Site icon Vistara News

Bade Miyan Chote Miyan Review: ʼಬಡೆ ಮಿಯಾ ಚೋಟೆ ಮಿಯಾʼ ಸಿನಿಮಾಗೆ ಪ್ರೇಕ್ಷಕರಿಂದ ಮೆಚ್ಚುಗೆ! 

Bade Miyan Chote Miyan Review Best Action Films

ಬೆಂಗಳೂರು: ಈ ವರ್ಷದ ಬಹು ನಿರೀಕ್ಷಿತ ಬಾಲಿವುಡ್‌ ಚಿತ್ರಗಳ ಪೈಕಿ ‘ಬಡೆ ಮಿಯಾ ಚೋಟೆ ಮಿಯಾ‘ (Bade Miyan Chote Miyan) ಕೂಡ ಒಂದು. ಅಕ್ಷಯ್ ಕುಮಾರ್ (Akshay Kumar), ಟೈಗರ್‌ ಶ್ರಾಫ್ (Tiger Shroff) ಮತ್ತು ದಕ್ಷಿಣ ಭಾರತದ ಸೂಪರ್‌ ಸ್ಟಾರ್‌ ಪೃಥ್ವಿರಾಜ್‌ ಸುಕುಮಾರನ್‌ (Prithviraj Sukumaran) ಮೊದಲ ಬಾರಿಗೆ ಒಂದಾಗಿದ್ದು, ಇವರ ಕಾಂಬಿನೇಷನ್‌ ನೋಡಲು ಪ್ರೇಕ್ಷಕರು ಕಾತರರಾಗಿದ್ದರು. ಇಂದು ಈದ್‌ ಹಬ್ಬದ ಪ್ರಯುಕ್ತ ಸಿನಿಮಾ ಬಿಡುಗಡೆಯಾಗಿದೆ. ಸಿನಿಮಾ ಬಗ್ಗೆ ಪ್ರೇಕ್ಷಕರು ಹಾಡಿ ಹೊಗಳಿದ್ದಾರೆ. ಭಾರತೀಯ ಚಿತ್ರರಂಗದಲ್ಲಿಯ ಒಳ್ಳೆಯ ಆ್ಯಕ್ಷನ್ ಸಿನಿಮಾವಿದು ಎಂದು ಎಕ್ಸ್‌ ಮೂಲಕ ಬರೆದುಕೊಂಡಿದ್ದಾರೆ ಸಿನಿರಸಿಕರು.

ಎಕ್ಸ್‌ ಖಾತೆಯಲ್ಲಿ ಒಬ್ಬ ಅಭಿಮಾನಿ ʻʻಬಡೇ ಮಿಯಾ ಚೋಟೆ ಮಿಯಾ’ ಸಿನಿಮಾ ನಿಮ್ಮನ್ನು ಮೂಕವಿಸ್ಮಿತರನ್ನಾಗಿಸುತ್ತದೆ. ಒಳ್ಳೆಯ ಆ್ಯಕ್ಷನ್‌-ಕಾಮಿಡಿ ಪವರ್‌ಹೌಸ್ ಸಿನಿಮಾʼʼಎಂದು ಬರೆದುಕೊಂಡಿದ್ದಾರೆ. ಇನ್ನೊಬ್ಬರು ಹೀಗೆ ಬರೆದುಕೊಂಡಿದ್ದಾರೆ. ʻʻನಾನು ಸಿನಿಮಾಗೆ 5 ರಲ್ಲಿ 4.5 ರೇಟಿಂಗ್ ಕೊಡುತ್ತೇನೆ. ಭಾರತೀಯ ಚಿತ್ರರಂಗದಲ್ಲಿಯ ಒಳ್ಳೆಯ ಆ್ಯಕ್ಷನ್ ಸಿನಿಮಾವಿದುʼʼಎಂದು ಬರೆದುಕೊಂಡಿದ್ದಾರೆ.

ಮತ್ತೊಬ್ಬರು ʻʻಹಿನ್ನೆಲೆ ಧ್ವನಿ ಉತ್ತಮವಾಗಿದೆ. ಪ್ರತಿ ದ್ರಶ್ಯಗಳು ರಿಚ್‌ ಮತ್ತು ಭವ್ಯವಾಗಿದೆ. ಇವೆಲ್ಲ ನಿಮ್ಮ ವೈಯಕ್ತಿಕ ಆದ್ಯತೆಗೆ ಅನುಗುಣವಾಗಿ ಇದೆʼʼಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: Bade Miyan Chote Miyan: ಈದ್ ಹಬ್ಬಕ್ಕೆ ‘ಬಡೆ ಮಿಯಾನ್ ಚೋಟೆ ಮಿಯಾನ್’ ತೆರೆಗೆ; ಅಕ್ಷಯ್ ಕುಮಾರ್‌ ಚಿತ್ರ ನಾಳೆ ರಿಲೀಸ್‌

ʻಬಡೇ ಮಿಯಾ ಚೋಟೆ ಮಿಯಾ ʼ ಶುಕ್ರವಾರ (ಏ.11) ಬೆಳಗಿನ ತನಕ 1,86,000 ಟಿಕೆಟ್‌ಗಳನ್ನು ಮಾರಾಟ ಮಾಡಿದೆ.

