Singham Again: ʻಸಿಂಗಂ ಅಗೇನ್ʼ ಸಿನಿಮಾ; ಅಜಯ್ ದೇವಗನ್ ಫಸ್ಟ್ ಲುಕ್ ಔಟ್‌! Vistara News

ಬಾಲಿವುಡ್

Singham Again: ʻಸಿಂಗಂ ಅಗೇನ್ʼ ಸಿನಿಮಾ; ಅಜಯ್ ದೇವಗನ್ ಫಸ್ಟ್ ಲುಕ್ ಔಟ್‌!

Singham Again: ರೋಹಿತ್ ಶೆಟ್ಟಿ ಅವರು ಕೂಡ ಫಸ್ಟ್‌ ಲುಕ್‌ ಹಂಚಿಕೊಂಡು ʻʻʻಎಲ್ಲರ ಅಚ್ಚುಮೆಚ್ಚಿನ ಪೊಲೀಸ್, ಬಾಜಿರಾವ್ ಸಿಂಗಂ ಮರಳಿ ಬಂದಿದ್ದಾರೆ! ಮತ್ತೆ ಸಿಂಗಂʼʼಎಂದು ಬರೆದುಕೊಂಡಿದ್ದಾರೆ.

VISTARANEWS.COM


on

Singham Again Ajay Devgn first look
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಅಜಯ್ ದೇವಗನ್ ಶೀಘ್ರದಲ್ಲೇ ರೋಹಿತ್ ಶೆಟ್ಟಿ ಅವರ ಮುಂಬರುವ ಚಿತ್ರ  ʻಸಿಂಗಂ ಅಗೇನ್ʼನಲ್ಲಿ (Singham Again) ಮತ್ತೆ ಕಾಣಿಸಿಕೊಳ್ಳಲಿದ್ದಾರೆ. ‘ಅಜಯ್ ದೇವಗನ್ ಅವರ ಫಸ್ಟ್ ಲುಕ್ ಅನಾವರಣಗೊಂಡಿದೆ. ಅಜಯ್ ಇನ್‌ಸ್ಟಾಗ್ರಾಮ್‌ನಲ್ಲಿ ʻಅವನು ಪರಾಕ್ರಮಿ. ಅವನು ಶಕ್ತಿ.. ಅವನು ಶಕ್ತಿ. ಸಿಂಗಂ ಮತ್ತೆ ಘರ್ಜಿಸುತ್ತಾನೆ!”ಎಂದು ಕ್ಯಾಪ್ಷನ್‌ ಕೊಟ್ಟಿದ್ದಾರೆ.

ರೋಹಿತ್ ಶೆಟ್ಟಿ ಅವರು ಕೂಡ ಫಸ್ಟ್‌ ಲುಕ್‌ ಹಂಚಿಕೊಂಡು ʻʻʻಎಲ್ಲರ ಅಚ್ಚುಮೆಚ್ಚಿನ ಪೊಲೀಸ್, ಬಾಜಿರಾವ್ ಸಿಂಗಂ ಮರಳಿ ಬಂದಿದ್ದಾರೆ! ಮತ್ತೆ ಸಿಂಗಮ್‌ʼʼಎಂದು ಬರೆದುಕೊಂಡಿದ್ದಾರೆ. ಇತ್ತೀಚೆಗೆ, ಅಕ್ಷಯ್ ಕುಮಾರ್, ರಣವೀರ್ ಸಿಂಗ್, ಟೈಗರ್ ಶ್ರಾಫ್, ಕರೀನಾ ಕಪೂರ್ ಮತ್ತು ದೀಪಿಕಾ ಪಡುಕೋಣೆ ಅವರ ಸಿಂಗಂ ಎಗೇನ್‌ನ ಫಸ್ಟ್ ಲುಕ್ ಪೋಸ್ಟರ್‌ಗಳನ್ನು ಚಿತ್ರತಂಡ ಹಂಚಿಕೊಂಡಿತ್ತು. ಈ ತಿಂಗಳ ಆರಂಭದಲ್ಲಿ, ಕರೀನಾ ಅವರ ಚಿತ್ರದ ಫಸ್ಟ್ ಲುಕ್ ಹೊರಬಂದಿತ್ತು.

ʻಅವನಿʼ ಸಿಂಗಂ ಆಗಿ ರಗಡ್‌ ಲುಕ್‌ನಲ್ಲಿ ಕಂಡಿದ್ದಾರೆ ಕರೀನಾ.ಕರೀನಾ ಅವರು ರೋಹಿತ್ ಶೆಟ್ಟಿ ಅವರ ಪೋಸ್ಟ್ ರೀ ಪೋಸ್ಟ್‌ ಮಾಡಿ ʻʻಅವನಿ ಬಾಜಿರಾವ್ ಸಿಂಗಂ ನನ್ನ ಪಾತ್ರ ಈಗ. ರೋಹಿತ್‌ ಹಾಗೂ ನಾನು 2007ರಲ್ಲಿ ಒಟ್ಟಿಗೆ ಕೆಲಸ ಮಾಡಿದ್ದೇವು. ಗೋಲ್ಮಾಲ್ ರಿಟರ್ನ್ಸ್, ಗೋಲ್ಮಾಲ್ 3, ಸಿಂಗಂ ರಿಟರ್ನ್ಸ್. ಇದೀಗ ಇದು ನಮ್ಮ ನಾಲ್ಕನೇ ಪ್ರಾಜೆಕ್ಟ್‌. 16 ವರ್ಷಗಳ ಸುದೀರ್ಘ ಒಡನಾಟ. ಏನೂ ಬದಲಾಗಿಲ್ಲʼʼಎಂದು ಬರೆದುಕೊಂಡಿದ್ದರು. ಇದೇ ಸಿನಿಮಾದಲ್ಲಿ ಅರ್ಜುನ್​ ಕಪೂರ್​ ಕೂಡ ನಟಿಸುತ್ತಿದ್ದಾರೆ. ಹಿಂದಿ ಚಿತ್ರರಂಗದ ಹಲವು ಪ್ರಮುಖ ಕಲಾವಿದರು ಈ ಚಿತ್ರದ ಪಾತ್ರವರ್ಗದಲ್ಲಿ ಇರುವುದರಿಂದ ಸಹಜವಾಗಿಯೇ ಹೈಪ್​ ಸೃಷ್ಟಿ ಆಗಿದೆ.

ಇದನ್ನೂ ಓದಿ: Singham Again: ʻಸಿಂಗಂ ಅಗೇನ್ʼ ಸಿನಿಮಾ; ಕರೀನಾ ಕಪೂರ್ ಲುಕ್‌ ಔಟ್‌!

