Site icon Vistara News

Ajay Devgn: ʻಪುಷ್ಪ’ನಿಗೆ ಹೆದರಿದ ‘ಸಿಂಗಂ’; ಅಜಯ್ ದೇವಗನ್ ಸಿನಿಮಾ ರಿಲೀಸ್​ ಪೋಸ್ಟ್‌ಪೋನ್‌?

Ajay Devgn Singham Again postponed release on Diwali 2024

ಬೆಂಗಳೂರು: ರೋಹಿತ್ ಶೆಟ್ಟಿ ನಿರ್ದೇಶನ, ಅಜಯ್‌ ದೇವಗನ್‌ ((Ajay Devgn) ) ನಟನೆಯ ‘ಸಿಂಗಂ ಅಗೇನ್‘ ರಿಲೀಸ್‌ ಡೇಟ್‌ ಮುಂದೂಡಲಾಗಿದೆ. 2024ರ ದೀಪಾವಳಿ ಸಮಯದಲ್ಲಿ ಚಿತ್ರ ಬಿಡುಗಡೆಯಾಗಲಿದೆ ಎಂದು ಹೇಳಿದೆ. ಈ ಹಿಂದೆ ಸಿನಿಮಾ ಅಗಸ್ಟ್‌ 15ರಂದು ರಿಲೀಸ್‌ ಮಾಡುವುದಾಗಿ ಚಿತ್ರತಂಡ ಘೋಷಿಸಿತ್ತು. ಇದೀಗ ಚಿತ್ರದ ರಿಲೀಸ್‌ ಡೇಟ್‌ ಪೋಸ್ಟ್‌ಪೋನ್‌ ಆಗಿದೆ ಎಂದು ಸ್ವತಃ ಅಜಯ್ ದೇವಗನ್ ಅವರೇ ಮಾಹಿತಿ ಹಂಚಿಕೊಂಡಿದ್ದಾರೆ. ರಣವೀರ್ ಸಿಂಗ್, ದೀಪಿಕಾ ಪಡುಕೋಣೆ, ಟೈಗರ್ ಶ್ರಾಫ್, ಅರ್ಜುನ್ ಕಪೂರ್ ಸೇರಿದಂತೆ ಹಲವು ನಟರನ್ನು ಒಳಗೊಂಡು ಸಿನಿಮಾ ಇದಾಗಿದೆ. ಈ ಸಮಯದಲ್ಲಿ ಅಲ್ಲು ಅರ್ಜನ್​ ಅಭಿನಯದ, ಸುಕುಮಾರ್ ನಿರ್ದೇಶನದ ಪುಷ್ಪ 2 ಸಿನಿಮಾ ರಿಲೀಸ್ ಆಗಲಿದೆ. ಅದಕ್ಕೆ ಹೆದರಿದ ಸಿಂಗಂ ಚಿತ್ರ ರಿಲೀಸ್ ಡೇಟ್​ ಮುಂದಕ್ಕೆ ಹಾಕಿದೆ.

ಇತ್ತೀಚೆಗೆ, ಅಕ್ಷಯ್ ಕುಮಾರ್, ರಣವೀರ್ ಸಿಂಗ್, ಟೈಗರ್ ಶ್ರಾಫ್, ಕರೀನಾ ಕಪೂರ್ ಮತ್ತು ದೀಪಿಕಾ ಪಡುಕೋಣೆ ಅವರ ಸಿಂಗಂ ಎಗೇನ್‌ನ ಫಸ್ಟ್ ಲುಕ್ ಪೋಸ್ಟರ್‌ಗಳನ್ನು ಚಿತ್ರತಂಡ ಹಂಚಿಕೊಂಡಿತ್ತು. ಕರೀನಾ ಫಸ್ಟ್ ಲುಕ್ ಹೊರಬಂದಿತ್ತು. ಇದೇ ಸಿನಿಮಾದಲ್ಲಿ ಅರ್ಜುನ್​ ಕಪೂರ್​ ಕೂಡ ನಟಿಸುತ್ತಿದ್ದಾರೆ. ಹಿಂದಿ ಚಿತ್ರರಂಗದ ಹಲವು ಪ್ರಮುಖ ಕಲಾವಿದರು ಈ ಚಿತ್ರದ ಪಾತ್ರವರ್ಗದಲ್ಲಿ ಇರುವುದರಿಂದ ಸಹಜವಾಗಿಯೇ ಹೈಪ್​ ಸೃಷ್ಟಿ ಆಗಿದೆ.

