ಬೆಂಗಳೂರು: ವಿಶ್ವದ ಪ್ರತಿಷ್ಠಿತ ಚಲನಚಿತ್ರೋತ್ಸವಗಳಲ್ಲಿ ಕಾನ್ ಫಿಲ್ಮ್ ಫೆಸ್ಟಿವಲ್ (Cannes 2024) ಕೂಡ ಒಂದು. 2024ರ 77ನೇ ಕಾನ್ ಫಿಲ್ಮ್ ಫೆಸ್ಟಿವಲ್ ಮೇ 14ರಿಂದ ಆರಂಭ ಆಗಿದೆ. ಊರ್ವಶಿ ರೌಟೇಲಾ (Urvashi Rautela) ಈಗಾಗಲೇ ರೆಡ್ ಕಾರ್ಪೆಟ್ ಮೇಲೆ ಪಿಂಕ್ ಗೌನದದದ ಧರಿಸಿ ಹೆಜ್ಜೆ ಹಾಕಿದ್ದಾರೆ. ಈ ಫೋಟೊ ವೈರಲ್ ಆದ ಬೆನ್ನಲ್ಲೇ 2018 ರಲ್ಲಿ ಕಾನ್ ಫಿಲ್ಮ್ ಫೆಸ್ಟಿವಲ್‌ನಲ್ಲಿ ದೀಪಿಕಾ ಪಡುಕೋಣೆ ಧರಿಸಿದ್ದ ಗೌನ್ ತರಹವೇ ಇದೆ ಎಂದು ನೆಟ್ಟಿಗರು ಕಮೆಂಟ್ ಮಾಡುತ್ತಿದ್ದಾರೆ. ಇದೀಗ ಊರ್ವಶಿ ರೌಟೇಲಾ ಟ್ರೋಲ್‌ಗೆ ಗುರಿಯಾಗುತ್ತಿದ್ದಾರೆ.
ಊರ್ವಶಿ ಅವರ ವಿಡಿಯೊಗಳು ವೈರಲ್ ಆಗುತ್ತಿವೆ. ಬಾಡಿಕಾನ್ ಡ್ರೆಸ್ ಧರಿಸಿರುವುದನ್ನು ಕಾಣಬಹುದು. ದೀಪಿಕಾ ಪಡುಕೋಣೆ ಕಾನ್ ಫಿಲ್ಮ್ ಫೆಸ್ಟಿವಲ್ 2018 ರಲ್ಲಿ ಇದೇ ರೀತಿಯ ಗುಲಾಬಿ ಬಣ್ಣದ ಗೌನ್ ಧರಿಸಿದ್ದರು. ಊರ್ವಶಿ ರೌಟೇಲಾ ಅವರ ಈ ಲುಕ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಊರ್ವಶಿ ರೌಟೇಲಾ ದೀಪಿಕಾ ಪಡುಕೋಣೆ ಸ್ಟೈಲ್ ಅನ್ನು ಕಾಪಿ ಮಾಡಿದ್ದಾರೆ ಎಂದು ಕೆಲವರು ಕಮೆಂಟ್ ಮಾಡಿದ್ದಾರೆ.
ಇದನ್ನೂ ಓದಿ: Cannes 2024: ಐಶ್ವರ್ಯಾ ರೈ ಕೈಗೆ ಪೆಟ್ಟು: ಮಗಳ ಜತೆ ಕಾನ್ ಫಿಲ್ಮ್ ಫೆಸ್ಟಿವಲ್‌ನತ್ತ ಹೊರಟ ನಟಿ!
ಯಾರೆಲ್ಲ ಭಾಗಿ?