ಈ ಹಿಂದೆ ಪೋಸ್ಟರ್‌ಗಳನ್ನು ಹಂಚಿಕೊಂಡ ಟೈಗರ್, “ಎಸಿಪಿ ಸತ್ಯ ರಿಪೋರ್ಟಿಂಗ್ ಆನ್ ಡ್ಯೂಟಿ ಸಿಂಗಂ ಸರ್ #ಸಿಂಗಂ ಅಗೇನ್” ಎಂದು ಬರೆದುಕೊಂಡಿದ್ದರು. ʻಸಿಂಗಂ ಅಗೇನ್ʼ ಚಿತ್ರದಲ್ಲಿ ದೀಪಿಕಾ ಪಡುಕೋಣೆ (Deepika Padukone) ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ರೋಹಿತ್ ಶೆಟ್ಟಿ ನಿರ್ದೇಶನದ ಈ ಸಿನಿಮಾ ಇದೀಗ ದೀಪಿಕಾ ಅವರ ಫಸ್ಟ್‌ ಲುಕ್‌ ಪೋಸ್ಟರ್‌ ಈ ಹಿಂದೆ ಅನಾವರಣಗೊಳಿಸಿತ್ತು. ಶಕ್ತಿ ಶೆಟ್ಟಿ ಪಾತ್ರದ ಹೆಸರು.

ರಕ್ತಸಿಕ್ತವಾಗಿ ದೀಪಿಕಾ ಕಂಡಿದ್ದು, ವ್ಯಕ್ತಿಯ ಬಾಯಿಯೊಳಗೆ ರಿವಾಲ್ವರ್ ಹಾಕಿ ಖಡಕ್‌ ಲುಕ್‌ ಕೊಟ್ಟಿದ್ದರು ದೀಪಿಕಾ. ಹಿಂದೆ ಬೆಂಕಿ, ಸುತ್ತಲೂ ಹೆಣಗಳ ರಾಶಿ, ಕಾರು ಅವಶೇಷಗಳು ಕಾಣಿಸಿಕೊಂಡಿದ್ದವು.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App

ಕ್ರಿಕೆಟ್

Sachin Tendulkar: ವಿಕ್ಕಿ ಕೌಶಲ್‌ ಸಿನಿಮಾ ಕಂಡು ʻಸೂಪರ್ ಇಂಪ್ರೆಸ್ಡ್ʼ ಆದ ಸಚಿನ್ ತೆಂಡೂಲ್ಕರ್‌!

Sachin Tendulkar: ವಿಕ್ಕಿ ಅವರು ಸಚಿನ್‌ ತೆಂಡೂಲ್ಕರ್ ಅವರೊಂದಿಗಿನ ಫೋಟೊವನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. ತೆಂಡೂಲ್ಕರ್ ಅವರ ಪತ್ನಿ ಅಂಜಲಿ ತೆಂಡೂಲ್ಕರ್ ಕೂಡ ಜತೆಗಿದ್ದರು. ಸ್ಕ್ರೀನಿಂಗ್‌ ಆದ ಬಳಿಕ ಸಚಿನ್ ತೆಂಡೂಲ್ಕರ್ ಜತೆ ವಿಕ್ಕಿ ಪೋಸ್ ನೀಡಿದ್ದಾರೆ.

VISTARANEWS.COM


on

Sachin Tendulkar says he is super impressed by Vicky Kaushal
Koo

ಬೆಂಗಳೂರು: ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ (Sachin Tendulkar) ಡಿಸೆಂಬರ್‌ 2ರ ರಾತ್ರಿ ನಟ ವಿಕ್ಕಿ ಕೌಶಲ್ ಅವರ ʻಸ್ಯಾಮ್ ಬಹದ್ದೂರ್‌ʼ ಸಿನಿಮಾದ ವಿಶೇಷ ಪ್ರದರ್ಶನದಲ್ಲಿ ಭಾಗವಹಿಸಿದ್ದರು. ತೆಂಡೂಲ್ಕರ್ ಅವರ ಪತ್ನಿ ಅಂಜಲಿ ತೆಂಡೂಲ್ಕರ್ ಕೂಡ ಜತೆಗಿದ್ದರು. ಸ್ಕ್ರೀನಿಂಗ್‌ ಆದ ಬಳಿಕ ಸಚಿನ್ ತೆಂಡೂಲ್ಕರ್ ಜತೆ ವಿಕ್ಕಿ ಪೋಸ್ ನೀಡಿದ್ದಾರೆ.

ಸಚಿನ್ ಚಿತ್ರವನ್ನು ಕಂಡು “ಇದು ತುಂಬಾ ಒಳ್ಳೆಯ ಸಿನಿಮಾ. ವಿಕ್ಕಿ ಅವರ ನಟನೆಯಿಂದ ನಾನು ತುಂಬಾ ಪ್ರಭಾವಿತನಾಗಿದ್ದೇನೆ. ಫೀಲ್ಡ್ ಮಾರ್ಷಲ್ ಸ್ಯಾಮ್ ನಿಜವಾಗಿಯೂ ಇದ್ದಂತೆ ಭಾಸವಾಯಿತು. ನಮ್ಮ ದೇಶದ ಇತಿಹಾಸ ತಿಳಿಯಲು ಎಲ್ಲಾ ಜನರೇಶನ್‌ ಅವರಿಗೆ ಪ್ರಮುಖ ಚಿತ್ರವಾಗಿದೆʼʼ ಎಂದು ಮಾಧ್ಯಮದ ಮುಂದೆ ಹೇಳಿಕೊಂಡರು.

ವಿಕ್ಕಿ ಅವರು ಸಚಿನ್‌ ತೆಂಡೂಲ್ಕರ್ ಅವರೊಂದಿಗಿನ ಫೋಟೊವನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. “ನನ್ನ ಬಾಲ್ಯದ ಹೀರೊ ಇಂದು ನನ್ನ ಸಿನಿಮಾವನ್ನು ನೋಡಿದ್ದಾರೆ. ಧನ್ಯವಾದಗಳು ಸಚಿನ್‌ ಸರ್. ನಿಮ್ಮ ಮಾತುಗಳಿಗೆʼʼಎಂದು ಬರೆದುಕೊಂಡಿದ್ದಾರೆ. ಸ್ಯಾಮ್ ಬಹದ್ದೂರ್‌ ಭಾರತದಲ್ಲಿ ಮೊದಲ ದಿನದಂದು 5.50 ಕೋಟಿ ರೂ. ಗಳನ್ನು ಗಳಿಸಿತು. ಭಾರತದಲ್ಲಿ ಶನಿವಾರ 9.25 ಕೋಟಿ ರೂ. ನಿವ್ವಳ ಗಳಿಸಿದೆ ಎಂದೂ ವರದಿಯಾಗಿದೆ. ಡಿಸೆಂಬರ್ 2ರಂದು ಚಿತ್ರದ ಒಟ್ಟು ಕಲೆಕ್ಷನ್‌ 15.5 ಕೋಟಿ ರೂ. ಆಗಿದೆ ಎಂದು ವರದಿಯಾಗಿದೆ.

