Site icon Vistara News

Akshay Kumar: ಅಬುಧಾಬಿಯಲ್ಲಿ ಹಿಂದೂ ದೇವಾಲಯ: ಫೋಟೊ ಹಂಚಿಕೊಂಡ ಅಕ್ಷಯ್ ಕುಮಾರ್!

Akshay Kumar feels 'blessed' to be part of BAPS temple inauguration

ಬೆಂಗಳೂರು: ಯುಎಇ (UAE) ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಅಬುಧಾಬಿಯಲ್ಲಿ ಫೆಬ್ರವರಿ 14 ರಂದು (Abu Dhabi Hindu Temple) ನಿರ್ಮಾಣ ಮಾಡಲಾಗಿರುವ ಬಿಎಪಿಎಸ್ ಹಿಂದೂ ದೇವಾಲಯವನ್ನು (Akshay Kumar) ಉದ್ಘಾಟಿಸಿದರು. ಇದು ಯುಎಇ ದೇಶದ ಮೊದಲ ಹಿಂದೂ ದೇಗುಲವಾಗಿದೆ(UAE Temple Inauguration). ಅಬುಧಾಬಿಯಲ್ಲಿಯ ಭವ್ಯವಾದ BAPS ಮಂದಿರ ಉದ್ಘಾಟನೆಯಲ್ಲಿ ಅಕ್ಷಯ್ ಕುಮಾರ್ ಮತ್ತು ಇತರ ತಾರೆಯರು ಭಾಗವಹಿಸಿದ್ದರು. ಅಕ್ಷಯ್ ಅವರು ಇನ್‌ಸ್ಟಾದಲ್ಲಿ ಈ ಬಗ್ಗೆ ಪೋಸ್ಟ್‌ ಹಂಚಿಕೊಂಡಿದ್ದಾರೆ. ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿದ ತಮ್ಮ ದಿವ್ಯ ಅನುಭವವನ್ನು ಹಂಚಿಕೊಂಡಿದ್ದಾರೆ.

ಅಕ್ಷಯ್ ಕುಮಾರ್, ವಿವೇಕ್ ಒಬೆರಾಯ್, ಶಂಕರ್ ಮಹಾದೇವನ್ ಮತ್ತು ದಿಲೀಪ್ ಜೋಶಿ ಸೇರಿದಂತೆ ಇತರರು ಅಬುಧಾಬಿಯಲ್ಲಿ ನಡೆದ ಬೋಚಸನ್ವಾಸಿ ಅಕ್ಷರ ಪುರುಷೋತ್ತಮ್ ಸ್ವಾಮಿನಾರಾಯಣ ಸಂಸ್ಥಾ ದೇವಸ್ಥಾನದ (BAPS) ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿದ್ದರು. ಅಕ್ಷಯ್ ಅವರು ಇನ್‌ಸ್ಟಾದಲ್ಲಿ ದೇವಾಲಯದ ಫೋಟೊವನ್ನು ಹಂಚಿಕೊಂಡಿದ್ದಾರೆ. “ಅಬುಧಾಬಿಯಲ್ಲಿ BAPS ಸ್ವಾಮಿನಾರಾಯಣ ದೇವಸ್ಥಾನದ ಉದ್ಘಾಟನೆಗೆ ಭಾಗಿಯಾಗಿದ್ದಕ್ಕೆ ನಾನು ಧನ್ಯ. ಎಂಥ ಐತಿಹಾಸಿಕ ಕ್ಷಣ’ ಎಂದು ಅಕ್ಷಯ್​ ಕುಮಾರ್​ ಅವರು ಬರೆದುಕೊಂಡಿದ್ದಾರೆ. 

ಈ ಫೋಟೊ ಗಾಜಿನಲ್ಲಿ ಅಕ್ಷಯ್​ ಕುಮಾರ್​ ಅವರ ಪ್ರತಿಬಿಂಬ ಕಾಣಿಸಿದೆ. ಅದನ್ನು ನೋಡಿ ಫ್ಯಾನ್ಸ್​ ಕಮೆಂಟ್​ ಮಾಡಿದ್ದಾರೆ. ‘ಇದನ್ನು ನಾನು ಕನಸಿನಲ್ಲಷ್ಟೇ ಕಾಣಬಹುದು. ಆ ಕನಸು ಈಗ ನನಸಾಗಿದೆ. ಇಲ್ಲಿ ಒಂದು ಸುಂದರವಾದ ಮಂದಿರ ನಿರ್ಮಾಣ ಆಗಿದೆ. ಅದು ಪ್ರಧಾನ ಮಂತ್ರಿಗಳಿಂದ ಉದ್ಘಾಟನೆ ಆಗಿದೆ. ನಮ್ಮ ಸಂಸ್ಕೃತಿಯ ಜೊತೆ ಯುಎಇ ಸರ್ಕಾರ ಕೈ ಜೋಡಿಸಿರುವುದು ಗ್ರೇಟ್​’ ಎಂದು ಶಂಕರ್​ ಮಹದೇವನ್​ ಹೇಳಿದ್ದಾರೆ.

