Site icon Vistara News

Bigg Boss 17: ಕನ್ನಡ ಬಿಗ್ ಬಾಸ್‌ ಜತೆಗೆ ಹಿಂದಿ ಬಿಗ್‌ ಬಾಸ್ ಗ್ರ್ಯಾಂಡ್ ಫಿನಾಲೆ!

Bigg Boss 17: Hindi Bigg Boss grand finale with Kannada Bigg Boss

ಮುಂಬೈ: ಬಿಗ್ ಬಾಸ್ ಕನ್ನಡ (BBK SEASON 10) ಗ್ರ್ಯಾಂಡ್ ಫಿನಾಲೆ ದಿನವೇ, ಅಂದರೆ ಜನವರಿ 28ರಂದೇ ಹಿಂದಿ ಬಿಗ್ ಬಾಸ್ 17ರ (Bigg Boss 17) ಆವೃತ್ತಿಯ ಗ್ರ್ಯಾಂಡ್ ಫಿನಾಲೆ (Gran finale) ನಡೆಯಲಿದೆ. ಹಾಗಾಗಿ, ಈ ವಾರಾಂತ್ಯದಲ್ಲಿ ಕಿರುತೆರೆ ವೀಕ್ಷಕರಿಗೆ, ಬಿಗ್ ಬಾಸ್ ಅಭಿಮಾನಿಗಳಿಗೆ ಎರಡೆರಡು ಧಮಾಕ್ ದೊರೆಯಲಿದೆ. ಗ್ರ್ಯಾಂಡ್‌ ಫಿನಾಲೆಗೆ ಐವರು ಸ್ಪರ್ಧಿಗಳು ಕಣದಲ್ಲಿದ್ದಾರೆ(Bigg Boss Kannada).

ಬಾಲಿವುಡ್ ನಟ ಸಲ್ಮಾನ್ ಖಾನ್ ನಿರೂಪಿಸುವ ಗ್ರ್ಯಾಂಡ್ ಫಿನಾಲೆ 2024ರ ಜನವರಿ 28, ಭಾನುವಾರರಂದು ನಡೆಯಲಿದೆ. ಗ್ರ್ಯಾಂಡ್ ಫಿನಾಲೆ ಸಂಚಿಕೆಯು ಸಂಜೆ 6 ಗಂಟೆಗೆ ಪ್ರಾರಂಭವಾಗಲಿದೆ ಮತ್ತು ಕಲರ್ಸ್ ಟಿವಿ ಪ್ರಕಾರ ಮಧ್ಯರಾತ್ರಿಯ ಹೊತ್ತಿಗೆ ವಿಜೇತರನ್ನು ಘೋಷಿಸಲಾಗುತ್ತದೆ.

ಬಿಗ್ ಬಾಸ್ 17ರ ಅಂತಿಮ ಸಂಚಿಕೆಯನ್ನು ಜಿಯೋ ಸಿನಿಮಾ ಅಪ್ಲಿಕೇಶನ್‌ನಲ್ಲಿ ಲೈವ್-ಸ್ಟ್ರೀಮ್ ಮಾಡಲಾಗುತ್ತದೆ. ಕಲರ್ಸ್ ಟಿವಿಯಲ್ಲಿ ನೇರ ಪ್ರಸಾರ ಕೂಡ ಇರುತ್ತದೆ. ಸಾಮಾಜಿಕ ಮಾಧ್ಯಮದಲ್ಲಿ ಚಾನೆಲ್ ಪೋಸ್ಟ್ ಮಾಡಿದ ಇತ್ತೀಚಿನ ಪ್ರೋಮೋ ಪ್ರಕಾರ, ಹಾಸ್ಯನಟ ಭಾರತಿ ಸಿಂಗ್ ಅವರ ಪತಿ ಹರ್ಷ್ ಲಿಂಬಾಚಿಯಾ ಮತ್ತು ಸಾಮಾಜಿಕ ಮಾಧ್ಯಮದ ಇನ್‌ಫ್ಲುಯೆನ್ಸರ್ ಓರ್ಹಾನ್ ಅವತ್ರಮಣಿ, ಅಕಾ ಓರಿ, ಗ್ರಾಂಡ್ ಫಿನಾಲೆಯಲ್ಲಿ ಇರಲಿದ್ದಾರೆ. ಒರ್ರಿ ಈ ಹಿಂದೆ ಬಿಗ್ ಬಾಸ್ 17 ರಲ್ಲಿ ವಿಶೇಷ ಸ್ಪರ್ಧಿಯಾಗಿ ಕಾಣಿಸಿಕೊಂಡಿದ್ದರು.

