Site icon Vistara News

Bigg Boss Kannada: ಬಿಗ್‌ ಬಾಸ್‌ ಕನ್ನಡದಿಂದ ಬಿಗ್‌ ಅಪ್‌ಡೇಟ್‌; ಫ್ಯಾನ್ಸ್‌ ಫುಲ್‌ ಖುಷ್‌!

Bhoomika basavaraj Sunil Rao namrata Gowda

ಬೆಂಗಳೂರು: ಬಿಗ್‌ ಬಾಸ್‌ ಕನ್ನಡ (Bigg Boss Kannada) ಯಾವಾಗ ಶುರು ಎಂಬ ಕುತೂಹಲ ಪ್ರೇಕ್ಷಕರಿಗಿತ್ತು. ಇದೀಗ ಕನ್ನಡ ಬಿಗ್‌ ಬಾಸ್‌ ಸಿಹಿ ಸುದ್ದಿ ನೀಡಿದೆ. ಕನ್ನಡದ ಬಿಗ್ ಬಾಸ್ 10ರ ಸೀಸನ್ ಬರುತ್ತಿರುವುದರಲ್ಲಿ ಹಲವು ವಿಶೇಷಗಳಿದೆ. ಇದರ ಮಧ್ಯೆ ಬಿಗ್ ಬಾಸ್ ಪ್ರೋಮೊ ಶೂಟ್‌ಗೆ ಮತ್ತು ಶೋ ಪ್ರಸಾರಕ್ಕೆ ಮುಹೂರ್ತ ಫಿಕ್ಸ್ ಆಗಿದೆ. ಈ ಬಾರಿ ಕನ್ನಡದಲ್ಲಿ ಬಿಗ್ ಬಾಸ್ ಒಟಿಟಿ (Bigg Boss Kannada 10 contestant) ಸೀಸನ್ 2 ಇರುವುದಿಲ್ಲ. ನೇರವಾಗಿ ಟಿವಿಯಲ್ಲೇ ಬಿಗ್‌ ಬಾಸ್‌ ಕನ್ನಡ ಸೀಸನ್‌ 10 (Bigg Boss Kannada 10) ಪ್ರಸಾರ ಆಗಲಿದೆ.

ಇದೇ ಸೆಪ್ಟೆಂಬರ್ 10ರಂದು ಬಿಗ್ ಬಾಸ್ ಪ್ರೋಮೊ ಶೂಟ್ ನಡೆಯಲಿದೆ. ಸುದೀಪ್‌ ಕೂಡ ಭಾಗಿಯಾಗುತ್ತಿದ್ದಾರೆ. ವಾಹಿನಿ ಈ ಬಗ್ಗೆ ಸುದ್ದಿಗೋಷ್ಠಿ ನಡೆಸಿ, ಸೆ.15ರಂದು ಬಿಗ್ ಬಾಸ್ ಪ್ರಸಾರ ಯಾವಾಗ ಎಂಬ ಬಗ್ಗೆ ಅಧಿಕೃತ ಮಾಹಿತಿ ನೀಡಲಿದ್ದಾರೆ.

ಬಿಗ್‌ ಬಾಸ್‌ ಕನ್ನಡ (Bigg Boss Kannada) ಹತ್ತನೇ ಸೀಸನ್‌ನಲ್ಲಿ ಯಾರೆಲ್ಲ ಇದ್ದಾರೆ?