ಮೇಘನಾ ಗುಲ್ಜಾರ್ ನಿರ್ದೇಶಿಸಿದ ಈ ಚಿತ್ರದಲ್ಲಿ ಸನ್ಯಾ ಮಲ್ಹೋತ್ರಾ ಮತ್ತು ಫಾತಿಮಾ ಸನಾ ಶೇಖ್ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. ತೆಂಡೂಲ್ಕರ್ ಜತೆಗೆ ಕ್ರಿಕೆಟಿಗರಾದ ಜಹೀರ್ ಖಾನ್ ಮತ್ತು ಅಜಿತ್ ಅಗರ್ಕರ್ ಕೂಡ ಪ್ರದರ್ಶನದಲ್ಲಿ ಹಾಜರಾಗಿದ್ದರು.

ಮೇಘನಾ ಗುಲ್ಜಾರ್ ನಿರ್ದೇಶನದ ಚಿತ್ರ, ರಣಬೀರ್ ಕಪೂರ್ ಅವರ ‘ಅನಿಮಲ್‌ ಸಿನಿಮಾ ಜತೆ ಕ್ಲಾಶ್‌ ಆಗಿದೆ. ‘ವಿಕ್ಕಿ ಹೊರತುಪಡಿಸಿ, ಚಿತ್ರದಲ್ಲಿ ಸನ್ಯಾ ಮಲ್ಹೋತ್ರಾ ಮತ್ತು ಫಾತಿಮಾ ಸನಾ ಶೇಖ್ ಪ್ರಮುಖ ಪಾತ್ರಗಳಲ್ಲಿದ್ದಾರೆ.

ಇದನ್ನೂ ಓದಿ: Sachin Tendulkar : ಲಂಕಾ ವಿರುದ್ಧ ಪಂದ್ಯದ ಬೆಸ್ಟ್​ ಫೀಲ್ಡರ್ ಯಾರೆಂದು ಘೋಷಿಸಿದ ಸಚಿನ್​ ತೆಂಡೂಲ್ಕರ್​

ದೇಶದ ಮೊದಲ ಫೀಲ್ಡ್‌ ಮಾರ್ಷಲ್‌ ಕಥೆ ಇದು. ಈ ಸಿನಿಮಾ 1971ರ ಭಾರತ ಮತ್ತು ಪಾಕಿಸ್ತಾನ ಯುದ್ಧದ ಸಮಯದಲ್ಲಿ ಭಾರತೀಯ ಸೇನೆಯ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದ ಸ್ಯಾಮ್‌ ಮಾಣೆಕ್‌ ಶಾ ಅವರ ನಿಜಜೀವನದ ಘಟನೆಗಳನ್ನು ಆಧರಿಸಿದೆ. ವಿಕ್ಕಿ ಕೌಶಲ್ ಅಭಿನಯದ ಸ್ಯಾಮ್ ಬಹದ್ದೂರ್ ದೇಶದ ಮೊದಲ ಫೀಲ್ಡ್‌ ಮಾರ್ಷಲ್‌ ಕಥೆ ಇದು. ಈ ಸಿನಿಮಾ 1971ರ ಭಾರತ ಮತ್ತು ಪಾಕಿಸ್ತಾನ ಯುದ್ಧದ ಸಮಯದಲ್ಲಿ ಭಾರತೀಯ ಸೇನೆಯ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದ ಸ್ಯಾಮ್‌ ಮಾಣೆಕ್‌ ಶಾ ಅವರ ನಿಜಜೀವನದ ಘಟನೆಗಳನ್ನು ಆಧರಿಸಿದೆ. ಸ್ಯಾಮ್‌ ಮಾಣೆಕ್‌ ಶಾ ಅವರು ಫೀಲ್ಡ್‌ ಮಾರ್ಷಲ್‌ ಹುದ್ದೆಗೇರಿದ ಮೊದಲ ಭಾರತೀಯ ಸೇನಾ ಅಧಿಕಾರಿ. ಎರಡನೇ ವಿಶ್ವ ಯುದ್ಧದ ಸಮಯದಲ್ಲಿ ತಮ್ಮ ಮಿಲಿಟರಿ ವೃತ್ತಿಜೀವನವನ್ನು ಪ್ರಾರಂಭಿಸಿ, ನಾಲ್ಕು ದಶಕಗಳ ಕಾಲ. ಸೇನೆಯಲ್ಲಿ ಸೇವೆ ಸಲ್ಲಿಸಿದ್ದರು. ಐದು ಯುದ್ಧಗಳಲ್ಲಿ ಕರ್ತವ್ಯ ನಿರ್ವಹಿಸಿದ್ದಾರೆ.

Continue Reading

ಬಾಲಿವುಡ್

Bobby Deol: ʻಅನಿಮಲ್‌ʼ ಸಕ್ಸೆಸ್‌ ಹೊಗಳಿಕೆಗೆ ಕಣ್ಣೀರಿಟ್ಟ ನಟ ಬಾಬಿ ಡಿಯೋಲ್

Bobby Deol: ಮುಂಬೈನಲ್ಲಿ ನಟ ಬಾಬಿ ಡಿಯೋಲ್ ಕಾಣಿಸಿಕೊಂಡಾಗ ಮೆಚ್ಚುಗೆಯ ವಿಮರ್ಶೆಗಳಿಗೆ ಪ್ರತಿಕ್ರಿಯಿಸಿದರು. ಬೂದು ಬಣ್ಣದ ಹೂಡಿಯಲ್ಲಿ ನಟಿ ಕಾಣಿಸಿಕೊಂಡಿದ್ದಾರೆ. ನಟ ಬಾಬಿ ಡಿಯೋಲ್ ಕಣ್ಣೀರಿಟ್ಟ ವಿಡಿಯೊ ವೈರಲ್‌ ಆಗಿದೆ.

VISTARANEWS.COM


on

Bobby Deol cries after paparazzi praise him as Animal
Koo

ಬೆಂಗಳೂರು: ನಟ ಬಾಬಿ ಡಿಯೋಲ್ (Bobby Deol) ಅವರು ʻಅನಿಮಲ್‌ʼ ಸಿನಿಮಾ ನಟನೆಗಾಗಿ ಭಾರಿ ಮೆಚ್ಚುಗೆ ಗಳಿಸುತ್ತಿದ್ದಾರೆ. ಬಾಬಿ ಡಿಯೋಲ್ ಫ್ಯಾನ್ಸ್‌ ಸೋಷಿಯಲ್‌ ಮೀಡಿಯಾ ಮೂಲಕ ನಟನಿಗೆ ಶುಭ ಹಾರೈಸುತ್ತಿದ್ದಾರೆ. ಸಂದೀಪ್ ರೆಡ್ಡಿ ವಂಗಾ ನಿರ್ದೇಶನದ ಈ ಚಿತ್ರದಲ್ಲಿ ರಣಬೀರ್ ಕಪೂರ್, ಅನಿಲ್ ಕಪೂರ್ ಮತ್ತು ರಶ್ಮಿಕಾ ಮಂದಣ್ಣ ಕೂಡ ಇದ್ದಾರೆ. ಇದೀಗ ಬಾಬಿ ಡಿಯೋಲ್ ಅವರಿಗೆ ಪೋಟೊಗ್ರಾಫರ್‌ಗಳು (ಪಾಪರಾಜಿ) ಅಭಿನಂದನೆ ಸಲ್ಲಿಸುತ್ತಿದ್ದಂತೆ ನಟ ಭಾವುಕರಾದರು. ನಟ ಕಣ್ಣೀರಿಟ್ಟ ವಿಡಿಯೊಗಳು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.

