ಬೆಂಗಳೂರು: ಅಕ್ಷಯ್ ಕುಮಾರ್ (Akshay Kumar) ಮತ್ತು ಟೈಗರ್ ಶ್ರಾಫ್ ಅವರ ಮುಂಬರುವ ಚಿತ್ರ `ಬಡೇ ಮಿಂಯಾ ಚೋಟೆ ಮಿಂಯಾ’ (Bade Miyan Chote Miyan) ಬಿಡುಗಡೆಗೆ ಸಜ್ಜಾಗುತ್ತಿದೆ. ಇತ್ತೀಚೆಗೆ ಪಾಡ್‌ಕಾಸ್ಟ್‌ನಲ್ಲಿ ಅಕ್ಷಯ್ ಕುಮಾರ್ ಹಲವಾರು ವಿಚಾರಗಳನ್ನು ಮತ್ತು ಸಿನಿ ಅಪ್‌ಡೇಟ್‌ಗಳನ್ನು ನೀಡಿದರು. ಅಕ್ಷಯ್ ಕುಮಾರ್ ಮುಂಬರುವ ವರ್ಷಗಳಲ್ಲಿ ʻವೆಲ್‌ಕಮ್ 3ʼ, ʻಹೌಸ್‌ಫುಲ್ 5ʼ ಮತ್ತು ʻಹೇರಾ ಫೆರಿ 4ʼ (Hera Pheri 4)ನಂತಹ ಸಿನಿಮಾಗಳ ಜತೆ ಕಮ್‌ಬ್ಯಾಕ್ ಆಗಲಿದ್ದೇನೆ ಎಂದು ಹೇಳಿಕೊಂಡಿದ್ದಾರೆ.
ಬಾಲಿವುಡ್‌ನಲ್ಲಿ ಕಾಮಿಡಿ ಚಿತ್ರಗಳ ಕೊರತೆಯ ಬಗ್ಗೆ ಅಕ್ಷಯ್ ಕುಮಾರ್ ಮಾತನಾಡಿ ʻʻಹಲವಾರು ಕಾಮಿಡಿ ಚಿತ್ರಗಳು ಬರುತ್ತಿವೆ. ಎರಡು ಮೂರು ಕಾಮಿಡಿ ಸಿನಿಮಾಗಳನ್ನು ನಾನೇ ಮಾಡಿದ್ದೇನೆ. ಹೌಸ್‌ಫುಲ್ ಕೂಡ ಕಂಡಿವೆ. ಇನ್ನು ಮುಂಬರುವ ದಿನಗಳಲ್ಲಿ ಮತ್ತೆ ಸಿನಿಮಾ ನೀಡಲಿದ್ದೇನೆʼʼ ಎಂದು ಹೇಳಿದರು. ಈ ವಿಡಿಯೊ ವೈರಲ್ ಆಗುತ್ತಿದ್ದಂತೆ ʻಹೇರಾ ಫೆರಿ 4ʼ ಸೆಟ್ಟೇರುವುದು ಪಕ್ಕಾ ಎಂದು ಫ್ಯಾನ್ಸ್ ಕಮೆಂಟ್ ಮಾಡುತ್ತಿದ್ದಾರೆ.
ಬಾಲಿವುಡ್‌ನ ಹೆಸರಾಂತ ಸಿನಿಮಾ ʻಹೇರಾ ಫೇರಿʼ ಸಿನಿಮಾ. 2000ನೇ ಇಸವಿಯಲ್ಲಿ ಹಾಸ್ಯ ಭರಿತ ‘ಹೇರಾ ಫೇರಿ’ ಸಿನಿಮಾದ ಮೊದಲನೇ ಭಾಗ ಬಿಡುಗಡೆಯಾಗಿತ್ತು. ಪ್ರಮುಖವಾಗಿಯೂ ಪರೇಶ್, ಅಕ್ಷಯ್ ಹಾಗೂ ಸುನಿಲ್ ಅವರ ಅಭಿನಯ ಜನಮನ್ನಣೆಗೆ ಪಾತ್ರವಾಯಿತು. 2006ರಲ್ಲಿ ‘ಫಿರ್ ಹೇರಾ ಫೇರಿ’ ಎಂಬ ಹೆಸರಿನಲ್ಲಿ ಎರಡನೇ ಭಾಗ ಬಿಡುಗಡೆಯಾಗಿತ್ತು. 2000ರಲ್ಲಿ ತೆರೆ ಕಂಡ ಸಿನಿಮಾವನ್ನು ಪ್ರಿಯದರ್ಶನ್ ನಿರ್ದೇಶಿಸಿದರು. ಇದು 1989ರ ಮಲಯಾಳಂ ಚಿತ್ರ “ರಾಮ್‌ಜಿ ರಾವ್ ಸ್ಪೀಕಿಂಗ್ʼನ ರಿಮೇಕ್ ಆಗಿತ್ತು.
