ಮುಂಬೈ: ಬಾಲಿವುಡ್ ನಟ ಆಮೀರ್ ಖಾನ್ (Aamir Khan) ಅವರು ತಮ್ಮ ಪುತ್ರಿ ಇರಾ ಖಾನ್ ಅವರ ಮದುವೆಯ ದಿನಾಂಕವನ್ನು ಘೋಷಿಸಿದ್ದಾರೆ. ವರ್ಷಾಂತ್ಯದಲ್ಲಿ ಇರಾ ಖಾನ್ (Ira Khan) ಹಾಗೂ ನೂಪುರ್ ಶಿಖರೆ (Nupur Shikhare) ಅವರು ಮದುವೆಯಾಗುತ್ತಾರೆ ಎಂಬ ವದಂತಿಗಳ ಮಧ್ಯೆಯೇ, ಜನವರಿ 3ರಂದು ನನ್ನ ಮಗಳ ಮದುವೆ ಎಂಬುದಾಗಿ ಬಾಲಿವುಡ್‌ನ ಮಿಸ್ಟರ್ ಪರ್ಫೆಕ್ಷನಿಸ್ಟ್ ಎಂದೇ ಖ್ಯಾತಿಯಾಗಿರುವ ಆಮೀರ್ ಖಾನ್ ಘೋಷಿಸಿದ್ದಾರೆ.
ನ್ಯೂಸ್ 18 ಜತೆ ಮಾತನಾಡಿದ ಆಮೀರ್ ಖಾನ್, “ನನ್ನ ಮಗಳು ಅವಳು ಆಯ್ಕೆ ಮಾಡಿಕೊಂಡ ಹುಡುಗನ ಜತೆ ಜನವರಿ 3ರಂದು ಮದುವೆಯಾಗಲಿದ್ದಾಳೆ. ಟ್ರೇನರ್ ಆಗಿರುವ ನನ್ನ ಭಾವಿ ಅಳಿಯನು ಒಳ್ಳೆಯ ವ್ಯಕ್ತಿಯಾಗಿದ್ದಾನೆ. ಇರಾ ಒತ್ತಡ, ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದಾಗ, ಆಕೆಯ ಪ್ರಿಯತಮ ಜತೆಗೇ ಇದ್ದ. ಇರಾಗೆ ನೂಪುರ್ ಶಿಖರೆ ಬಲವಾಗಿ, ಬೆಂಬಲವಾಗಿ ನಿಂತಿದ್ದಾನೆ. ಅವರಿಬ್ಬರೂ ಮದುವೆಯಾಗುತ್ತಿರುವುದು ನನಗೆ ತುಂಬ ಸಂತೋಷದ ವಿಚಾರವಾಗಿದೆ” ಎಂದು ಆಮೀರ್ ಖಾನ್ ಹೇಳಿದ್ದಾರೆ.
ನಾನವತ್ತು ತುಂಬ ಅಳುವೆ ಎಂದ ನಟ
ಮಗಳ ಮದುವೆ ಎಂದರೆ ಒಬ್ಬ ತಂದೆಗೆ ಎಷ್ಟು ಖುಷಿಯೋ, ಆಕೆ ನಮ್ಮ ಮನೆ ಬಿಟ್ಟು ಹೋಗುತ್ತಾಳಲ್ಲ ಎಂಬುದು ಕೂಡ ಭಾವನಾತ್ಮಕ ವಿಚಾರ. ಇದರ ಕುರಿತು ಕೂಡ ಆಮೀರ್ ಖಾನ್ ಮಾತನಾಡಿದ್ದಾರೆ. “ನನ್ನ ಮಗಳ ಮದುವೆ ದಿನ ನಾನು ತುಂಬ ಭಾವುಕನಾಗುತ್ತೇನೆ. ಅಂದು ನಾನು ಜಾಸ್ತಿ ಅಳುತ್ತೇನೆ. ಈಗಾಗಲೇ ನನ್ನ ಕುಟುಂಬಸ್ಥರ ಜತೆ ಮಾತನಾಡಿದ್ದೇನೆ. ಅವತ್ತು ದಯಮಾಡಿ ನನ್ನನ್ನು ನಿಭಾಯಿಸಿ. ನಾನವತ್ತು ತುಂಬ ಅಳುತ್ತೇನೆ. ಆಗ ನನ್ನನ್ನು ಸಂಭಾಳಿಸಿ ಎಂಬುದಾಗಿ ಹೇಳಿದ್ದೇನೆ” ಎಂದು ಆಮೀರ್ ಖಾನ್ ತಿಳಿಸಿದ್ದಾರೆ.
ಇದನ್ನೂ ಓದಿ: Aamir Khan: ಕಂಬ್ಯಾಕ್ ಪ್ರಕಟಿಸಿದ ಆಮೀರ್ ಖಾನ್; ಆದರೆ ನಾಯಕನಾಗಿ ಅಲ್ಲ
ನೂಪುರ್ ನನ್ನ ಮಗನಂತೆ
ನೂಪುರ್ ಶಿಖರೆ ತುಂಬ ಒಳ್ಳೆಯ ಹುಡುಗ. ಆತ ನನ್ನ ಮಗ ಇದ್ದಂತೆ. ಇರಾ ಖಾನ್ ಅವನ ಜತೆ ತುಂಬ ಖುಷಿಯಾಗಿ ಇರುತ್ತಾಳೆ ಎಂಬ ನಂಬಿಕೆ ಇದೆ. ಆದರೂ ಆಕೆಯ ಮದುವೆ ದಿನ ನಾನು ತುಂಬ ಭಾವುಕನಾಗುತ್ತೇನೆ. ನನ್ನ ಅಳುವನ್ನು ನಾನು ಕಂಟ್ರೋಲ್ ಮಾಡಲು ಆಗುವುದಿಲ್ಲ” ಎಂದು ಹೇಳಿದ್ದಾರೆ. ಇರಾ ಖಾನ್ ಹಾಗೂ ನೂಪುರ್ ಶಿಖರೆ ತುಂಬ ದಿನದಿಂದ ಪ್ರೀತಿಸುತ್ತಿದ್ದು, ಇದೇ ವರ್ಷ ಅವರು ಎಂಗೇಜ್‌ಮೆಂಟ್ ಆಗಿದ್ದಾರೆ. ಮದುವೆ ಎಲ್ಲಿ ನಡೆಯಲಿದೆ, ಎಷ್ಟು ಅದ್ಧೂರಿಯಾಗಿರಲಿದೆ, ಯಾರೆಲ್ಲ ಆಗಮಿಸಲಿದ್ದಾರೆ ಎಂಬುದರ ಕುರಿತು ಆಮೀರ್ ಖಾನ್ ಮಾಹಿತಿ ನೀಡಿಲ್ಲ.