ಮುಂಬೈನಲ್ಲಿ ನಟ ಬಾಬಿ ಡಿಯೋಲ್ ಕಾಣಿಸಿಕೊಂಡಾಗ ಮೆಚ್ಚುಗೆಯ ವಿಮರ್ಶೆಗಳಿಗೆ ಪ್ರತಿಕ್ರಿಯಿಸಿದರು. ಬೂದು ಬಣ್ಣದ ಹೂಡಿ ಉಡುಗೆಯಲ್ಲಿ ನಟಿ ಕಾಣಿಸಿಕೊಂಡಿದ್ದಾರೆ. ಬಾಬಿ ಡಿಯೋಲ್ ಅವರು ಪೋಟೊಗ್ರಾಫರ್‌ಗಳು (ಪಾಪರಾಜಿ) ಅಭಿನಂದನೆ ಸಲ್ಲಿಸುತ್ತಿದ್ದಂತೆ “ತುಂಬಾ ಧನ್ಯವಾದಗಳು. ದೇವರು ನಿಜವಾಗಿಯೂ ದಯೆ ತೋರಿದ್ದಾನೆ. ನಮ್ಮ ಚಿತ್ರ ಪಡೆಯುತ್ತಿರುವ ಪ್ರೀತಿ ಕನಸಿನಂತೆ ಭಾಸವಾಗುತ್ತಿದೆ” ಎಂದು ಭಾವುಕರಾದರು. ನಟನ ಸಿಬ್ಬಂದಿ ಮತ್ತು ಚಿತ್ರ ತಂಡವು ನಟನನ್ನು ಸಾಂತ್ವನಗೊಳಿಸುತ್ತಿರುವ ವಿಡಿಯೊ ವೈರಲ್‌ ಆಗಿದೆ.

ಈ ವಿಡಿಯೊಗೆ ನಟನ ಅಭಿಮಾನಿಗಳು “ಈ ವರ್ಷ ಡಿಯೋಲ್ ವರ್ಷವಾಗಿದೆ. ಧರ್ಮೇಂದ್ರ ಅವರ ಸಿನಿಮಾ ರಿಲೀಸ್, ಸನ್ನಿಯ ಗದರ್ 2 ಸೂಪರ್ ಹಿಟ್, ಕರಣ್ ಮದುವೆ, ಸನ್ನಿ ಅವರ ಕಿರಿಯ ಮಗನ ಮೊದಲ ಸಿನಿಮಾ ರಿಲೀಸ್… ಬಾಬಿ ಅನಿಮಲ್ ಸಿನಿಮಾ. ಇದರರ್ಥ ಇಡೀ ಕುಟುಂಬ ಸಾಧನೆಗಳನ್ನು ಮಾಡಿ ಸಂತೋಷವಾಗಿದೆ. ಇದು ಯಶಸ್ಸಿನ ಕಣ್ಣೀರು. ನಟ ಅದಕ್ಕೆ ಅರ್ಹರುʼʼ ಎಂದು ಕಮೆಂಟ್‌ ಮಾಡಿದ್ದಾರೆ.

ರಣಬೀರ್ ಜತೆಗೆ, ಚಿತ್ರದಲ್ಲಿ ರಶ್ಮಿಕಾ ಮಂದಣ್ಣ, ಅನಿಲ್ ಕಪೂರ್, ಬಾಬಿ ಡಿಯೋಲ್ ಮತ್ತು ಟ್ರಿಪ್ಟಿ ಡಿಮ್ರಿ ಪ್ರಮುಖ ಪಾತ್ರಗಳಲ್ಲಿದ್ದಾರೆ. ‘ಪಠಾಣ್’ ಮತ್ತು ‘ಗದರ್ 2’ ದಾಖಲೆಯನ್ನು ಹಿಂದಿಕ್ಕಿದೆ ಈ ಸಿನಿಮಾ. ‘ಅನಿಮಲ್‌’ ಬಿಡುಗಡೆಯಾದ ಎರಡು ದಿನಗಳಲ್ಲಿ 100 ಕೋಟಿ ಕ್ಲಬ್‌ಗೆ ಪ್ರವೇಶಿಸಿದ ಚಿತ್ರವಾಗಿ ಹೊರಹೊಮ್ಮಿದೆ.

ಇದನ್ನೂ ಓದಿ: Ranbir Kapoor: ಬುರ್ಜ್ ಖಲೀಫಾದಲ್ಲಿ ರಣಬೀರ್ ಕಪೂರ್ ಅಭಿನಯದ ʻಅನಿಮಲ್‌ʼ ಪ್ರಿವ್ಯೂ!

ವೈರಲ್‌ ವಿಡಿಯೊ

ವಿಕ್ಕಿ ಕೌಶಲ್ ಅವರ ‘ಸ್ಯಾಮ್ ಬಹದ್ದೂರ್’ ಜತೆಗೆ ಅನಿಮಲ್‌ ಬಿಡುಗಡೆಯಾಗಿದ್ರೂ ಕೂಡ ಜಯಭೇರಿ ಬಾರಿಸಿದೆ. ಈಗ, ಆರಂಭಿಕ ಅಂದಾಜಿನ ಪ್ರಕಾರ, ಎರಡನೇ ದಿನದಲ್ಲಿ ಚಿತ್ರ ಭಾರತದಲ್ಲಿ 63.80 ಕೋಟಿ ರೂ. ಗಳಿಸಿದೆ. ಹೀಗಾಗಿ ಒಟ್ಟು 129.80 ಕೋಟಿ ರೂ. ಎಂದು ವರದಿಯಾಗಿದೆ. ಇದಕ್ಕೂ ಮೊದಲು, ಚಲನಚಿತ್ರ ವಿಮರ್ಶಕ ಮತ್ತು ವ್ಯಾಪಾರ ವಿಶ್ಲೇಷಕ ತರಣ್ ಆದರ್ಶ್ ಕೂಡ ʻಅನಿಮಲ್‌ʼ ಸಿನಿಮಾ ರಣಬೀರ್ ಅವರ ವೃತ್ತಿಜೀವನದ ಅತಿದೊಡ್ಡ ಓಪನರ್ ಎಂದು ಭವಿಷ್ಯ ನುಡಿದಿದ್ದರು. ವಾರಾಂತ್ಯದಲ್ಲಿ, ಭಾರತದಲ್ಲಿ 150 ಕೋಟಿ ರೂಪಾಯಿಗಳ ಗಡಿಯನ್ನು ತಲುಪುವ ಮೂಲಕ ಚಿತ್ರದ ಕಲೆಕ್ಷನ್‌ ಹೆಚ್ಚಾಗಬಹುದು ಎಂದು ನಿರೀಕ್ಷಿಸಲಾಗಿದೆ. ’ಕಬೀರ್ ಸಿಂಗ್’ ನಂತರ ‘ಅನಿಮಲ್’ ಸಂದೀಪ್ ರೆಡ್ಡಿ ವಂಗಾ ಅವರ ಎರಡನೇ ಬಾಲಿವುಡ್ ಚಿತ್ರವಾಗಿದೆ.

