ಬೆಂಗಳೂರು: ನಟ ಅಕ್ಷಯ್ ಕುಮಾರ್ (Akshay Kumar) ಅವರು ತಮ್ಮ ಸಿನಿಮಾಗಳ ಬ್ಯಾಕ್-ಟು-ಬ್ಯಾಕ್ ಶೂಟಿಂಗ್ ಮಾಡುತ್ತಿದ್ದು, ಜುಲೈ 12ರಂದು ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ಅದ್ಧೂರಿ ವಿವಾಹ ಸಮಾರಂಭಕ್ಕೆ ಗೈರಾಗುತ್ತಿದ್ದಾರೆ.ಕಳೆದ ಎರಡು ದಿನಗಳಿಂದ ಅಕ್ಷಯ್ ಅನಾರೋಗ್ಯದಿಂದ ಬಳಲುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ. ಇದೀಗ ಅಕ್ಷಯ್ ಕುಮಾರ್‌ಗೆ ಕೋವಿಡ್ 19 ಸೋಂಕು ದೃಢಪಟ್ಟಿದೆ.
ಸದ್ಯ ನಟ ಇತ್ತೀಚಿನ ಬಿಡುಗಡೆಯಾದ ‘ಸರ್ಫಿರಾ’ ಪ್ರಚಾರಕ್ಕಾಗಿ ಪ್ರಯಾಣಿಸುತ್ತಿದ್ದಾರೆ. ಹೀಗಾಗಿ ನಟ ಸ್ವತಃ ಪರೀಕ್ಷೆಗೆ ಒಳಗಾದರು. ಬಳಿಕ ಕೋವಿಡ್ 19 ಸೋಂಕು ಇರುವುದು ಖಚಿತವಾಗಿದೆ. ಇದೀಗ ನಟ ಮನೆಯಲ್ಲಿಯೇ ಕ್ವಾರಂಟೈನ್‌ನಲ್ಲಿದ್ದಾರೆ. ವೈದ್ಯರಗಳು ಸೂಕ್ತ ಚಿಕಿತ್ಸೆಯೊಂದಿಗೆ ನಿಗಾವಹಿಸಿ ಆರೈಕೆ ಮಾಡುತ್ತಿದ್ದಾರೆ. ವರದಿಯ ಪ್ರಕಾರ, ಜುಲೈ 12ರ ಬೆಳಗ್ಗೆ ಕೋವಿಡ್ ಇರುವುದು ಪತ್ತೆಯಾಗಿದೆ. ಹೀಗಾಗಿ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ವಿವಾಹ ಸಮಾರಂಭದಲ್ಲಿ ಭಾಗಿಯಾಗುತ್ತಿಲ್ಲ ನಟ.
ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ವಿವಾಹವು ಮೂರು ದಿನಗಳವರೆಗೆ ಇರುತ್ತದೆ. ಜುಲೈ 12 ರಂದು ‘ಶುಭ ವಿವಾಹ’, ಜುಲೈ 13 ರಂದು ‘ಶುಭ್ ಆಶೀರ್ವಾದ್’ ಮತ್ತು ಜುಲೈ 14 ರಂದು ʻಆರತಕ್ಷತೆ, ನಂತರ ಜುಲೈ 15 ರಂದು ಮತ್ತೊಂದು ಆರತಕ್ಷತೆ ಕಾರ್ಯಕ್ರಮ ನಡೆಯಲಿವೆ.
ಜಾನ್ ಸೆನಾ, ಮೈಕ್ ಟೈಸನ್, ಜೀನ್-ಕ್ಲಾಡ್ ವ್ಯಾನ್ ಡ್ಯಾಮ್ ಮತ್ತು ಜೇ ಶೆಟ್ಟಿ, ಬೋರಿಸ್ ಜಾನ್ಸನ್, ಟೋನಿ ಬ್ಲೇರ್, ಜಾನ್ ಕೆರ್ರಿ ಮತ್ತು ಸ್ಟೀಫನ್ ಹಾರ್ಪರ್ ಅವರಂತಹ ಗಣ್ಯರು ಸೇರಿದಂತೆ ಇತರ ಸೆಲೆಬ್ರಿಟಿಗಳು ಸಮಾರಂಭದಲ್ಲಿ ಇರಲಿದ್ದಾರೆ.
ಇದನ್ನೂ ಓದಿ: Akshay Kumar: ಅಕ್ಷಯ್ ಕುಮಾರ್-ಟೈಗರ್ ಶ್ರಾಫ್ ಸಿನಿಮಾಗೆ ಹೀನಾಯ ಸೋಲು! ಕಲೆಕ್ಷನ್ ಎಷ್ಟು?
ಅಕ್ಷಯ್ ಕುಮಾರ್ ಅವರ ಇತ್ತೀಚಿನ ಚಿತ್ರ ‘ಸರ್ಫಿರಾ’ ಜುಲೈ 12 ರಂದು ಥಿಯೇಟರ್‌ಗಳಲ್ಲಿ ಬಿಡುಗಡೆಯಾಗಿದೆ. ಈ ಚಲನಚಿತ್ರವು 2020 ರ ತಮಿಳು ಚಲನಚಿತ್ರ ‘ಸೂರರೈ ಪೊಟ್ರು’ ನ ರಿಮೇಕ್ ಆಗಿದೆ. ಸುಧಾ ಕೊಂಗರ ನಿರ್ದೇಶಿಸಿದ ಈ ಚಿತ್ರದಲ್ಲಿ ಪರೇಶ್ ರಾವಲ್, ರಾಧಿಕಾ ಮದನ್ ಮತ್ತು ಅತಿಥಿ ಪಾತ್ರವಿದೆ.