ಬಿಗ್ ಬಾಸ್ 17ರ ಸಂಚಿಕೆಯಲ್ಲಿ ಒಟ್ಟು 21 ಸ್ಪರ್ಧಿಗಳಿದ್ದರು. ಈಗ ಗ್ರ್ಯಾಂಡ್ ಫಿನಾಲೆಗೆ ಐವರು ಸ್ಪರ್ಧಿಗಳು ಆಯ್ಕೆಯಾಗಿದ್ದಾರೆ. ಅಂಕಿತಾ ಲೋಕಂಡೆ, ಮುನಾವರ್ ಫಾರೂಖಿ, ಮನ್ನಾರಾ ಛೋಪ್ರಾ, ಅಭಿಷೇಕ್ ಕುಮಾರ್, ಅರುಣ್ ಮಾಶೆಟ್ಟಿ ಅವರಿದ್ದಾರೆ. ಈ ಪೈಕಿ ಬಿಗ್ ಬಾಸ್ 17ರ ವಿನ್ನರ್ ಯಾರಾಗುತ್ತಾರೆಂದು ಕಾದು ನೋಡಬೇಕು.

BBK SEASON 10: ಈ ಸಲ ಕಪ್ ಯಾರದ್ದು? ಎಲಿಮಿನೇಟ್ ಆದ ಸ್ಪರ್ಧಿಗಳ ಪ್ರಕಾರ ಯಾರು ವಿನ್‌ ಆಗ್ಬೋದು?

ಬಹುನಿರೀಕ್ಷಿತ ʻಬಿಗ್‌ಬಾಸ್‌ ಕನ್ನಡ ಸೀಸನ್‌ 10ʼ (BBK SEASON 10) ಬಹುದೊಡ್ಡ ಯಶಸ್ಸಿನೊಂದಿಗೆ ಅಂತಿಮ ಹಂತಕ್ಕೆ ಬಂದು ತಲುಪಿದೆ. ಇದೇ ವಾರಾಂತ್ಯದಲ್ಲಿ ಕಿಚ್ಚ ಸುದೀಪ್‌ ಒಬ್ಬರ ಕೈಯನ್ನು ಎತ್ತಿ ಹಿಡಿಯಲಿದ್ದಾರೆ. ಬಿಗ್‌ಬಾಸ್ ಮನೆಯೊಳಗೆ ರಾರಾಜಿಸುತ್ತಿರುವ ಕಪ್ ಅವರ ಕೈ ಸೇರಲಿದೆ.

ಈ ಫಿನಾಲೆ ವಾರದಲ್ಲಿ ಬಿಗ್‌ಬಾಸ್ ಮನೆಯೊಳಗೆ ಸಂಗೀತಾ, ವಿನಯ್, ಕಾರ್ತಿಕ್, ಪ್ರತಾಪ್, ತುಕಾಲಿ ಸಂತೋಷ್, ವರ್ತೂರು ಸಂತೋಷ್ ಹೀಗೆ ಒಟ್ಟು ಆರು ಸದಸ್ಯರು ಇದ್ದಾರೆ. ಅಷ್ಟೇ ಅಲ್ಲ, ಮಿಡ್‌ ವೀಕ್ ಎಲಿಮಿನೇಷನ್ ಇರುವುದಿಲ್ಲ ಎಂದು ನಿನ್ನೆಯ (ಜ.25) ಎಪಿಸೋಡಿನಲ್ಲಿ ಬಿಗ್‌ಬಾಸ್ ಹೇಳಿದ್ದಾರೆ. ಹಾಗಾಗಿ ಕುತೂಹಲ ಇನ್ನಷ್ಟು ಗರಿಗೆದರಿದೆ. ಈ ಸಲ ಯಾರು ಬಿಗ್‌ಬಾಸ್ ಗೆಲ್ಲುತ್ತಾರೆ ಎಂಬ ಬಗ್ಗೆ ಸಾಕಷ್ಟು ಚರ್ಚೆಗಳಾಗುತ್ತಿದೆ. ವಾಗ್ವಾದಗಳು ನಡೆಯುತ್ತಿವೆ. ಪ್ರತಿಯೊಬ್ಬ ಸದಸ್ಯರ ಅಭಿಮಾನಿಗಳೂ ತಮ್ಮ ನೆಚ್ಚಿನ ಸ್ಪರ್ಧಿಯ ಪರವಾಗಿ ಜೋರಾಗಿಯೇ ಬ್ಯಾಟಿಂಗ್ ಮಾಡುತ್ತಿದ್ದಾರೆ.

