Site icon Vistara News

Akshay Kumar: ಜೈನ ಸನ್ಯಾಸಿಯ 180 ದಿನಗಳ ಉಪವಾಸ ಬ್ರೇಕ್‌ ಮಾಡಿದ ಅಕ್ಷಯ್ ಕುಮಾರ್!

Akshay Kumar first meal to Shri Hansratna Surishwarji

ಬೆಂಗಳೂರು: ಬಾಲಿವುಡ್ ಸೂಪರ್‌ಸ್ಟಾರ್ ಅಕ್ಷಯ್ ಕುಮಾರ್ (Akshay Kumar) ಅವರು ಮಾರ್ಚ್ 31ರಂದು ಮುಂಬೈನ NSCIನಲ್ಲಿ (NSCI, Mumbai) 180 ದಿನಗಳ ಕಾಲ ಉಪವಾಸವನ್ನು ಪೂರ್ಣಗೊಳಿಸಿದ ಜೈನ ಸನ್ಯಾಸಿ ಶ್ರೀ ಹಂಸರತ್ನ ಸೂರಿಶ್ವರ್ಜಿ (Shri Hansratna Surishwarji) ಅವರಿಗೆ ʻಭೋಗ್ʼ (ಊಟ) (honor of offering bhog) ಅರ್ಪಿಸಿದ್ದಾರೆ. ಅಕ್ಷಯ್‌ ಕುಮಾರ್ ಅವರು ಈ ವಿಶೇಷ ಸಮಾರಂಭದಲ್ಲಿ ಭಾಗವಹಿಸಿದ್ದರು. ಬಿಳಿ ಕುರ್ತಾವನ್ನು ಧರಿಸಿದ್ದರು ಅಕ್ಷಯ್ ಕುಮಾರ್.

ಶ್ರೀ ಹಂಸರತ್ನ ಸೂರಿಶ್ವರ್ಜಿ ಅವರು ಈ ಸುದೀರ್ಘ ಉಪವಾಸವನ್ನು ಏಳನೇ ಬಾರಿ ನಡೆಸಿದ ಏಕೈಕ ಸನ್ಯಾಸಿಯಾಗಿದ್ದಾರೆ. ಇವರು 180 ದಿನಗಳ ಕಾಲ ನೀರನ್ನು ಮಾತ್ರ ಸೇವನೆ ಮಾಡಿದ್ದರು. ಇದೀಗ ಜೈನ ಸನ್ಯಾಸಿ ಅವರಿಗೆ ಊಟ ಅರ್ಪಿಸಿದ ಅವಕಾಶ ಅಕ್ಷಯ್‌ ಕುಮಾರ್‌ಗೆ ಸಿಕ್ಕಿದೆ. ಜೈನ ಧರ್ಮಗ್ರಂಥಗಳ ಪ್ರಕಾರ, ಭಗವಾನ್ ಮಹಾವೀರರು ಅಹಿಂಸೆಯೊಂದಿಗೆ ಶಾಂತಿಯನ್ನು ಉತ್ತೇಜಿಸಲು ಎರಡು ಬಾರಿ 180 ದಿನಗಳ ಉಪವಾಸ ಮಾಡುತ್ತಾರೆ. ಹಂಸರತ್ನ ಸ್ವಾಮಿ ಜೈನ ಇತಿಹಾಸದಲ್ಲಿ 180 ದಿನಗಳ ಉಪವಾಸ ಮಾಡಿದ 12 ಜನರಲ್ಲಿ ಒಬ್ಬರು.

ಅಕ್ಷಯ್ ಕುಮಾರ್ ಈ ರೀತಿಯ ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದು ಇದೇನು ಮೊದಲನೇನಲ್ಲ. ಹಲವು ಸಂಪ್ರದಾಯಗಳ ಗೌರವಕ್ಕೆ ಸಾಕ್ಷಿಯಾಗಿದ್ದಾರೆ. ಶ್ರೀ ಹಂಸರತ್ನ ಸೂರೀಶ್ವರ್ಜಿ ಅವರ ಜತೆ ನಟ ಮಾತುಕತೆ ನಡೆಸಿರುವ ವಿಡಿಯೊ ಕೂಡ ವೈರಲ್‌ ಆಗಿದೆ.

ಇದನ್ನೂ ಓದಿ: Crew Vs Aadujeevitham: ‘ಆಡುಜೀವಿತಂ’,ʻಕ್ರ್ಯೂʻ ಸಿನಿಮಾ ನಡುವೆ ಭಾರಿ ಪೈಪೋಟಿ! ಗಳಿಸಿದ್ದೆಷ್ಟು?