Continue Reading

ಬಾಲಿವುಡ್

Animal Box Office: ಬಿಡುಗಡೆಯಾದ ಎರಡೇ ದಿನಕ್ಕೆ 100 ಕೋಟಿ ರೂ. ಕ್ಲಬ್‌ ಸೇರಿಯೇ ಬಿಟ್ಟಿತು; ‌ʻಅನಿಮಲ್‌ʼ ಕಮಾಲ್!

Animal Box Office: ‘ಪಠಾಣ್’ ಮತ್ತು ‘ಗದರ್ 2’ ದಾಖಲೆಯನ್ನು ಹಿಂದಿಕ್ಕಿದೆ ಈ ಸಿನಿಮಾ. ‘ಅನಿಮಲ್‌’ ಬಿಡುಗಡೆಯಾದ ಎರಡು ದಿನಗಳಲ್ಲಿ 100 ಕೋಟಿ ಕ್ಲಬ್‌ಗೆ ಪ್ರವೇಶಿಸಿದ ಚಿತ್ರವಾಗಿ ಹೊರಹೊಮ್ಮಿದೆ.

VISTARANEWS.COM


on

Ranbir Kapoor film animal crosses Rs 100 crore
Koo

ಬೆಂಗಳೂರು; ರಣಬೀರ್ ಕಪೂರ್-ರಶ್ಮಿಕಾ ಅಭಿನಯದ ‘ಅನಿಮಲ್‌’ ಸಿನಿಮಾ (Animal Box Office) ಬಾಕ್ಸ್ ಆಫೀಸ್ ಕಲೆಕ್ಷನ್‌ನಲ್ಲಿ ಬಿರುಗಾಳಿ ಎಬ್ಬಿಸಿದೆ. ಡಿಸೆಂಬರ್ 1ರಂದು ಥಿಯೇಟರ್‌ಗಳಲ್ಲಿ ಬಿಡುಗಡೆಯಾದ ಸಂದೀಪ್ ರೆಡ್ಡಿ ವಂಗಾ ನಿರ್ದೇಶನದ ಈ ಸಿನಿಮಾ ಭಾರತದಲ್ಲಿ 100 ಕೋಟಿ ರೂ. ಕ್ಲಬ್‌ ಪ್ರವೇಶಿಸಿದೆ. ರಣಬೀರ್ ಜತೆಗೆ, ಚಿತ್ರದಲ್ಲಿ ರಶ್ಮಿಕಾ ಮಂದಣ್ಣ, ಅನಿಲ್ ಕಪೂರ್, ಬಾಬಿ ಡಿಯೋಲ್ ಮತ್ತು ಟ್ರಿಪ್ಟಿ ಡಿಮ್ರಿ ಪ್ರಮುಖ ಪಾತ್ರಗಳಲ್ಲಿದ್ದಾರೆ. ‘ಪಠಾಣ್’ ಮತ್ತು ‘ಗದರ್ 2’ ದಾಖಲೆಯನ್ನು ಹಿಂದಿಕ್ಕಿದೆ ಈ ಸಿನಿಮಾ. ‘ಅನಿಮಲ್‌’ ಬಿಡುಗಡೆಯಾದ ಎರಡು ದಿನಗಳಲ್ಲಿ 100 ಕೋಟಿ ಕ್ಲಬ್‌ಗೆ ಪ್ರವೇಶಿಸಿದ ಚಿತ್ರವಾಗಿ ಹೊರಹೊಮ್ಮಿದೆ.

ವಿಕ್ಕಿ ಕೌಶಲ್ ಅವರ ‘ಸ್ಯಾಮ್ ಬಹದ್ದೂರ್’ ಜತೆಗೆ ಅನಿಮಲ್‌ ಬಿಡುಗಡೆಯಾಗಿದ್ರೂ ಕೂಡ ಜಯಭೇರಿ ಬಾರಿಸಿದೆ. ಈಗ, ಆರಂಭಿಕ ಅಂದಾಜಿನ ಪ್ರಕಾರ, ಎರಡನೇ ದಿನದಲ್ಲಿ ಚಿತ್ರ ಭಾರತದಲ್ಲಿ 63.80 ಕೋಟಿ ರೂ. ಗಳಿಸಿದೆ. ಹೀಗಾಗಿ ಒಟ್ಟು 129.80 ಕೋಟಿ ರೂ. ಎಂದು ವರದಿಯಾಗಿದೆ. ಇದಕ್ಕೂ ಮೊದಲು, ಚಲನಚಿತ್ರ ವಿಮರ್ಶಕ ಮತ್ತು ವ್ಯಾಪಾರ ವಿಶ್ಲೇಷಕ ತರಣ್ ಆದರ್ಶ್ ಕೂಡ ʻಅನಿಮಲ್‌ʼ ಸಿನಿಮಾ ರಣಬೀರ್ ಅವರ ವೃತ್ತಿಜೀವನದ ಅತಿದೊಡ್ಡ ಓಪನರ್ ಎಂದು ಭವಿಷ್ಯ ನುಡಿದಿದ್ದರು. ವಾರಾಂತ್ಯದಲ್ಲಿ, ಭಾರತದಲ್ಲಿ 150 ಕೋಟಿ ರೂಪಾಯಿಗಳ ಗಡಿಯನ್ನು ತಲುಪುವ ಮೂಲಕ ಚಿತ್ರದ ಕಲೆಕ್ಷನ್‌ ಹೆಚ್ಚಾಗಬಹುದು ಎಂದು ನಿರೀಕ್ಷಿಸಲಾಗಿದೆ.

ಇದನ್ನೂ ಓದಿ: Animal Box Office: ʻಅನಿಮಲ್‌ʼ ಸೀಕ್ವೆಲ್‌ ಬರೋದು ಕನ್‌ಫರ್ಮ್‌? ಮೊದಲ ದಿನವೇ ಭರ್ಜರಿ ಬ್ಯಾಟಿಂಗ್‌!

