ಬೆಂಗಳೂರು: ಬಾಲಿವುಡ್‌ನ ಪವರ್-ಪ್ಯಾಕ್ಡ್ ಜೋಡಿಗಳಾದ ಅಕ್ಷಯ್ ಕುಮಾರ್ (Akshay Kumar) ಮತ್ತು ಟೈಗರ್ ಶ್ರಾಫ್ ನಟನೆಯ `ಬಡೇ ಮಿಯಾ ಚೋಟೆ ಮಿಯಾ‘ (bade miyan chote miyan) ಸಿನಿಮಾದ ಎರಡನೇ ದಿನದ ಬಾಕ್ಸ್ ಆಫೀಸ್ ಕಲೆಕ್ಷನ್‌ನಲ್ಲಿ ಭಾರಿ ಕುಸಿತ ಕಂಡಿದೆ. ‘ಬಡೆ ಮಿಯಾ ಚೋಟೆ ಮಿಯಾ’ ಸಿನಿಮಾದ ಎರಡನೇ ದಿನದ ಗಳಿಕೆ ಒಂದಂಕಿಗೆ ಇಳಿದಿದೆ. ಮೊದಲ ದಿನ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ದೇಶೀಯ ಗಲ್ಲಾಪೆಟ್ಟಿಗೆಯಲ್ಲಿ 15.50 ಕೋಟಿ ರೂ. ನಿವ್ವಳ ಆದಾಯ ಗಳಿಸಿತ್ತು. ಆದರೆ ಎರಡನೇ ದಿನ ಕೇವಲ 7 ಕೋಟಿ ರೂ. ಗಳಿಕೆ ಕಂಡಿದೆ ಎಂದು ಅಂದಾಜಿಸಲಾಗಿದೆ. ಒಟ್ಟಾರೆಯಾಗಿ ಥಿಯೇಟರ್‌ಗಳಲ್ಲಿ ಶೇ. 15.54ರಷ್ಟು ಆಕ್ಯುಪೆನ್ಸೀ ಹೊಂದಿದೆ ಎಂದು ವರದಿಯಾಗಿದೆ.
ಈ ಮೂಲಕ `ಬಡೇ ಮಿಯಾ ಚೋಟೆ ಮಿಯಾ’ ಎರಡು ದಿನಗಳ ನಿವ್ವಳ ಕಲೆಕ್ಷನ್ 22.65 ಕೋಟಿ ರೂ. ಆಗಿದೆ. ಮೊದಲ ದಿನ ‘ಬಡೇ ಮಿಯಾ ಚೋಟೆ ಮಿಯಾ’ ಸಿನಿಮಾ 15.65 ಕೋಟಿ ರೂಪಾಯಿ ಗಳಿಕೆ ಮಾಡಿತ್ತು. ಎರಡನೇ ದಿನ ಅಂದರೆ ಶುಕ್ರವಾರ (ಏಪ್ರಿಲ್ 12) ಕೇವಲ 7 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಈ ಮೂಲಕ 22.65 ಕೋಟಿ ರೂಪಾಯಿ ಗಳಿಕೆ ಆಗಿದೆ. ಏಪ್ರಿಲ್ 13 ಹಾಗೂ ಏಪ್ರಿಲ್ 14ರಂದು ಸಿನಿಮಾ ದೊಡ್ಡ ಮೊತ್ತ ಕಲೆಕ್ಷನ್ ಮಾಡಿದರೂ ಸೋಮವಾರದಿಂದ ಕಲೆಕ್ಷನ್ ಕಡಿಮೆ ಆಗಲಿದೆ.
ಇದನ್ನೂ ಓದಿ: Akshay Kumar: ಅಕ್ಷಯ್ ಕುಮಾರ್ ಪಡೆದ ಮೊದಲ ಸಂಭಾವನೆ ಎಷ್ಟು ಗೊತ್ತೇ?
ಏ.12ರಂದು ಬೆಳಗಿನ ಪ್ರದರ್ಶನಗಳು ಶೇಕಡಾ 8.41ರಷ್ಟು ಆಕ್ಯುಪೆನ್ಸಿಯನ್ನು ಇತ್ತು. ಮಧ್ಯಾಹ್ನದ ನಂತರ ಶೇ. 15.07ರಷ್ಟು ಆಕ್ಯುಪೆನ್ಸಿ , ರಾತ್ರಿ ಶೇ.20ರಷ್ಟು ಆಕ್ಯುಪೆನ್ಸಿ ಇತ್ತು ಎಂದು ವರದಿಯಾಗಿದೆ.
ಈ ಸಿನಿಮಾವನ್ನು ಮುಂಬೈ, ಲಂಡನ್, ಅಬುಧಾಬಿ, ಸ್ಕಾಟ್ಲೆಂಡ್ ಮತ್ತು ಜೋರ್ಡಾನ್ ಸ್ಥಳಗಳಲ್ಲಿ ಸಿನಿಮಾವನ್ನು ಚಿತ್ರೀಕರಿಸಲಾಗಿತ್ತು. ಹಾಲಿವುಡ್ ರೇಂಜ್‌ಗೆ ದೊಡ್ಡ ಬಜೆಟ್ ನಲ್ಲಿ `ಬಡೇ ಮಿಯಾ ಚೋಟೆ ಮಿಯಾ’ ಚಿತ್ರ ನಿರ್ಮಿಸಲಾಗಿದೆ. ಅಲಿ ಅಬ್ಬಾಸ್ ಝಫರ್ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದು, ವಶು ಭಗ್ನಾನಿ, ದೀಪಿಕ್ಷಾ ದೇಶಮುಖ್, ಜಾಕಿ ಭಗ್ನಾನಿ, ಹಿಮಾಂಶು ಕಿಶನ್ ಮೆಹ್ರಾ, ಅಲಿ ಅಬ್ಬಾಸ್ ಜಾಫರ್ ಚಿತ್ರ ನಿರ್ಮಾಣ ಮಾಡಿದ್ದಾರೆ.
ವಶು ಭಗ್ನಾನಿ ಮತ್ತು ಪೂಜಾ ಎಂಟರ್‌ಟೇನ್‌ಮೆಂಟ್ AAZ ಫಿಲಮ್ಸ್ ಸಹಯೋಗದಡಿ ‘ಬಡೇ ಮಿಯಾನ್ ಚೋಟೆ ಮಿಯಾನ್’ ಚಿತ್ರವನ್ನು ಪ್ರಸ್ತುತಪಡಿಸಿದ್ದಾರೆ.