Site icon Vistara News

Aditya Narayan: ಕಾರ್ಯಕ್ರಮ ವೇಳೆ ಅಭಿಮಾನಿಯನ್ನು ಹೊಡೆದು ಮೊಬೈಲ್​ ಕಸಿದು ಎಸೆದ ಖ್ಯಾತ ಗಾಯಕ!

Angry Aditya Narayan Hits Fan, Snatches Phone and Throws It Away

ಬೆಂಗಳೂರು: ಗಾಯಕ ಆದಿತ್ಯ ನಾರಯಣ್ (Aditya Narayan) ಅವರು ಛತ್ತೀಸ್‌ಗಢದ ಕಾಲೇಜೊಂದರಲ್ಲಿ ಸಂಗೀತ ಕಾರ್ಯಕ್ರಮವನ್ನು ಆಯೋಜಿಸಿದ್ದರು .ಹಲವಾರು ಸಂಗೀತ ಪ್ರೇಮಿಗಳು ಹಾಜರಾಗಿದ್ದರು. ಕಾರ್ಯಕ್ರಮದ ವೇಳೆ ಅಭಿಮಾನಿಯ ಮೊಬೈಲ್‌ವನ್ನು ಕಸಿದು ಎಸೆದಿದ್ದಾರೆ. ಇದೀಗ ಆದಿತ್ಯ ನಾರಾಯಣ್ ಟೀಕೆಗೆ ಗುರಿಯಾಗಿದ್ದಾರೆ. ವಿಡಿಯೊ ಕೂಡ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದ್ದು, ನೆಟ್ಟಿಗರು ಛೀಮಾರಿ ಹಾಕುತ್ತಿದ್ದಾರೆ.

ಆನ್‌ಲೈನ್‌ನಲ್ಲಿ ವೈರಲ್ ಆಗಿರುವ ವೀಡಿಯೊದಲ್ಲಿ, ಆದಿತ್ಯ ಅವರು ಶಾರುಖ್ ಖಾನ್ ಅವರ `ಡಾನ್‌’ ಸಿನಿಮಾದ ʻಆಜ್ ಕಿ ರಾತ್‌ ಹಾಡಿನ ಪ್ರದರ್ಶನ ನೀಡುತ್ತಿದ್ದರು. ಅಭಿಮಾನಿಯೊಬ್ಬರು ಈ ಹಾಡನ್ನು ರೆಕಾರ್ಡ್ ಮಾಡುತ್ತಿದ್ದಾಗ ತನ್ನ ಮೈಕ್ರೊಫೋನ್‌ನಿಂದ ಅಭಿಮಾನಿಗೆ ಮೊದಲಿಗೆ ಥಳಿಸಿ ನಂತರ ಅಭಿಮಾನಿಯ ಫೋನ್ ಕಸಿದುಕೊಂಡು ಎಸೆದಿದ್ದಾರೆ. ಏಕಾಏಕಿ ಸಿಟ್ಟಾದ ಅವರು ಅಭಿಮಾನಿಯ ಮೊಬೈಲ್​ನ ಕಸಿದು ಜನರತ್ತ ಎಸೆದಿರುವ ಬಗ್ಗೆ ಈಗ ಟೀಕೆಗೆ ಗುರಿಯಾಗಿದೆ. ಪ್ರೇಕ್ಷಕರು ಗಾಯಕನ ವರ್ತನೆಯಿಂದ ಆಘಾತಕ್ಕೊಳಗಾಗಿದ್ದಾರೆ. ಈ ಬಗ್ಗೆ ನೆಟ್ಟಿಗರು ಕೂಡ ಗಾಯಕನ ವಿರುದ್ಧ ಆಕ್ರೋಶ ಹೊರಹಾಕುತ್ತಿದ್ದಾರೆ.

ಒಬ್ಬರು ಕಮೆಂಟ್‌ನಲ್ಲಿ ʻʻಅಭಿಮಾನಿಗಳಿಗೆ ಅಗೌರವ ತೋರಿದ್ದು ಸರಿಯಲ್ಲʼʼಎಂದು ಕಮೆಂಟ್‌ ಮಾಡಿದ್ದಾರೆ. ಇನ್ನೊಬ್ಬರು ʻʻಆದಿತ್ಯ ಅವರೇ ಅಷ್ಟೊಂದು ಸಿಟ್ಟು ಏಕೆ? ಅವರು ನಿಮ್ಮ ಅಭಿಮಾನಿ. ಅವರಿಗೆ ಗೌರವ ನೀಡಿʼʼಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: ಅತಿ ದೂರದ ಸಿಕ್ಸರ್ ಸಿಡಿಸಿದ ಆರ್​ಸಿಬಿ ಬ್ಯಾಟರ್ ಮ್ಯಾಕ್ಸ್​ವೆಲ್​; ವಿಡಿಯೊ ವೈರಲ್​

ಆದಿತ್ಯ ನಾರಯಣ್ ಸುದ್ದಿಯಾಗುತ್ತಿರುವುದು ಇದೇನು ಮೊದಲಲ್ಲ. ಕಳೆದ ಬಾರಿ ರಾಯ್‌ಪುರ ವಿಮಾನ ನಿಲ್ದಾಣದಲ್ಲಿ ಸಿಬ್ಬಂದಿಯೊಂದಿಗೆ ಜಗಳವಾಡಿದ್ದರು.2017ರಲ್ಲಿ ರಾಯಪುರ ವಿಮಾನ ನಿಲ್ದಾಣದಲ್ಲಿ ಅವರು ಸ್ಟಾಪ್​ಗಳ ಜೊತೆ ಫೈಟ್​ಗೆ ಇಳಿದಿದ್ದರು.

Exit mobile version