ಅನಿಮಲ್‌ ಸಿನಿಮಾದ ಟೀಸರ್‌ ಬಿಡುಗಡೆಯಾಗಿ ಭಾರಿ ಸದ್ದು ಮಾಡಿತ್ತು. ಜತೆಗೆ ನಟಿ ರಶ್ಮಿಕಾ ಮಂದಣ್ಣ ಕ್ಯಾರೆಕ್ಟರ್‌ ಪೋಸ್ಟರ್‌ ಕೂಡ ರಿಲೀಸ್‌ ಆಗಿತ್ತು. ಇದಕ್ಕೆ ನಟಿಯ ಫ್ಯಾನ್ಸ್‌ ಫಿದಾ ಆಗಿದ್ದರು. ಚಿತ್ರತಂಡ ʼಹುವಾ ಮೈನ್‌ʼ ಹಾಡನ್ನು (Animal song Hua Main) ಕೂಡ ರಿಲೀಸ್‌ ಮಾಡಿದೆ. ಈ ಹಾಡಿನಲ್ಲಿ ರಶ್ಮಿಕಾ-ರಣಬೀರ್ ಕಪೂರ್‌ ಲಿಪ್‌ ಲಾಕ್‌ ದೃಶ್ಯಗಳು ಹೆಚ್ಚಿವೆ. ಸಿನಿಮಾದಲ್ಲಿ ಪ್ರೈವೇಟ್ ಜೆಟ್, ಕುಟುಂಬಸ್ಥರ ಮುಂದೆ ಲಿಪ್‌ ಲಾಕ್‌ ಮಾಡಿರುವ ಸೀನ್‌ಗಳಿವೆ. ತೆಲುಗಿನ ʼಅರ್ಜುನ್‌ ರೆಡ್ಡಿʼ, ಹಿಂದಿಯ ʼಕಬೀರ್‌ ಸಿಂಗ್‌ʼ ಮುಂತಾದ ಚಿತ್ರಗಳನ್ನು ನಿರ್ದೇಶಿಸಿ ಗೆದ್ದ ಸಂದೀಪ್‌ ರೆಡ್ಡಿ ಹ್ಯಾಟ್ರಿಕ್‌ ಗೆಲುವಿನ ನಿರೀಕ್ಷೆಯಲ್ಲಿದ್ದಾರೆ. ’ಕಬೀರ್ ಸಿಂಗ್’ ನಂತರ ‘ಅನಿಮಲ್’ ಸಂದೀಪ್ ರೆಡ್ಡಿ ವಂಗಾ ಅವರ ಎರಡನೇ ಬಾಲಿವುಡ್ ಚಿತ್ರವಾಗಿದೆ.

Continue Reading

ಬಾಲಿವುಡ್

AR Rahman: ಪುಟಾಣಿ ಹುಡುಗಿಯ ಮಾತು ಕೇಳಿ ಎಆರ್ ರೆಹಮಾನ್ ಫಿದಾ; ಕೀಬೋರ್ಡ್ ಕೊಡುತ್ತೇನೆ ಎಂದ ಗಾಯಕ!

AR Rahman: ವಿಡಿಯೊದಲ್ಲಿ ರೆಹಮಾನ್ ಅವರು ‘ಹಮ್ಮಾ ಹಮ್ಮಾ’, ಸಾಂಗ್‌ ಅನ್ನು ಅಭಿಮಾನಿಗಳ ಜತೆ ಹಾಡುತ್ತಿದ್ದರು. ತಕ್ಷಣ ವೇದಿಕೆಯಲ್ಲಿ ತಮ್ಮ ಪಕ್ಕ ಕೂತಿದ್ದ ಪುಟಾನಿ ಹುಡುಗಿ ಕಡೆ ಮೈಕ್‌ ತಿರುಗಿಸಿದರು. ಆಕೆ ಕೂಡ ಖುಷಿಯಿಂದ ‘ಹಮ್ಮಾ ಹಮ್ಮಾ’,ಎಂದು ಹಾಡು ಹೇಳಿದ್ದಾಳೆ.

VISTARANEWS.COM


on

AR Rahman promises to gift keyboard to a young fan
Koo

ಬೆಂಗಳೂರು: ಆಸ್ಕರ್ ಪ್ರಶಸ್ತಿ ವಿಜೇತ ಸಂಯೋಜಕ ಎಆರ್ ರೆಹಮಾನ್ ಅವರು ಇತ್ತೀಚೆಗೆ ನವದೆಹಲಿಯಲ್ಲಿ ನಡೆದ ಕಥಾಕರ್ ಉತ್ಸವದಲ್ಲಿ ಭಾಗವಹಿಸಿದ್ದರು. ಈವೆಂಟ್‌ನಲ್ಲಿ, ಅವರ ಹಾಡುಗಳ ಕೆಲವು ಸಾಲುಗಳನ್ನು ಗುನುಗಲು ಅಭಿಮಾನಿಗಳ ಕಡೆಗೆ ಮೈಕ್‌ ತಿರುಗಿಸಿದರು. ಗಾಯಕ ಮೋಹಿತ್ ಚೌಹಾನ್ ಅವರೊಂದಿಗೆ ಪ್ಯಾನೆಲ್‌ನಲ್ಲಿ ಅತಿಥಿಯಾಗಿದ್ದ ರೆಹಮಾನ್ ‘ಹಮ್ಮಾ ಹಮ್ಮಾ’, ಹಾಡನ್ನು ಹಾಡಿದರು. ಅದೇ ವೇಳೆ ರೆಹಮಾನ್ ಮೈಕ್ ಅನ್ನು ಪುಟ್ಟ ಹುಡುಗಿ ಕಡೆಗೆ ತಿರುಗಿಸಿದಾಗ, ಹುಡುಗಿ ನಾಚಿಕೆಯಿಂದ ಹಾಡಲು ಮುಂದೆ ಬರಲಿಲ್ಲ. ಮಾತ್ರವಲ್ಲ ರೆಹಮಾನ್ ಅವರಿಗೆ ಆಕೆ, ʻನೀವು ಹಾಡಿದಾಗ ಸಂಗೀತ ಮಧುರವಾಗಿತ್ತು ಆದರೆ ನಾನು ಹಾಡಿದಾಗ ಆ ರೀತಿ ಸ್ವರ ಬಂದಿಲ್ಲʼʼ ಎಂದಿದ್ದಾಳೆ. ಈ ವೇಳೆ ರೆಹಮಾನ್ ಅವರು ಪುಟಾಣಿಗೆ ʻʻಪ್ರತಿದಿನ ನೀನು ಸಂಗೀತ ಅಭ್ಯಾಸ ಮಾಡು. ನಿನಗೆ ಕೀಬೋರ್ಡ್ ತಂದು ಕೊಡುತ್ತೇನೆʼʼ ಎಂದು ಹೇಳಿದ್ದಾರೆ. ಈ ವಿಡಿಯೊ ಇದೀಗ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದ್ದು, ರೆಹಮಾನ್ ಅವರ ಈ ನಡೆ ಬಗ್ಗೆ ಹಲವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ವಿಡಿಯೊದಲ್ಲಿ ರೆಹಮಾನ್ ಅವರು ‘ಹಮ್ಮಾ ಹಮ್ಮಾ’, ಸಾಂಗ್‌ ಅನ್ನು ಅಭಿಮಾನಿಗಳ ಜತೆ ಹಾಡುತ್ತಿದ್ದರು. ತಕ್ಷಣ ವೇದಿಕೆಯಲ್ಲಿ ತಮ್ಮ ಪಕ್ಕ ಕೂತಿದ್ದ ಪುಟಾನಿ ಹುಡುಗಿ ಕಡೆ ಮೈಕ್‌ ತಿರುಗಿಸಿದರು. ಆಕೆ ಕೂಡ ಖುಷಿಯಿಂದ ‘ಹಮ್ಮಾ ಹಮ್ಮಾ’, ಎಂದು ಹಾಡು ಹೇಳಿದ್ದಾಳೆ. ಇದಾದ ಬಳಿಕ ಏಕಾಏಕಿ ಹುಡುಗಿ ನಾಚಿಕೆ ಪಟ್ಟುಕೊಂಡು ರೆಹಮಾನ್ ಅವರಿಗೆ “ನೀವು ಹಾಡಿದಾಗ ಸಂಗೀತ ಮಧುರವಾಗಿತ್ತು ಆದರೆ ನಾನು ಹಾಡಿದಾಗ ಆ ರೀತಿ ಸ್ವರ ಬಂದಿಲ್ಲʼʼ ಎಂದಿದ್ದಾಳೆ. ಆಗ ರೆಹಮಾನ್, “ಇಲ್ಲ, ಇಲ್ಲ, ನನಗೆ 56 ವರ್ಷ, ಅಲ್ವಾ? ನೀನು ನನಗಿಂತ ಚೆನ್ನಾಗಿ ಹಾಡುತ್ತೀಯಾʼʼ ಎಂದು ಹೇಳುವ ಮೂಲಕ ಅವಳನ್ನು ಸಮಾಧಾನಪಡಿಸಲು ಪ್ರಯತ್ನಿಸಿದರು.