ಇದನ್ನೂ ಓದಿ: Akshay Kumar: ಪವರ್-ಪ್ಯಾಕ್ಡ್ ಜೋಡಿಯ ‘ಬಡೇ ಮಿಯಾನ್ ಚೋಟೆ ಮಿಯಾನ್’ ಟೈಟಲ್ ಟ್ರ್ಯಾಕ್ ರಿಲೀಸ್!

ಅಕ್ಷಯ್ ಕುಮಾರ್‌ ಸಿನಿಮಾದಲ್ಲಿಯೂ ಬ್ಯುಸಿಯಾಗಿದ್ದಾರೆ. ಟೈಗರ್ ಶ್ರಾಫ್, ಸೋನಾಕ್ಷಿ ಸಿನ್ಹಾ, ಅಲೆಯ ಎಫ್ ಮತ್ತು ಪೃಥ್ವಿರಾಜ್ ಸುಕುಮಾರನ್ ಅವರೊಂದಿಗೆ ‘ಬಡೆ ಮಿಯಾನ್ ಚೋಟೆ ಮಿಯಾನ್’ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅಲಿ ಅಬ್ಬಾಸ್ ಜಾಫರ್ ಅವರ ನಿರ್ದೇಶನದ ಈ ಚಿತ್ರ 2024ರ ಈದ್ ಸಂದರ್ಭದಲ್ಲಿ ಥಿಯೇಟರ್‌ಗಳಿಗೆ ಬರಲು ಸಿದ್ಧವಾಗಿದೆ. ಮುಂಬೈ, ಲಂಡನ್, ಅಬುಧಾಬಿ, ಸ್ಕಾಟ್‌ಲ್ಯಾಂಡ್ ಮತ್ತು ಜೋರ್ಡಾನ್‌ನಂತಹ ಸ್ಥಳಗಳಲ್ಲಿ ಚಿತ್ರೀಕರಿಸಲಾಗಿದೆ. ಈ ಪ್ಯಾನ್-ಇಂಡಿಯಾ ಸಿನಿಮಾ ಹಾಲಿವುಡ್ ಶೈಲಿಯ ದೃಶ್ಯಗಳನ್ನೂ ಒಳಗೊಂಡಿದೆ.

ಇದರ ಜತೆಗೆ ‘ಹೌಸ್‌ಫುಲ್ ”ಸೂರರೈ ಪೊಟ್ರು’ ಹಿಂದಿ ರಿಮೇಕ್ ‘ಸರ್ಫಿರಾ’ , ‘ವೆಲ್‌ಕಮ್ ಟು ದಿ ಜಂಗಲ್’, ‘ಸಿಂಗಮ್ ಅಗೇನ್’, ‘ಸ್ಕೈ ಫೋರ್ಸ್’, ‘ವೇದತ್ ಮರಾಠೆ ವೀರ್ ದೌಡ್ಲೆ ಸಾತ್’ ಎನ್ನುವ ಮರಾಠಿ ಸಿನಿಮಾ ಹೀಗೆ ಹಲವಾರು ಸಿನಿಮಾಗಳು ಅವರ ಕೈಯಲ್ಲಿವೆ. ವೇದತ್ ಮರಾಠೆ ವೀರ್ ದೌಡ್ಲೆ ಸಾತ್ ಚಿತ್ರದಲ್ಲಿ ಅಕ್ಷಯ್‌ ಕುಮಾರ್ ಛತ್ರಪತಿ ಶಿವಾಜಿ ಪಾತ್ರವನ್ನು ನಿರ್ವಹಿಸಿದ್ದಾರೆ. ʻ ‘ದಿ ಅನ್‌ಟೋಲ್ಡ್ ಸ್ಟೋರಿ ಆಫ್ ಸಿ ಶಂಕರನ್ ನಾಯರ್’ ಮತ್ತು ‘ಹೇರಾ ಫೇರಿ 3ʼ ಸಿನಿಮಾಗಳನ್ನೂ ಹೊಂದಿದ್ದಾರೆ.

ಅಕ್ಷಯ್ ಇತ್ತೀಚೆಗೆ ತಾಪ್ಸಿ ಪನ್ನು ಮತ್ತು ವಾಣಿ ಕಪೂರ್ ಜತೆಯಲ್ಲಿ ನಟಿಸಿರುವ ‘ಖೇಲ್ ಖೇಲ್ ಮೇ’ ಚಿತ್ರದ ಚಿತ್ರೀಕರಣವನ್ನು ಪೂರ್ಣಗೊಳಿಸಿದರು. ಈ ಚಲನಚಿತ್ರವನ್ನು ಮುದಸ್ಸರ್ ಅಜೀಜ್ ಬರೆದು ನಿರ್ದೇಶಿಸಿದ್ದಾರೆ.

Exit mobile version