ಪ್ರತಿ ವಾರ ಬಿಗ್‌ಬಾಸ್ ಮನೆಯಿಂದ ಎಲಿಮಿನೇಟ್ ಆಗಿ ಸ್ಪರ್ಧಿಗಳು ಹೊರಗೆ ಬರುತ್ತಿದ್ದ ಹಾಗೆಯೇ ಜಿಯೊಸಿನಿಮಾ ಅವರೊಂದಿಗೆ ಎಕ್ಸ್‌ಕ್ಲೂಸೀವ್ “ಬಿಗ್‌ಬ್ಯಾಂಗ್‌’ ಸಂದರ್ಶನ ಮಾಡುತ್ತಿತ್ತು. ಆ ಎಲ್ಲ ಸಂದರ್ಶನಗಳು ಜಿಯೊಸಿನಿಮಾದಲ್ಲಿ ಈಗ ಉಚಿತವಾಗಿ ವೀಕ್ಷಣೆಗೆ ಲಭ್ಯ. ಪ್ರತಿಯೊಬ್ಬ ಸ್ಪರ್ಧಿಯ ಬಿಗ್‌ಬ್ಯಾಂಗ್ ಸಂದರ್ಶನದಲ್ಲಿಯೂ ಕೇಳಲಾಗಿದ್ದ ಒಂದು ಸಾಮಾನ್ಯ ಪ್ರಶ್ನೆ, ‘ಈ ಸಲ ಬಿಗ್‌ಬಾಸ್‌ ಷೋದ ಅಂತಿಮ ಹಂತದಲ್ಲಿ ಇರುವ ಐವರು ಸ್ಪರ್ಧಿಗಳು ಯಾರು?’ಎಂಬುದಾಗಿತ್ತು. ಹಾಗೆಯೇ ಯಾರು ಗೆಲ್ಲಬಹುದು ಎಂಬ ತಮ್ಮ ಊಹೆಯನ್ನೂ ಹಲವು ಸ್ಪರ್ಧಿಗಳು ಈ ಸಂದರ್ಶನಗಳಲ್ಲಿ ಮಾಡಿದ್ದಾರೆ. ಈ ಎಲ್ಲ ಸ್ಪರ್ಧಿಗಳ ಊಹೆಯ ಪ್ರಕಾರ ಈ ಸಲದ ಬಿಗ್‌ಬಾಸ್‌ ಅನ್ನು ಯಾರು ಗೆಲ್ಲುತ್ತಾರೆ? ಕಪ್ ಯಾರ ಕೈಯಲ್ಲಿ ಸೇರಲಿದೆ ಎಂಬುದರ ಮೇಲೆ ಬೆಳಕು ಚೆಲ್ಲುವ ಪ್ರಯತ್ನ ಇಲ್ಲಿದೆ. ಇದು ಪೂರ್ತಿಯಾಗಿ ಜಿಯೊಸಿನಿಮಾದಲ್ಲಿ ವಿಕ್ಟೆಡ್ ಸ್ಪರ್ಧಿಗಳ ಊಹೆಯ ಆಧಾರದ ಮೇಲೆ ರೂಪಿಸಲಾದ ವರದಿ.

ಈ ಸಲದ ಬಿಗ್‌ಬಾಸ್‌ ಸೀಸನ್‌ನ ಟಾಪ್‌ 5ನಲ್ಲಿ ಯಾರು ಇರುತ್ತಾರೆ ಎಂದು ಎವಿಕ್ಟೆಡ್ ಕಂಟೆಸ್ಟೆಂಟ್ಸ್‌ಗೆ ಕೇಳಲಾದ ಪ್ರಶ್ನೆಗೆ ಅವರು ನೀಡಿದ ಉತ್ತರದಲ್ಲಿ ಅತಿ ಹೆಚ್ಚು ಬಾರಿ ಉಲ್ಲೇಖಿತರಾದವರು ಸಂಗೀತಾ ಶೃಂಗೇರಿ. ಒಟ್ಟೂ ಒಂಬತ್ತು ಜನ ಎಲಿಮಿನೇಟೆಡ್ ಸ್ಪರ್ಧಿಗಳು ಜಿಯೊ ಸಿನಿಮಾ ಸಂದರ್ಶನದಲ್ಲಿ ಸಂಗೀತಾ ಅವರ ಹೆಸರನ್ನು ಉಲ್ಲೇಖಿಸಿದ್ದಾರೆ. ಕಾರ್ತಿಕ್ ಮಹೇಶ್ ಅವರು ಆರು ಬಾರಿ ಉಲ್ಲೇಖಿತರಾಗಿದ್ದಾರೆ. ತುಕಾಲಿ ಸಂತೋಷ್ ಕೂಡ ಆರು ಸಲವೇ ಉಲ್ಲೇಖಿತರಾಗಿ ಕಾರ್ತಿಕ್ ಸಮಕ್ಕೆ ನಿಂತಿದ್ದಾರೆ. ವಿನಯ್ ಕೂಡ ಪದೇ ಪದೇ ಉಲ್ಲೇಖಿತಗೊಂಡಿರುವ ಸ್ಪರ್ಧಿಗಳಲ್ಲಿ ಒಬ್ಬರು. ನಮ್ರತಾ, ಮೈಕಲ್, ಪವಿ, ಸ್ನೇಹಿತ್‌ ಎಲ್ಲವೂ ವಿನಯ್ ಹೆಸರನ್ನು ಉಲ್ಲೇಖಿಸಿದ್ದಾರೆ.

ಈ ಸುದ್ದಿಯನ್ನೂ ಓದಿ: BBK Season 10: ಬಿಗ್ ಬಾಸ್ ಮನೆಯಿಂದ ಹೊರ ಬಿದ್ದ ವರ್ತೂರು ಸಂತೋಷ್

Exit mobile version