ಕಲರ್ಸ್ ಕನ್ನಡ ತಂಡ ಹತ್ತನೇ ಸೀಸನ್ ಬಿಗ್ ಬಾಸ್ ಗೆ ಭರ್ಜರಿ ತಯಾರಿ ಮಾಡಿಕೊಂಡಿದೆ ಎನ್ನುವ ಮಾತುಗಳು ಕೇಳಿ ಬರುತ್ತಿದೆ. ಸದ್ಯ ಕಲರ್ಸ್ ಕನ್ನಡ ತಂಡ ‘ಅನುಬಂಧ ಅವಾರ್ಡ್ಸ್’ ಕಾರ್ಯಕ್ರಮದ ತಯಾರಿಯಲ್ಲಿ ಬ್ಯುಸಿಯಾಗಿದೆ. ಇದರ ಜತೆಗೆ ಬಿಗ್ ಬಾಸ್ ಸೀಸನ್ 10ಕ್ಕೆ ತೆರೆಮರೆಯಲ್ಲಿ ತಯಾರಿ ಕೂಡ ನಡೆಯುತ್ತಿದೆ. ಸೆಪ್ಟೆಂಬರ್ (Bigg Boss Kannada september) ಮೊದಲನೇ ವಾರದಲ್ಲಿ ಈ ಅವಾರ್ಡ್ಸ್ ಕಾರ್ಯಕ್ರಮ ನಡೆಯಲಿದ್ದು, ಇದು ಮುಗಿದ ನಂತರ ಕೊನೆಯ ವಾರದ ವೇಳೆಗೆ ಬಿಗ್ ಬಾಸ್ ಆರಂಭ ಆಗಬಹುದು ಎಂದು ಮೂಲಗಳು ಹೇಳುತ್ತಿವೆ.

ಇದನ್ನೂ ಓದಿ: Bigg Boss Kannada: ಬಿಗ್‌ ಬಾಸ್‌ ಕನ್ನಡ ಹತ್ತನೇ ಸೀಸನ್‌ನಲ್ಲಿ ಯಾರೆಲ್ಲ ಇದ್ದಾರೆ?

ಈ ಬಾರಿ ಕಿರುತೆರೆ ನಟಿ ನಮ್ರತಾ ಗೌಡ, ‘ಹುಚ್ಚ’ ಸಿನಿಮಾ ನಾಯಕಿ ರೇಖಾ, ನಟಿ ಆಶಾ ಭಟ್, ಸೋಷಿಯಲ್ ಮೀಡಿಯಾ ಸ್ಟಾರ್ ಭೂಮಿಕಾ ಬಸವರಾಜ್,ನಟ ಸುನೀಲ್ ರಾವ್, ಕೆಜಿಎಫ್ ನಟಿ ರೂಪಾ ರಾಯಪ್ಪ ಬಿಗ್ ಬಾಸ್ ಮನೆಯಲ್ಲಿ ಇರುತ್ತಾರೆ ಎಂದು ಕೆಲ ಮಾಧ್ಯಮಗಳು (Bigg Boss Kannada 10 contestant) ವರದಿ ಮಾಡಿವೆ.

ಸಿನಿಮಾಗಳಲ್ಲಿ ಬ್ಯುಸಿಯಾದ ಕಿಚ್ಚ

ಮೂಲಗಳ ಪ್ರಕಾರ ಸುದೀಪ್ ಹೊಸ ಸಿನಿಮಾದ ಶೂಟಿಂಗ್‌ನಲ್ಲಿ ಭಾಗಿಯಾಗಲಿದ್ದಾರೆ. ಈ ಸಿನಿಮಾದ ಶೂಟಿಂಗ್ ಬೆಂಗಳೂರಿನ ಹೊರಗಡೆಯೇ ಹೆಚ್ಚು ಇರಲಿದೆ. ಹಾಗಾಗಿ ಬಿಗ್ ಬಾಸ್ ಗಾಗಿ ಸುದೀಪ್ ಡೇಟ್ಸ್ ಹೇಗೆ ಹೊಂದಿಸಿಕೊಳ್ಳುತ್ತಾರೆ ಎನ್ನುವ ಚರ್ಚೆ ಕೂಡ ಶುರುವಾಗಿದೆ. ಈ ಬಾರಿ ಬಿಗ್ ಬಾಸ್ ಮನೆಯೇ ಶಿಫ್ಟ್ ಆಗಿದೆ ಎನ್ನುವ ಮಾಹಿತಿಯೂ ವರದಿ ಆಗಿದೆ. ಆದರೆ ಈ ಬಗ್ಗೆ ವಾಹಿನಿ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ.

Exit mobile version