ರಾಜಸ್ಥಾನದ ಮಾರ್ಬಲ್‌ಗಳು, ಅಮೃತಶಿಲೆ ಹಾಗೂ ಪಿಂಕ್‌ ಸ್ಯಾಂಡ್‌ಸ್ಟೋನ್‌ಗಳನ್ನು ಬಳಸಿ ದೇವಾಲಯವನ್ನು ನಿರ್ಮಿಸಲಾಗಿದೆ. ಮೂರ್ತಿ, ಗೋಪುರ, ಕಲಾಕೃತಿಗಳಿಗೂ ಇದೇ ಶಿಲೆಗಳನ್ನು ಬಳಸಲಾಗಿದೆ. ಪ್ರತಿಯೊಂದು ಶಿಖರದ ಕೆತ್ತನೆಯು ರಾಮಾಯಣ, ಶಿವಪುರಾಣ, ಭಾಗವತಂ ಹಾಗೂ ಮಹಾಭಾರತದಿಂದ ಸ್ಫೂರ್ತಿ ಪಡೆದಿದೆ. ರಾಜಸ್ಥಾನದಿಂದ ಅಮೃತಶಿಲೆಗಳು, ಪಿಂಕ್‌ ಸ್ಯಾಂಡ್‌ಸ್ಟೋನ್‌ಗಳನ್ನು ಯುಎಇಗೆ ಕಳುಹಿಸಲಾಗಿದೆ. ದೇವಾಲಯದಲ್ಲಿ ಎರಡು ಶಿಖರ, 12 ಗೋಪುರಗಳಿವೆ. ಎಲ್ಲ ಕಲಾಕೃತಿಗಳ ಹಿಂದೆಯೂ ರಾಜಸ್ಥಾನ ಕಲಾವಿದರ ಕೈಚಳಕವಿದೆ.

ಇದನ್ನೂ ಓದಿ: Akshay Kumar: ರಿಷಿ ಸುನಕ್ ಜತೆ ದೀಪಾವಳಿ ಆಚರಿಸಿದ ಅಕ್ಷಯ್ ಕುಮಾರ್, ಟ್ವಿಂಕಲ್, ಪ್ರೀತಿ ಜಿಂಟಾ

ಹಿಂದೂ ದೇವಾಲಯ ನಿರ್ಮಾಣದ ಕುರಿತು ಪ್ರಸ್ತಾಪ ಮಾಡಿದ್ದನ್ನು ನರೇಂದ್ರ ಮೋದಿ ಅವರು ಸ್ಮರಿಸಿದ್ದಾರೆ. “2015ರಲ್ಲಿ ನಾನು ಯುಎಇಗೆ ಭೇಟಿ ನೀಡಿದ್ದೆ. ಆಗ, ಹಿಂದೂ ದೇವಾಲಯ ನಿರ್ಮಾಣ ಪ್ರಸ್ತಾಪವನ್ನು ಯುಇಎ ಅಧ್ಯಕ್ಷರ ಮುಂದಿಟ್ಟಾಗ, ಮರುಕ್ಷಣವೇ ಅವರು ಒಪ್ಪಿಗೆ ಸೂಚಿಸಿದರು. ಪರಿಣಾಮ, ಅಬುಧಾಬಿಯ 27 ಎಕರೆ ಭೂಮಿಯಲ್ಲಿ ಈಗ ದೇವಾಲಯ ನಿರ್ಮಾಣವಾಗಿದೆ. ಅದನ್ನು ಉದ್ಘಾಟಿಸುವ ಸೌಭಾಗ್ಯ ನನಗೆ ದೊರೆತಿದೆ” ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ (ಫೆಬ್ರವರಿ 13) ಹೇಳಿದ್ದಾರೆ.

Exit mobile version