ಅಜಯ್‌ ದೇವಗನ್‌ ಹೊಸ ಪೋಸ್ಟರ್‌ ಹಂಚಿಕೊಂಡು ಚಿತ್ರ ರಿಲೀಸ್‌ ಡೇಟ್‌ ಮುಂದೂಡಲಾಗಿದೆ ಎಂದು ಘೋಷಿಸಿದ್ದಾರೆ. ಪೋಸ್ಟರ್‌ನಲ್ಲಿ ಚಿತ್ರದ ಶೀರ್ಷಿಕೆ ಮತ್ತು ಅದರಲ್ಲಿ ನಟಿಸಿರುವ ನಟರ ಹೆಸರುಗಳಿವೆ. ಅಜಯ್‌ ಅವರ ಮುಂಬರುವ ‘ಔರಾನ್ ಮೇ ಕಹಾನ್ ದಮ್ ಥಾ’ ಟ್ರೈಲರ್‌ ಬಿಡುಗಡೆಯ ಸಂದರ್ಭದಲ್ಲಿ, ಅಜಯ್ ದೇವಗನ್ ‘ಸಿಂಗಮ್ ಎಗೇನ್’ ಬಿಡುಗಡೆ ಬಗ್ಗೆ ಅಪ್‌ಡೇಟ್ ಕೇಳಿದ್ದಾರೆ “ನಮಗೆ ಇನ್ನೂ ಈ ಬಗ್ಗೆ ಖಚಿತವಾಗಿಲ್ಲ ಏಕೆಂದರೆ ಸಿನಿಮಾ ಕೆಲಸ ಇನ್ನೂ ನಡೆಯುತ್ತಿದೆ. ಅದು ಪೂರ್ಣಗೊಂಡಿಲ್ಲ. ಸ್ವಲ್ಪ ಚಿತ್ರೀಕರಣ ಇನ್ನೂ ಉಳಿದಿದೆʼʼಎಂದಿದ್ದರು.

ಇದನ್ನೂ ಓದಿ: Ajay Devgn: ಒಟಿಟಿಯಲ್ಲಿ ಸ್ಟ್ರೀಮಿಂಗ್‌ ಆಗ್ತಾ ಇದೆ ಅಜಯ್‌ ದೇವಗನ್‌ ʻಶೈತಾನ್ʼ ಸಿನಿಮಾ

ಒಂದು ಮೂಲದ ಪ್ರಕಾರ ‘ಸಿಂಗಂ ಅಗೇನ್​’ ಸಿನಿಮಾದ ರಿಲೀಸ್ ಡೇಟ್​ ಮುಂದೂಡಿಕೆ ಆಗಲು ‘ಪುಷ್ಪ 2’ ತಂಡದ ಪೈಪೋಟಿ ಕಾರಣ ಎನ್ನಲಾಗಿದೆ. ಈ ಮುಂಚೆ ಚಿತ್ರತಂಡ ದೀಪಿಕಾ ಅವರ ಫಸ್ಟ್‌ ಲುಕ್‌ ಪೋಸ್ಟರ್‌ ಅನಾವರಣಗೊಳಿಸಿತ್ತು. ಶಕ್ತಿ ಶೆಟ್ಟಿ ಪಾತ್ರದ ಹೆಸರು.

ರಕ್ತಸಿಕ್ತವಾಗಿ ದೀಪಿಕಾ ಕಂಡಿದ್ದು, ವ್ಯಕ್ತಿಯ ಬಾಯಿಯೊಳಗೆ ರಿವಾಲ್ವರ್ ಹಾಕಿ ಖಡಕ್‌ ಲುಕ್‌ ಕೊಟ್ಟಿದ್ದಾರೆ ದೀಪಿಕಾ. ಹಿಂದೆ ಬೆಂಕಿ, ಸುತ್ತಲೂ ಹೆಣಗಳ ರಾಶಿ, ಕಾರು ಅವಶೇಷಗಳು ಕಾಣಿಸಿಕೊಂಡವು. ನಟ-ಪತಿ ರಣವೀರ್ ಸಿಂಗ್, ಕೂಡ ದೀಪಿಕಾ ಲುಕ್‌ಗೆ ಹೊಗಳಿದ್ದಾರೆ. ಈ ಹಿಂದೆ ವರದಿಯೊಂದು ಚಿತ್ರದಲ್ಲಿ ದೀಪಿಕಾ ಪಡುಕೋಣೆ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಿತ್ತು. ಮೂಲ ಪ್ರಕಾರ, “ದೀಪಿಕಾ ಪಡುಕೋಣೆ ರೋಹಿತ್ ಶೆಟ್ಟಿಯವರ ಸಿಂಗಂ ಅಗೇನ್ ಚಿತ್ರಕ್ಕಾಗಿ ಉತ್ಸುಕರಾಗಿದ್ದಾರೆ. ಅವರು ರೋಹಿತ್ ಶೆಟ್ಟಿ ಯೂನಿವರ್ಸ್‌ನ ಮೊದಲ ಮಹಿಳಾ ಪೋಲೀಸ್ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಈ ಸಾಹಸಮಯ ಭಾಗಕ್ಕಾಗಿ ಈಗಾಗಲೇ ಪೂರ್ವಸಿದ್ಧತೆ ಪ್ರಾರಂಭಿಸಿದ್ದಾರೆ. ಲೇಡಿ ಸಿಂಗಮ್ ಚಿತ್ರದಲ್ಲಿ ಅಜಯ್ ದೇವಗನ್ ಅವರ ಸಹೋದರಿ ಪಾತ್ರವನ್ನು ನಿರ್ವಹಿಸಲಿದ್ದಾರೆʼʼಎನ್ನಲಾಗಿತ್ತು.

Exit mobile version