ಅಕ್ಷಯ್ ಕುಮಾರ್ ಹಾಗೂ ಟೈಗರ್ ಶ್ರಾಫ್ ನಾಯಕರಾಗಿ ನಟಿಸಿದ್ದು, ಪೃಥ್ವಿರಾಜ್ ಸುಕುಮಾರನ್‌‌‌ ಖಳನಾಯಕನಾಗಿ ಅಬ್ಬರಿಸಿದ್ದಾರೆ. 2017ರಲ್ಲಿ ತೆರೆಕಂಡ ʼನಾಮ್‌ ಶಬ್ನಾʼ ಚಿತ್ರದ ಬಳಿಕ ಪೃಥ್ವಿರಾಜ್‌ ಬಾಲಿವುಡ್‌ ಮರಳಿದ್ದು ಕೂಡ ಅವರ ಅಭಿಮಾನಿಗಳಲ್ಲಿ ನಿರೀಕ್ಷೆ ಹೆಚ್ಚಿಸಿದೆ. ಅಲ್ಲದೆ ಇತ್ತೀಚೆಗೆ ತೆರೆಕಂಡ ಅವರ ʼಆಡು ಜೀವಿತಂʼ ಸಿನಿಮಾ ಉತ್ತಮ ಪ್ರದರ್ಶನ ತೋರುತ್ತಿದೆ. ಹೀಗಾಗಿ ಈ ಚಿತ್ರದ ಮೇಲೂ ನಿರೀಕ್ಷೆ ಮೂಡಿದೆ. ಇನ್ನು ಬಾಲಿವುಡ್ ನಟಿಮಣಿಯರಾದ ಸೋನಾಕ್ಷಿ ಸಿನ್ಹಾ, ಮಾನುಷಿ ಚಿಲ್ಲರ್, ಅಲಯಾ ಎಫ್. ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

ಹಲವು ವಿಶೇಷತೆಗಳ ಸಿನಿಮಾ

ಇನ್ನು ಈ ಸಿನೆಮಾ ಹಲವು ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಬಾಲಿವುಡ್‌ ಸ್ಟಾರ್‌ಗಳಾದ ಅಕ್ಷಯ್‌ ಕುಮಾರ್‌ ಮತ್ತು ಟೈಗರ್‌ ಶ್ರಾಫ್‌ ಮೊದಲ ಬಾರಿಗೆ ತೆರೆ ಹಂಚಿಕೊಳ್ಳುತ್ತಿದ್ದಾರೆ. ಈ ಹಿಂದೆ ಅಕ್ಷಯ್‌ ಕುಮಾರ್‌ ಜತೆ ʼಸಾಮ್ರಾಟ್‌ ಪೃಥ್ವಿರಾಜ್‌ʼ ಸಿನಿಮಾದಲ್ಲಿ ನಟಿಸಿದ್ದ ಮಾನುಷಿ ಚಿಲ್ಲರ್‌ ಮತ್ತೆ ಇಲ್ಲಿ ಒಂದಾಗಿದ್ದಾರೆ. ʼಒನ್ಸ್‌ ಅಪೋನ್‌ ಎ ಟೈಮ್‌ ಇನ್ ಮುಂಬೈ‌ʼ, ʼಜೋಕರ್‌ʼ, ʼರೌಡಿ ರಾಥೋಡ್‌ʼ ಮುಂತಾದ ಚಿತ್ರಗಳಲ್ಲಿ ಜತೆಯಾಗಿ ನಟಿಸಿದ್ದ ಅಕ್ಷಯ್‌ ಕುಮಾರ್‌ ಮತ್ತು ಸೋನಾಕ್ಷಿ ಸಿನ್ಹಾ ಹಲವು ವರ್ಷಗಳ ಬಳಿಕ ಮತ್ತೆ ಒಟ್ಟಿಗೆ ತೆರೆ ಹಂಚಿಕೊಳ್ಳುತ್ತಿದ್ದಾರೆ. ಇನ್ನು ಅಲಯಾ ಎಫ್. ಅವರಿಗೆ ಸಿಕ್ಕ ಬಹು ದೊಡ್ಡ ಬಜೆಟ್‌ ಸಿನಿಮಾ ಇದು. ಈ ಎಲ್ಲ ಕಾರಣಗಳಿಂದ ‘ಬಡೇ ಮಿಯಾ ಚೋಟೆ ಮಿಯಾ’ ನಿರೀಕ್ಷೆ ಹೆಚ್ಚಿಸಿದೆ.

Exit mobile version