ಇದನ್ನೂ ಓದಿ: AR Rahman: 29 ಲಕ್ಷ ರೂ. ಪಡೆದು ಮೋಸ? ಮತ್ತೊಂದು ವಿವಾದದ ಸುಳಿಗೆ ಸಿಲುಕಿದ ಎ ಆರ್ ರೆಹಮಾನ್‌!

ವೈರಲ್‌ ವಿಡಿಯೊ

ಅದಕ್ಕೆ, ಹುಡುಗಿ “ಇದು ವಯಸ್ಸಿಗೆ ಸಂಬಂಧಿಸಿದ್ದಲ್ಲʼʼ ಎಂದಿದ್ದಾಳೆ. ಇದನ್ನು ರೆಹಮಾನ್ ಕೂಡ ಒಪ್ಪಿದರು. ರೆಹಮಾನ್‌ ಮಾತನಾಡಿ ʻʻಹೌದು, ನೀನು ಹೇಳಿದ್ದು ನಿಜ. ಸಂಗೀತವನ್ನು ಪ್ರತಿದಿನ ನೀನು ಅಭ್ಯಾಸ ಮಾಡಬೇಕು. ನಾನು ನಿನಗೆ ಕೀಬೋರ್ಡ್ ತರುತ್ತೇನೆ. ಮುಂದಿನ ವರ್ಷ, ನೀನು ಇಲ್ಲಿ ಹಾಡಬೇಕು” ಎಂದಿದ್ದಾರೆ. ಇದೀಗ ವಿಡಿಯೊ ವೈರಲ್‌ ಆಗುತ್ತಿದ್ದಂತೆ ʻʻಎಆರ್ ರೆಹಮಾನ್ ಸರ್ ಎಷ್ಟು ವಿನಮ್ರರು” ಎಂದು ಅಭಿಮಾನಿಗಳು ಬರೆದುಕೊಂಡಿದ್ದಾರೆ. ಮತ್ತೊಬ್ಬರು “ಸೋ ಕ್ಯೂಟ್ ಅಂಡ್ ಅಡೋರಬಲ್” ಎಂದು ಕಮೆಂಟ್ ಮಾಡಿದ್ದಾರೆ. “ಮ್ಯಾನ್ ಆಫ್ ಸಿಂಪ್ಲಿಸಿಟಿʼʼ ಎಂದು ಮತ್ತೊಬ್ಬರು ಬರೆದುಕೊಂಡಿದ್ದಾರೆ.

Continue Reading
Advertisement
Ishwar Sahu
ದೇಶ17 mins ago

ಮುಸ್ಲಿಮರಿಂದ ಹತ್ಯೆಗೀಡಾದ ಯುವಕನ ತಂದೆ 7 ಬಾರಿಯ ಕಾಂಗ್ರೆಸ್ ಶಾಸಕನನ್ನು ಸೋಲಿಸಿದರು!

Jyothi Reddy CEO of American Company
ಅಂಕಣ20 mins ago

Raja Marga Column : ಅನ್ನಕ್ಕಾಗಿ ಕಲ್ಲು ಒಡೆಯೋ ಕೆಲಸ ಮಾಡ್ತಿದ್ದ ಆಕೆ ಈಗ ಅಮೆರಿಕನ್‌ ಕಂಪನಿ ಸಿಇಓ!

Venkataramana Reddy
ದೇಶ49 mins ago

ತೆಲಂಗಾಣದಲ್ಲಿ ಹಾಲಿ, ಭಾವಿ ಸಿಎಂಗಳನ್ನೇ ಸೋಲಿಸಿದ ಬಿಜೆಪಿಯ ವೆಂಕಟರಮಣ ರೆಡ್ಡಿ; ಯಾರಿವರು?

Complaint to CM Siddaramaiah
ಕರ್ನಾಟಕ55 mins ago

Complaint to CM : ಸಿಎಂಗೆ ದೂರು ನೀಡಬೇಕೇ? ಈ ನಂಬರ್‌ಗೆ ಕರೆ ಮಾಡಿ!

women enjoying in rain
ಉಡುಪಿ1 hour ago

Karnataka Weather : ಮಳೆಯೊಂದಿಗೆ 30 ಕಿ.ಮೀ ವೇಗದಲ್ಲಿ ಬೀಸಲಿದೆ ಗಾಳಿ

Mizoram Election Result
ದೇಶ1 hour ago

Mizoram Election Result: ಮಿಜೋರಾಂ ಫಲಿತಾಂಶಕ್ಕೆ ಕ್ಷಣಗಣನೆ; ಯಾರಿಗೆ ಗೆಲುವು?

4 state election results shows us that, freebies are not the way for win elections
ದೇಶ2 hours ago

ವಿಸ್ತಾರ ಸಂಪಾದಕೀಯ: ವಿಧಾನಸಭೆ ಚುನಾವಣೆ ಫಲಿತಾಂಶ; ‘ಗ್ಯಾರಂಟಿ’ಯೇ ಅಂತಿಮವಲ್ಲ!

ead your daily horoscope predictions for december 4th 2023
ಪ್ರಮುಖ ಸುದ್ದಿ3 hours ago

Dina Bhavishya : ಇಂದು ಹೂಡಿಕೆ ಮಾಡಿದ್ರೆ ಈ ರಾಶಿಯವರಿಗೆ ಡಬಲ್‌ ಧಮಾಕಾ!