ಪ್ರತಿ ವರ್ಷದಂತೆ ಈ ವರ್ಷವೂ ನಟಿ ಐಶ್ವರ್ಯಾ ರೈ ರೆಡ್ ಕಾರ್ಪೆಟ್ ಮೇಲೆ ನಡೆಯಲು ಸಿದ್ಧರಾಗಿದ್ದಾರೆ. ಬುಧವಾರ ಸಂಜೆ,(ಮೇ. 15) ಐಶ್ವರ್ಯಾ ಅವರು ಮಗಳು ಆರಾಧ್ಯ ಬಚ್ಚನ್ ಅವರೊಂದಿಗೆ ವಿಮಾನ ನಿಲ್ದಾಣದಲ್ಲಿ ಕಂಡು ಬಂದರು. ಆದರೆ ಐಶ್ವರ್ಯಾ (Aishwarya Rai Injured) ಅವರ ಕೈಗೆ ಪೆಟ್ಟಾಗಿ ಬ್ಯಾಂಡೇಜ್ ಕೂಡ ಸುತ್ತಿಕೊಂಡಿದ್ದರು. ಹೀಗಾಗಿ ಐಶ್ವರ್ಯಾ ಫ್ಯಾನ್ಸ್ (Cannes Film Festival with daughter) ಆತಂಕಕ್ಕೆ ಒಳಗಾಗಿ ಕಮೆಂಟ್ ಮೂಲಕ ನಟಿಯ ಕ್ಷೇಮ ವಿಚಾರಿಸಿದ್ದಾರೆ.
2002ರ ಕಾನ್ ಫಿಲ್ಮ್ ಫೆಸ್ಟಿವಲ್‌ನಲ್ಲಿ ಐಶ್ವರ್ಯಾ ರೈ ಅವರು ಕೆಂಪು ಕಾರ್ಪೆಟ್‌ನಲ್ಲಿ ಭಾರೀ ಚಿನ್ನದ ಆಭರಣಗಳೊಂದಿಗೆ ನೀತಾ ಲುಲ್ಲಾ ಸೀರೆಯಲ್ಲಿ ಕಾಣಿಸಿಕೊಂಡಿದ್ದರು. ಆ ವರ್ಷ ನಟ ಶಾರುಖ್ ಖಾನ್ ಮತ್ತು ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ಅವರೊಂದಿಗೆ ಉಪಸ್ಥಿತರಿದ್ದರು. ಅಂದಿನಿಂದ, ನಟಿ ಬಹುತೇಕ ಪ್ರತಿ ವರ್ಷ ಕಾನ್ ಫಿಲ್ಮ್ ಫೆಸ್ಟಿವಲ್‌ನಲ್ಲಿ ಭಾಗಿಯಾಗುತ್ತಿದ್ದಾರೆ . ಲೋರಿಯಲ್ ಪ್ಯಾರಿಸ್‌ನ ಬ್ರ್ಯಾಂಡ್ ಅಂಬಾಸಿಡರ್‌ಗಳಲ್ಲಿ ಒಬ್ಬರಾಗಿ ಅವರು ಮತ್ತೊಮ್ಮೆ ಕಾನ್ ಫಿಲ್ಮ್ ಫೆಸ್ಟಿವಲ್‌ನಲ್ಲಿ ಭಾಗಿಯಾಗುತ್ತಿದ್ದಾರೆ.
ಐಶ್ವರ್ಯಾ ಜತೆಗೆ, ನಟರಾದ ಅದಿತಿ ರಾವ್ ಹೈದರಿ, ಶೋಬಿತಾ ಧೂಳಿಪಾಲ ಮತ್ತು ಕಿಯಾರಾ ಆಡ್ವಾಣಿ ಕೂಡ ಕಾನ್ ಫಿಲ್ಮ್ ಫೆಸ್ಟಿವಲ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಊರ್ವಶಿ ರೌಟೇಲಾ ಅವರು ಈಗಾಗಲೇ ಕಾನ್ ಫಿಲ್ಮ್ ಫೆಸ್ಟಿವಲ್‌ನಲ್ಲಿ ತಮ್ಮ ಗುಲಾಬಿ ಬಣ್ಣದ ಉಡುಪಿನಿಂದ ಕಂಗೊಳಿಸಿದ್ದಾರೆ. ಪೋಸ್ ಕೂಡ ಕೊಟ್ಟಿದ್ದಾರೆ. 2024, ಮೇ 14 ರಿಂದ ಮೇ 25ರವರೆಗೂ ಕಾನ್ ಫಿಲ್ಮ್ ಫೆಸ್ಟಿವಲ್ ಫ್ರಾನ್ಸ್‌ನ ಫ್ರೆಂಚ್ ರಿವೇರಿಯಾದಲ್ಲಿ ಅದ್ಧೂರಿಯಾಗಿ ನಡೆಯಲಿದೆ.