೂರಿನಲ್ಲಿ ಮೊಹರಂನಲ್ಲಿ ಕೊಂಡ ಹಾಯುವಾಗ ಆಯತಪ್ಪಿ ಬಿದ್ದ ವ್ಯಕ್ತಿ ಸುಟ್ಟು ಭಸ್ಮ

hit and run case
ದೇಶ28 mins ago

Hit And Run Case: ಮುಂಬೈ ಹಿಟ್‌ ಆ್ಯಂಡ್‌ ರನ್‌ ಕೇಸ್‌; ತನಗೆ ಕುಡಿಯುವ ಅಭ್ಯಾಸ ಇದೆ ಎಂದು ಒಪ್ಪಿಕೊಂಡ ಆರೋಪಿ

Assembly Session
ಕರ್ನಾಟಕ34 mins ago

Assembly Session: ವಾಲ್ಮೀಕಿ ನಿಗಮ ಅಕ್ರಮ ದಲಿತರಿಗೆ ಮಾಡಿರೋ ಅನ್ಯಾಯ: ಸರ್ಕಾರದ ವಿರುದ್ಧ ವಿಜಯೇಂದ್ರ ಕಿಡಿ

Paris Olympics 2024
ಪ್ರಮುಖ ಸುದ್ದಿ51 mins ago

Paris Olympics 2024 : ಒಲಿಂಪಿಕ್ಸ್​ನಲ್ಲಿ ಭಾರತಕ್ಕೆ ಕಡಿಮೆ ಪದಕಗಳು ಸಿಗುವುದು ಯಾಕೆ? ಈ ಪ್ರಶ್ನೆಗೆ ಇಲ್ಲಿದೆ ಉತ್ತರ

BMTC staff commits suicide at headquarters
ಬೆಂಗಳೂರು1 hour ago

BMTC staff : ಬೆಂಗಳೂರಿನಲ್ಲಿ ನೇಣು ಬಿಗಿದುಕೊಂಡು ಬಿಎಂಟಿಸಿ ಸಿಬ್ಬಂದಿ ಆತ್ಮಹತ್ಯೆ

ಪ್ರಮುಖ ಸುದ್ದಿ1 hour ago

Uttara Kannada Rain: ಭಾರಿ ಮಳೆಗೆ ತತ್ತರಿಸಿದ ಉತ್ತರ ಕನ್ನಡ; ಭೂಕುಸಿತಕ್ಕೆ 11 ಸಾವು, ರಸ್ತೆಗಳೇ ಮಾಯ, ತೋಟ ಗದ್ದೆ ಮುಳುಗಡೆ

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka Rain
ಮಳೆ4 hours ago

Karnataka Rain : ಕಾರವಾರದಲ್ಲಿ ಮಳೆ ಅವಾಂತರ; ಮನೆ ಮೇಲೆ ಗುಡ್ಡ ಕುಸಿದು ವೃದ್ಧ ಸಾವು

karnataka Rain
ಮಳೆ6 hours ago

Karnataka Rain : ಭಾರಿ ಮಳೆಗೆ ನಿಯಂತ್ರಣ ತಪ್ಪಿ ಕೆರೆಗೆ ಉರುಳಿ ಬಿದ್ದ ಕಾರು; ನಾಲ್ವರು ಪ್ರಾಣಾಪಾಯದಿಂದ ಪಾರು

karnataka Weather Forecast
ಮಳೆ23 hours ago

Karnataka Weather : ವ್ಯಾಪಕ ಮಳೆ ಎಚ್ಚರಿಕೆ; ನಾಳೆಯೂ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ

karnataka Rain
ಮಳೆ1 day ago

Karnataka Rain : ಶಾಲಾ-ಕಾಲೇಜಿಗೆ ಈ ದಿನ ರಜಾ; ಅಬ್ಬರಿಸುತ್ತಿರುವ ಮಳೆಗೆ ಮನೆಯಲ್ಲೇ ಎಲ್ಲರೂ ಸಜಾ!

karnataka weather Forecast
ಮಳೆ1 day ago

Karnataka Weather : ಮುಂದಿನ 24 ಗಂಟೆಯಲ್ಲಿ ರಣಮಳೆ ಫಿಕ್ಸ್‌; ರೆಡ್‌ ಅಲರ್ಟ್‌ ಘೋಷಣೆ

Karnataka Rain
ಮಳೆ2 days ago

Karnataka Rain : ಧಾರಾಕಾರ ಮಳೆಗೆ ತೇಲಿ ಹೋದ ಸ್ಕೂಲ್‌ ಬಸ್‌; ಕೊಡಗಿನಲ್ಲಿ ಕುಸಿದು ಬಿದ್ದ ಮನೆಗಳ ಗೋಡೆ

karnataka Rain
ಮಳೆ2 days ago

Karnataka Rain : ಭಾರಿ ಗಾಳಿ ಮಳೆ; ತುಂಡಾಗಿ ಬಿದ್ದಿದ್ದ ವಿದ್ಯುತ್‌ ತಂತಿ ತುಳಿದು ವಿಲವಿಲ ಒದ್ದಾಡಿ ಸತ್ತ ಗಬ್ಬದ ಹಸು

haveri News
ಹಾವೇರಿ2 days ago

Haveri News : ಹಾವೇರಿಯಲ್ಲಿ ಪೊಲೀಸ್ ಠಾಣೆ ಮೆಟ್ಟಿಲೇರಿದ ನಾಯಿ ಜಗಳ; ಊರಿನೊಳಗೆ ದಾಂಧಲೆ ಮಾಡುತ್ತಿದ್ದ ಕರಡಿ ಸೆರೆ

karnataka Rain
ಮಳೆ2 days ago

Karnataka Rain : ಭಾರಿ ಮಳೆ ಎಫೆಕ್ಟ್‌; ಕಪಿಲಾ ನದಿ ತೀರದಲ್ಲೀಗ ಪ್ರವಾಹ ಭೀತಿ

karnataka Weather Forecast
ಮಳೆ3 days ago

Karnataka Weather : ಶಿರಸಿಯಲ್ಲಿ ಭೂಕುಸಿತ; ಮತ್ತೆ ಕರಾವಳಿ, ಮಲೆನಾಡಿಗೆ ಭಾರಿ ಮಳೆ ಎಚ್ಚರಿಕೆ

ಟ್ರೆಂಡಿಂಗ್‌