Sphoorti Salu
ಸುವಚನ3 hours ago

ಸುವಚನ, ಶುಭನುಡಿ, ಪಂಚಾಂಗ, ಓಂಕಾರದ ಸಂಗಮ

Mizoram Election Result will be announced on December 4, 2023
ದೇಶ7 hours ago

Mizoram Election Result: ಇಂದು ಮಿಜೋರಾಂ ಎಲೆಕ್ಷನ್ ರಿಸಲ್ಟ್; ಮತ ಎಣಿಕೆ ಒಂದು ದಿನ ಮುಂದೂಡಿದ್ದೇಕೆ?

Sharmitha Gowda in bikini
ಕಿರುತೆರೆ2 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

7th Pay Commission
ನೌಕರರ ಕಾರ್ನರ್1 year ago

7th Pay Commission | ಸದ್ಯವೇ 7ನೇ ವೇತನ ಆಯೋಗ ರಚಿಸಿ ಆದೇಶ; ಮುಖ್ಯಮಂತ್ರಿ ಭರವಸೆ

Kannada Serials
ಕಿರುತೆರೆ2 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

DCC Bank Recruitment 2023
ಉದ್ಯೋಗ10 months ago

DCC Bank Recruitment 2023 : ಬೆಂಗಳೂರು ಡಿಸಿಸಿ ಬ್ಯಾಂಕ್‌ನಲ್ಲಿ 96 ಹುದ್ದೆಗಳಿಗೆ ನೇಮಕ; ಆನ್‌ಲೈನ್‌ನಲ್ಲಿ ಅರ್ಜಿ ಆಹ್ವಾನ

Bigg Boss- Saregamapa 20 average TRP
ಕಿರುತೆರೆ2 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Karnataka bandh Majestic
ಕರ್ನಾಟಕ2 months ago

Bangalore Bandh Live: ಚರ್ಚಿಲ್ ಮಾತು ಉಲ್ಲೇಖಿಸಿ ಸಿಎಂಗೆ ಜಲಪಾಠ ಮಾಡಿದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ!

Rajendra Singh Gudha
ದೇಶ5 months ago

Rajasthan Minister: ಸೀತಾ ಮಾತೆ ಸುಂದರಿ! ಅದ್ಕೆ ರಾಮ, ರಾವಣ ಆಕೆ ಹಿಂದೆ ಬಿದ್ದಿದ್ದರು; ಕಾಂಗ್ರೆಸ್ ಸಚಿವ

kpsc recruitment 2023 pdo recruitment 2023
ಉದ್ಯೋಗ5 months ago

PDO Recruitment 2023 : 350+ ಪಿಡಿಒ ಹುದ್ದೆಗಳಿಗೆ ಈ ಬಾರಿ ಕೆಪಿಎಸ್‌ಸಿ ಮೂಲಕ ನೇಮಕ

Village Accountant Recruitment
ಉದ್ಯೋಗ10 months ago

Village Accountant Recruitment : ರಾಜ್ಯದಲ್ಲಿ 2007 ಗ್ರಾಮ ಲೆಕ್ಕಿಗರ ಹುದ್ದೆ ಖಾಲಿ; ಯಾವ ಜಿಲ್ಲೆಯಲ್ಲಿ ಎಷ್ಟು ಹುದ್ದೆಗಳಿವೆ ನೋಡಿ

Kannada Serials
ಕಿರುತೆರೆ2 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

ead your daily horoscope predictions for december 4th 2023
ಪ್ರಮುಖ ಸುದ್ದಿ3 hours ago

Dina Bhavishya : ಇಂದು ಹೂಡಿಕೆ ಮಾಡಿದ್ರೆ ಈ ರಾಶಿಯವರಿಗೆ ಡಬಲ್‌ ಧಮಾಕಾ!

Police call off protest FIR against lawyer who slapped police
ಕರ್ನಾಟಕ20 hours ago

Police Protest : ಪ್ರತಿಭಟನೆ ಕೈ ಬಿಟ್ಟ ಪೊಲೀಸರು; ಕಪಾಳಕ್ಕೆ ಹೊಡೆದ ವಕೀಲನ ಮೇಲೆ ಎಫ್‌ಐಆರ್‌

Dina Bhavihsya
ಪ್ರಮುಖ ಸುದ್ದಿ1 day ago

Dina Bhavishya : ಸಂಡೇ ಆದರೂ ಈ ರಾಶಿಯವರಿಗೆ ಟೆನ್ಷನ್‌ ತಪ್ಪಲ್ಲ! ಇವರಿಂದ ದೂರ ಇರಿ

Cockroaches bite baby born 2 days ago in vanivilas hospital
ಆರೋಗ್ಯ2 days ago

Vanivilas Hospital : 2 ದಿನಗಳ ಹಿಂದಷ್ಟೇ ಜನಿಸಿದ ಮಗುವನ್ನು ಕಚ್ಚಿ ಹಾಕಿದ ಜಿರಳೆಗಳು!

Dina Bhavishya
ಪ್ರಮುಖ ಸುದ್ದಿ2 days ago

Dina Bhavishya : ಯಾರನ್ನೂ ನಂಬಿ ಇನ್ವೆಸ್ಟ್ಮೆಂಟ್‌ ಮಾಡ್ಬೇಡಿ!

DK Shiakumar and MLA Munirathna
ಕರ್ನಾಟಕ3 days ago

DK Shivakumar : ಡಿಕೆಶಿಯನ್ನು ಗೇಟ್‌ ಒಳಗೇ ಬಿಟ್ಟಿಲ್ಲ, ಸಿಎಂ ಮಾಡುವಂತೆಯೂ ಹೇಳಿಲ್ಲವೆಂದ ಮುನಿರತ್ನ!

Tigre Found in Mysuru again Beware of this village
ಕರ್ನಾಟಕ3 days ago

Operation Tiger : ಮೈಸೂರಲ್ಲಿ ಮತ್ತೆ ಹುಲಿ ಕಾಟ; ಈ ಗ್ರಾಮದವರು ಹುಷಾರು!

Infosys Narayana Murthy and Congress Guarantee
ಕರ್ನಾಟಕ4 days ago

Congress Guarantee : ಯಾವುದನ್ನೂ ಪುಕ್ಕಟೆ ಕೊಡಬೇಡಿ; ‘ಗ್ಯಾರಂಟಿ’ಗೆ ನಾರಾಯಣ ಮೂರ್ತಿ ಆಕ್ಷೇಪ!

Justice for Ajay Protests against NIMHANS Hospital
ಆರೋಗ್ಯ4 days ago

Child Death : ಜಸ್ಟಿಸ್ ಫಾರ್ ಅಜಯ್; ಶುರುವಾಯ್ತು ನಿಮ್ಹಾನ್ಸ್‌ ವಿರುದ್ಧ ಪ್ರತಿಭಟನೆ

Dina Bhavishya
ಪ್ರಮುಖ ಸುದ್ದಿ5 days ago

Dina Bhavishya : ಯಾರಾದರೂ ಕಾಳಜಿ ತೋರಿದರೆ ಈ ರಾಶಿಯವರು ನೆಗ್ಲೆಕ್ಟ್‌ ಮಾಡ್ಬೇಡಿ!

ಟ್ರೆಂಡಿಂಗ್‌