ಇದನ್ನೂ ಓದಿ: Akshay Kumar: ಜೈನ ಸನ್ಯಾಸಿಯ 180 ದಿನಗಳ ಉಪವಾಸ ಬ್ರೇಕ್ ಮಾಡಿದ ಅಕ್ಷಯ್ ಕುಮಾರ್!
ʼಹೇರಾ ಫೆರಿ 4ʼ ಅನ್ನು ಫರ್ಹಾದ್ ಸಾಮ್ಜಿ ನಿರ್ದೇಶಿಸಲಿದ್ದಾರೆ. ಅಕ್ಷಯ್ ಕುಮಾರ್, ಪರೇಶ್ ರಾವಲ್ ಮತ್ತು ಸುನೀಲ್ ಶೆಟ್ಟಿ ಅವರ ಮೂಲ ಪಾತ್ರದ ಜತೆಗೆ , ಈ ಚಿತ್ರದಲ್ಲಿ ಸಂಜಯ್ ದತ್ ಕೂಡ ಪ್ರಮುಖ ಪಾತ್ರದಲ್ಲಿ ನಟಿಸಲಿದ್ದಾರೆ ಎಂದು ವರದಿಯಾಗಿದೆ.
ಇದನ್ನೂ ಓದಿ: Akshay Kumar: ಜೈನ ಸನ್ಯಾಸಿಯ 180 ದಿನಗಳ ಉಪವಾಸ ಬ್ರೇಕ್ ಮಾಡಿದ ಅಕ್ಷಯ್ ಕುಮಾರ್!
ಬಾಲಿವುಡ್‌ನ ಪವರ್-ಪ್ಯಾಕ್ಡ್ ಜೋಡಿಗಳಾದ ಅಕ್ಷಯ್ ಕುಮಾರ್ ಮತ್ತು ಟೈಗರ್ ಶ್ರಾಫ್ ನಟನೆಯ ‘ಬಡೇ ಮಿಂಯಾ ಚೋಟೆ ಮಿಂಯಾ’ (Bade miyan chote miyan) ಸಿನಿಮಾ ಏಪ್ರಿಲ್ 10ರಂದು ತೆರೆ ಕಾಣುತ್ತಿದೆ. ವಶು ಭಗ್ನಾನಿ ಮತ್ತು ಪೂಜಾ ಎಂಟರ್‌ಟೇನ್‌ಮೆಂಟ್ AAZ ಫಿಲಮ್ಸ್ ಸಹಯೋಗದಡಿ ‘ಬಡೇ ಮಿಂಯಾ ಚೋಟೆ ಮಿಂಯಾ’ ಚಿತ್ರವನ್ನು ಪ್ರಸ್ತುತಪಡಿಸುತ್ತಿದ್ದಾರೆ. ಅಕ್ಷಯ್ ಕುಮಾರ್ ಹಾಗೂ ಟೈಗರ್ ಶ್ರಾಫ್ ನಾಯಕರಾಗಿ ನಟಿಸಿದ್ದು, ಖಳನಾಯಕನಾಗಿ ಪೃಥ್ವಿರಾಜ್ ಸುಕುಮಾರನ್ ಕಾಣಿಸಿಕೊಂಡಿದ್ದಾರೆ. ಬಾಲಿವುಡ್ ನಟಿಮಣಿಯರಾದ ಸೋನಾಕ್ಷಿ ಸಿನ್ಹಾ, ಮಾನುಷಿ ಚಿಲ್ಲರ್, ಅಲಯಾ ಎಫ್ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.ಅಲಿ ಅಬ್ಬಾಸ್ ಝಫರ್ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದು, ವಶು ಭಗ್ನಾನಿ, ದೀಪಿಕ್ಷಾ ದೇಶಮುಖ್, ಜಾಕಿ ಭಗ್ನಾನಿ, ಹಿಮಾಂಶು ಕಿಶನ್ ಮೆಹ್ರಾ, ಅಲಿ ಅಬ್ಬಾಸ್ ಜಾಫರ್ ಚಿತ್ರ ನಿರ್ಮಾಣ ಮಾಡಿದ್ದಾರೆ.